Home
ಸುದ್ದಿಜಾಲ

ಮನೆಯ ವೈಫೈ ಫಾಸ್ಟ್ ಆಗಬೇಕೇ ಇಲ್ಲಿದೆ ಸಲಹೆಗಳು

By Shwetha

ಪ್ರಸ್ತುತ ಯುಗದಲ್ಲಿ ವೈಫೈ ಬಳಕೆ ಅತ್ಯಮೂಲ್ಯ ಅಂಶವಾಗಿ ಮಾರ್ಪಟ್ಟಿದೆ. ಫೋನ್‌ನ ಇಂಟರ್ನೆಟ್‌ನ ಅಗತ್ಯತೆಯನ್ನು ಪೂರೈಸುವುದರ ಜೊತೆಗೆ ಮನೆಯ ಬಳಕೆಯಲ್ಲೂ ಇಂದು ವೈಫೈ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಆದರೆ ವೈಫೈ ಕೆಲವೊಮ್ಮೆ ಸಿಗ್ನಲ್‌ಗಳ ಕೊರತೆಯಿಂದ ಚೆನ್ನಾಗಿ ಕಾರ್ಯನಿರ್ವಹಿಸದೇ ಹೋಗುತ್ತದೆ. ಇದೇನೂ ನಿವಾರಿಸಲು ಸಾಧ್ಯವಾಗಿಲ್ಲದ ಸಮಸ್ಯೆಯೇನಲ್ಲ.

ಓದಿರಿ: ಸ್ಮಾರ್ಟ್‌ಫೋನ್ ಸೈಲೆಂಟ್ ಕಿಲ್ಲರ್

ನೀವು ಕೆಲವೊಂದು ಹಂತಗಳನ್ನು ಅನುಸರಿಸುವುದರ ಮೂಲಕ ವೈಫೈ ವೇಗವನ್ನು ಹೆಚ್ಚಿಸಿಕೊಳ್ಳಬಹುದು ಅದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿಸಲಿದ್ದೇವೆ.

ಅತ್ಯಾಧುನಿಕ ವೈಫೈ ತಂತ್ರಜ್ಞಾನ ಬಳಕೆ

ಅತ್ಯಾಧುನಿಕ ವೈಫೈ ತಂತ್ರಜ್ಞಾನ ಬಳಕೆ

ನವೀಕೃತ ಹಾರ್ಡ್‌ವೇರ್ ಅನ್ನು ಆದಷ್ಟು ಬಳಸಿ. ವೈರ್‌ಲೆಸ್ ಎ, ಬಿ, ಮತ್ತು ಜಿ ಹಳೆಯದು ಹಾಗೂ ನಿಧಾನವಾಗಿರುತ್ತದೆ. ವೈರ್‌ಲೆಸ್ ಎನ್ ಹೆಚ್ಚು ವೇಗವಾಗಿರುತ್ತದೆ. ವೈರ್‌ಲೆಸ್ ಎನ್ ರೂಟರ್ ಮತ್ತು ವೈರ್‌ಲೆಸ್ ಎನ್ ಕಾರ್ಡರ್ ಅನ್ನು ನೀವು ಹೊಂದಿರುವುದು ಅಗತ್ಯವಾಗಿದೆ. ಇದರಿಂದ ಹೆಚ್ಚು ವೇಗ ನಿಮಗೆ ದೊರೆಯುತ್ತದೆ.

ರೂಟರ್ ಸ್ಪಾಟ್ ಪತ್ತೆಹಚ್ಚಿ

ರೂಟರ್ ಸ್ಪಾಟ್ ಪತ್ತೆಹಚ್ಚಿ

ನಿಮಗೆ ಉತ್ತಮ ಸಿಗ್ನಲ್ ದೊರೆಯಬೇಕು ಎಂದಾದಲ್ಲಿ, ಇದನ್ನು ತೆರೆದ ಗೋಡೆಗಳಿಲ್ಲದ ಮತ್ತು ಅಡೆತಡೆಗಳಿಲ್ಲದಲ್ಲಿ ರೂಟರ್ ಅನ್ನು ಇರಿಸಬೇಕು. ನಿಮ್ಮ ಮನೆಯ ಮಧ್ಯದಲ್ಲಿ ಇದು ಇದೆ ಎಂಬುದನ್ನು ಖಾತ್ರಿಪಡಿಸಿ. ಇದರಿಂದ ಮನೆಯಲ್ಲೆಲ್ಲಾ ಉತ್ತಮ ಕವರೇಜ್ ನಿಮಗೆ ದೊರೆಯುತ್ತದೆ.

