Subscribe to Gizbot

ರೀಟೈಲ್ ತಾಣಗಳಿಂದ ಗ್ರಾಹಕರಿಗೆ ಚಳ್ಳೆಹಣ್ಣು!!!

Posted By:

ಭಾರತದಲ್ಲಿ ರೀಟೈಲ್ ತಾಣಗಳಲ್ಲಿ ಶಾಪಿಂಗ್ ಮಾಡುವುದು ಸರ್ವೇ ಸಾಮಾನ್ಯವಾದ ವಿಷಯವಾಗಿದೆ. ನೇರವಾಗಿ ಮಳಿಗೆಗಳಿಗೆ ಭೇಟಿ ಕೊಟ್ಟು ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವ ಸಮಯ ನಮ್ಮಲ್ಲಿ ಇಲ್ಲದೇ ಇರುವುದರಿಂದ ಕುಳಿತಲ್ಲೇ ನಮಗೆ ಬೇಕಾದ್ದನ್ನು ಆಯ್ಕೆಮಾಡಿ ಅಲ್ಲಿಯೇ ಆರ್ಡರ್ ಕೊಡುವ ಸರಳ ಪದ್ಧತಿಯನ್ನು ನಾವು ನೆಚ್ಚಿಕೊಳ್ಳುತ್ತಿದ್ದೇವೆ. ಇದನ್ನೇ ಉದ್ಯಮವನ್ನಾಗಿಸಿಕೊಂಡು ಕೆಲವೊಂದು ತಾಣಗಳು ಗ್ರಾಹಕರನ್ನು ಆಕರ್ಷಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ಆದರೆ ಈ ತಾಣಗಳು ನಂಬಿದ ಗ್ರಾಹಕರಿಗೆ ಚಳ್ಳೆ ಹಣ್ಣು ತಿನ್ನಿಸುವ ಸಂದರ್ಭಗಳನ್ನು ಸ್ವಲ್ಪವೂ ಬಿಟ್ಟುಕೊಡದೇ ಅವರನ್ನು ಮೋಸದ ದಾಳಕ್ಕೆ ಬಳಸಿಕೊಳ್ಳುತ್ತಿವೆ.

ಓದಿರಿ: ತಂದೆಗೆ ನೀವು ನೀಡಬಹುದಾದ ಸೂಪರ್ ಕೊಡುಗೆಗಳು

ಜನಪ್ರಿಯ ರೀಟೈಲ್ ತಾಣಗಳು ಎಂದೇ ಕರೆಯಿಸಿಕೊಂಡಿರುವ ಫ್ಲಿಪ್‎ಕಾರ್ಟ್, ಸ್ನ್ಯಾಪ್‎ಡೀಲ್ ಮೊದಲಾದ ಸಂಸ್ಥೆಗಳು ತಮಗೆ ತಿಳಿದೋ ತಿಳಿಯದೆಯೋ ಗ್ರಾಹಕರನ್ನು ಯಾಮಾರಿಸುತ್ತಿದೆ. ನಂತರ ಅದಕ್ಕಾಗಿ ಕ್ಷಮೆ ಕೋರುತ್ತಿರುವ ಘಟನೆಗಳು ನಡೆಯುತ್ತಲೇ ಇದೆ.

ಇಂದಿನ ನಮ್ಮ ಲೇಖನದಲ್ಲಿ ಇಂತಹುದೇ ಅತಿ ವಿಶೇಷವಾದ ರೀಟೈಲ್ ತಾಣಗಳ ಚಳ್ಳೆಹಣ್ಣು ಪ್ರಸಂಗಗಳೊಂದಿಗೆ ನಾವು ಬಂದಿದ್ದು ಕೆಳಗಿನ ಸ್ಲೈಡರ್‎ಗಳಲ್ಲಿ ಇದನ್ನು ಕುರಿತ ವಿವರ ಮಾಹಿತಿಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ ಬದಲಿಗೆ ಇಟ್ಟಿಗೆ

ಫ್ಲಿಪ್‎ಕಾರ್ಟ್

ಫ್ಲಿಪ್‎ಕಾರ್ಟ್ ಗ್ರಾಹಕರಿಗೆ ಐಫೋನ್ ಬದಲಿಗೆ ಇಟ್ಟಿಗೆ ನೀಡಿ ಸನ್ಮಾನಿಸಿದೆ.

