Subscribe to Gizbot

ಭಾರತದ ಟೆಕ್‌ ಕ್ಷೇತ್ರ ಬೆಳವಣಿಗೆಗೆ ಕಾರಣವಾದ 11 ಹೀರೋಗಳು

Written By:

ಭಾರತದಲ್ಲಿ ಟೆಕ್‌ ಉದ್ಯಮಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಟೆಕ್‌ ಉದ್ಯಮದಿಂದ ಭಾರತವು ಸಹ ಶೀಘ್ರ ರೀತಿಯಲ್ಲಿ ಅಭಿವೃದ್ದಿಯತ್ತ ಸಾಗುತ್ತಿದೆ.

ಭಾರತ ಇಂದು ಟೆಕ್‌ ಉದ್ಯಮ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಬೆಳವಣಿಗೆ ಕಾಣಲು ಕೆಲವು ಸೂಪರ್‌ ಹಿರೋಗಳೇ ಕಾರಣ. ಆ ಸೂಪರ್‌ ಹೀರೋಗಳು ಇತರ ಟೆಕ್‌ ಕಂಪನಿಗಳಲ್ಲಿ ಕೆಲಸ ಮಾಡುವುದನ್ನು ತೊರೆದು ಸ್ವಂತ ಉದ್ಯಮಗಳನ್ನು ಪ್ರಾರಂಭಿಸಿದ್ದೇ ತಡ, ಟೆಕ್ ಉದ್ಯಮ ಕ್ಷೇತ್ರ ಭಾರತದಲ್ಲಿ ಹೊಸ ದಾಪುಗಾಲನ್ನೇ ಕಂಡಿತು. ಅಂದಹಾಗೆ ಭಾರತದ ಟೆಕ್‌ ಉದ್ಯಮ ಕ್ಷೇತ್ರ ಬೆಳೆಯಲು ಕಾರಣರಾದ ಆ ಸೂಪರ್‌ ಹೀರೋಗಳು ಯಾರು ಗೊತ್ತಾ? ಬಹುಶಃ ಗೊತ್ತಿರುವುದಿಲ್ಲ. ಲೇಖನದ ಸ್ಲೈಡರ್‌ಗಳನ್ನು ನೋಡಿ ನಿಮಗೆ ತಿಳಿಯುತ್ತೆ.
ಚಿತ್ರ ಕೃಪೆ: bccl

ಆಪಲ್‌ ರಹಸ್ಯವಾಗಿಟ್ಟಿದ್ದ ಅದ್ಭುತ 'ಐಫೋನ್ ಟ್ರಿಕ್ಸ್'ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಚಿನ್ ಬನ್ಸಾಲ್ ಹಾಗೂ ಬಿನ್ನಿ ಬನ್ಸಾಲ್

ಫ್ಲಿಪ್‌ಕಾರ್ಟ್ (Filpkart)

ಪ್ರಸ್ತುತದಲ್ಲಿ ;ಸಚಿನ್ ಬನ್ಸಾಲ್ ಹಾಗೂ ಬಿನ್ನಿ ಬನ್ಸಾಲ್' ಭಾರತದ ಇ-ಕಾಮರ್ಸ್‌ ಕ್ಷೇತ್ರದಲ್ಲಿ ಪ್ರಮುಖರು. ಜೊತೆಯಲ್ಲೇ ಶಿಕ್ಷಣ ಮುಗಿಸಿ, ಜೊತೆಯಲ್ಲೇ ಕೆಲವು ದಿನಗಳ ಕಾಲ ಅಮೆಜಾನ್‌'ನಲ್ಲಿ ಕೆಲಸ ಮಾಡಿದರು. ನಂತರ 2007 ರಲ್ಲಿ ಫ್ಲಿಪ್‌ಕಾರ್ಟ್‌ ಆರಂಭಿಸಿ, ಇಂದು ಅಮೆಜಾನ್‌ನಷ್ಟೆ ಮೌಲ್ಯದ ಇ-ಕಾಮರ್ಸ್‌ ಕಂಪನಿಯನ್ನು ಹೊಂದಿದ್ದಾರೆ.

