ಫೇಸ್‌ಬುಕ್ ಹ್ಯಾಕಿಂಗ್ 10 ವಿಧಾನ

By Shwetha
|

ಸಾಮಾಜಿಕ ತಾಣಗಳನ್ನು ಹ್ಯಾಕ್ ಮಾಡುವುದು ಇಂದಿನ ಟೆಕ್ ಯುಗದಲ್ಲಿ ಸರ್ವೇ ಸಾಮಾನ್ಯವಾದ ಮಾತಾಗಿದೆ. ಇಂದಿನ ಲೇಖನದಲ್ಲಿ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡುವುದು ಹೇಗೆ ಎಂಬುದನ್ನು ನಾವು ನಿಮಗೆ ತಿಳಿಸಿಕೊಡಲಿದ್ದು ಇದು ನಿಮ್ಮನ್ನು ಎಚ್ಚರಿದಿಂದಿರಲು ಸಹಾಯ ಮಾಡುತ್ತದೆ. ಹ್ಯಾಕರ್‌ಗಳು ಹೇಗೆ ನಿಮ್ಮ ಖಾತೆಯನ್ನು ಹೇಗೆ ಹ್ಯಾಕ್ ಮಾಡುತ್ತಾರೆ ಎಂಬುದನ್ನು ಇಲ್ಲಿ ಸ್ಲೈಡರ್‌ಗಳಲ್ಲಿ ನಾವು ತಿಳಿಸಿಕೊಡುತ್ತಿದ್ದು ನಿಮ್ಮನ್ನು ಜಾಗರೂಕತೆಯಿಂದ ಇರಲು ಈ ಸಲಹೆಗಳು ಸಹಾಯ ಮಾಡುತ್ತವೆ.

ಓದಿರಿ: ಎಚ್ಚರ: ನಿಮ್ಮ ಫೇಸ್‌ಬುಕ್ ಖಾತೆಯಿಂದ ನಿಮಗೇ ಹಾನಿ

ಹಾಗಿದ್ದರೆ ತಡಮಾಡದೇ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ. ಯಾವ ಯಾವ ಬಗೆಯಲ್ಲಿ ಹ್ಯಾಕರ್‌ಗಳು ಖಾತೆಯನ್ನು ಹ್ಯಾಕ್ ಮಾಡುತ್ತಾರೆ ಎಂಬುದನ್ನು ನೋಡಿ.

ಪಾಸ್‌ವರ್ಡ್ ಫಿಶಿಂಗ್

ಪಾಸ್‌ವರ್ಡ್ ಫಿಶಿಂಗ್

ಫೇಸ್‌ಬುಕ್ ಖಾತೆಗಳನ್ನು ಹ್ಯಾಕ್ ಮಾಡಲು ಫಿಶಿಂಗ್ ಒಂದು ಜನಪ್ರಿಯ ದಾಳಿಯಾಗಿದೆ. ಇಲ್ಲಿ ಹ್ಯಾಕರ್ ಸುಳ್ಳು ಲಾಗಿನ್ ಪುಟವನ್ನು ಕ್ರಿಯೇಟ್ ಮಾಡುತ್ತಾನೆ ಮತ್ತು ಇದು ನಿಜವಾದ ಫೇಸ್‌ಬುಕ್ ಪೇಜ್‌ನಂತೆಯೇ ಕಾಣುತ್ತದೆ ನಂತರ ಲಾಗಿನ್ ಮಾಡಲು ನಿಮ್ಮಲ್ಲಿ ವಿನಂತಿಸುತ್ತಾನೆ. ನೀವು ಲಾಗಿನ್ ಆದೊಡನೆ ನಿಮ್ಮ ಇಮೇಲ್ ವಿಳಾಸ ಮತ್ತು ಪಾಸ್‌ವರ್ಡ್ ಅವರಿಗೆ ದೊರೆಯುತ್ತದೆ

ಕೀಲಾಗಿಂಗ್

ಕೀಲಾಗಿಂಗ್

ಫೇಸ್‌ಬುಕ್ ಪಾಸ್‌ವರ್ಡ್ ಅನ್ನು ಹ್ಯಾಕ್ ಮಾಡಲು ಕೀಲಾಗಿಂಗ್ ಒಂದು ಸರಳ ವಿಧಾನವಾಗಿದೆ. ಇದು ತುಂಬಾ ಅಪಾಯಕಾರಿಯಾಗಿದ್ದು ಕಂಪ್ಯೂಟರ್ ನುರಿತರೂ ಕೂಡ ಇದಕ್ಕೆ ಸಿಲುಕಿಹಾಕಿಕೊಳ್ಳುತ್ತಾರೆ. ಇದೊಂದು ಸಣ್ಣ ಪ್ರೊಗ್ರಾಮ್ ಆಗಿದ್ದು, ನಿಮ್ಮ ಕಂಪ್ಯೂಟರ್‌ನಲ್ಲಿ ಇದು ಇನ್‌ಸ್ಟಾಲ್ ಆದರೆ ಸಾಕು ಇದು ಪ್ರತಿಯೊಂದನ್ನು ರೆಕಾರ್ಡ್ ಮಾಡುತ್ತದೆ.

ಸ್ಟೀಲರ್‌ಗಳು

ಸ್ಟೀಲರ್‌ಗಳು

ಹೆಚ್ಚು ಕಡಿಮೆ 80% ದಷ್ಟು ಜನರು ಸಂಗ್ರಹಿತ ಪಾಸ್‌ವರ್ಡ್‌ಗಳನ್ನು ಬಳಸಿ ಫೇಸ್‌ಬುಕ್ ಖಾತೆಯನ್ನು ಲಾಗಿನ್ ಮಾಡುತ್ತಾರೆ. ಆದರೆ ಇದು ತುಂಬಾ ಅಪಾಯಕಾರಿ. ಕಳ್ಳತನ ಮಾಡುವವರು ಇದಕ್ಕಾಗಿ ವಿಶೇಷ ಸಾಫ್ಟ್‌ವೇರ್ ಅನ್ನು ವಿನ್ಯಾಸಪಡಿಸಿ ಪಾಸ್‌ವರ್ಡ್‌ಗಳನ್ನು ಕದಿಯುತ್ತಾರೆ.

ಫೇಸ್‌ಬುಕ್ ಖಾತೆ ಹ್ಯಾಕ್ ಮಾಡುವುದು

ಫೇಸ್‌ಬುಕ್ ಖಾತೆ ಹ್ಯಾಕ್ ಮಾಡುವುದು

ಸೆಶನ್ ಹೈಜಾಕಿಂಗ್ ಹೆಚ್ಚು ಅಪಾಯಕಾರಿಯಾಗಿದ್ದು ನೀವು ಫೇಸ್‌ಬುಕ್ ಅನ್ನು ಎಚ್‌ಟಿಟಿಪಿ ಪ್ರವೇಶಿಸುತ್ತೀರಿ ಎಂದಾದಲ್ಲಿ ಇದು ಹಾನಿಯನ್ನುಂಟು ಮಾಡುತ್ತದೆ. ಸೆಶನ್ ಹೈಜಾಕಿಂಗ್ ದಾಳಿಯಲ್ಲಿ, ಹ್ಯಾಕರ್ ವಿಕ್ಟಿಮ್‌ನ ಬ್ರೌಸರ್ ಕುಕೀಯನ್ನು ಕದಿಯುತ್ತಾನೆ ಇದರಿಂದ ಬಳಕೆದಾರರ ವೆಬ್‌ಸೈಟ್ ಅನ್ನು ದೃಢೀಕರಿಸಲು ಬಳಸಲಾಗುತ್ತದೆ.

ಸೈಡ್ ಜಾಕಿಂಗ್

ಸೈಡ್ ಜಾಕಿಂಗ್

2010 ರಲ್ಲಿ ಸೈಡ್ ಜಾಕಿಂಗ್ ದಾಳಿ ಹೆಚ್ಚು ಸಾಮಾನ್ಯವಾಗಿತ್ತು. ಆದರೆ ಈಗ ಇದು ಹೆಚ್ಚು ಜನಪ್ರಿಯವಾಗಿದೆ. ಸೈಡ್ ಜಾಕಿಂಗ್ ದಾಳಿಗಳು ನಡೆಯುವುದು ಹೆಚ್ಚಾಗಿ ವಿಕ್ಟಿಮ್ ಮತ್ತು ಹ್ಯಾಕರ್ ಒಂದೇ ವೈಫೈಯನ್ನು ಬಳಸುತ್ತಿರುವಾಗ ಆಗಿದೆ.

ಮೊಬೈಲ್ ಫೋನ್ ಹ್ಯಾಕಿಂಗ್

ಮೊಬೈಲ್ ಫೋನ್ ಹ್ಯಾಕಿಂಗ್

ಹೆಚ್ಚಿನ ಫೇಸ್‌ಬುಕ್ ಬಳಕೆದಾರರು ತಾಣವನ್ನು ತಮ್ಮ ಮೊಬೈಲ್‌ಗಳಲ್ಲಿಯೇ ಪ್ರವೇಶಿಸುತ್ತಾರೆ. ಹ್ಯಾಕರ್ ಎಲ್ಲಿಯಾದರೂ ವಿಕ್ಟಿಮ್ಸ್ ಮೊಬೈಲ್ ಫೋನ್ ಅನ್ನು ಪ್ರವೇಶಿಸುವ ಸಂದರ್ಭ ಎದುರಾದಲ್ಲಿ ಅವರುಗಳು ಹೆಚ್ಚಿನ ಸಂಖ್ಯೆಯ ಸ್ಪೈಯಿಂಗ್ ಸಾಫ್ಟ್‌ವೇರ್ ಅನ್ನು ಬಳಸಿ ಸೆಲ್ ಫೋನ್ ಅನ್ನು ಕಬಳಿಸುತ್ತಾರೆ. ಮೊಬೈಲ್ ಸ್ಪೈ, ಸ್ಪೈ ಫೋನ್ ಗೋಲ್ಡ್ ಮೊದಲಾದವು ಸಾಫ್ಟ್‌ವೇರ್‌ಗಳಾಗಿವೆ.

ಡಿಎನ್‌ಎಸ್ ಸ್ಪೂಫಿಂಗ್

ಡಿಎನ್‌ಎಸ್ ಸ್ಪೂಫಿಂಗ್

ವಿಕ್ಟಿಮ್ ಮತ್ತು ಹ್ಯಾಕರ್ ಇವರಿಬ್ಬರೂ ಒಂದೇ ನೆಟ್‌ವರ್ಕ್‌ನಲ್ಲಿದ್ದುಕೊಂಡು, ದಾಳಿಕೋರರು ಡಿಎನ್‌ಎಸ್ ಸ್ಪೂಫಿಂಗ್ ದಾಳಿಯನ್ನು ನಡೆಸಿದಲ್ಲಿ ಮತ್ತು ಮೂಲ ಫೇಸ್‌ಬುಕ್ ಪುಟವನ್ನು ತನ್ನ ಸುಳ್ಳು ಪುಟಕ್ಕೆ ಸೇರಿಸಿದಲ್ಲಿ ವಿಕ್ಟಿಮ್ಸ್ ಫೇಸ್‌ಬುಕ್ ಖಾತೆಗೆ ಪ್ರವೇಶ ಮಾಡುವ ಹಕ್ಕು ಅವರಿಗೆ ದೊರೆಯುತ್ತದೆ.

ಯುಎಸ್‌ಬಿ ಹ್ಯಾಕಿಂಗ್

ಯುಎಸ್‌ಬಿ ಹ್ಯಾಕಿಂಗ್

ದಾಳಿಕೋರರು ನಿಮ್ಮ ಕಂಪ್ಯೂಟರ್‌ಗೆ ದೈಹಿಕ ಪ್ರವೇಶವನ್ನು ಪಡೆದುಕೊಂಡಲ್ಲಿ, ಯುಎಸ್‌ಬಿ ಪ್ರೊಗ್ರಾಮ್ಡ್ ಅನ್ನು ಇನ್‌ಸರ್ಟ್ ಮಾಡಿದರೆ ಸಾಕು ಇದು ಇಂಟರ್ನೆಟ್ ಬ್ರೌಸರ್‌ನಲ್ಲಿ ಉಳಿಸಿದ ಪಾಸ್‌ವರ್ಡ್‌ಗಳನ್ನು ಅವರಿಗೆ ದೊರೆಯುವಂತೆ ಮಾಡುತ್ತದೆ.

ಮಿಡಲ್ ದಾಳಿಗಳು

ಮಿಡಲ್ ದಾಳಿಗಳು

ವಿಕ್ಟಿಮ್ ಮತ್ತು ದಾಳಿಕೋರರು ಒಂದೇ ಲ್ಯಾನ್‌ನಲ್ಲಿ ಇದ್ದುಕೊಂಡು ಹ್ಯಾಕರ್ ಕ್ಲೈಂಟ್ ಮತ್ತು ಸರ್ವರ್ ನಡುವೆ ಬದಲಾವಣೆ ನಡೆಸಿದಾಗ, ಇಲ್ಲಿ ಆತ ಡೀಫಾಲ್ಟ್ ಗೇಟ್ ವೇ ಆಗಿ ಕಾರ್ಯನಿರ್ವಹಿಸಬಹುದು ಮತ್ತು ಎಲ್ಲಾ ಟ್ರಾಫಿಕ್ ಅನ್ನು ಆತನಿಗೆ ಸಂಗ್ರಹಿಸಬಹುದಾಗಿದೆ.

ಬೋಟ್‌ನೆಟ್ಸ್

ಬೋಟ್‌ನೆಟ್ಸ್

ಫೇಸ್‌ಬುಕ್ ಖಾತೆಗಳನ್ನು ಹ್ಯಾಕ್ ಮಾಡಲು ಬೋಟ್‌ನೆಟ್ಸ್ ಅನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ ಇದು ಹೆಚ್ಚು ವೆಚ್ಚದಾಯಕವಾಗಿರುತ್ತದೆ ಮತ್ತು ಹೆಚ್ಚು ಸುಧಾರಿತ ದಾಳಿಗಳನ್ನು ನಡೆಸಲು ಇದನ್ನು ಬಳಸಲಾಗುತ್ತದೆ.

Most Read Articles
Best Mobiles in India

English summary
Beware from hackers and protect your facebook account from hackers. Our site provides only security tips to protect your facebook account from hackers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X