ಆಂಡ್ರಾಯ್ಡ್ ಬಳಕೆದಾರರು ಹೆಚ್ಚು ಸುಖಿಗಳು

By Shwetha
|

ಆಂಡ್ರಾಯ್ಡ್ ಬಳಕೆದಾರರು ಐಓಎಸ್‌ ಬಳಕೆದಾರರಿಗಿಂತಲೂ ಹೆಚ್ಚು ಬುದ್ಧಿವಂತರು ಎಂಬ ಸಂಗತಿ ಕಟುವಾಗಿದ್ದರೂ ಇದನ್ನು ಅಂಗೀಕರಿಸಲೇ ಬೇಕು. ಐಓಎಸ್‌ಗಿಂತಲೂ ಆಂಡ್ರಾಯ್ಡ್ ಹೆಚ್ಚು ಸ್ವತಂತ್ರವಾಗಿರುವುದು, ಯಾವುದೇ ಕಟ್ಟುಪಾಡುಗಳಿಲ್ಲದೇ ಆಂಡ್ರಾಯ್ಡ್ ಅನ್ನು ಬಳಸುವುದೆಂದರೆ ಬಳಕೆದಾರರಿಗೆ ಹಬ್ಬ.

ಓದಿರಿ: ಮೊಬೈಲ್ ಫೋನ್‌ಗಳಿಂದ ರೋಗವನ್ನು ಪತ್ತೆಹಚ್ಚಬಹುದು!

ಐಓಎಸ್ ಬಳಕೆದಾರರಲ್ಲಿ ಇದು ತಾರತಮ್ಯ ಎಂಬ ಭಾವನೆ ಬಂದರೂ ಆಂಡ್ರಾಯ್ಡ್ ಬಳಸುವಷ್ಟು ಸುಲಲಿತವಾಗಿ ಐಓಎಸ್ ಬಳಸಲಾಗುವುದಿಲ್ಲ ಎಂಬುದು ಸಾರ್ವತ್ರಿಕ ಸತ್ಯ. ಇನ್ನು ಇದಕ್ಕೆ ಇಂಬು ಕೊಡುವಂತೆಯೇ ಕೆಲವೊಂದು ಮಾಹಿತಿಗಳೊಂದಿಗೆ ನಾವು ಬಂದಿದ್ದು ಆಂಡ್ರಾಯ್ಡ್ ಬಳಕೆದಾರರು ಏಕೆ ಸುಖಿಗಳು ಎಂಬ ಮಾತು ಅರ್ಥವಾಗುವುದು ಖಂಡಿತ.

ಇಷ್ಟವಾಗುವ ಅಪ್ಲಿಕೇಶನ್‌ಗಳನ್ನು ತ್ಯಜಿಸುವುದು

ಇಷ್ಟವಾಗುವ ಅಪ್ಲಿಕೇಶನ್‌ಗಳನ್ನು ತ್ಯಜಿಸುವುದು

ಅಪ್ಲಿಕೇಶನ್ ಮ್ಯಾನೇಜರ್ ಅಡಿಯಲ್ಲಿರುವ ಆಂಡ್ರಾಯ್ಡ್‌ನ ಸೆಟ್ಟಿಂಗ್ ಮೆನುವಿನಲ್ಲಿ ನಿಮಗೆ ಇಷ್ಟವಾಗುವ ಅಪ್ಲಿಕೇಶನ್‌ಗಳನ್ನು ತ್ಯಜಿಸುವುದು ಮತ್ತು ಅನ್‌ಇನ್‌ಸ್ಟಾಲ್ ಮಾಡುವುದು ಮೊದಲಾದ ಕೆಲಸಗಳನ್ನು ಮಾಡಬಹುದಾಗಿದೆ. ಇನ್ನು ಅಪ್ಲಿಕೇಶನ್‌ನ ಕ್ಯಾಶ ಕೂಡ ನಿವಾರಿಸಿಕೊಳ್ಳಬಹುದಾಗಿದೆ.

ನಿಧಾನ ನಡೆ

ನಿಧಾನ ನಡೆ

ಇತ್ತೀಚೆಗೆ ಆಪಲ್ ಕೂಡ ತನ್ನ ಹೋಮ್ ಸ್ಕ್ರೀನ್‌ನಲ್ಲಿ ವಿಜೆಟ್‌ಗಳನ್ನು ಅನುಮತಿಸುತ್ತಿದೆ. ಆದರೆ ಇದು ಆಪಲ್‌ನ ನಿಧಾನ ನಡೆಯಾಗಿದೆ. ಆಂಡ್ರಾಯ್ಡ್ ತನ್ನ ಬಳಕೆದಾರರಿಗೆ ಹಲವು ವರ್ಷಗಳಿಂದಲೇ ಹೋಮ್ ಸ್ಕ್ರೀನ್ ಮತ್ತು ಲಾಕ್ ಸ್ಕ್ರೀನ್‌ನಲ್ಲಿ ವಿಜೆಟ್‌ಗಳನ್ನು ಅನುಮತಿಸುತ್ತಿದೆ.

ಅಪ್ಲಿಕೇಶನ್ ಹೈಡ್

ಅಪ್ಲಿಕೇಶನ್ ಹೈಡ್

ನಿಮಗೆ ಹೊಂದುವಂತಹ ಇಂಟರ್ಫೇಸ್ ಕಸ್ಟಮೈಸ್ ಮಾಡಲು ಆಂಡ್ರಾಯ್ಡ್ ನಿಮ್ಮನ್ನು ಅನುಮತಿಸುತ್ತದೆ. ಆದರೆ ಐಫೋನ್‌ನಲ್ಲಿ ಅಪ್ಲಿಕೇಶನ್ ಹೈಡ್ ಮಾಡುವುದು ಮತ್ತು ನಿಮ್ಮ ಇಷ್ಟದ ಅಪ್ಲಿಕೇಶನ್ ಬಳಸಲು ಸಾಧ್ಯವಾಗುವುದಿಲ್ಲ.

ಪ್ರಯಾಣದ ನಿಖರ ಮಾಹಿತಿ

ಪ್ರಯಾಣದ ನಿಖರ ಮಾಹಿತಿ

ಇನ್ನು ಗೂಗಲ್ ಮ್ಯಾಪ್ಸ್ ಅಥವಾ ಆಪಲ್ ಮ್ಯಾಪ್ಸ್‌ನಲ್ಲಿ ಹಲವಾರು ಭಿನ್ನತೆಗಳನ್ನು ನಮಗೆ ಕಾಣಬಹುದು. ಗೂಗಲ್ ಮ್ಯಾಪ್ಸ್ ನಿಮಗೆ ಪ್ರಯಾಣದ ನಿಖರ ಮಾಹಿತಿಯನ್ನು ಒದಗಿಸುವುದರ ಜೊತೆಗೆ ಯಾವ ವಾಹನದಲ್ಲಿ ನಿಮಗೆ ಎಷ್ಟು ಬೇಗ ತಲುಪಬಹುದು ಎಂಬ ಮಾಹಿತಿಯನ್ನು ನೀಡುತ್ತದೆ. ಆದರೆ ಆಪಲ್ ಈ ಎಲ್ಲಾ ಮಾಹಿತಿಗಳನ್ನು ನೀಡುವಲ್ಲಿ ಅಷ್ಟೊಂದು ಸೂಕ್ತವಾಗಿಲ್ಲ.

ಎರಡು ಅಪ್ಲಿಕೇಶನ್ ಬಳಸುವ ಪ್ರಯೋಜನ

ಎರಡು ಅಪ್ಲಿಕೇಶನ್ ಬಳಸುವ ಪ್ರಯೋಜನ

ಒಂದೇ ಸಮಯದಲ್ಲಿ ಎರಡು ಅಪ್ಲಿಕೇಶನ್ ಬಳಸುವ ಪ್ರಯೋಜನ ಇದರಲ್ಲಿದೆ. ಆದರೆ ಐಓಎಸ್‌ನಲ್ಲಿ ಈ ಸೌಲಭ್ಯ ಇಲ್ಲ.

ವಿಭಿನ್ನ ಭಾಗ

ವಿಭಿನ್ನ ಭಾಗ

ಆಪರೇಟಿಂಗ್ ಸಿಸ್ಟಮ್‌ನಲ್ಲೇ ವಿಭಿನ್ನ ಭಾಗಗಳನ್ನು ಸಿದ್ಧಪಡಿಸಲು ಇದು ನಿಮ್ಮನ್ನು ಅನುಮತಿಸುತ್ತದೆ.

ಎನ್‌ಎಫ್‌ಸಿ ಚಿಪ್‌

ಎನ್‌ಎಫ್‌ಸಿ ಚಿಪ್‌

ಐಫೋನ್‌ಗಳಲ್ಲಿ ಐಓಎಸ್ ಬಳಕೆದಾರರು ಎನ್‌ಎಫ್‌ಸಿ ಚಿಪ್‌ಗಳನ್ನು ಬಳಸಬಹುದಾಗಿದೆ.

ಸ್ಟೋರ್ ಮಾಡಿ ಇರಿಸಬಹುದಾಗಿದೆ

ಸ್ಟೋರ್ ಮಾಡಿ ಇರಿಸಬಹುದಾಗಿದೆ

ಆಂಡ್ರಾಯ್ಡ್ ಬಳಕೆದಾರರು ತಮ್ಮ ಎಸ್‌ಡಿ ಕಾರ್ಡ್‌ನಲ್ಲಿ ಎಲ್ಲವನ್ನೂ ಸ್ಟೋರ್ ಮಾಡಿ ಇರಿಸಬಹುದಾಗಿದೆ. ಆದರೆ ಐಫೋನ್‌ನಲ್ಲಿ 5.8 ಜಿಬಿ ಸ್ಪೇಸ್ ನಿಮಗೆ ಅಗತ್ಯವಿದೆ.

ಡೌನ್‌ಲೋಡ್

ಡೌನ್‌ಲೋಡ್

ಪ್ಲೇ.ಗೂಗಲ್.ಕಾಮ್‌ನಲ್ಲಿ ನೀವು ಯಾವ ವಿಧವಾದ ಅಪ್ಲಿಕೇಶನ್‌ಗಳನ್ನು ಕೂಡ ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಬಹುದಾಗಿದೆ. ಆದರೆ ಐಫೋನ್‌ನ ಐಟ್ಯೂನ್ಸ್ ಆಪ್ ಸ್ಟೋರ್ ಕೆಲವೊಂದು ನಿರ್ಬಂಧನೆಗಳನ್ನು ಹೇರುತ್ತದೆ.

ಸೆಕ್ಯುರಿಟಿ

ಸೆಕ್ಯುರಿಟಿ

ಸ್ವೈಪ್, ಫಿಂಗರ್ ಪ್ರಿಂಟ್ ಸ್ಕ್ಯಾನ್, ಅಥವಾ ನಿಮ್ಮ ಡಿವೈಸ್ ಅನ್‌ಲಾಕ್ ಮಾಡಲು ನಾಲ್ಕು ಸಂಖ್ಯೆಯ ಪಿನ್ ಅನ್ನು ಬಳಸಬಹುದು. ಆದರೆ ಆಂಡ್ರಾಯ್ಡ್ ಬಳಕೆದಾರರಿಗೆ ಇನ್ನಷ್ಟು ಬಿಗಿ ಭದ್ರತಾ ವ್ಯವಸ್ಥೆಗಳನ್ನು ಒದಗಿಸುತ್ತಿದೆ. ನಿಮ್ಮ ಮುಖವನ್ನು ಸ್ಕ್ಯಾನ್ ಮಾಡುವುದು, ಅಥವಾ ದೊಡ್ಡದಾದ ಪಾಸ್‌ವರ್ಡ್ ಬಳಸುವುದು ಹೀಗೆ ಆಂಡ್ರಾಯ್ಡ್ ಭದ್ರತಾ ವ್ಯವಸ್ಥೆಗಳು ಒಂದಕ್ಕಿಂತ ಒಂದು ಹಿರಿದಾಗಿದೆ.

Best Mobiles in India

English summary
Your Apple-using friends may try to rub your nose in their shiny new version of iOS on their shiny new iPhone, so here are ten features that Android has that you can retort with.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X