ಸಿಲಿಕಾನ್ ವ್ಯಾಲಿಯಲ್ಲಿ ಮೋದಿಯ ಡಿಜಿಟಲ್ ಮುಖ್ಯಾಂಶಗಳು
ನರೇಂದ್ರ ಮೋದಿ ಸಿಲಿಕಾನ್ ವ್ಯಾಲಿಯಲ್ಲಿ ಭಾರತದ ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನದ ಕುರಿತು ಯೋಜನೆಯ ಮುಖ್ಯಾಂಶಗಳನ್ನು ಹೇಳಿದ್ದಾರೆ. ಅಲ್ಲದೇ ಮಾತನಾಡುತ್ತಾ ಫೇಸ್‌ಬುಕ್, ಇನ್‌ಸ್ಟಗ್ರಾಂ ಮತ್ತು ಟ್ವಿಟರ್‌ಗಳು ಎಲ್ಲವೂ ನೆರೆಹೊರೆಯವಾಗಿದ್ದು, ಇವುಗಳ ಮೂಲಕ ಜನತೆಯನ್ನು ಮೇಕ್ ಇನ್ ಇಂಡಿಯಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಾಡಲಾದ ಅಂಶಗಳನ್ನು ಅಲ್ಲಿ ವ್ಯಕ್ತ ಪಡಿಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸಿಲಿಕಾನ್ ವ್ಯಾಲಿಯಲ್ಲಿ ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡಿದ ಅಂಶಗಳಲ್ಲಿಯ 10 ಮುಖ್ಯಾಂಶಗಳು ಹೀಗಿವೆ.
ಓದಿರಿ: ಸಾಮಾನ್ಯರ ಅತ್ಯದ್ಭುತ ಟೆಕ್ ಆವಿಷ್ಕಾರಗಳು

ಆಂಡ್ರಾಯ್ಡ್, ಐಒಎಸ್‌ಮತ್ತು ವಿಂಡೋಸ್
ನಮ್ಮ ಯುವಜನತೆ ಆಂಡ್ರಾಯ್ಡ್, ಐಒಎಸ್‌ಮತ್ತು ವಿಂಡೋಸ್ ಗಳಲ್ಲಿ ಯಾವುದನ್ನು ಆಯ್ಕೆಮಾಡಿಕೊಳ್ಳುವುದು ಎಂಬ ಮೂಲಭೂತ ಸಮಸ್ಯೆಯಲ್ಲಿ ಸಿಲುಕಿದೆ

ಬಡತನದ ಮೇಲೆ ದಾಳಿ
ನಾವು ಸಬಲೀಕರಣಗೊಳಿಸಲು ನೆಟ್‌ವರ್ಕ್ ಮತ್ತು ಮೊಬೈಲ್‌ಗಳನ್ನು ಬಳಸಿಕೊಂಡು ಬಡತನದ ಮೇಲೆ ದಾಳಿ ಮಾಡುತ್ತಿದ್ದೇವೆ.

ಹಿಂದಿನ ರೂಢಿಗಳನ್ನು ವಿರೋಧಿಸುತ್ತದೆ
ಡಿಜಿಟಲ್ ತಂತ್ರಜ್ಞಾನವು ವಯಸ್ಸು, ಶಿಕ್ಷಣ, ಭಾಷೆ ಮತ್ತು ಆದಾಯ ಹಾಗೂ ಹಿಂದಿನ ರೂಢಿಗಳನ್ನು ವಿರೋಧಿಸುತ್ತದೆ. ಜೀವನವನ್ನು ನಾವು ಬದಲಿಸಿಕೊಳ್ಳಲು ಈಗ ಅವಕಾಶವಿದೆ. ಆದರೆ ಕೆಲವು ದಶಕಗಳನ್ನು ಕಲ್ಪನೆ ಮಾಡಿಕೊಳ್ಳಬೇಕಿದೆ.

ಎಂ-ಆಡಳಿತ ಅಥವಾ ಮೊಬೈಲ್ ಆಡಳಿತ
ಎಂ-ಆಡಳಿತ ಅಥವಾ ಮೊಬೈಲ್ ಆಡಳಿತವು ಒಂದು ರೀತಿಯಲ್ಲಿ ಎರಡು ಅಂಕಿಯ ದರದಲ್ಲಿ ದೇಶ ಬೆಳೆಯಲು ಕಾರಣವಾಗಿದೆ.

