ರೈಲ್ವೆ ಪ್ರಯಾಣಿಕರಿಗೆ ಹೊಸ ವರ್ಷದ ಆಫರ್: 100% ಕ್ಯಾಷ್ ಬ್ಯಾಕ್..!

|

ದೇಶಿಯ ರೈಲ್ವೆ ಇಲಾಖೆಯೂ ದಿನೇ ದಿನೇ ಡಿಜಿಟಲ್ ಆಗುತ್ತಿದ್ದು, ಕಾರ್ಪೋರೇಟ್ ಕಂಪನಿಯ ಮಾದರಿಯಲ್ಲಿ ತನ್ನ ಪ್ರಯಾಣಿಕರನ್ನು ಆಕರ್ಷಿಸುವ ಸಲುವಾಗಿ ಭರ್ಜರಿ ಆಫರ್ ಬಿಡುಗಡೆ ಮಾಡುತ್ತಿದ್ದು, ಇದರೊಂದಿಗೆ ರೈಲ್ವೆ ಪ್ರಯಾಣವನ್ನು ಸರಳ ಮಾಡಲು ಮುಂದಾಗುತ್ತಿದೆ. ಸದ್ಯ ರೈಲ್ವೆ ಪ್ರಯಾಣಿಕರಿಗೆ ಹೊಸದೊಂದು ಆಫರ್ ನೀಡಲು ಮುಂದಾಗಿದ್ದು, ಪ್ರಯಾಣಿಕರಿಗೆ 100% ಕ್ಯಾಷ್ ಬ್ಯಾಕ್ ದೊರೆಯಲಿದೆ.

ರೈಲ್ವೆ ಪ್ರಯಾಣಿಕರಿಗೆ ಹೊಸ ವರ್ಷದ ಆಫರ್: 100% ಕ್ಯಾಷ್ ಬ್ಯಾಕ್..!

ಓದಿರಿ: ಹೊಸ ವರ್ಷದಂದು ವಾಟ್ಸ್‌ಆಪ್ ಸ್ಥಗಿತ: ಕಾರಣ ಯಾರು? ವಾಟ್ಸ್‌ಆಪ್ ಹೇಳಿದ್ದೇನು.?

ರೈಲು ಪ್ರಯಾಣಿಕರಿಗೆ ಇಲಾಖೆ ಹೊಸ ವರ್ಷದ ಅಂಗವಾಗಿ ಹೊಸ ಕೊಡುಗೆ ನೀಡಿದೆ. ಪ್ರಯಾಣಿಕರಿಗೆ ಶೇ.100 ಕ್ಯಾಷ್​ಬ್ಯಾಕ್ ನೀಡುವ ಹೊಸ ಯೋಜನೆಯನ್ನು ರೈಲ್ವೆ ಇಲಾಖೆ ಜಾರಿಗೆ ತಂದಿದೆ. ಈ ಮೂಲಕ ತನ್ನ ನಗದು ರಹಿತ ಡಿಜಿಟಲ್ ಟಿಕೇಟ್ ಖರೀದಿಯನ್ನು ಹೆಚ್ಚು ಮಾಡಿಸಲು ಮುಂದಾಗಿದೆ. ಇದರಿಂದಾಗಿ ಗ್ರಾಹಕರು ಸುಲಭವಾಗಿ ಟಿಕೇಟ್ ಬುಕ್ ಮಾಡುವುದಲ್ಲದೇ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.

ಭೀಮ್ ಬಳಕೆದಾರರಿಗೆ ಆಫರ್:

ಭೀಮ್ ಬಳಕೆದಾರರಿಗೆ ಆಫರ್:

IRCTC (ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ಮಂಡಳಿ) ಅಧಿಕೃತ ವೆಬ್​ಸೈಟ್ನಲ್ಲಿ ಭೀಮ್ ಆಪ್ ಮೂಲಕ ಹಣ ಪಾವತಿಸಿ ರೈಲು ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರಲ್ಲಿ ಅನೇಕ ಅದೃಷ್ಟಶಾಲಿಗಳಿಗೆ ಪೂರ್ಣ ದರ ಮರುಪಾವತಿಯಾಗಲಿದೆ. ಈ ಮೂಲಕ ಗ್ರಾಹಕರು ಉಚಿತ ಪ್ರಯಾಣದ ಲಾಭವನ್ನು ಪಡೆಯಬಹುದಾಗಿದೆ.

ಪ್ರತಿ ತಿಂಗಳು ಇರುತ್ತದೆ:

ಪ್ರತಿ ತಿಂಗಳು ಇರುತ್ತದೆ:

ಪ್ರತಿ ತಿಂಗಳು ಲಾಟರಿ ಮೂಲಕ ಐವರು ಪ್ರಯಾಣಿಕರಿಗೆ ಶೇ.100% ಟಿಕೆಟ್ ದರ ವಾಪಸ್ ಸಿಗಲಿದೆ ಎನ್ನಲಾಗಿದೆ. ಭೀಮ್ ಆಪ್ ಮಾತ್ರವಲ್ಲದೇ UPI ಮೂಲಕ ಹಣ ಪಾವತಿ ಮಾಡಿ ಟಿಕೆಟ್ ಖರೀದಿಸಿದವರಿಗೂ ಈ ಯೋಜನೆ ಅನ್ವಯವಾಗಲಿದೆ. ಈ ಹಿನ್ನಲೆಯಲ್ಲಿ ಗ್ರಾಹಕರು ಈ ಹೊಸ ಯೋಜನೆಯ ಲಾಭವನ್ನು ಸುಲಭವಾಗಿ ಪಡೆಯಬಹುದಾಗಿದೆ.

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ಮಾರ್ಚ್ ವರೆಗೆ ಜಾರಿ:

ಮಾರ್ಚ್ ವರೆಗೆ ಜಾರಿ:

ಭೀಮ್ ಆಪ್ ಮಾತ್ರವಲ್ಲದೇ UPi ಮೂಲಕ ಹಣ ಪಾವತಿ ಮಾಡಿ ಟಿಕೆಟ್ ಖರೀದಿಸಿದವರಿಗೆ ಮಾರ್ಚ್ 2018ರವರೆಗೆ ಕ್ಯಾಷ್​ಬ್ಯಾಕ್ ಯೋಜನೆ ಲಾಭ ಸಿಗಲಿದೆ. ನಗದುರಹಿತ ವಹಿವಾಟು ಉತ್ತೇಜನಕ್ಕೆ ಇದು ಪೂರಕವಾಗಿದೆ. ಡಿಜಿಟಲ್ ಇಂಡಿಯಾ ಯೋಜನೆಗೆ ಫುಷ್ಠಿಯನ್ನು ಈ ಆಫರ್ ನೀಡಲಿದೆ ಎನ್ನುವ ಮಾತು ಕೇಳಿ ಬಂದಿದೆ.

Best Mobiles in India

English summary
100 cashback offer on irctc. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X