ಆಪಲ್‌ ರಹಸ್ಯವಾಗಿಟ್ಟಿದ್ದ ಅದ್ಭುತ 'ಐಫೋನ್ ಟ್ರಿಕ್ಸ್'ಗಳು

By Suneel
|

ಐಫೋನ್ ಮಾಲಿಕರು ಯಾವಾಗಲು 'ಸೆಲ್ ಫೋನ್‌' ಮಾರುಕಟ್ಟೆಯಲ್ಲಿ ಡಾಮಿನೇಟ್. ಹೊಸದಾಗಿ ಐಫೋನ್ ಕೊಂಡರೂ, 1 ವರ್ಷ ಐಫೋನ್‌ ಬಳಸಿದರೂ ಸಹ ಐಫೋನ್‌ ಬಳಕೆದಾರರು ಮಾತ್ರ ಐಫೋನ್‌ನಲ್ಲಿನ ಸಿಕ್ರೇಟ್ ಟ್ರಿಕ್ಸ್‌ಗಳನ್ನು ತಿಳಿಯುವಲ್ಲಿ ಎಲ್ಲರೂ ಸಹ ಫೇಲ್‌ ಆಗುತ್ತಾರೆ.

ಐಫೋನ್ ಇದುವರೆಗೂ ಸಹ ತನ್ನ ಬಳಕೆದಾರರಿಗೆ ಬಳಕೆಯಲ್ಲಿನ ಕೆಲವು ಅದ್ಭುತ ಸಿಕ್ರೇಟ್‌ ಟಿಪ್ಸ್‌ಗಳನ್ನು ಎಲ್ಲಿಯೂ ತಿಳಿಸಿಲ್ಲ. ಆದರೆ ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ಐಫೋನ್(iPhone) ಬಳಕೆಯಲ್ಲಿನ ಅದ್ಭುತ ಸಿಕ್ರೇಟ್‌ ಟ್ರಿಕ್ಸ್‌ಗಳನ್ನು ನೀಡಲಾಗುತ್ತಿದೆ. ಐಫೋನ್‌ ಬಳಕೆದಾರರು ಈ ಟಿಪ್ಸ್‌ಗಳಿಂದ ಬಳಕೆಯಲ್ಲಿ ಹೆಚ್ಚು ಸಾಮರ್ಥ್ಯ ಫೀಚರ್‌ನೊಂದಿಗೆ, ಆಕರ್ಷಕವಾಗಿ ಉತ್ತಮ ಅನುಭವ ಪಡೆಯಬಹುದು. ಲೇಖನದ ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಮಲಗುವ ವೇಳೆಯಲ್ಲಿ ಓದಲೇಬಾರದ ವಿಕಿಪೀಡಿಯ ಪೇಜ್‌ಗಳು!!

1

1

ಸೆಲ್ಫಿ ಗೇಮ್‌ಗೆ ಸೂಪರ್ ಟಿಪ್ಸ್‌. ನಿಮ್ಮ ಐಫೋನ್‌ನಲ್ಲಿ ಕ್ಯಾಮೆರಾ ಆಪ್‌ ಓಪನ್‌ ಮಾಡಿ ವಾಲ್ಯೂಮ್‌ ಬಟನ್ ಅನ್ನು ಫೋಟೋ ಕ್ಲಿಕ್ಕಿಸಲು ಬಳಸಬಹುದಾಗಿದೆ.

2

2

ಕೆಲವು ಪದಗಳನ್ನ ಹೇಗೆ ಉಚ್ಚರಿಸುವುದು ಎಂದು ತಿಳಿಯದಿದ್ದಲ್ಲಿ, ಸಿರಿ ನಿಮಗೆ ತರಬೇತಿ ನೀಡುತ್ತದೆ. ಅಲ್ಲದೇ ಮಸೇಜ್‌ಗಳನ್ನು ಸಹ ಸಿರಿಇಂದಲೇ ಕಳುಹಿಸಬಹುದು.