1.25 ಕೋಟಿ ಜನರು ಸಹ ಡಿಜಿಟಲ್ ಸಂಪರ್ಕ
ನಮ್ಮ ದೇಶದ 1.25 ಕೋಟಿ ಜನರು ಸಹ ಡಿಜಿಟಲ್ ಸಂಪರ್ಕ ಹೊಂದಬೇಕೆಂಬುದು ನಮ್ಮ ಆಶಯವಾಗಿದೆ. ಈಗಾಗಲೇ ಭಾರತದಾದ್ಯಂತ ಬ್ರಾಡ್‌ಬ್ಯಾಂಡ್ ಬಳಸುವುದರ ಮುಖಾಂತರ ಕಳೆದ ವರ್ಷ ಶೇಕಡ 63 ತಲುಪಿದ್ದೇವೆ.

ಆಪ್ಟಿಕಲ್ ಫೈಬರ್ ನೆಟ್ವರ್ಕ್
ನಾವು ತೀವ್ರವಾಗಿ ಈಗಾಗಲೇ ರಾಷ್ಟ್ರೀಯ ಆಪ್ಟಿಕಲ್ ಫೈಬರ್ ನೆಟ್ವರ್ಕ್ ಆರಂಭಿಸಿದ್ದು, ಇದು 600,000 ಹಳ್ಳಿಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸಲಿದೆ. ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಿಗೂ ಬ್ರಾಡ್ ಬ್ಯಾಂಡ್ ಕಲ್ಪಿಸಲಿದ್ದು, ಅವುಗಳು ಹೆದ್ದಾರಿಗಳಷ್ಟೇ ಪ್ರಮುಖವಾಗಿವೆ.

500 ರೈಲ್ವೆ ನಿಲ್ದಾಣಗಳಲ್ಲೂ ವೈ-ಫೈ ಸಂಪರ್ಕ
ಇದಕ್ಕೂ ಮುಂಚೆ ಏರ್‌ಪೋರ್ಟ್ ನಿಲ್ದಾಣಗಳಲ್ಲಿ ಮಾತ್ರ ವೈ-ಫೈ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ಈಗ ಭಾರತದ ಪ್ರಮುಖ 500 ರೈಲ್ವೆ ನಿಲ್ದಾಣಗಳಲ್ಲೂ ವೈ-ಫೈ ಸಂಪರ್ಕ ಕಲ್ಪಿಸುವ ಬಗ್ಗೆ ಗೂಗಲ್ ಜೊತೆ ಸಮಾಲೋಚನೆ ನೆಡೆಸಲಾಗಿದೆ ಎಂದು ಬರವಸೆ ನೀಡಿದ್ದೇವೆ.

ಸ್ಮಾರ್ಟ್ ಹಬ್ಸ್
ನಮ್ಮ ದೇಶದ ಹಳ್ಳಿಗಳನ್ನು ಆರ್ಥಿಕವಾಗಿ ಸ್ಮಾರ್ಟ್ ಹಬ್ಸ್‌ಗಳನ್ನಾಗಿ ಪರಿವರ್ತಿಸಲು ಬಯಸಿದ್ದೇವೆ. ರೈತರನ್ನು ಮಾರುಕಟ್ಟೆಗೆ ಸಂಪರ್ಕಿಸಿ ಅವರ ದುರ್ಬಲ ಮನಸ್ಥಿತಿಗಳನ್ನು ಬದಲಿಸುತ್ತೇವೆ.

ಉತ್ಪನ್ನಗಳ ಗುಣಮಟ್ಟ ಮತ್ತು ಬೆಲೆಯ ಪ್ರಚಾರ
ಭಾರತದಲ್ಲಿ ಉತ್ಪನ್ನಗಳ ಗುಣಮಟ್ಟ ಮತ್ತು ಬೆಲೆಯನ್ನು ಪ್ರಚಾರ ಮಾಡುತ್ತೇವೆ. ಇದು ನಮ್ಮ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾದ ದೃಷ್ಟಿಕೋನವಾಗಿದೆ.

ಡೇಟಾ ಗೌಪ್ಯತೆ ಮತ್ತು ಭದ್ರತೆ
ನಮ್ಮ ಆರ್ಥಿಕ ಮತ್ತು ಜೀವನ ಮಟ್ಟ ಸುಧಾರಿಸಲು, ಡೇಟಾ ಗೌಪ್ಯತೆ ಮತ್ತು ಭದ್ರತೆ, ಬೌದ್ಧಿಕ ಆಸ್ತಿ ಹಕ್ಕು ಮತ್ತು ಸೈಬರ್ ಭದ್ರತೆಗೆ ಹೆಚ್ಚು ಮಹತ್ವ ನೀಡಲಾಗುತ್ತದೆ.


Click it and Unblock the Notifications








