Subscribe to Gizbot

10ನೇ ತರಗತಿಗೆ ಶಾಲೆಬಿಟ್ಟ ಭಾರತೀಯನೋರ್ವ ವಿದ್ಯುತ್‌ ರಹಿತ ಮಣ್ಣಿನ ಫ್ರಿಜ್ ತಯಾರಿಸಿದ.!!

Posted By: Staff

ಯಾರಾದ್ರು ಇದುವರೆಗೂ Mitticool ಪದವನ್ನು ಕೇಳಿದ್ದೀರಾ? ಬಹುಶಃ ಇಲ್ಲಾ ಅನಿಸುತ್ತೆ. ಸಾಹಿತ್ಯದ ಪ್ರಕಾರ ಇದರ ಅರ್ಥ "ಮಣ್ಣಿನಿಂದ ತಂಪು" ಎಂದು ಹೇಳಬಹುದು. ಅಂದಹಾಗೆ ನೀವು ದಿನನಿತ್ಯ ಆಹಾರ ಕೆಡದಂತೆ ಮತ್ತು ತಂಪಾಗಿ ಇಡಲು ಬಳಸುವ ರೆಫ್ರಿಜೆರೇಟರ್‌ ವಿದ್ಯುತ್‌ ಇಲ್ಲದೇ ತನ್ನ ಕಾರ್ಯನಿರ್ವಹಿಸಲಾರದು ಅಲ್ವೇ.? 

ಅತ್ಯುಪಯುಕ್ತ ಆಂಡ್ರಾಯ್ಡ್ ರಹಸ್ಯ ಕೋಡ್ಸ್

ಆದರೆ, 10ನೇ ತರಗತಿಗೆ ಶಾಲೆಬಿಟ್ಟ ಮನ್‌ಸುಖ್‌ಭಾಯ್‌ ಪ್ರಜಾಪತಿ ಎಂಬುವವರು ವಿದ್ಯುತ್‌ ಉಪಯೋಗಿಸದೇ ಆಹಾರವನ್ನು ತಂಪಾಗಿ ಇಡುವ ರೆಪ್ರಿಜೆರೇಟರ್ ತಯಾರಿಸಿದ್ದಾರೆ. ನಿವೇನ್‌ ಫ್ರಿಜ್‌ ಅಂತ ಕರಿತಿರೋ ಅದನ್ನು ಮಣ್ಣಿನಿಂದ ತಯಾರಿಸಿ ಇಡಿ ಪ್ರಪಂಚದ ಬಡ ಕುಟುಂಬಗಳಿಗೆ ನೆರವಾಗಿದ್ದಾರೆ.

ಭಾರತೀಯನೋರ್ವ ವಿದ್ಯುತ್‌ ರಹಿತ ಮಣ್ಣಿನ ಫ್ರಿಜ್ ತಯಾರಿಸಿದ.!!

ಹೇ!! ನಿಜನಾ. ಕೇವಲ ಮಣ್ಣಿನಿಂದ ಫ್ರಿಜ್‌ ತಯಾರಿಸೋದು ಅಂದ್ರೆ ಸುಮ್ನೆ ಅಲ್ಲಾ. ಹಾಗೆ ಹೀಗೆ ಅಂತ ಕಾಮೆಂಟ್ ಕೊಡುವ ಮೊದಲು ಪ್ರಪಂಚಕ್ಕೆ ವಿದ್ಯುತ್‌ ರಹಿತ ರೆಫ್ರಿಜೆರೇಟರ್‌ ಕೊಡುಗೆ ನೀಡಿದ ಈ ಸಾಧನೆಯ ಬಗ್ಗೆ ಮೊದಲು ಲೇಖನದಲ್ಲಿ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೆಫ್ರಿಜೆರೇಟರ್‌ ತಯಾರಿಸಿದ ಮನ್‌ಸುಖ್‌ಭಾಯ್‌

ವಿದ್ಯುತ್‌ ರಹಿತ ಫ್ರಿಜ್ ಮಣ್ಣಿನಿಂದ

ವಿದ್ಯುತ್‌ ರಹಿತ ರೆಫ್ರಿಜೆರೇಟರ್ ತಯಾರಿಸಿರುವ ಮನ್‌ಸುಖ್‌ಭಾಯ್‌ ಸಾಂಪ್ರಾದಾಯಿಕವಾಗಿ ಮಡಿಕೆ ವ್ಯಾಪಾರ ಹೊಂದಿದ್ದಾರೆ. ಅಲ್ಲದೇ ಈಗ ಒಂದು ಟೀ ಅಂಗಡಿ ಮಾಲೀಕರು ಸಹ ಹೌದು. ಮಡಿಕೆ ತಯಾರಿಕೆ ವ್ಯಾಪಾರ ಕಡಿಮೆಯಾಗಿರುವುದರಿಂದ ಈ ವ್ಯಾಪಾರದ ಆಸಕ್ತಿ ಇವರಿಗೆ ಇಲ್ಲವಾಗಿದೆ.