ವಾಚ್ ಬದಲಿಗೆ ಆಟಿಕೆ ವಾಚ್

ಫ್ಲಿಪ್‎ಕಾರ್ಟ್

ಫೋಸಿಲ್ ವಾಚ್ ಬದಲಿಗೆ 100 ರೂಪಾಯಿ ಆಟಿಕೆ ವಾಚ್ ನೀಡಿ ಪಂಗನಾಮ

ಐಫೋನ್ 5 ಬದಲಿಗೆ ಕಲ್ಲು

ಸ್ನ್ಯಾಪ್‎ಡೀಲ್

ಸ್ನ್ಯಾಪ್‎ಡೀಲ್ ತನ್ನ ಹೊಸ ಅವತಾರವನ್ನು ಇಲ್ಲಿ ತೋರಿಸಿದೆ.

ಫೋನ್ ಬದಲಿಗೆ ಕಲ್ಲು

ಸ್ನ್ಯಾಪ್‎ಡೀಲ್

ಸ್ನ್ಯಾಪ್‎ಡೀಲ್ ಗ್ರಾಹಕರಿಗೆ ಫೋನ್ ಕಳುಹಿಸುವುದರ ಬದಲಿಗೆ ಕಲ್ಲು ಕಳುಹಿಸಿ ಅಸಲೀತನವನ್ನು ಮೆರೆದಿದೆ.

ಲ್ಯಾಪ್‎ಟಾಪ್ ಬದಲಿಗೆ ಕಸ

ಪೇಟಮ್

ಪೇಟಮ್ ಅಸೂಸ್ ಲ್ಯಾಪ್‎ಟಾಪ್ ಬದಲಿಗೆ ಕಸ ಕಡ್ಡಿ ಕಳುಹಿಸಿ ಸಾಹಸ ಮೆರೆದಿದೆ.

ವಾಚ್ ಸ್ಥಾನದಲ್ಲಿ ಏನಿದು

ಸ್ನ್ಯಾಪ್‎ಡೀಲ್

ಸ್ನ್ಯಾಪ್‎ಡೀಲ್ ವಾಚ್ ಬದಲಿಗೆ ಕಲ್ಲು ಕಳುಹಿಸಿರುವುದು

ಸ್ಮಾರ್ಟ್‎ಫೋನ್ ಜಾಗದಲ್ಲಿ ವಿಮ್ ಸೋಪ್

ಸ್ನ್ಯಾಪ್‎ಡೀಲ್

ಗ್ರಾಹಕರಿಗೆ ಸ್ಮಾರ್ಟ್‎ಫೋನ್ ನೀಡುವ ಬದಲಿಗೆ ವಿಮ್ ಸೋಪ್ ಕಳುಹಿಸಿಕೊಟ್ಟಿದೆ

ಸ್ಪೀಕರ್ ಬದಲಿಗೆ ಕಲ್ಲು

ಸ್ನ್ಯಾಪ್‎ಡೀಲ್

ಮೂರ್ಖತನದ ಪರಮಾವಧಿ ಇದೇ ಅಲ್ಲವೇ

ಫೋನ್ ಬದಲಿಗೆ ಕಲ್ಲು

ಸ್ನ್ಯಾಪ್‎ಡೀಲ್

ರೀಟೈಲ್ ತಾಣಗಳ ಈ ಮೋಸಕ್ಕೆ ಕೊನೆ ಎಂದು

ಸ್ಯಾಮ್‎ಸಂಗ್ ನೋಟ್ 2 ಬದಲಿಗೆ ಕಲ್ಲು

ಅಮೆಜಾನ್

ಅಮೆಜಾನ್ ಬಳಕೆದಾರರಿಗೆ ಪಂಗನಾಮ ಹಾಕಿರುವುದು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Customers are savvy enough to take photos and share then on social media to vent and resolve their issues. Here’s a roundup of online shopaholics who took to Twitter to complain about these ridiculous shopping snafus.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot