Home
ಸುದ್ದಿಜಾಲ

ದೀರ್ಘ ಇತಿಹಾಸವಿರುವ ಆಧುನಿಕ ಫೋನ್ ಮಾಡೆಲ್‌ಗಳು

By Shwetha

ಸ್ಮಾರ್ಟ್‌ಫೋನ್‌ಗಳ ಇತಿಹಾಸವನ್ನು ಕೆದಕುತ್ತಾ ಹೋದರೆ ನಮಗೆ ಕುತೂಹಲದ ಹೊಳೆಯೇ ಕಾಣಸಿಗುತ್ತದೆ. ತಂತ್ರಜ್ಞಾನದಲ್ಲಿ ಆಗುತ್ತಿರುವ ಬದಲಾವಣೆಗಳು ದಿನದಿಂದ ದಿನಕ್ಕೆ ಪ್ರಗತಿಯನ್ನು ಹೊಂದುತ್ತಿದ್ದು ನಿಜಕ್ಕೂ ಇದು ಸ್ವಾಗತಾರ್ಹ ಬೆಳವಣಿಗೆ ಎಂದೆನಿಸಿದೆ.

[ಓದಿರಿ: ಐಫೋನ್‌ನಲ್ಲಿ ಸೆರೆಹಿಡಿದಿರುವ ಅದ್ಭುತ ಚಿತ್ರಗಳು]

ಇಂದಿನ ಲೇಖನದಲ್ಲಿ ನಾವು 10 ವರ್ಷಗಳ ಹಿಂದಿನ ಇತಿಹಾಸವನ್ನು ಕೆದಕೋಣ. ಆ ಸಮಯದಲ್ಲಿ ಯಾವ ಫೋನ್‌ಗಳನ್ನು ಬಳಸುತ್ತಿದ್ದರು. ಇಂದಿನಂತೆಯೇ ತಂತ್ರಜ್ಞಾನದ ಪಡಿಯಚ್ಚು ಆ ಕಾಲದಲ್ಲಿಯೂ ಇತ್ತೇ ಎಂಬುದನ್ನು ಅರಿಯೋಣ. [ಓದಿರಿ: ವಾಟ್ಸಾಪ್ ಅನ್ನು ಫೇಸ್‌ಬುಕ್ ಖರೀದಿಸಿದ್ದರ ಹಿಂದಿರುವ ಟಾಪ್ ರಹಸ್ಯ]

ಮೋಟೋರೋಲಾ

ಮೋಟೋರೋಲಾ

2005 ರಲ್ಲಿ ಈ ಫೋನ್ ಬಿಸಿ ದೋಸೆಯಂತೆ ಮಾರಾಟವನ್ನು ಕಂಡಿತ್ತು. ಸಣ್ಣ ಪರದೆಯನ್ನು ಈ ಫೋನ್ ಹೊಂದಿತ್ತು ಆದರೆ ನೋಡಲು ತುಂಬಾ ಸುಂದರವಾಗಿತ್ತು.

ಸೋನಿ ಎರಿಕ್‌ಸನ್

ಸೋನಿ ಎರಿಕ್‌ಸನ್

2005 ರಲ್ಲಿ ನಿಜಕ್ಕೂ ಸೊಬಗಿನಿಂದ ಕೂಡಿದ ಫೋನ್ ಆಗಿತ್ತು ಸೋನಿ ಎರಿಕ್‌ಸನ್ K750. ಕ್ಯಾಮೆರಾ ಫೋನ್‌ಗಳಿಗೆ ಹೇಳಿ ಮಾಡಿಸಿದ ಫೋನ್ ಆಗಿತ್ತು ಇದು.

ನೋಕಿಯಾ

ನೋಕಿಯಾ

ಆಧುನಿಕ ಸ್ಮಾರ್ಟ್‌ಫೋನ್‌ಗಳ ಹಿರಿತಲೆ ಎಂದೇ ಹೆಸರು ಪಡೆದುಕೊಂಡ ನೋಕಿಯಾ ಎನ್70 ದೊಡ್ಡದಾದ ಡಿಸ್‌ಪ್ಲೇ ಹೆಚ್ಚು ಸುಧಾರಿತ 60 ಯುಐ, 220MHz TI OMAP 1710 ಸಿಸ್ಟಮ್ ಚಿಪ್ ಅನ್ನು ಒಳಗೊಂಡು ಬಂದಿದೆ.

ಬ್ಲ್ಯಾಕ್‌ಬೆರ್ರಿ

ಬ್ಲ್ಯಾಕ್‌ಬೆರ್ರಿ

2005 ಎಂಬುದು ಬ್ಲ್ಯಾಕ್‌ಬೆರ್ರಿಯ ಸುವರ್ಣ ವರ್ಷವಾಗಿತ್ತು. ಇದು 65 ಕೆ ಬಣ್ಣಗಳನ್ನು ಹೊಂದಿತ್ತು.

ನೋಕಿಯಾ

ನೋಕಿಯಾ

ಸ್ಟೈನ್‌ಲೆಸ್ ಸ್ಟೀಲ್‌ನ ಸೌಂದರ್ಯವನ್ನು ಬಣ್ಣಿಸಲು ಸಾಧ್ಯವೇ ಇಲ್ಲ. ನೋಕಿಯಾ 8800, 1.7 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದರ ಬಣ್ಣದ ಡಿಸ್‌ಪ್ಲೇ 256 ಕೆ ಬಣ್ಣಗಳನ್ನು ಹೊಂದಿದೆ.

ಮೋಟೋರೋಲಾ

ಮೋಟೋರೋಲಾ

ಮೋಟೋರೋಲಾದ ಕ್ಯು 8 ಸುಧಾರಿತ ಮಾಡೆಲ್ ಆಗಿದ್ದು 5 ವೇ ನ್ಯಾವಿಗೇಶನ್ ಬಟನ್ ಅಂತೆಯೇ ಪೂರ್ಣ ಫಿಸಿಕಲ್ ಕ್ವಾರ್ಟಿ ಕೀಬೋರ್ಡ್ ಅನ್ನು ಹೊಂದಿತ್ತು.

ನೋಕಿಯಾ

ನೋಕಿಯಾ

ಕೊನೆಯದಾಗಿ ನೋಕಿಯಾ 1100 ಹೆಚ್ಚು ಸುಧಾರಿತ ಫೋನ್‌ಗಳಲ್ಲಿ ಆ ಕಾಲದಲ್ಲಿಯೇ ಬಳಕೆದಾರರ ಮೇಲೆ ಮೋಡಿನ್ನುಂಟು ಮಾಡಿದ್ದವು. 150 ಮಿಲಿಯನ್ ಮಾರಾಟವನ್ನು ಕಂಡಿದ್ದ ಈ ಡಿವೈಸ್ ಅತ್ಯುತ್ತಮ ಫೋನ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿತ್ತು.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+