ಕುನಲ್‌ ಬಾಹ್ಲ್‌ ಮತ್ತು ರೋಹಿತ್‌ ಬನ್ಸಾಲ್‌

ಸ್ನಾಪ್‌ಡೀಲ್‌ (Snapdeal)

'ಕುನಲ್‌ ಬಾಹ್ಲ್‌ ಮತ್ತು ರೋಹಿತ್‌ ಬನ್ಸಾಲ್' ಇಬ್ಬರು ಸಹ ಸ್ನಾಪ್‌ಡೀಲ್‌ ಸಂಸ್ಥಾಪಕರು. ಇಬ್ಬರು ಸಹ ಪ್ರಾಥಮಿಕವಾಗಿ ದೆಹಲಿಯ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿಗಳು. ನಂತರ ರೋಹಿತ್‌ ಬನ್ಸಾಲ್‌ ಐಐಟಿ ದೆಹಲಿಗೆ ಮತ್ತು ಕುನಲ್‌ಬಾಹ್ಲ್‌ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯಕ್ಕೆ ಶಿಕ್ಷಣಕ್ಕಾಗಿ ಹೋಗಿದ್ದರು. ಕುನಲ್‌ ಮೈಕ್ರೋಸಾಫ್ಟ್‌ನಲ್ಲೂ ಸಹ ಕೆಲಸ ನಿರ್ವಹಿಸಿದ್ದಾರೆ. ಈ ಇಬ್ಬರು ಸ್ನೇಹಿತರು ಸೇರಿ 2010 ರಲ್ಲಿ ಸ್ನಾಪ್‌ಡೀಲ್‌ ಆನ್‌ಲೈನ್‌ ಮಾರುಕಟ್ಟೆ ಆರಂಭಿಸಿದರು. ಇಂದು ಭಾರತದ ವಿಶಾಲ ಆನ್‌ಲೈನ್‌ ಮಾರುಕಟ್ಟೆ ಸ್ನಾಪ್‌ಡೀಲ್‌ ಆಗಿದೆ.

ಭವಿಶ್‌ ಅಗರ್ವಾಲ್‌

ಓಲಾ (Ola)

ಭವಿಶ್‌ ಅಗರ್ವಾಲ್‌'ರವರು, ಇಂದು ಭಾರತದಾದ್ಯಂತ ಮನೆಮಾತಾಗಿರುವ ಆನ್‌ಲೈನ್‌ ಸಾರಿಗೆ ಸೇವೆ 'ಓಲಾ ಕ್ಯಾಬ್‌' ಸಂಸ್ಥೆಯ ಸಂಸ್ಥಾಪಕರು. ಲೂಧಿಯಾನದಲ್ಲಿ ಜನಿಸಿ, ಬಾಂಬೆಯ ಐಐಟಿಯಲ್ಲಿ 'ಕಂಪ್ಯೂಟರ್‌ ಸೈನ್ಸ್‌ ಮತ್ತು ಇಂಜಿನಿಯರಿಂಗ್‌ ಪದವಿ ಪಡೆದರು. ಭವಿಶ್‌'ರವರು 2010 ಡಿಸೆಂಬರ್‌ 3 ರಂದು ಆನ್‌ಲೈನ್‌ ಸಾರಿಗೆ ಸೇವೆ 'ಓಲಾ' ಆರಂಭಿಸಿದರು.

ವಿಜಯ್ ಶೇಖರ್ ಶರ್ಮಾ

ಪೇಟಿಎಂ (Paytm)

