ಗ್ಯಾಲಕ್ಸಿ ನೋಟ್ 4 ಡಿವೈಸ್ ವೇಗಗೊಳಿಸಲು ಟಾಪ್ ಸಲಹೆಗಳು
ಸ್ಟೈಲಸ್ ಜೊತೆಗೆ ಬಂದಿರುವ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ನೋಟ್ 4 ಕೆಲವೊಮ್ಮೆ ನಿಧಾನ ಗತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬ ದೂರಿಗೆ ಒಳಗಾಗಿದೆ. ಹಾಗಿದ್ದರೆ ಈ ಡಿವೈಸ್ ಅನ್ನು ವೇಗಗೊಳಿಸುವ ಕೆಲವೊಂದು ಸಲಹೆಗಳೊಂದಿಗೆ ನಾವು ಬಂದಿದ್ದು ಈ ಸಲಹೆಗಳು ಫೋನ್ ಅನ್ನು ವೇಗಗೊಳಿಸುವುದು ಹೇಗೆ ಎಂಬುದನ್ನು ನಿಮಗೆ ತಿಳಿಸಿಕೊಡಲಿದೆ.
ಓದಿರಿ: ಗೂಗಲ್ ಫೋಟೋಸ್: ಗೂಗಲ್‌ನ ಅತ್ಯಾಧುನಿಕ ಫೀಚರ್ ಹೇಗಿದೆ?

ಟಚ್ ವಿಜ್
ಟಚ್ ವಿಜ್ ನಿಮಗೆ ಫೋನ್ ಅನ್ನು ವೇಗಗೊಳಿಸಲು ಸಹಕಾರವನ್ನು ನೀಡುವುದು ಮಾತ್ರವಲ್ಲದೆ, ಎಸ್ ಪೆನ್ ಫೀಚರ್ ಅನ್ನು ಬಳಸುವ ಕಲೆಯನ್ನು ನಿಮಗೆ ತಿಳಿಸಿಕೊಡಲಿದೆ. ಗೂಗಲ್ ನೌ ಲಾಂಚರ್ ಅನ್ನು ಇನ್‌ಸ್ಟಾಲ್ ಮಾಡಿ ಮತ್ತು ಹೋಮ್ ಬಟನ್ ಒತ್ತಿರಿ. ಗೂಗಲ್ ನೌ ಅನ್ನು ಪಟ್ಟಿಯಿಂದ ಆಯ್ಕೆಮಾಡಿ ಮತ್ತು ಸ್ಪರ್ಶಿಸಿ.

ಡೌನ್‌ಲೋಡ್ ಬೂಸ್ಟರ್ ಬಳಸಿ
ನಿಮ್ಮ ಡೌನ್‌ಲೋಡ್‌ಗಳು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದೆ ಎಂದಾದಲ್ಲಿ, ಡೌನ್‌ಲೋಡ್ ಬೂಸ್ಟರ್ ಬಳಸಿಕೊಳ್ಳಿ. ವೈಫೈ ಮತ್ತು ಡೇಟಾ ಸಂಪರ್ಕವನ್ನು ಬಳಸಿ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿ.

ಸ್ಪೇಸ್ ಕ್ಲಿಯರ್ ಮಾಡಿ
ಎಸ್‌ಡಿ ಕಾರ್ಡ್‌ಗೆ ಮ್ಯೂಸಿಕ್ ಫೈಲ್‌ಗಳನ್ನು ಸರಿಸಿ, ನೀವು ಬಳಸದೇ ಇರುವ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ ಫೋಟೋಗಳನ್ನು ಬ್ಯಾಕಪ್ ಮಾಡಿ.

ಎಸ್ ವಾಯ್ಸ್ ಶಾರ್ಟ್‌ಕಟ್
ನೋಟ್ 4 ಎಸ್ ವಾಯ್ಸ್ ಎಂಬ ಶಾರ್ಟ್‌ಕಟ್ ಅನ್ನು ಹೊಂದಿದ್ದು ಹೋಮ್‌ಗಾಗಿ ಒನ್ ಪ್ರೆಸ್ ಮತ್ತು ಎಸ್ ವಾಯ್ಸ್‌ಗಾಗಿ ಟು ಪ್ರೆಸ್‌ಗಳನ್ನು ಹೊಂದಿದೆ.

ಅಪ್ಲಿಕೇಶನ್ ಅಪ್‌ಡೇಟ್ ಮಾಡಿ
ಆಂಡ್ರಾಯ್ಡ್‌ನ ಹೊಸ ಆವೃತ್ತಿ ಬಂದಾಗ ಅಪ್ಲಿಕೇಶನ್ ಡೆವಲಪರ್ ತಮ್ಮ ಅಪ್ಲಿಕೇಶನ್‌ಗಳನ್ನು ಆಗಾಗ್ಗೆ ಅಪ್‌ಡೇಟ್ ಮಾಡುತ್ತಿರುತ್ತಾರೆ, ಪ್ಲೇ ಸ್ಟೋರ್ ಅಪ್ಲಿಕೇಶನ್‌ಗೆ ಹೋಗಿ ಮತ್ತು ಎಡಭಾಗದ ಮೆನುವಿನಿಂದ ಮೈ ಆಪ್ಸ್ ಆಯ್ಕೆಮಾಡಿ. ನೀವು ಒತ್ತಬೇಕೆಂದಿರುವ ಎಲ್ಲವನ್ನೂ ಅಪ್‌ಡೇಟ್ ಮಾಡಿ.

ಅನಿಮೇಶನ್ ನಿಷ್ಕ್ರಿಯಗೊಳಿಸಿ
ನಿಮ್ಮ ಫೋನ್ ಅನ್ನು ಅನ್‌ಲಾಕ್ ಮಾಡಿದಾಗ ಡಯಲಾಗ್ ಬಾಕ್ಸ್ ಪಾಪ್‌ಅಪ್ ಆಗುತ್ತದೆ ಅಥವಾ ನಿಮ್ಮ ಫೋನ್ ಅನ್ನು ಅನ್‌ಲಾಕ್ ಮಾಡಬೇಕಾಗುತ್ತದೆ. ಅನಿಮೇಶನ್‌ಗಳು ನೋಡಲು ಸುಂದರವಾಗಿರುತ್ತವೆ ಆದರೆ ಇದು ಹೆಚ್ಚು ಬ್ಯಾಟರಿ ಶಕ್ತಿಯನ್ನು ಪಡೆದುಕೊಳ್ಳುತ್ತವೆ.

ಗ್ರೀನ್‌ಫಿ ಬಳಸಿ
ನಿರ್ದಿಷ್ಟ ಅಪ್ಲಿಕೇಶನ್‌ಗಳನ್ನು ನೀವು ಬಳಸುತ್ತಿಲ್ಲ ಎಂದಾದಲ್ಲಿ, ಹಿನ್ನಲೆಯಲ್ಲಿ ಅವುಗಳು ಚಾಲನೆಯಲ್ಲಿವೆ ಎಂದರ್ಥ. ಇದನ್ನು ನಿವಾರಿಸಲು ಗ್ರೀನ್‌ಫಿ ಎಂಬ ಅಪ್ಲಿಕೇಶನ್ ಅನ್ನು ಬಳಸಿ ಇವುಗಳು ಕೆಲವೊಂದು ಅಪ್ಲಿಕೇಶನ್‌ಗಳನ್ನು ಫ್ರೀಜ್ ಮಾಡುತ್ತವೆ.

ನಿಧಾನವಾಗುವಿಕೆಯನ್ನು ಗುರುತಿಸಿ
ನಿಮ್ಮ ಫೋನ್ ಕೆಲವೊಮ್ಮೆ ನಿಧಾನವಾಗಬಹುದು ಆದರೆ ಇದಕ್ಕೇನು ಕಾರಣ ಎಂಬುದು ನಿಮಗೆ ತಿಳಿದಿರುವುದಿಲ್ಲ. ನಿಮ್ಮ ನೋಟ್ 4 ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್ ಅನ್ನು ಹೊಂದಿದ್ದಲ್ಲಿ, ಕ್ವಾಲ್‌ಕಾಮ್ ಟೆಪ್ನ್ ಪ್ರೊಫೈಲರ್ ಅನ್ನು ಬಳಸಿ ರಿಯಲ್ ಟೈಮ್ ಸಿಪಿಯು ಮತ್ತು ಜಿಪಿಯು ಲೋಡ್‌ಗಳನ್ನು ಪರಿಶೀಲಿಸಿಕೊಳ್ಳಿ.

ಕ್ಯಾಶ್ ತೆರವುಗೊಳಿಸಿ
ನಿಮ್ಮ ಡಿವೈಸ್‌ನ ಕ್ಯಾಶ್ ತೆರವುಗೊಳಿಸಿ. ಅಪ್ಲಿಕೇಶನ್ ಕ್ಯಾಶ್ ತೆರವುಗೊಳಿಸಲು ಸೆಟ್ಟಿಂಗ್ಸ್ > ಅಪ್ಲಿಕೇಶನ್ ಮ್ಯಾನೇಜರ್ ನಿರ್ದಿಷ್ಟ ಅಪ್ಲಿಕೇಶನ್ ಮತ್ತು ಕ್ಲಿಯರ್ ಕ್ಯಾಶ್ ಸ್ಪರ್ಶಿಸಿ.

ಫ್ಯಾಕ್ಟ್ರಿ ರಿಸೆಟ್
ಗಂಭೀರ ಕಾರ್ಯಕ್ಷಮತೆ ಸಮಸ್ಯೆಗಳಿಗಾಗಿ ಫ್ಯಾಕ್ಟ್ರಿ ರಿಸೆಟ್ ಅನ್ನು ನೀವು ಬಳಸಬೇಕು. ಮೊದಲಿಗೆ ನಿಮ್ಮೆಲ್ಲಾ ಅಪ್ಲಿಕೇಶನ್ ಮತ್ತು ಡೇಟಾವನ್ನು ಬ್ಯಾಕಪ್ ಮಾಡಿದ್ದೀರಿ ಎಂಬುದನ್ನು ಖಾತ್ರಿಗೊಳಿಸಿ ಇದಕ್ಕಾಗಿ ಸೆಟ್ಟಿಂಗ್ಸ್ > ಬ್ಯಾಕಪ್ ರೀಸೆಟ್ ಮಾಡಿ.


Click it and Unblock the Notifications








