ಫೇಸ್‌ಬುಕ್‌ನ ಇಂಟರ್ನೆಟ್ ಉಳಿಸಿ ಅಭಿಯಾನಕ್ಕೆ ನಿಮ್ಮ ಬೆಂಬಲವಿದೆಯೇ?

By Shwetha
|

ಫೇಸ್‌ಬುಕ್‌ನ ಫ್ರಿ ಬೇಸಿಕ್ಸ್ ಪ್ರೊಗ್ರಾಮ್ ಉಚಿತ ಮತ್ತು ಸಮಾನ ಇಂಟರ್ನೆಟ್ ಅನ್ನು ಭಾರತದಲ್ಲಿ ನೀಡುವ ಬಗ್ಗೆ ಸಕ್ರಿಯವಾಗಿದೆ. ಟೆಲಿಕಾಮ್ ರೆಗ್ಯುಲೇಟರ್ ಟ್ರಯ್‌ಗೆ ಪಿಟಿಶನ್ ಅನ್ನು ಫೇಸ್‌ಬುಕ್ ಲಾಂಚ್ ಮಾಡಿದಾಗ ತನ್ನ ಉಚಿತ ಬೇಸಿಕ್ಸ್ ಪ್ರೊಗ್ರಾಮ್ ಅನ್ನು ಉಳಿಸುವ ಕುರಿತಾಗಿ ಇದು ಬಳಕೆದಾರರನ್ನು ಕೇಳಿಕೊಂಡಿತ್ತು.

ಓದಿರಿ: ಫೇಸ್‌ಬುಕ್ ಹ್ಯಾಕಿಂಗ್ 10 ವಿಧಾನ

ಫ್ರಿ ಬೇಸಿಕ್ಸ್ ಪ್ರೊಗ್ರಾಮ್‌ಗಾಗಿ ಹೆಚ್ಚಿನ ಚಂದಾದಾರರು ಸಹಿ ಮಾಡಿದ್ದಾರೆ. ಕೆಲವರಿಗೆ ಫ್ರಿ ಬೇಸಿಕ್ಸ್ ಮತ್ತು ನೆಟ್ ನ್ಯೂಟ್ರಾಲಿಟಿ ಎಂದರೇನು ಎಂಬುದರ ಕುರಿತು ಮಾಹಿತಿ ಇರಲಿಕ್ಕಿಲ್ಲ ಅದಕ್ಕೆಂದೇ ಇಂದಿನ ಲೇಖನದಲ್ಲಿ ಈ ಬಗ್ಗೆ ಮಾಹಿತಿ ನೀಡಲಿರುವೆವು.

ಫ್ರಿ ಬೇಸಿಕ್ಸ್ ಎಂದರೇನು

ಫ್ರಿ ಬೇಸಿಕ್ಸ್ ಎಂದರೇನು

ಇಂಟರ್ನೆಟ್. ಆರ್ಗ್ ಸಪ್ಟೆಂಬರ್‌ನಲ್ಲಿ ಫ್ರಿ ಬೇಸಿಕ್ಸ್ ಅನ್ನು ಆರಂಭಿಸಿದ್ದು ಇದಕ್ಕೆ ಪ್ರಾರಂಭವಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರು ಮಾರ್ಕ್ ಜುಕರ್ ಬರ್ಗ್ ಮುಖ್ಯ ಕಚೇರಿಗೆ ಭೇಟಿ ನೀಡಿದ ತರುವಾಯವಾಗಿದೆ. ಫೇಸ್‌ಬುಕ್ ಪ್ರಕಾರ ಇದೊಂದು ಸ್ವತಂತ್ರ ವೇದಿಕೆಯಾಗಿದ್ದು ಭಾರತೀಯ ಡೆವಲಪರ್‌ಗಳಿಗೆ ತಮ್ಮ ಸೇವೆಗಳನ್ನು ಹಾಗೂ ವೆಬ್‌ಸೈಟ್‌ಗಳನ್ನು ಉಚಿತ ದರದಲ್ಲಿ ಇಂಟರ್ನೆಟ್ ಪ್ರವೇಶವಿಲ್ಲದಿರುವವರಿಗೆ ನೀಡುವ ಸೌಲಭ್ಯವಾಗಿದೆ. ಈ ಉಚಿತ ಪ್ರವೇಶ ಪಾಲುದಾರ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಿಗೆ ಸೀಮಿತ ಪ್ರವೇಶವನ್ನು ಪಡೆದುಕೊಂಡಿದೆ.