ದೆಹಲಿಯ 'ಕಾಲೇಜ್‌ ಆಫ್‌ ಇಂಜಿನಿಯರಿಂಗ್'ನಲ್ಲಿ ತಮ್ಮ ಶಿಕ್ಷಣ ಪಡೆದರು. ಇವರು ಶಿಕ್ಷಣ ಮುಗಿಸಿದ್ದೇ ಒಂದು ರೀತಿಯಲ್ಲಿ ಗ್ರೇಟ್‌ ಅಂತೆ. ಯಾಕಂದ್ರೆ ಇಂಗ್ಲೀಷ್‌ ಮಾತನಾಡಲು ಬರುತ್ತಿರಲಿಲ್ಲವಂತೆ. ಆದರೆ ಇಂಗ್ಲೀಷ್‌ ಇವರ ಸಾಧನೆಯನ್ನು ಮಾತ್ರ ನಿಲ್ಲಿಸಲಿಲ್ಲ. ಇವರು ಭಾರತದ ಇ-ಕಾಮರ್ಸ್‌ ವೆಬ್‌ಸೈಟ್‌ 'ಪೇಟಿಎಂ' ಅನ್ನು 2010 ರಲ್ಲಿ ಸ್ಥಾಪಿಸಿದರು. ಇದು one97 ಕಮ್ಯೂನಿಕೇಷನ್‌ ಮಾಲಿಕತ್ವದಲ್ಲಿದೆ.

ಪ್ರಣಯ್‌ ಛುಲೆಟ್‌

ಕ್ವಿಕರ್‌(Quikr)

ಭಾರತದ ಬೃಹತ್‌ ದೊಡ್ಡ ಕ್ಲಾಸಿಫೈಡ್‌ ಜಾಹಿರಾತು ಪೋರ್ಟಲ್ "ಕ್ವಿಕರ್‌'ನ ಸಂಸ್ಥಾಪಕರೆಂದರೆ 'ಪ್ರಣಯ್‌ ಛುಲೆಟ್'.ರಾಜಸ್ಥಾನದ 'ಕೇಂದ್ರಿಯ ವಿಶ್ವವಿದ್ಯಾನಿಲಯ'ದಲ್ಲಿ ಶಿಕ್ಷಣ ಮುಗಿಸಿ ತಮ್ಮ ಕಲ್ಕತ್ತಾದಲ್ಲಿ ತಮ್ಮ ಉನ್ನತ ಶಿಕ್ಷಣ ಮುಗಿಸಿದರು. ಪ್ರಾಕ್ಟರ್ & ಗ್ಯಾಂಬಲ್, ಮಿಚೆಲ್ ಮ್ಯಾಡಿಸನ್ ಗ್ರೂಪ್, ವಾಕರ್ ಡಿಜಿಟಲ್ ಕಂಪನಿಗಳಲ್ಲಿ ಕೆಲಸ ನಿರ್ವಹಿಸಿದರು. ನಂತರ 2008 ರಲ್ಲಿ 'ಕ್ವಿಕರ್' ಪೋರ್ಟಲ್‌ ಅನ್ನು ಸ್ಥಾಪಿಸಿದರು.

ದೀಪಿಂದರ್ ಗೋಯಲ್

ZOmato

ದೀಪಿಂದರ್‌ ಗೋಯಲ್'ರವರು ಪ್ರಖ್ಯಾತ 'ZOmato' ಸಂಸ್ಥೆಯನ್ನು 2010 ರಲ್ಲಿ ಸಂಸ್ಥಾಪಿಸಿದರು. ಆನ್‌ಲೈನ್‌ ಮೂಲಕ ಫುಡ್ ಬುಕ್‌ ಮಾಡಲು ಇರುವ ಪ್ರಖ್ಯಾತ ವೆಬ್‌ಸೈಟ್‌ 'ZOmato'.

ಕೆವಿನ್‌ ಭಾರತಿ ಮಿತ್ತಲ್

ಹೈಕ್‌(Hike)

ಕೆವಿನ್‌ ಭಾರತಿ ಮಿತ್ತಲ್‌'ರವರು ಇನ್‌ಸ್ಟಾಂಟ್ ಮೆಸೇಜಿಂಗ್‌ ಅಪ್ಲಿಕೇಶನ್‌ 'ಹೈಕ್‌' ಸಿಇಓ ಮತ್ತು ಸಂಸ್ಥಾಪಕರು. ಅಲ್ಲದೇ ಇವರು ಪ್ರಖ್ಯಾತ ಉದ್ಯಮಿ ಭಾರತಿ ಮಿತ್ತಲ್‌'ರವರ ಮಗ. ಇವರು ತಮ್ಮ ಟೆಕ್‌ ಉದ್ಯಮ ಆರಂಭಿಸುವ ಮೊದಲು 'ಯಾರ್ಕ್‌ ವಿಶ್ವವಿದ್ಯಾನಿಲಯ'ದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ಶಿಕ್ಷಣ ಪಡೆದಿದ್ದರು. ನಂತರ 2012ರಲ್ಲಿ ಹೈಕ್‌ ಮೆಸೇಂಜರ್‌ ಅನ್ನು ಪ್ರಾರಂಭಿಸಿದರು. ಆರಂಭಿಸಿದರ ಕೇವಲ 2 ತಿಂಗಳಲ್ಲಿ $7 ಮಿಲಿಯನ್‌ ಭಾರತಿ ಸಾಫ್ಟ್‌ಬ್ಯಾಂಕ್‌ನಲ್ಲಿ ರೈಸ್ ಆಗಿತ್ತು.