ಸರಿಯಾದ ವೈರ್‌ಲೆಸ್ ಚಾನಲ್

ಸರಿಯಾದ ವೈರ್‌ಲೆಸ್ ಚಾನಲ್

ನಿಮ್ಮ ಅಕ್ಕಪಕ್ಕದ ಮನೆಯವರ ರೂಟರ್‌ಗಳು ನಿಮಗೆ ಅಡ್ಡವಾಗಿರಬಹುದು ಮತ್ತು ಸಿಗ್ನಲ್‌ಗಳಿಗೆ ತೊಂದರೆಯನ್ನುಂಟು ಮಾಡುತ್ತಿರಬಹುದು. ವೈಫೈ ಸ್ಟಂಬ್ಲರ್ ಅಥವಾ ವೈಫೈ ಅನಲೈಜರ್ ಪರಿಕರಗಳನ್ನು ಬಳಸಿ.

ಇತರ ಅಪ್ಲಿಯನ್ಸ್‌ಗಳ ಒಳಗೊಳ್ಳುವಿಕೆ ನಿವಾರಿಸಿಕೊಳ್ಳಿ

ಇತರ ಅಪ್ಲಿಯನ್ಸ್‌ಗಳ ಒಳಗೊಳ್ಳುವಿಕೆ ನಿವಾರಿಸಿಕೊಳ್ಳಿ

ಕೋರ್ಡ್‌ಲೆಸ್ ಫೋನ್‌ಗಳು, ಮೈಕ್ರೋವೇವ್ಸ್ ಮತ್ತು ಇತರ ಅಪ್ಲಿಯನ್ಸ್‌ಗಳು ನಿಮ್ಮ ರೂಟರ್‌ಗೆ ತೊಂದರೆಯನ್ನುಂಟು ಮಾಡುತ್ತಿರಬಹುದು. ಡ್ಯುಯಲ್ ಬ್ಯಾಂಡ್ ರೂಟರ್ ಅನ್ನು ಖರೀದಿಸುವುದು ಸೂಕ್ತ.

ವೈಫೈ ಕಳ್ಳರಿಗಾಗಿ ಸುಭದ್ರತೆ

ವೈಫೈ ಕಳ್ಳರಿಗಾಗಿ ಸುಭದ್ರತೆ

ನಿಮ್ಮ ರೂಟರ್ ಪಾಸ್‌ವರ್ಡ್ ಅನ್ನು ಹೊಂದಿದ್ದಲ್ಲಿ, ಹ್ಯಾಕ್ ಮಾಡಲು ಇದು ಅತಿ ಸರಳ ಮಾರ್ಗವಾಗಿದೆ. ನಿಮ್ಮ ವೈಫೈ ಅನ್ನು ಯಾರಾದರೂ ಬಳಸುತ್ತೀದ್ದೀರಾ ಎಂಬುದನ್ನು ಪತ್ತೆಹಚ್ಚಲು ಇದು ಸುಲಭವಾಗಿದೆ. ಡಬ್ಲ್ಯೂಪಿಎ ಪಾಸ್‌ವರ್ಡ್ ಅನ್ನು ಹೊಂದಿರುವುದು ಅತ್ಯಗತ್ಯವಾಗಿದೆ.

ಬ್ಯಾಂಡ್‌ವಿಡ್ತ್ ನಿಯಂತ್ರಿಸಿ

ಬ್ಯಾಂಡ್‌ವಿಡ್ತ್ ನಿಯಂತ್ರಿಸಿ

ನಿಮ್ಮ ಮನೆಯಲ್ಲಿ ಯಾರಾದರೂ ನಿಯಮಿತವಾಗಿ ವೀಡಿಯೊ ಚಾಟ್ ಮಾಡುತ್ತಿದ್ದಲ್ಲಿ, ಆನ್‌ಲೈನ್ ಗೇಮ್ಸ್‌ಗಳನ್ನು ಆಡುತ್ತಿದ್ದಲ್ಲಿ, ನೆಟ್‌ಫ್ಲಿಕ್ಸ್‌ನಂತಹ ಸೇವೆಯನ್ನು ಬಳಸುತ್ತಿದ್ದಲ್ಲಿ ಇವರುಗಳು ಇಂಟರ್ನೆಟ್‌ನ ನಿಧಾನಕ್ಕೆ ಕಾರಣವಾಗಿದ್ದಾರೆ. ಕ್ವಾಲಿಟಿ ಆಫ್ ಸರ್ವೀಸ್ ಅನ್ನು ಬಳಸಿಕೊಂಡು ಈ ತೊಡಕಿನ ನಿವಾರಣೆಯನ್ನು ಮಾಡಿಕೊಳ್ಳಬಹುದಾಗಿದೆ.

ವೈಫೈ ರೇಂಜ್ ಹೆಚ್ಚಿಸುವುದು

ವೈಫೈ ರೇಂಜ್ ಹೆಚ್ಚಿಸುವುದು

ನಿಮ್ಮ ರೂಟರ್ ಹೆಚ್ಚಿನ ದೂರವನ್ನು ಕ್ರಮಿಸುತ್ತಿಲ್ಲ ಎಂದಾದಲ್ಲಿ, ಡಿಐವೈ ಟ್ರಿಕ್‌ಗಳನ್ನು ಬಳಸಿಕೊಂಡು ಅದರ ರೇಂಜ್ ಅನ್ನು ವಿಸ್ತರಿಸಬಹುದಾಗಿದೆ.

ರೂಟರ್ ಸಿಗ್ನಲ್‌ಗಳನ್ನು ಬೂಸ್ಟ್ ಮಾಡುವುದು

ರೂಟರ್ ಸಿಗ್ನಲ್‌ಗಳನ್ನು ಬೂಸ್ಟ್ ಮಾಡುವುದು

DD-WRT ಫರ್ಮ್‌ವೇರ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ ಮತ್ತು ರೂಟರ್ ಹ್ಯಾಕ್ ಮಾಡಿ. ಇದು ಟ್ರಾನ್ಸ್‌ಮೀಟಿಂಗ್ ಪವರ್ ಅನ್ನು ಹೆಚ್ಚಿಸುತ್ತದೆ.

ಹಳೆಯ ರೂಟರ್ ಅನ್ನು ವೈಫೈ ರಿಪೀಟರ್‌ನಂತೆ ಬಳಸಿ

ಹಳೆಯ ರೂಟರ್ ಅನ್ನು ವೈಫೈ ರಿಪೀಟರ್‌ನಂತೆ ಬಳಸಿ

ಇದು ನಿಮಗೆ ಕಾರ್ಯನಿರ್ವಹಿಸುತ್ತಿಲ್ಲ ಎಂದಾದಲ್ಲಿ, ಹಳೆಯ ವೈರ್‌ಲೆಸ್ ರೂಟರ್ ಅನ್ನು ಎಕ್ಸ್‌ಟೆಂಡರ್‌ನಂತೆ ಬಳಸಿಕೊಳ್ಳಬಹುದಾಗಿದೆ.

ರೂಟರ್ ರೀಬೂಟ್ ಹೊಂದಿಸುವುದು

ರೂಟರ್ ರೀಬೂಟ್ ಹೊಂದಿಸುವುದು

ದಿನಕ್ಕೆ ಒಂದು ಬಾರಿ ಅಥವಾ ಆಗಾಗ್ಗೆ ಸ್ವಯಂಚಾಲಿತವಾಗಿ ರೀಬೂಟ್ ಮಾಡಿ. ಹಳೆಯ ಔಟ್‌ಲೆಟ್ ಟೈಮರ್ ಅನ್ನು ಬಳಸಿಕೊಂಡು ಇದನ್ನು ನಿಮಗೆ ಮಾಡಬಹುದಾಗಿದೆ.

Best Mobiles in India

English summary
If you’re plagued by slow speeds, bad reception, and other Wi-Fi issues, here are 10 ways you can power up the Wi-Fi in your home.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+