ನಿಮ್ಮ ಮಾತು ಕೇಳುವ ಸ್ಮಾರ್ಟ್‌ಫೋನ್ ಬಗ್ಗೆ ಗೊತ್ತೇ?

By Shwetha
|

ಆಧುನಿಕ ತಂತ್ರಜ್ಞಾನ ಹೆಚ್ಚು ಮುಂದುವರಿದಂತೆ ಅನ್ವೇಷಣೆಗಳು ಕ್ರಿಯಾತ್ಮಕವಾಗುತ್ತಿದೆ. ಸ್ಪರ್ಶ, ನಿರ್ದಿಸ್ಟ ಗೆಸ್ಚರ್‌ಗಳು, ಮತ್ತು ನಿಮ್ಮ ಧ್ವನಿಯನ್ನು ಬಳಸಿ ಕೂಡ ಡಿವೈಸ್‌ಗಳನ್ನು ಇದೀಗ ನಿಯಂತ್ರಿಸಬಹುದಾಗಿದೆ.

ಓದಿರಿ: ಫ್ಲಿಪ್‌ಕಾರ್ಟ್‌ ಹಾಟ್ ಸೇಲ್: ಫೋನ್‌ಗಳ ಮೇಲೆ ದರಕಡಿತ

ಇಂತಹುದೇ ಧ್ವನಿಯನ್ನು ಬಳಸಿ ನಿಯಂತ್ರಿಸಬಹುದಾದ ಗ್ಯಾಜೆಟ್‌ಗಳ ವಿವರಗಳನ್ನು ನಾವು ನಿಮಗಿಲ್ಲಿ ನೀಡುತ್ತಿದ್ದು ಇವುಗಳ ಧ್ವನಿ ನಿಯಂತ್ರಕ ಸ್ಮಾರ್ಟ್ ವಾಚ್‌ಗಳು, ಫೋನ್‌ಗಳು ಮೊದಲಾದ ಡಿವೈಸ್‌ಗಳನ್ನು ಒಳಗೊಂಡಿದೆ.

ಸ್ಕಲ್ಲಿ ಸ್ಮಾರ್ಟ್ ಹೆಲ್ಮೆಟ್

ಸ್ಕಲ್ಲಿ ಸ್ಮಾರ್ಟ್ ಹೆಲ್ಮೆಟ್

ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು ಇದೀಗ ಸ್ಮಾರ್ಟ್ ಹೆಲ್ಮೆಟ್‌ಗಳ ಸರದಿಯಾಗಿದೆ. ಈ ಹೆಲ್ಮೆಟ್‌ಗಳು ಜಿಪಿಎಸ್ ನ್ಯಾವಿಗೇಶನ್‌ನೊಂದಿಗೆ ಬಂದಿವೆ ಮತ್ತು ಹೆಡ್ಸ್ ಅಪ್ ಡಿಸ್‌ಪ್ಲೇ ಸಿಸ್ಟಮ್‌ಗಳನ್ನು ಹೊಂದಿವೆ. ಇದನ್ನು ಧ್ವನಿಯಿಂದ ನಿಯಂತ್ರಿಸಬಹುದಾಗಿದೆ.

ಹೋಮಿ

ಹೋಮಿ

ನಿಮ್ಮ ಡಿವೈಸ್‌ಗಳಿಂದ ಇದನ್ನು ಸಂಪರ್ಕಪಡಿಸಬಹುದಾಗಿದ್ದು ನಿಮ್ಮ ಧ್ವನಿಯ ಮೂಲಕ ಇವುಗಳನ್ನು ನಿಯಂತ್ರಿಸಬಹುದಾಗಿದೆ. ಫೇಸ್‌ಬುಕ್ ಸ್ಟೇಟಸ್, ಲೈಟ್ ಸ್ವಿಚ್‌ಗಳು, ಥರ್ಮೋಸ್ಟಾರ್‌ಗಳನ್ನು ನಿಯಂತ್ರಿಸಬಹುದಾಗಿದೆ.

ಇವೀ

ಇವೀ

ಇವೀ ಒಂದು ಸ್ಮಾರ್ಟ್ ಅಲರಾಮ್ ಕ್ಲಾಕ್ ಆಗಿದ್ದು ನಿಮ್ಮ ಧ್ವನಿಯನ್ನು ಬಳಸಿ ಇದನ್ನು ಆನ್ ಅಥವಾ ಆಫ್ ಮಾಡಬಹುದು. ಸುದ್ದಿ, ಹವಾಮಾನ, ಸ್ಟಾಕ್‌ ಮೊದಲಾದ ಮಾಹಿತಿಗಳನ್ನು ಇದು ನಿಮಗೆ ನೀಡುತ್ತದೆ.

ಸೋನಿ ಸ್ಮಾರ್ಟ್‌ವಾಚ್ 3

ಸೋನಿ ಸ್ಮಾರ್ಟ್‌ವಾಚ್ 3

ಧ್ವನಿಯನ್ನು ಬಳಸಿ ಸೋನಿಯ ಈ ಸ್ಮಾರ್ಟ್‌ವಾಚ್ ಅನ್ನು ನಿಯಂತ್ರಿಸಬಹುದಾಗಿದೆ. ಹವಾಮಾನ, ಹೋಟೆಲ್ ಬುಕ್ಕಿಂಗ್, ದಿಕ್ಕುಗಳ ಸೂಚನೆ ಮೊದಲಾದ ಕೆಲಸಗಳನ್ನು ಮಾಡಬಲ್ಲದು.

ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿ

ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿ

ಈ ಟಿವಿಗೆ ರಿಮೋಟ್ ಕಂಟ್ರೋಲ್ ಬೇಕಾಗಿಯೇ ಇಲ್ಲ. ಬಟನ್ ದೂಡುವ ಮೂಲಕ ಈ ಟಿವಿಯನ್ನು ನಿಮಗೆ ಆಪರೇಟ್ ಮಾಡಬಹುದಾಗಿದೆ. ಚಾನೆಲ್ ಬದಲಾಯಿಸುವುದು, ಅಪ್ಲಿಕೇಶನ್ ಪ್ರವೇಶಿಸುವುದು, ವೆಬ್ ನ್ಯಾವಿಗೇಶನ್ ಈ ಕೆಲಸಗಳನ್ನು ನಿರ್ವಹಿಸಬಹುದಾಗಿದೆ.

ಲಿಸ್ನರ್

ಲಿಸ್ನರ್

ನಿಮ್ಮ ಕೇಳುಗ ಸಹಾಯಕ ಲಿಸ್ನರ್ ಆಗಿದೆ. ಚಪ್ಪಾಳೆ, ಸಂಗೀತ, ನಾಕ್ ಮತ್ತು ನಿಮ್ಮ ಧ್ವನಿಗೆ ಕೂಡ ಇದು ಪ್ರತಿಸ್ಪಂದಿಸುತ್ತದೆ. ನಿಮ್ಮ ಮಗು ಏನು ಹೇಳಿದೆ ಎಂಬುದನ್ನು ಇದು ಗುರುತಿಸುತ್ತದೆ.

 ಅಮೆಜಾನ್ ಇಕೋ

ಅಮೆಜಾನ್ ಇಕೋ

ನಿಮ್ಮ ಮನೆಗಾಗಿ ಸಿರಿಯಂತೆ ಇದು ಕಾರ್ಯನಿರ್ವಹಿಸುತ್ತದೆ. ವಿಶೇಷ ಪಾಸ್‌ವರ್ಡ್ ಬಳಸಿ ಇದನ್ನು ಆಕ್ಟಿವೇಟ್ ಮಾಡಬೇಕಾಗುತ್ತದೆ. ನಿಮಗೆ ಎಲ್ಲಾ ರೀತಿಯ ಮಾಹಿತಿಯನ್ನು ಇದು ನೀಡುತ್ತದೆ.

ವೊಕ್ಕಾ ಲೈಟ್

ವೊಕ್ಕಾ ಲೈಟ್

ಯಾವುದೇ ಲೈಟ್ ಬಲ್ಬ್ ಅನ್ನು ಇದು ವಾಯ್ಸ್ ಆಕ್ಟಿವೇಟ್ ಆಗಿ ಮಾಡುತ್ತದೆ.

ಹನಿವೆಲ್ ವೈಫೈ

ಹನಿವೆಲ್ ವೈಫೈ

ಈ ವೈಫೈ ಸಕ್ರಿಯಗೊಂಡಿರುವ ಸ್ಮಾರ್ಟ್ ಥರ್ಮೊಸ್ಟಾಟ್ ಮೂಲಕ ನಿಮ್ಮ ಧ್ವನಿಯನ್ನು ಬಳಸಿ ಮನೆಯ ವಾತಾವರಣವನ್ನು ನಿಯಂತ್ರಿಸಬಹುದಾಗಿದೆ.

ಮೋಟೋ ಹಿಂಟ್

ಮೋಟೋ ಹಿಂಟ್

ಮೋಟೋರೋಲಾ ಉತ್ಪಾದಿತ ಈ ಡಿವೈಸ್ ನಿಮ್ಮ ಫೋನ್ ಅನ್ನು ಧ್ವನಿ ಸಕ್ರಿಯವಾಗಿರುವ ಇಯರ್ ಬಡ್ ಮೂಲಕ ನಿಯಂತ್ರಿಸಲು ನಿಮ್ಮನ್ನು ಅನುಮತಿಸುತ್ತದೆ.

Best Mobiles in India

English summary
As modern technologies become more intuitive, manufacturers create devices which can be activated and controlled by touch, specific gestures, and even your own voice. Today we decided to share with you a list of innovative tech gadgets which can be activated by the sound of your voice.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X