ಇದೊಂದು ಉತ್ತಮ ಯೋಜನೆಯಾಗಿದ್ದರೂ ತೊಡಕಿದೆ

ಇದೊಂದು ಉತ್ತಮ ಯೋಜನೆಯಾಗಿದ್ದರೂ ತೊಡಕಿದೆ

ಇದೊಂದು ಉತ್ತಮ ಯೋಜನೆಯಾಗಿದ್ದರೂ ಕೆಲವೊಂದು ಸಮಸ್ಯೆಗಳನ್ನು ಇದು ಹೊಂದಿದೆ. ಇದು ಎಲ್ಲಾ ಸೇವೆಗಳಿಗೆ ಸಮಾನ ಮತ್ತು ಬಯಾಸ್ ಅಲ್ಲದ ಪ್ರವೇಶವನ್ನು ಒದಗಿಸುತ್ತಿಲ್ಲ ಎಂಬ ಟೀಕೆ ಇದೆ. ಅಪ್ಲಿಕೇಶನ್ ಡೆವಲಪರ್‌ಗಳು ಮತ್ತು ಸೇವೆಗಳ ಸೆಟ್‌ಗಾಗಿ ಆದ್ಯತೆಯುಳ್ಳ ಮತ್ತು ಆಯ್ಕೆಮಾಡಿದ ಪ್ರವೇಶವನ್ನು ಒದಗಿಸುವುದಕ್ಕಾಗಿ ಫೇಸ್‌ಬುಕ್ ಐಎಸ್‌ಪಿಯೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ.

ನೆಟ್ ನ್ಯೂಟ್ರಾಲಿಟಿ ಎಂದರೇನು?

ನೆಟ್ ನ್ಯೂಟ್ರಾಲಿಟಿ ಎಂದರೇನು?

ಎಲ್ಲರಿಗೂ ಅನ್‌ಬಯಾಸ್ ಮತ್ತು ಉಚಿತ ಪ್ರವೇಶ ಎಂಬುದಾಗಿದೆ ನೆಟ್ ನ್ಯೂಟ್ರಾಲಿಟಿ. ಯಾರು ಬೇಕಾದರೂ ಪ್ರಪಂಚದ ಯಾವ ಮೂಲೆಯಲ್ಲಿ ಬೇಕಾದರೂ ಯಾವುದೇ ಅಸಮಾನತೆ ಇಲ್ಲದೆ ಸೇವೆಗಳನ್ನು ಇಂಟರ್ನೆಟ್ ವಿಷಯಗಳನ್ನು ಪ್ರವೇಶಿಸುವ ವ್ಯವಸ್ಥೆಯಾಗಿದೆ.

ಭಾರತದಲ್ಲಿ ಫ್ರಿ ಬೇಸಿಕ್ಸ್ ಈಗಾಗಲೇ ಇದೆಯೇ?

ಭಾರತದಲ್ಲಿ ಫ್ರಿ ಬೇಸಿಕ್ಸ್ ಈಗಾಗಲೇ ಇದೆಯೇ?

ರಿಲಾಯನ್ಸ್ ಕಮ್ಯುನಿಕೇಶನ್‌ನೊಂದಿಗೆ ಪಾಲುದಾರಿಕೆಯನ್ನು ಪಡೆದುಕೊಂಡು ಫೆಬ್ರವರಿಯಲ್ಲಿ ಫೇಸ್‌ಬುಕ್ ಭಾರತದಲ್ಲಿ ಈ ಯೋಜನೆಯನ್ನು ಆರಂಭಿಸಿದೆ. ಆರ್‌ಕಾಮ್ ಫ್ರಿ ಬೇಸಿಕ್ಸ್ ಸೇವೆಯನ್ನು ಮೊಬೈಲ್ ಫೋನ್‌ಗಳಲ್ಲಿ ಫ್ರಿನೆಟ್ ಬಟನ್ ಅಡಿಯಲ್ಲಿ ದೊರಕಿಸಿದೆ. ಆಯ್ಕೆಮಾಡಿದ 33 ವೆಬ್‌ಸೈಟ್‌ಗಳಲ್ಲಿ ಇದನ್ನು ಆರಂಭಿಸಿದೆ.

ಸೇವ್ ಫ್ರಿ ಬೇಸಿಕ್ಸ್ ಪಿಟಿಶನ್ ಸಾಮಾಜಿಕ ಮಾಧ್ಯಮದಲ್ಲಿ ಏಕೆ?

ಸೇವ್ ಫ್ರಿ ಬೇಸಿಕ್ಸ್ ಪಿಟಿಶನ್ ಸಾಮಾಜಿಕ ಮಾಧ್ಯಮದಲ್ಲಿ ಏಕೆ?

ನೆಟ್ ನ್ಯೂಟ್ರಾಲಿಟಿ ಬೆಂಬಲ ಸ್ವೀಕರಿಸುವ ಹಂತದ ಮುಕ್ತಾಯದಲ್ಲಿರುವ ಫೇಸ್‌ಬುಕ್ ಇದಕ್ಕಾಗಿ ಟ್ರಯೊಂದಿಗೆ ಜೊತೆಗೂಡಿ ಫ್ರಿ ಬೇಸಿಕ್ಸ್‌ಗಾಗಿ ಮೇಲ್ ಕಳುಹಿಸಲು ವಿನಂತಿಸಿದೆ. ಈಗಾಗಲೇ ತನ್ನ 130 ಮಿಲಿಯನ್ ಬಳಕೆದಾರರಲ್ಲಿ 3.2 ಮಿಲಿಯನ್ ಜನರು ಮೇಲ್ ಕಳುಹಿಸಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ.

ಟೆಲಿಕಾಮ್ ರೆಗ್ಯುಲೇಟರ್ ಪಾತ್ರವೇನು

ಟೆಲಿಕಾಮ್ ರೆಗ್ಯುಲೇಟರ್ ಪಾತ್ರವೇನು

ತನ್ನ ಫ್ರಿ ಬೇಸಿಕ್ಸ್ ಸೇವೆಯನ್ನು ವಜಾಗೊಳಿಸುವಂತೆ ಟೆಲಿಕಾಮ್ ರೆಗ್ಯುಲೇಟರ್ ರಿಲಾಯನ್ಸ್ ಕಮ್ಯುನಿಕೇಶನ್‌ನಲ್ಲಿ ಕೇಳಿಕೊಂಡಿದೆ ಎಂಬುದಾಗಿ ವರದಿಯೊಂದು ಪ್ರಕಟವಾಗಿದೆ. ಬೇರೆ ಬೇರೆ ಸರ್ವೀಸ್ ಪ್ರೊವೈಡರ್‌ಗಳು ಡೇಟಾ ಟಾರಿಫ್ ಮೇಲೆ ಭಿನ್ನ ದರಗಳನ್ನು ಅಳವಡಿಸುತ್ತಿರುವುದರಿಂದ ಸಮಾನ ಇಂಟರ್ನೆಟ್ ಬಳಕೆ ದೇಶದಲ್ಲಿ ದೊರಕುವಂತೆ ಮಾಡುವುದು ಅಸಾಧ್ಯವಾಗಿದೆ ಎಂಬುದು ಟೆಲಿಕಾಮ್ ಅಭಿಮತವಾಗಿದೆ.

ಸೊನ್ನೆ ದರ ಮತ್ತು ಫ್ರಿ ಬೇಸಿಕ್ಸ್ ವ್ಯತ್ಯಾಸವೇನು?

ಸೊನ್ನೆ ದರ ಮತ್ತು ಫ್ರಿ ಬೇಸಿಕ್ಸ್ ವ್ಯತ್ಯಾಸವೇನು?