ಕುನಾಲ್‌ ಶಾಹ್‌

ಫ್ರೀಚಾರ್ಜ್‌ (FreeCharge)

ಪ್ರಿಪೇಡ್‌ ಮೊಬೈಲ್‌ ರೀಚಾರ್ಜ್‌ ಮಾಡಲು ಇಂದು ಬಹುಸಂಖ್ಯಾತರು ಬಳಸುವ 'FreeCharge' ಅನ್ನು 'ಕುನಾಲ್‌ ಶಾಹ್‌'ರವರು 2010 ರಲ್ಲಿ ಆರಂಭಿಸಿದರು. ಇವರು ಕೇವಲ ಕೂಪನ್‌ ಮತ್ತು ರಿಯಾಯಿತಿಗಳನ್ನು ಗ್ರಾಹಕರಿಗೆ ನೀಡಲು ವೆಬ್‌ಸೈಟ್‌ ಆರಂಭಿಸಿದರು. ಈ ವೆಬ್‌ಸೈಟ್‌ ಇಂದು ಸೂಪರ್‌ ಹಿಟ್‌ ಆಗಿದ್ದು, ಇತ್ತೀಚೆಗೆ ಸ್ನಾಪ್‌ಡೀಲ್‌ ಇದನ್ನು $400 ಮಿಲಿಯನ್‌ಗೆ ವಶಪಡಿಸಿಕೊಂಡಿತು.

ರಾಹುಲ್ ಯಾದವ್

ಹೌಸಿಂಗ್.ಕಾಂ (Housing.com)

ರಾಹುಲ್ ಯಾದವ್‌'ರವರು ಭಾರತದ ಉದ್ಯಮ ಕ್ಷೇತ್ರದಲ್ಲಿ ಪ್ರಖ್ಯಾತ ಹಾಗೂ ಕಾಂಟ್ರೋವರ್ಸಿಯಲ್ ವ್ಯಕ್ತಿ. ಇವರು ಬಾಂಬೆ ಐಐಟಿಯ ಕಾಲೇಜ್‌ ಡ್ರಾಪೌಟ್. 2012 ರಲ್ಲಿ ತನ್ನ ಇತರೆ 11 ಕಾಲೇಜ್‌ ಸಹಪಾಠಿಗಳೊಂದಿಗೆ ರಿಯಲ್‌ ಎಸ್ಟೇಟ್‌ ಕ್ಲಾಸಿಫೈಡ್‌ ಪೋರ್ಟಲ್‌ ಅನ್ನು ಸ್ಥಾಪಿಸಿದರು. ಭಾರತದ ಟೆಕ್‌ ಉದ್ಯಮ ಕ್ಷೇತ್ರದ ಬೆಳವಣಿಗೆಗೆ ಇದು ಮಹತ್ತರ ಮೈಲಿಗಲ್ಲು ಹೌದು.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಸೋಲಾರ್ ಪವರ್‌ ಸಿಮೆಂಟ್‌ನಿಂದ ರೋಡ್‌; ರಾತ್ರಿ ವೇಳೆ ಮಿನುಗುತ್ತೆ ರಸ್ತೆ

ಆಪಲ್‌ ರಹಸ್ಯವಾಗಿಟ್ಟಿದ್ದ ಅದ್ಭುತ 'ಐಫೋನ್ ಟ್ರಿಕ್ಸ್'ಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
11 Heroes Who Helped Build The Indian Startup Industry. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot