TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಫೋಟೋಗಳು ಮತ್ತು ವೀಡಿಯೋಗಳನ್ನು ಸಂಗ್ರಹಿಸುವುದಕ್ಕಾಗಿ ಮತ್ತು ನಿರ್ವಹಿಸುವುದಕ್ಕಾಗಿ ಹೊಸ ಸೇವೆಯಾದ ಗೂಗಲ್ ಫೋಟೋಗಳು ಎಂಬ ಸೇವೆಯನ್ನು ಆರಂಭಿಸಿದೆ. ಗೂಗಲ್ ಪ್ಲಸ್‌ನ ಸ್ವತಂತ್ರ ಸೇವೆ ಇದಾಗಿದ್ದು, ಸಾಮಾಜಿಕ ತಾಣದಲ್ಲಿ ಬಳಕೆದಾರರನ್ನು ಇನ್ನಷ್ಟು ಹೆಚ್ಚು ಸಂಪರ್ಕಿಸುವ ಕೆಲಸವನ್ನು ಮಾಡುವುದು ಈ ಸೇವೆಯ ಗುರಿಯಾಗಿದೆ.
ಓದಿರಿ: ನಿಮ್ಮ ಮೆಚ್ಚಿನ ಬಜೆಟ್ ಫೋನ್‌ಗಳು ರೂ 10,000 ಕ್ಕೆ
ಇಂದಿನ ಲೇಖನದಲ್ಲಿ ಈ ಗೂಗಲ್ ಫೋಟೋಗಳ ಕುರಿತಾದ ಹತ್ತು ಪ್ರಮುಖ ಅಂಶಗಳನ್ನು ಅರಿತುಕೊಳ್ಳೋಣ.
ಉಚಿತ ಮತ್ತು ಅನಿಯಮಿತ
ಇದು ಉಚಿತ ಮತ್ತು ಅನಿಯಮಿತವಾಗಿದ್ದು ನಿಮಗೆ ಬೇಕಾಗಿರುವ ಫೋಟೋಗಳು ಮತ್ತು ವೀಡಿಯೋಗಳನ್ನು ಗೂಗಲ್ ಫೋಟೋಗಳಲ್ಲಿ ಸಂಗ್ರಹಿಸಿಡಬಹುದು. ಉಚಿತವಾಗಿ ಗೂಗಲ್ ಈ ಫೋಟೋಗಳನ್ನು ಸಂಗ್ರಹಿಸಲು ನಿಮ್ಮನ್ನು ಅನುಮತಿಸುತ್ತದೆ. ಕ್ಲೌಡ್‌ನಲ್ಲಿ ಈ ಫೋಟೋಗಳು ಸಂಗ್ರಹವಾಗುತ್ತದೆ.
ಹೆಚ್ಚು ರೆಸಲ್ಯುಶನ್ ಫೋಟೋಗಳನ್ನು ಉಳಿಸಿ
ಗೂಗಲ್ ಫೋಟೋಗಳ ಉಚಿತ ಸಂಗ್ರಹಣೆಯೊಂದಿಗೆ, 16 ಮೆಗಾಪಿಕ್ಸೆಲ್‌ಗಳುಳ್ಳ ಫೋಟೋಗಳನ್ನು ಉಳಿಸಬಹುದಾಗಿದೆ. ಗೂಗಲ್ ಫೋಟೋಗಳು ಉತ್ತಮ ಗುಣಮಟ್ಟದ ಜೆಪಿಜಿಯಲ್ಲಿ ಈ ಫೋಟೋಗಳನ್ನು ಉಳಿಸುತ್ತವೆ.
ಗೂಗಲ್ ಡ್ರೈವ್ ಬಳಕೆ
ಹೆಚ್ಚು ರೆಸಲ್ಯೂಶನ್ ಫೋಟೋ, ವೀಡೀಯೋಗಳನ್ನು ಉಳಿಸಬೇಕೆಂದಲ್ಲಿ ಗೂಗಲ್ ಡ್ರೈವ್ ಬಳಸಿ ಇದನ್ನು ನಿರ್ವಹಿಸಬಹುದಾಗಿದೆ. ನಿಮ್ಮ ಜಿಮೇಲ್, ಗೂಗಲ್ ಡ್ರೈವ್ ಮತ್ತು ಗೂಗಲ್+ ಖಾತೆಗಳ ನಡುವೆ ಹಂಚಿಕೊಳ್ಳಬಹುದಾದ 15 ಜಿಬಿ ಸಂಗ್ರಹಣೆ ಸ್ಥಳವನ್ನು ಗೂಗಲ್ ಒದಗಿಸುತ್ತಿದೆ.
ಹೈಕ್ವಾಲಿಟಿ ಫೀಚರ್
ಉಚಿತ, ಅನಿಯಮಿತ ಯೋಜನೆಯಾದ 'ಹೈ ಕ್ವಾಲಿಟಿ' ಯ ನಡುವೆ ನೀವು ಆಯ್ಕೆಯನ್ನು ಮಾಡಬೇಕಾಗುತ್ತದೆ.
ಗೂಗಲ್ ಫೋಟೋಸ್ ಬ್ಯಾಕಪ್
ಆಂಡ್ರಾಯ್ಡ್, ಐಓಎಸ್ ಗಾಗಿ ಗೂಗಲ್ ಡ್ರೈವ್ ಲಭ್ಯವಿದ್ದು ಕಂಪ್ಯೂಟರ್‌ನಿಂದ ಫೋಟೋಗಳನ್ನು ಅಪ್‌ಲೋಡ್ ಮಾಡಬೇಕೆಂದು ನೀವು ಬಯಸಿದಲ್ಲಿ, ಗೂಗಲ್ ಫೋಟೋಸ್ ಬ್ಯಾಕಪ್ ಅನ್ನು ಬಳಸಿ.
ಗೂಗಲ್ ಫೋಟೋಸ್ ವೈಶಿಷ್ಟ್ಯತೆ
ಗೂಗಲ್ ಫೋಟೋಗಳು ಸ್ವಯಂಚಾಲಿತವಾಗಿ ಹಲವಾರು ಜನರ ಗುಂಪು ಫೋಟೋಗಳನ್ನು ಗುರುತಿಸುತ್ತದೆ ಮತ್ತು ಇದನ್ನು ಟ್ಯಾಗ್ ಮಾಡುವ ಅವಶ್ಯಕತೆ ಇಲ್ಲ. ವಯಸ್ಸಿಗೆ ಅನುಗುಣವಾಗಿ ಇದು ಮುಖಗಳನ್ನು ಗುರುತಿಸುತ್ತದೆ.
ಗೂಗಲ್ ಫೋಟೋಸ್ ಅನೂಹ್ಯ ಏಕೆ
ಇದು ವಿಷಯಗಳನ್ನು ಚಿತ್ರಗಳಲ್ಲಿ ಗುರುತಿಸಬಹುದು, ಇದರಿಂದಾಗಿ ನೀವು ಸೈಕ್ಲಿಂಗ್ ಅಥವಾ ಡೋರ್ಸ್ ಎಂದು ಟೈಪ್ ಮಾಡಿದಲ್ಲಿ, ಅಂತಹ ಚಟುವಟಿಕೆಯನ್ನು ಹೊಂದಿರುವ ಎಲ್ಲಾ ಫೋಟೋಗಳು ನಿಮಗೆ ದೊರೆಯುತ್ತದೆ.
ಬಿಲ್ಟ್ ಇನ್ ಎಡಿಟರ್
ಗೂಗಲ್ ಫೋಟೋಗಳು ಬಿಲ್ಟ್ ಇನ್ ಎಡಿಟರ್‌ನೊಂದಿಗೆ ಬಂದಿದ್ದು ಫೋಟೋಗಳನ್ನು ಇನ್ನಷ್ಟು ಸುಂದರವಾಗಿಸುವ ಸಾಮರ್ಥ್ಯವನ್ನು ಇದು ನಿಮಗೆ ನೀಡುತ್ತದೆ. ಬ್ರೈಟ್‌ನೆಸ್ ಹೊಂದಿಸುವಿಕೆ ಮತ್ತು ಚಿತ್ರದ ಇತರ ಅವಗುಣಗಳನ್ನು ಮರೆಮಾಚಲು ಇದು ಸಹಾಯ ಮಾಡುತ್ತದೆ.
ಕೊಲೇಜ್ ಪನೋರಮಾ ಆಟ
ಅದ್ಭುತ ಕೊಲೇಜ್‌ಗಳ ರಚನೆ, ಪನೋರಮಾ ಉಂಟುಮಾಡುವಿಕೆ ಅನಿಮೇಟ್ ಮಾಡಿದ ಜಿಫ್‌ಸ್ ಹೀಗೆ ಚಿತ್ರಗಳನ್ನು ಇನ್ನಷ್ಟು ಮೋಜುದಾಯಕವನ್ನಾಗಿ ನಿಮಗೆ ಮಾಡಬಹುದಾಗಿದೆ. ಗೂಗಲ್ ಫೋಟೋಗಳನ್ನು ನಿಮ್ಮ ಸ್ನೇಹಿತರು ಹೊಂದಿಲ್ಲದೇ ಇದ್ದಾಗ ಕೂಡ ಚಿತ್ರಗಳನ್ನು ಅವರೊಂದಿಗೆ ನಿಮಗೆ ಹಂಚಿಕೊಳ್ಳಬಹುದಾಗಿದೆ.
ಗೂಗಲ್ ಫೋಟೋಸ್ ಏಕೆ ಅತ್ಯಪೂರ್ಣ
ಆಪಲ್ ಇಂತಹುದೇ ಕೊಡುಗೆಯನ್ನು ನೀಡುತ್ತಿದ್ದು, ಇದು ಆಪಲ್ ಡಿವೈಸ್‌ಗಳಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಹೀಗೆ ಬೇರೆ ಬೇರೆ ಪ್ಲಾಟ್‌ಫಾರ್ಮ್‌ಗಳು ಸೇವೆಗಳನ್ನು ಒದಗಿಸುತ್ತಿದ್ದರೂ ಗೂಗಲ್ ಫೋಟೋಗಳು ನೀಡುವಂತಹ ಅನೂಹ್ಯತೆಯನ್ನು ಅವುಗಳು ನೀಡಲಾರವು.