ಮಣ್ಣಿನಿಂದ ಫ್ರಿಜ್‌ ಹೇಗೆ ತಯಾರು ಮಾಡಿದ್ದು ಗೊತ್ತೇ?

ವಿದ್ಯುತ್‌ ರಹಿತ ಫ್ರಿಜ್ ಮಣ್ಣಿನಿಂದ

ಒಮ್ಮೆ ಇವರ ಮನಸ್ಸು ಮನೆಯ ಮೆಲ್ಛಾವಣಿ (ಅಂಚು) ತಯಾರಿಕೆಯ ಕಡೆ ಮೂಡಿತು. ನಂತರ ಅದೇ ಸಂದರ್ಭದಲ್ಲಿ ಎಲ್ಲಾ ಟೈಲ್ಸ್‌ಗಳನ್ನು ಮಣ್ಣಿನಿಂದ ಮಾಡುವ ನಮಗೆ ಇತರೆ ಉತ್ಪನ್ನಗಳನ್ನು ಏಕೆ ಮಣ್ಣಿನಿಂದ ತಯಾರಿಸಲು ಸಾಧ್ಯವಿಲ್ಲ ಎಂದು ಯೋಚಿಸಿದರಂತೆ.

Mitticool

ವಿದ್ಯುತ್‌ ರಹಿತ ಫ್ರಿಜ್ ಮಣ್ಣಿನಿಂದ

ಇತರೆ ಉತ್ಪನ್ನಗಳನ್ನು ಏಕೆ ಮಣ್ಣಿನಿಂದ ತಯಾರಿಸಲು ಸಾಧ್ಯವಿಲ್ಲ ಎಂದು ಪ್ರಶ್ನೆ ಹಾಕಿಕೊಂಡ ಮನ್‌ಸುಖ್‌ಭಾಯ್‌ ಮಣ್ಣಿನಿಂದ ರೆಫ್ರಿಜೆರೇಟರ್‌ (mitticool) ತಯಾರಿಸಿದರು. ಅಲ್ಲದೇ ವಿಶೇಷವಾಗಿ ಮಣ್ಣಿನಿಂದಲೇ ಕುಕ್ಕರ್, ಫಿಲ್ಟರ್‌ ಮತ್ತು ಇತರೆ ವಸ್ತುಗಳನ್ನು ಜೇಡಿಮಣ್ಣಿನಿಂದ ತಯಾರಿಸಿದರು.

ಸ್ವಂತ ಕಂಪನಿ

ವಿದ್ಯುತ್‌ ರಹಿತ ಫ್ರಿಜ್ ಮಣ್ಣಿನಿಂದ

ಇವರ ಕಂಪನಿಯ ಹಣದಲ್ಲೇ ತಯಾರಿಸಿದ ರೆಫ್ರಿಜೆರೇಟರ್‌ ಅನ್ನು ಬೆಲೆ ರೂ.3000/ ಗೆ ಬಡ ಕುಟುಂಬಗಳು ಸಹ ಖರೀದಿಸುವ ಬೆಲೆಗೆ ನೀಡಲಾಗುತ್ತಿದೆ.

ಮಣ್ಣಿನಿಂದ ತಯಾರಿಸಿದ ರೆಫ್ರಿಜೆರೇಟರ್‌

ವಿದ್ಯುತ್‌ ರಹಿತ ಫ್ರಿಜ್ ಮಣ್ಣಿನಿಂದ

ಅಂದಹಾಗೆ ವಿದ್ಯುತ್‌ ಸಹಾಯವಿಲ್ಲದೇ ತಂಪು ಮಾಡುವ ರೆಫ್ರಿಜೆರೇಟರ್‌ ಅನ್ನು ಸರಳ ವೈಜ್ಞಾನಿಕ ತತ್ವ ಬಾಷ್ಪೀಕರಣದ ಆಧಾರದ ಮೇಲೆ ತಯಾರಿಸಿದ್ದು ಇದು ತಂಪು ಮಾಡುತ್ತದೆ.

ತರಕಾರಿ ಮತ್ತು ಹಣ್ಣುಗಳು ಎಂದಿಗೂ ತಾಜಾ

ವಿದ್ಯುತ್‌ ರಹಿತ ಫ್ರಿಜ್ ಮಣ್ಣಿನಿಂದ

ಮನ್‌ಸುಖ್‌ಭಾಯ್‌ ಪ್ರಜಾಪತಿ ತಯಾರಿಸಿರುವ ಫ್ರಿಜ್‌ ನೀರು ತುಂಬಿದ ಜಾಗವನ್ನು ಆವಿಯಾಗಲು ಚಾನೆಲ್‌ಗಳನ್ನು ಹೊಂದಿದ್ದು, ಹಣ್ಣು ಮತ್ತು ತರಕಾರಿಗಳನ್ನು ತಂಪಾದ ಹಿಂಬದಿಯಿಂದ ತಾಜಾವಾಗಿರಿಸುತ್ತದೆ.

 45 ಲಕ್ಷ ಸಂಪಾದಿಸಿದ Mitticool

ವಿದ್ಯುತ್‌ ರಹಿತ ಫ್ರಿಜ್ ಮಣ್ಣಿನಿಂದ

ಮನ್‌ಸುಖ್‌ಭಾಯ್‌ ತಯಾರಿಸಿದ ವಿದ್ಯುತ್‌ ಸಹಾಯ ಪಡೆಯದ ರೆಫ್ರಿಜೆರೇಟರ್‌ ಈಗಾಗಲೇ 45 ಲಕ್ಷಕ್ಕೂ ಹೆಚ್ಚು ಹಣ ಗಳಿಸಿದೆ. ಅಲ್ಲದೇ 35 ಜನರು ಮಣ್ಣಿನ ಫ್ರಿಜ್‌ ತಯಾರಿಸಲು ಉದ್ಯೋಗಿಗಳಿದ್ದಾರೆ. ಇವರು ತಯಾರಿಸಿರುವ ಉತ್ಪನ್ನಗಳು ಗುಜರಾತ್‌, ಪುಣೆ, ಮುಂಬೈಗಳಲ್ಲಿ ಲಭ್ಯ.

ಮಣ್ಣಿನ ಫ್ರಿಜ್‌ನಿಂದ ಶ್ಲಾಘನೀಯ ಸಾಧನೆ

ವಿದ್ಯುತ್‌ ರಹಿತ ಫ್ರಿಜ್ ಮಣ್ಣಿನಿಂದ

ಮಣ್ಣಿನ ಫ್ರಿಜ್‌ನಿಂದ ಶ್ಲಾಘನೀಯ ಸಾಧನೆ ಮಾಡಿದ ಮನ್‌ಸುಖ್‌ಭಾಯ್‌ ಈಗ ಅವರ ವಾಣಿಜ್ಯೋದ್ಯಮ ಸಾಮರ್ಥ್ಯದಿಂದ ಇದನ್ನೇ ಸಾಂಪ್ರದಾಯಿಕ ವ್ಯಾಪಾರವಾಗಿ ಮಾಡಿಕೊಂಡಿದ್ದಾರೆ. ಇವರ ಈ ಸಂಶೋಧನೆ ಕಡಿಮೆ ಬೆಲೆಯ ಫ್ರಿಜ್‌ ಮಾತ್ರವಲ್ಲದೇ ವಿದ್ಯುತ್‌ ಅವಶ್ಯಕತೆ ಇಲ್ಲದೆ ಫ್ರಿಜ್‌ ಕಾರ್ಯನಿರ್ವಹಿಸುತ್ತದೆ.
ಚಿತ್ರದಲ್ಲಿ ಮನ್‌ಸುಖ್‌ಭಾಯ್‌ ಜೊತೆಗೆ ಮಾಜಿ ರಾಷ್ಟ್ರಪತಿ ಡಾ|| ಎಪಿಜೆ ಅಬ್ದುಲ್‌ ಕಲಾಂ ಇರುವುದನ್ನು ನೋಡಬಹುದು.

ಗಿಜ್‌ಬಾಟ್‌ ಟಾಪ್ ಲೇಖನಗಳು

ಗಿಜ್‌ಬಾಟ್‌ ಟಾಪ್ ಲೇಖನಗಳು

ಓದಿರಿ: ಒನ್‌ಪ್ಲಸ್ ಪ್ರಿಯರಿಗೆ ಹುಚ್ಚಿಡಿಸಿರುವ ಒನ್‌ಪ್ಲಸ್ 5ಟಿ 'ರೆಡ್ ಎಡಿಷನ್' ಮಾರಾಟ ಶುರು!!..ಬೆಲೆ ಎಷ್ಟು!?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
10th Dropout Indian Designed A Refrigerator That Runs Without Electricity. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot