Subscribe to Gizbot

ತಂದೆಗೆ ನೀವು ನೀಡಬಹುದಾದ ಸೂಪರ್ ಕೊಡುಗೆಗಳು

Written By:

ನಾಳೆ ಇಡೀ ವಿಶ್ವವೇ ಕೊಂಡಾಡುವ ತಂದೆಯಂದಿರ ದಿನ. ತಾಯಿಯ ಮಾತೃ ವಾತ್ಯಲ್ಯ ಮಕ್ಕಳಿಗೆ ಹೇಗೆ ಹಿತರಕ್ಷಣೆಯನ್ನು ನೀಡುತ್ತದೆಯೋ ಅಂತೆಯೇ ತಂದೆಯ ಪಿತೃ ವಾತ್ಸಲ್ಯ ಅವರಿಗೆ ಜೀವನದಲ್ಲಿ ಮುಂದೆ ಬರಲು ಮಾರ್ಗದರ್ಶನವನ್ನು ನೀಡುತ್ತದೆ. ಅದಕ್ಕೆಂದೇ ತಂದೆಯಂದಿರ ದಿನ ಹೆಚ್ಚು ಮಹತ್ವದ್ದಾಗಿದೆ.

ಓದಿರಿ: ಪ್ರೀತಿಪಾತ್ರರಿಗಾಗಿ ಅತ್ಯಮೂಲ್ಯ ಗ್ಯಾಜೆಟ್ ಕೊಡುಗೆಗಳು

ಇನ್ನು ಟೆಕ್ ಕ್ಷೇತ್ರ ಕೂಡ ತಂದೆಯಂದಿರ ದಿನವನ್ನು ಅತಿ ವಿಶೇಷವಾಗಿ ಆಚರಿಸುತ್ತಿದ್ದು ನಿಮ್ಮ ಪ್ರೀತಿಯ ತಂದೆಗೆ ಮರೆಯಲಾರದ ಕೊಡುಗೆಯನ್ನು ಕೊಡುವುದಕ್ಕಾಗಿ ಟೆಕ್ ಉತ್ಪನ್ನಗಳ ಅನೂಹ್ಯ ಸಂಗ್ರಹವನ್ನು ನಿಮ್ಮ ಮುಂದಿಡುತ್ತಿದ್ದು ಈ ಕೊಡುಗೆ ನಿಮ್ಮ ತಂದೆಗೆ ಹೆಚ್ಚು ಇಷ್ಟವಾಗುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಂಡ್ ಶೀಲ್ ಪ್ರೊಜೆಕ್ಟರ್

ಡಿಸ್‌ಪ್ಲೇ ಡ್ಯಾಶ್‌ಬೋರ್ಡ್ ವಿಂಡ್ ಶೀಲ್ ಪ್ರೊಜೆಕ್ಟರ್

ಈ ಪ್ರೊಜೆಕ್ಟರ್ ನಿಮ್ಮ ತಂದೆಗೆ ದಿಕ್ಕನ್ನು ತೋರಿಸಲು ನೆರವು ನೀಡುತ್ತದೆ. ಬ್ಲ್ಯೂಟೂತ್ ಸಕ್ರಿಯಗೊಂಡಿದ್ದು ಗಾರ್ಮಿನ್ ಸ್ಟ್ರೀಟ್ ಪೈಲೆಟ್ ಅಪ್ಲಿಕೇಶನ್ ಬಳಸಿಕೊಂಡು ಇದು ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಸ್ಪೀಕರ್

ಐಹೋಮ್ ಫ್ಲಾಸ್ಕ್ ಆಕಾರದ ಸ್ಪೀಕರ್

ಇದು ಬ್ಲ್ಯೂಟೂತ್ ಸಕ್ರಿಯ ವ್ಯವಸ್ಥೆಯನ್ನು ಹೊಂದಿದ್ದು ಚರ್ಮದ ಸ್ಟೈಲ್ ಕೇಸ್ ಇದರಲ್ಲಿದೆ.

ಲ್ಯಾಪ್‌ಟಾಪ್ ಸ್ಟ್ಯಾಂಡ್

ವಾಲ್ನಟ್ ಲ್ಯಾಪ್‌ಟಾಪ್ ಸ್ಟ್ಯಾಂಡ್

ಈ ಲ್ಯಾಪ್‌ಟಾಪ್ ಸ್ಟ್ಯಾಂಡ್ ಅನ್ನು ಬಳಸಿಕೊಂಡು ತಂದೆಗೆ ಕೆಲಸ ಮಾಡಲು ನಿಮಗೆ ಸಹಾಯ ಮಾಡಬಹುದಾಗಿದೆ.

ಬಾಸ್ಕೆಟ್ ಬಾಲ್ ಪ್ಯಾಕ್

ಸ್ಮಾರ್ಟ್ ಸೆನ್ಸಾರ್ ಬಾಸ್ಕೆಟ್ ಬಾಲ್ ಪ್ಯಾಕ್

ಸ್ಮಾರ್ಟ್ ಸೆನ್ಸಾರ್ ಬಾಸ್ಕೆಟ್ ಬಾಲ್ ಇದಾಗಿದ್ದು ಪ್ರತೀ ಶಾಟ್‌ನ ವಿವರವಾದ ಮಾಹಿತಿಯನ್ನು ನಿಮಗೆ ಒದಗಿಸುತ್ತದೆ. ಈ ಬಾಲ್‌ನಲ್ಲಿ 8 ಗಂಟೆಗಳ ಬ್ಯಾಟರಿ ಜೀವನವಿದ್ದು, ಬ್ಲ್ಯೂಟೂತ್ ಮುಖಾಂತರ ಅಪ್ಲಿಕೇಶನ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.

ಸ್ಮಾರ್ಟ್‌ಫೋನ್ ಫೋಟೋಗ್ರಫಿ

4 ಇನ್ - 1 ಲೆನ್ಸ್

ಸ್ಮಾರ್ಟ್‌ಫೋನ್ ಫೋಟೋಗ್ರಫಿಯನ್ನು ಇನ್ನಷ್ಟು ಉತ್ತಮಗೊಳಿಸಬೇಕೆನ್ನುವ ತುಡಿತ ನಿಮ್ಮ ತಂದೆಯದ್ದಾಗಿದ್ದರೆ ಐಫೋನ್ 6/6 ಪ್ಲಸ್‌ಗೆ ಓಲೋಕ್ಲಿಪ್‌ನ 4 ಇನ್ - 1 ಲೆನ್ಸ್ ಹೇಳಿಮಾಡಿಸಿದ್ದಾಗಿದೆ.

ಚಾರ್ಜಿಂಗ್ ವ್ಯವಸ್ಥೆ

ನೈಟ್ ಕೇಬಲ್

ನೇಟೀವ್ ಯೂನಿಯನ್‌ನ ನೈಟ್ ಕೇಬಲ್ ನಿಮ್ಮ ಫೋನ್‌ಗೆ ಚಾರ್ಜಿಂಗ್ ವ್ಯವಸ್ಥೆಯನ್ನು ಮಾಡುತ್ತದೆ. ಈ ಕೇಬಲ್ ಒಂಭತ್ತು ಫೀಟ್ ಉದ್ದವಿದೆ.

ಬ್ಲ್ಯೂಟೂತ್ ಸ್ಪೀಕರ್

ವಾಟರ್‌ಪ್ರೂಫ್ ಬ್ಲ್ಯೂಟೂತ್ ಸ್ಪೀಕರ್

ಬ್ಲ್ಯೂಟೂತ್ ಮೂಲಕ ಸಂಪರ್ಕವನ್ನು ಹೊಂದಿರುವ ಈ ಸ್ಪೀಕರ್ ನೀರಿಗೆ ಬಿದ್ದರೂ ಏನೂ ಅಪಾಯವನ್ನುಂಟು ಮಾಡುವುದಿಲ್ಲ.

ಸೋಲಾರ್ ಶಕ್ತಿ

ಸ್ಕೈಲಾಕ್

ಬ್ಲ್ಯೂಟೂತ್ ಸಕ್ರಿಯಗೊಂಡಿರುವ, ಸೋಲಾರ್ ಶಕ್ತಿಯಿರುವ ಪವರ್ ಲಾಕ್ ಅನ್ನು ಇದು ಪಡೆದುಕೊಂಡಿದ್ದು ಸ್ವಯಂಚಾಲಿತವಾಗಿ ಅನ್‌ಲಾಕ್ ಆಗಬಲ್ಲುದು.

ಐಫೋನ್

ಮೋಫಿ ಜೂಸ್ ಪ್ಯಾಕ್

ಮೋಫಿ ಜ್ಯೂಸ್ ಪ್ಯಾಕ್ ಐಫೋನ್ ನಿಮ್ಮ ತಂದೆಗೆ ಅತಿ ಸೂಕ್ತವಾಗಿರುವ ಡಿವೈಸ್ ಆಗಿದೆ. ಇದು ಜಲಪ್ರತಿರೋಧಕ ಕೇಸ್ ಅನ್ನು ಒಳಗೊಂಡಿದ್ದು ಹೆಚ್ಚುವರಿ ಬ್ಯಾಟರಿ ಶಕ್ತಿಯೊಂದಿಗೆ ಬಂದಿದೆ.

ಯುಎಸ್‌ಬಿ ಚಾರ್ಜರ್

ಟ್ರಿಪಲ್ ಸಿ ಗ್ರೀನ್ ಜೂಸ್ ಯುಎಸ್‌ಬಿ ಚಾರ್ಜರ್

ಈ ಯುಎಸ್‌ಬಿ ಚಾರ್ಜರ್ ಸ್ಟೈಲಿಶ್ ಮತ್ತು ಹೆಚ್ಚು ಕಾರ್ಯತತ್ಪರವಾಗಿದೆ. ಈ ಬ್ಯಾಟರಿ ಪ್ಯಾಕ್ ಫೋನ್, ಟ್ಯಾಬ್ಲೆಟ್, ಸ್ಪೀಕರ್‌ಗಳಿಗೆ ಮತ್ತು ಕ್ಯಾಮೆರಾಗಳಿಗೆ ಬೇಕಾದ ಚಾರ್ಜ್ ಅನ್ನು ಒದಗಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see the 10 Unexpected, High-Tech Gifts For your father.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot