ಗೂಗಲ್ ಸರ್ಚ್: ಪ್ರಯೋಜನಕಾರಿ ಹತ್ತು ಮುಖಗಳು

By Shwetha
|

ನೀವು ಗೂಗಲ್‌ನಲ್ಲಿ ಏನನ್ನು ಹುಡುಕುತ್ತಿದ್ದೀರಿ ಎಂಬುದು ಮುಖ್ಯವಲ್ಲ, ಆದರೆ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಸರ್ಚ್ ಸಲಹೆಗಳು ನಿಮಗೆ ಬೇಕಾದ ಮಾಹಿತಿಯನ್ನು ಇನ್ನಷ್ಟು ಸ್ವಾರಸ್ಯಮಯವಾಗಿ ಮತ್ತು ಮಾಹಿತಿಪೂರ್ಣವಾಗಿ ನೀಡುವುದು ಖಂಡಿತ.

ಓದಿರಿ: ಆಂಡ್ರಾಯ್ಡ್ ಬಳಕೆದಾರರು ಹೆಚ್ಚು ಸುಖಿಗಳು

ಜಗತ್ತಿನಲ್ಲೇ ಹೆಚ್ಚಿನ ಪ್ರಚಾರವನ್ನು ಗಿಟ್ಟಿಸಿಕೊಂಡಿರುವ ಗೂಗಲ್ ಸರ್ಚ್ ಯಾವುದೇ ತೊಂದರೆಯಿಲ್ಲದೆ ಬಳಕದಾರರಿಗೆ ನಿಖರ ಮಾಹಿತಿಯನ್ನು ಒದಗಿಸುತ್ತದೆ. ಆದರೆ ನಿಮ್ಮ ಹುಡುಕಾಟವನ್ನು ಇನ್ನಷ್ಟು ಪ್ರಯೋಜನಕಾರಿ ಮತ್ತು ನೇರವಾಗಿಸುವ ಕೆಲವೊಂದು ಸರಳ ಸಲಹೆಗಳೊಂದಿಗೆ ನಾವು ಬಂದಿದ್ದು ಖಂಡಿತ ನಿಮಗಿದು ಪ್ರಯೋಜನಕಾರಿಯಾಗಿದೆ.

ಗೂಗಲ್‌ಗೆ ಹೋಗದೆಯೇ ಸರ್ಚ್ ಮಾಡುವುದು

ಗೂಗಲ್‌ಗೆ ಹೋಗದೆಯೇ ಸರ್ಚ್ ಮಾಡುವುದು

ಗೂಗಲ್ ಸರ್ಚ್‌ನಲ್ಲಿ ಕೆಳಗಿನ ಬಾಣದ ಗುರುತನ್ನು ಕ್ಲಿಕ್ ಮಾಡುವ ಮೂಲಕ ಮತ್ತು ಏಡ್ ಬಟನ್ ಸೇರಿಸಿ ಸರ್ಚ್ ಮಾಡಿ.

ಚಿತ್ರ ಹುಡುಕಾಡುವುದು

ಚಿತ್ರ ಹುಡುಕಾಡುವುದು

ಇಮೇಜಸ್ ಟ್ಯಾಬ್‌ನಲ್ಲಿ ಸರ್ಚ್ ಟೂಲ್ಸ್ ಆಪ್ಶನ್ ಅನ್ನು ಕ್ಲಿಕ್ ಮಾಡಿ ಮತ್ತು ಗಾತ್ರ, ಬಣ್ಣ ಮತ್ತು ಇತರ ಆಯ್ಕೆಗಳಿರುವ ಫಿಲ್ಟರ್ ಅನ್ನು ನಿಮಗೆ ಕಾಣಬಹುದು.

ಚಿತ್ರವನ್ನು ಬಳಸಿಕೊಂಡು ಚಿತ್ರ ಹುಡುಕುವುದು

ಚಿತ್ರವನ್ನು ಬಳಸಿಕೊಂಡು ಚಿತ್ರ ಹುಡುಕುವುದು

ಗೂಗಲ್ ಬರಿಯ ಚಿತ್ರಗಳನ್ನು ಮಾತ್ರ ಹುಡುಕುವುದಿಲ್ಲ, ಚಿತ್ರಗಳೊಂದಿಗೆ ಚಿತ್ರಗಳನ್ನೂ ಹುಡುಕುವ ಚತುರ. ಕಡಿಮೆ ರೆಸಲ್ಯುಶನ್‌ನ ಚಿತ್ರವನ್ನು ಹುಡುಕಿದ್ದೀರಿ ಮತ್ತು ಉತ್ತಮ ಗುಣಮಟ್ಟದ ಚಿತ್ರ ನಿಮ್ಮದಾಗಬೇಕು ಎಂದಾದಲ್ಲಿ ಚಿತ್ರವನ್ನೇ ಬಳಸಿಕೊಂಡು ಇನ್ನಷ್ಟು ಗುಣಮಟ್ಟದ ಚಿತ್ರಗಳನ್ನು ಹುಡುಕಿ.