ಅವರು ಬಳಸುತ್ತಿರುವ ಅಪ್ಲಿಕೇಶನ್‌ಗಳನ್ನು ಆಯ್ಕೆಮಾಡುವುದಕ್ಕಾಗಿ ಡೇಟಾದ ಮೇಲೆ ಶುಲ್ಕ ನಿಗದಿಪಡಿಸದಿರುವ ವ್ಯವಸ್ಥೆಯಾಗಿದೆ ಸೊನ್ನೆ ದರ (ಜೀರೊ ರೇಟಿಂಗ್)

ಜೀರೊ ರೇಟಿಂಗ್ ಅನ್ನು ಯಾವುದಾದರೂ ಟೆಲಿಕಾಮ್ ಕಂಪೆನಿ ನೀಡುತ್ತಿದೆಯೇ?

ಜೀರೊ ರೇಟಿಂಗ್ ಅನ್ನು ಯಾವುದಾದರೂ ಟೆಲಿಕಾಮ್ ಕಂಪೆನಿ ನೀಡುತ್ತಿದೆಯೇ?

ಹಿಂದೆ ಏರ್‌ಟೆಲ್ ಏರ್‌ಟೆಲ್ ಜೀರೊ ಅನ್ನು ಒದಗಿಸುತ್ತಿತ್ತು, ಇದು ಜೀರೊ ರೇಟಿಂಗ್ ಯೋಜನೆಗೆ ಬದ್ಧವಾಗಿತ್ತು. ಇದರ ಪ್ರಕಾರ ಇಂಟರ್ನೆಟ್ ಸರ್ವೀಸ್ ಪ್ರೊವೈಡರ್‌ಗಳು ಗ್ರಾಹಕರಿಗೆ ಅವರು ಬಳಸುತ್ತಿರುವ ಅಪ್ಲಿಕೇಶನ್‌ಗಳನ್ನು ಆಯ್ಕೆಮಾಡುವುದಕ್ಕಾಗಿ ಡೇಟಾ ಶುಲ್ಕವನ್ನು ವಿಧಿಸುವುದಿಲ್ಲ.

ಫ್ರಿ ಬೇಸಿಕ್ಸ್ ತಂದ ಭಿನ್ನತೆ ಏನು?

ಫ್ರಿ ಬೇಸಿಕ್ಸ್ ತಂದ ಭಿನ್ನತೆ ಏನು?

ಇದೊಂದು ಮುಕ್ತ ವೇದಿಕೆಯಾಗಿದೆ. ಯಾವುದೇ ಅಪ್ಲಿಕೇಶನ್ ಡೆವಲಪರ್ ತಮ್ಮ ಸೇವೆಗಳನ್ನು ಇದರಲ್ಲಿ ಸೇರಿಸಬಹುದಾಗಿದೆ. ಪ್ರೈವಸಿ ಸೆಟ್ಟಿಂಗ್‌ಗಳ ಸ್ವಭಾವವನ್ನು ಬದಲಾಯಿಸಬಹುದೂ ಕೂಡ.

ಫ್ರಿ ಬೇಸಿಕ್ಸ್ ಕುರಿತು ಜುಕರ್‌ಬರ್ಗ್ ಮಾತೇನು?

ಫ್ರಿ ಬೇಸಿಕ್ಸ್ ಕುರಿತು ಜುಕರ್‌ಬರ್ಗ್ ಮಾತೇನು?

ಫ್ರಿ ಬೇಸಿಕ್ಸ್‌ನೊಂದಿಗೆ ಡೆವಲಪರ್‌ಗಳಿಗೆ ನಾವು ಸೊನ್ನೆ ದರದ ಸೇವೆಗಳನ್ನು ಒದಗಿಸುತ್ತಿದ್ದೇವೆ. ಇದು ಹೆಚ್ಚು ಶಕ್ತಿಯುತವಾಗಿದೆ. ಯಾವುದೇ ವಿಷಯವು ಅದರ ಮೂಲಕ ಹಾದು ಹೋಗುವುದಕ್ಕೆ ನಾವು ಬದ್ಧರಲ್ಲ. ನೆಟ್ ನ್ರೂಟ್ರಾಲಿಟಿಗೆ ವಿರುದ್ಧವಾಗಿ ಸೊನ್ನೆ ರೇಟಿಂಗ್ ಇಲ್ಲ ಎಂಬುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

Best Mobiles in India

English summary
Facebook’s much-touted Free Basics programme has run afoul of activists for a free and equal internet in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X