ಸಾಮಾನ್ಯರ ಅತ್ಯದ್ಭುತ ಟೆಕ್‌ ಆವಿಷ್ಕಾರಗಳು

By Suneel
|

ತಂತ್ರಜ್ಞಾನದ ಒಲವು ದಿನದಿಂದ ದಿನಕ್ಕೆ ಎಲ್ಲರಿಗೂ ಹೆಚ್ಚುತ್ತಲೇ ಇದೆ. ಟೆಕ್ನಾಲಜಿ ಕ್ಷೇತ್ರದಲ್ಲೇ ಶಿಕ್ಷಣ ಮುಗಿಸಿ, ಹತ್ತಾರು ವರ್ಷಗಳ ಕಾಲ ವಿವಿಧ ಹೆಸರಾಂತ ಟೆಕ್ನಾಲಜಿ ಸಂಸ್ಥೆಗಳಲ್ಲಿ ತರಬೇತಿ ಪಡೆದು ಅಥವಾ ಕಾರ್ಯನಿರ್ವಹಿಸುತ್ತಾ ಹೊಸದೊಂದು ಟೆಕ್‌ ವಸ್ತು ಆವಿಷ್ಕರಿಸಿದರೆ ಅದನ್ನೇ ಮಾಧ್ಯಮ ರಂಗದವರು ವಾರಗಟ್ಟಲೇ ಮಾಹಿತಿ ಹರಡುತ್ತಾರೆ. ತದನಂತರದಲ್ಲಿ ಅದು ತಣ್ಣಗಾಗುವ ವಿಷಯ. ಆದರೆ ನಿಮಗೆ ಈ ಲೇಖನದಲ್ಲಿ ಸಾಮಾನ್ಯ ಜನರು ತಂತ್ರಜ್ಞಾನ ಆಧಾರದಲ್ಲಿ ಹಲವು ಯೋಜನೆಗಳನ್ನು ಹಾಕಿಕೊಂಡು ಹೊಸ ರೀತಿಯ ಟೆಕ್ ಉತ್ಪನ್ನಗಳನ್ನು ತಯಾರಿಸಿರುವ ಬಗ್ಗೆ ತಿಳಿಸುತ್ತೇವೆ.

ಓದಿರಿ:ಫೇಸ್‌ಬುಕ್ ಕಚೇರಿಯಲ್ಲಿ ಮೋಡಿ ಮಾಡಿದ ನರೇಂದ್ರ ಮೋದಿ

DIY ಯೋಜನೆಯಿಂದ ಅದ್ಭುತವಾಗಿ ತಯಾರಿಸಿರುವ 10 ಟೆಕ್‌ ಉತ್ಪನ್ನಗಳು

 ಏಲಿಯನ್‌ ಟ್ಯಾಂಕ್‌

ಏಲಿಯನ್‌ ಟ್ಯಾಂಕ್‌

ಈ DIY ಯೋಜನೆಯನ್ನು ಪ್ರಸಿದ್ಧ ಟ್ರಾನ್ಸ್ಫಾರ್ಮರ್ಸ್ ಒಬ್ಬ ಏಲಿಯನ್‌ ಟ್ಯಾಂಕ್‌ನ ಪ್ರತಿಕೃತಿಯನ್ನು ತಯಾರಿಸಿದನು. ಈತ ಚೀನಿಯ ಅಭಿಮಾನಿಯಾಗಿದ್ದು, 5 ಟನ್‌ ತೂಕದಲ್ಲಿ ಲೋಹದಿಂದ ತಯಾರಿಸಿದ್ದನು. ಇದರ ಉದ್ದ 4.5 ಮೀಟರ್‌ ಮತ್ತು ಎತ್ತರ 2.5 ಆಗಿದೆ.

 ಡ್ರೈವಿಂಗ್‌ ಆಟಕ್ಕಾಗಿ ರೇಸಿಂಗ್ ಕಾಕ್‌ಪಿಟ್‌

ಡ್ರೈವಿಂಗ್‌ ಆಟಕ್ಕಾಗಿ ರೇಸಿಂಗ್ ಕಾಕ್‌ಪಿಟ್‌

ರೇಸಿಂಗ್‌ ಅಭಿಮಾನಿ ಒಬ್ಬ ಮೊದಲು ಗೇಮ್‌ ಪ್ಯಾಡ್‌ ಬಳಸುತ್ತಿದ್ದನು. ನಂತರದಲ್ಲಿ ಈತನೇ ಈ ಅದ್ಭುತ ರೇಸಿಂಗ್‌ ಕಾಕ್‌ಪಿಟ್‌ ಅನ್ನು ಪ್ಲೇವುಡ್‌ಬಳಸದೇ ನಿರ್ಮಿಸಿದನು.

ಬೃಹತ್‌ ಗಾತ್ರದ 4 ಜನರು ಕೂರುವ ಬೈಕ್‌

ಬೃಹತ್‌ ಗಾತ್ರದ 4 ಜನರು ಕೂರುವ ಬೈಕ್‌

ಬೈಕ್‌ ಅಭಿಮಾನಿಯೊಬ್ಬ ಇದನ್ನು ಸಾಮಾನ್ಯ ಬೈಕ್‌, ಗಾಲ್ಫ್‌ ಕಾರ್ಟ್‌, ಪೇಟಿಯೋ ಖುರ್ಚಿ ಮತ್ತು ಗೋ-ಕಾರ್ಟ್‌ ವಸ್ತುಗಳನ್ನು ಬಳಸಿಕೊಂಡು ಅದ್ಭುತವಾಗಿ ಈ ಬೈಕ್‌ ಅನ್ನು ನಿರ್ಮಿಸಿದ್ದಾನೆ.

ಸ್ಟಾರ್ ವಾರ್ಸ್ ಟ್ರಿಪಲ್  ಬಂಕ್‌ ಬೆಡ್‌

ಸ್ಟಾರ್ ವಾರ್ಸ್ ಟ್ರಿಪಲ್ ಬಂಕ್‌ ಬೆಡ್‌

ಜೊನಾಥನ್‌ ಎಂಬುವವರು ಸ್ಟಾರ್ ವಾರ್ಸ್‌ನಿಂದ ಸ್ಫೂರ್ತಿಗೊಂಡು ಈ ಬಂಕ್‌ಬೆಡ್‌ ಅನ್ನು 350 ಗಂಟೆಗಳ ಸಮಯದಲ್ಲಿ ವಿನ್ಯಾಸಗೊಳಿಸಿ ತಯಾರಿಸಿದ್ದಾರೆ.

ವಯಕ್ತಿಕ ಸಬ್‌ಮೆರಿನ್‌

ವಯಕ್ತಿಕ ಸಬ್‌ಮೆರಿನ್‌

ಈ ಚಿತ್ರದಲ್ಲಿರುವವನು ತನ್ನ ವಯಕ್ತಿಕ ಕಾರ್ಯಕ್ಕಾಗಿ ಸಬ್‌ಮೆರಿನ್‌ ನಿರ್ಮಿಸಿಕೊಂಡಿದ್ದಾನೆ. ಇದು 16ft ಉದ್ದವಾಗಿದ್ದು, 30 ಮೀಟರ್‌ ಕೆಳಗೆ ಜಿಗಿಯಬಲ್ಲದು. ಇದನ್ನು ತಯಾರಿಸಲು 3 ವರ್ಷಗಳ ಸಮಯ ತೆಗೆದುಕೊಳ್ಳಲಾಗಿದೆ.

 ಮಿನಿ ಜೆಟ್ ಪವರ್‌ನ ಮಾನ್ಸ್ಟರ್ ಟ್ರಕ್

ಮಿನಿ ಜೆಟ್ ಪವರ್‌ನ ಮಾನ್ಸ್ಟರ್ ಟ್ರಕ್

ಮೀಟ್‌ ಡೈಟರ್‌ ಸ್ಟ್ರಮ್‌ ತಮ್ಮ ಸ್ವಂತ ಜೆಟ್ ಪವರ್‌ನ ಮಾನ್ಸ್ಟರ್ ಟ್ರಕ್ ನಿರ್ಮಿಸಿದ್ದಾರೆ. ಇದು ATDI GS-100 ಟರ್ಬೋಜೆಟ್‌ ಇಂಜಿನ್‌ ಹೊಂದಿದ್ದು, 160lb ಒತ್ತಡ ಉತ್ಪಾದಿಸುತ್ತದೆ.

ಆಪ್ಟಿಮಸ್ ಪ್ರೈಂ ಪ್ರತಿಮೆ

ಆಪ್ಟಿಮಸ್ ಪ್ರೈಂ ಪ್ರತಿಮೆ

ಹಾಂಗ್ ಝೌ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಟ್ರಾನ್ಸ್ಫಾರ್ಮರ್ಸ್‌ನ ಪ್ರೀತಿಯಿಂದ ಈ ಪ್ರತಿಮೆಯನ್ನು ತಮ್ಮ ಹಣ ಸಂಗ್ರಹದಿಂದ ಕಾರುಗಳ ಬಿಡಿಭಾಗಗಳಿಂದ 35ft ಎತ್ತರ ನಿರ್ಮಿಸಿ ನಿಲ್ಲಿಸಿದ್ದಾರೆ.

ಹೆಸರಿಡದ ಹಾರಾಡುವ ವಸ್ತು

ಹೆಸರಿಡದ ಹಾರಾಡುವ ವಸ್ತು

ಇದನ್ನು ಚೀನಿ ವ್ಯಕ್ತಿಯೊಬ್ಬ ನಿರ್ಮಿಸಿದ್ದು, 8 ಇಂಜಿನ್‌ಮತ್ತು ಮರದ ಚಕ್ರಗಳನ್ನು ಹೊಂದಿದೆ.

ಹೆಲಿಕಾಪ್ಟರ್‌

ಹೆಲಿಕಾಪ್ಟರ್‌

ಚೀನಿಯ ವ್ಯಕ್ತಿಯೊಬ್ಬನು ತನ್ನ ಸ್ವಂತ ಹೆಲಿಕಾಪ್ಟರ್‌ ಅನ್ನು $1600 ಹಣ ವ್ಯಯಿಸಿ ನಿರ್ಮಿಸಿಕೊಂಡಿದ್ದನು. 2600ft ಎತ್ತರಕ್ಕೆ ಹಾರುವ ಸಾಮರ್ಥ್ಯ ಹೊಂದಿತ್ತು. ಆದರೆ ಸರ್ಕಾರದಿಂದ ಈ ಹೆಲಿಕಾಪ್ಟರ್‌ ನಿಷೇದಕ್ಕೆ ಒಳಗಾಯಿತು.

ಚಲಿಸಬಹುದಾದ ರೋಲರ್ ಕೋಸ್ಟರ್

ಚಲಿಸಬಹುದಾದ ರೋಲರ್ ಕೋಸ್ಟರ್

ಅಮೇರಿಕಾ ಜೆರೆಮಿ ರೀಡ್ ಎಂಬುವವರು ತಮ್ಮ ಸ್ವಂತ ಹಣದಲ್ಲಿ $2,900 ವ್ಯಯಿಸಿ ಇದನ್ನು 3 ವರ್ಷಗಳ ಅವಧಿಯಲ್ಲಿ ನಿರ್ಮಿಸಿದರು. 7000 ಮೊಳೆ ಮತ್ತು ಸ್ಕ್ರೂಗಳನ್ನು ಬಳಸಿಕೊಂಡು ನಿರ್ಮಿಸಿದನು. ಇದರ ಗರಿಷ್ಠ ವೇಗ 18mph.

Most Read Articles
Best Mobiles in India

English summary
If you have a knack for DIY projects then you’ll love this amazing list of 10 super awesome DIY projects that we have compiled for you. Check it out and let us know what you think of it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more