ಇತರ ವೆಬ್ ವಿಷಯಗಳು

ಇತರ ವೆಬ್ ವಿಷಯಗಳು

ಮೋರ್ ಟ್ಯಾಬ್ ಆಯ್ಕೆಯನ್ನು ಬಳಸಿಕೊಂಡು ನ್ಯೂಸ್ ಸ್ಟೋರೀಸ್, ಮ್ಯಾಪ್ಸ್ ಮತ್ತು ವೀಡಿಯೊಗಳನ್ನು ನಿಮಗೆ ಹುಡುಕಾಡಬಹುದಾಗಿದೆ.

ಜನಪ್ರಿಯ ಪದಗಳನ್ನು ನಿರ್ಬಂಧಿಸುವುದು

ಜನಪ್ರಿಯ ಪದಗಳನ್ನು ನಿರ್ಬಂಧಿಸುವುದು

ನೀವು ಏನನ್ನು ಹುಡುಕುತ್ತಿದ್ದರೂ ಅದಕ್ಕೂ ಮೀರಿ ಹೆಚ್ಚಿನ ಸರ್ಚ್ ಫಲಿತಾಂಶಗಳನ್ನು ಗೂಗಲ್ ಒಮ್ಮೊಮ್ಮೆ ನಿಮಗೆ ಒದಗಿಸುತ್ತದೆ. ಆನ್‌ಲೈನ್‌ನಲ್ಲಿ ಹೆಚ್ಚು ಕಂಡುಬರುವ ನಿಮ್ಮ ಸರ್ಚ್‌ಗೆ ಹೊಂದಿಕೆಯಾಗಿರುವ ಪದಗಳನ್ನು ಬಳಸಿ ಹುಡುಕಾಡಬಹುದು.

ದಿನಾಂಕದ ಮೂಲಕ ಹುಡುಕಾಡುವುದು

ದಿನಾಂಕದ ಮೂಲಕ ಹುಡುಕಾಡುವುದು

ನಿಮಗೆ ನಿರ್ದಿಷ್ಟ ದಿನಾಂಕ ಮತ್ತು ಜನಪ್ರಿಯ ವಿಷಯಗಳಿಂದ ಮಾಹಿತಿ ಬೇಕು ಎಂದಾದಲ್ಲಿ ಫಲಿತಾಂಶಗಳ ಪುಟದಲ್ಲಿ ಸರ್ಚ್ ಟೂಲ್ಸ್ ಕ್ಲಿಕ್ ಮಾಡಿ ಮತ್ತು ಫಲಿತಾಂಶಗಳನ್ನು ಫಿಲ್ಟರ್ ಮಾಡಲು ಡ್ರಾಪ್ ಡೌನ್ ಲಿಸ್ಟ್‌ಗಳನ್ನು ಬಳಸಿ.

ಸುಧಾರಿತ ಹುಡುಕಾಟಗಳು

ಸುಧಾರಿತ ಹುಡುಕಾಟಗಳು

ಫಲಿತಾಂಶಗಳ ಪುಟದಲ್ಲಿ ಕಾಗ್ ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ ಅಡ್ವಾನ್ಸ್‌ಡ್ ಸರ್ಚ್ ಅನ್ನು ಆಯ್ಕೆಮಾಡಿ.

ಸೈಟ್‌ನಲ್ಲಿ ಹುಡುಕಾಡಲು ಗೂಗಲ್ ಬಳಸಿ

ಸೈಟ್‌ನಲ್ಲಿ ಹುಡುಕಾಡಲು ಗೂಗಲ್ ಬಳಸಿ

ವೆಬ್‌ಸೈಟ್‌ನಲ್ಲಿ ಏನನ್ನಾದರೂ ಹುಡುಕಾಡಲು ಸಾಮಾನ್ಯವಾಗಿ ಟೈಪ್ ಮಾಡುವಂತೆಯೇ ಸರ್ಚ್ ಮಾಡಿ ಮತ್ತು site:www.sitename.com ಅನ್ನು ಕೊನೆಯಲ್ಲಿ ಸೇರಿಸಿ.

 ಹೋಟೆಲ್‌ಗಳಿಗಾಗಿ ತಡಕಾಡಲು

ಹೋಟೆಲ್‌ಗಳಿಗಾಗಿ ತಡಕಾಡಲು

ನೀವು ಹುಡುಕಾಡುತ್ತಿರುವ ಹೋಟೆಲ್ ಲಿಂಕ್‌ನಲ್ಲಿ ಕ್ಲಿಕ್ ಮಾಡಿ ಮತ್ತು ಹೋಟೆಲ್ ನಕ್ಷೆಯತ್ತ ನೋಟ ಹರಿಸಿ.

ಡ್ರೈವಿಂಗ್ ಮಾರ್ಗಸೂಚನೆಗಳು

ಡ್ರೈವಿಂಗ್ ಮಾರ್ಗಸೂಚನೆಗಳು

ಎಲ್ಲಿಂದ > ಸ್ಥಳದ ಹೆಸರು ಎಲ್ಲಿಗೆ > ಸ್ಥಳದ ಹೆಸರು ಈ ಮಾದರಿಯಲ್ಲಿ ಸರ್ಚ್ ಅನ್ನು ಮಾಡಿ.

Most Read Articles
Best Mobiles in India

English summary
Google Search is by far the most popular website in the world and for good reason — without it, we’d struggle to make sense of the billions of pages that make up the world wide web.This collection of simple tricks will make your searches much more efficient.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more