3

3

ನಿಮ್ಮ ಐಫೋನ್‌ ಒಂದಾದ ನಂತರ ಹಲವು ಫೋಟೋಗಳನ್ನ ತೆಗೆಯಬಹುದು. ಆದರೆ ಕ್ಯಾಮೆರಾ ಆಪ್‌ನಲ್ಲಿ ಕ್ಯಾಪ್ಚರ್‌ ಬಟನ್‌ ಕೆಳಗೆ ಟ್ಯಾಪ್‌ ಮಾಡಿದರೆ ಖಂಡಿತ ಉತ್ತಮ ಶಾಟ್‌ ತೆಗೆಯುವಲ್ಲಿ ಮಿಸ್‌ ಆಗೋದೆ ಇಲ್ಲಾ.

4

4

ಟೆಕ್ಸ್ಟ್‌ ಮೆಸೇಜ್‌ಗಳನ್ನು ಹಾಗೆ ಒಮ್ಮೆ ಎಡಭಾಗಕ್ಕೆ ಸ್ಲೈಡ್‌ ಮಾಡಿದರೆ, ಪ್ರತಿ ಮೆಸೇಜ್‌ಗಳ ನಿಖರ ಸಮಯವನ್ನು ತಿಳಿಯಬಹುದು.

5

5

ಐಫೋನ್‌ನಲ್ಲಿ 'Compass' ಆಪ್‌ ಅನ್ನು ಎಡಭಾಗಕ್ಕೆ ಸ್ವೈಪ್‌ ಮಾಡುವುದರ ಮುಖಾಂತರ ಟೂಲ್ ಸ್ಟೋರ್‌ ಅನ್ನು ಸೇವ್‌ ಮಾಡಿಕೊಳ್ಳಿ. ಇದು ಮ್ಯಾಗ್ನೆಟಿಕ್ ಸೆನ್ಸಾರ್‌ ಅನ್ನು ಹೊಂದಿದೆ.

6

6

ಐಫೋಣ್‌ ಬಹುಬೇಗ ಚಾರ್ಜ್‌ ಆಗಬೇಕೇ? ಹಾಗಾದ್ರೆ ಚಾರ್ಜ್‌ಗೆ ಕೆನೆಕ್ಟ್‌ ಮಾಡಿದಾಗ ಐಫೋನ್‌ನಲ್ಲಿ "Airplane Mode" ಆನ್‌ ಮಾಡಿ.

7

7

ಕೆಲವೊಮ್ಮೆ ಐಫೋನ್‌ನಲ್ಲಿ ವೈಬ್ರೇಶನ್‌ ಮತ್ತು ಅಲರ್ಟ್‌ ಟೋನ್‌ಗಳು ಕಿರಿಕಿರಿ ಉಂಟುಮಾಡಬಹುದು. ಇಂತಹ ಸಮಸ್ಯೆಯಿಂದ ಪಾರಾಗಲು LED ಫ್ಲಾಶ್‌ ಲೈಟ್‌ ಅಲರ್ಟ್‌ ಪಡೆಯಬಹುದು. Settings > General > Accessibility >>LED Flash for Alerts.

8

8

ನಿದ್ರೆ ಬರುವ ಮುನ್ನ ಬೆಡ್‌ ಮೇಲಿರುವ ನೀವು ಮ್ಯೂಸಿಕ್‌ ಪ್ಲೇ ಮಾಡಿದ್ದೀರಾ? ನಿದ್ರೆ ಬಂದ ನಂತರ ಸ್ವಯಂ ಚಾಲಿತವಾಗಿ ಮ್ಯೂಸಿಕ್‌ ಪ್ಲೇ ಬುಕ್‌ ಆಫ್‌ ಆಗುವಂತೆ ಟೈಮರ್‌ ಸೆಟ್‌ ಮಾಡಬಹುದಾಗಿದೆ. ಕ್ಲಾಕ್‌ ಆಪ್‌ ಓಪನ್‌ ಮಾಡಿ ಟೈಮರ್‌ ಬಟನ್‌ ಆಯ್ಕೆ ಮಾಡಿ. ಎಷ್ಟು ನಿಮಿಷ ಮ್ಯೂಸಿಕ್‌ ಪ್ಲೇ ಆಗಬೇಕು ಎಂಬುದನ್ನು ಸೆಟ್ ಮಾಡಿ ನಂತರ 'When Timer Ends' ಬಟನ್‌ ಟ್ಯಾಪ್ ಮಾಡಿ ಕೆಳಗೆ ಸ್ಕ್ರಾಲ್ ಮಾಡಿ "Stop Playing" ಆಯ್ಕೆ ಮಾಡಿ.

9

9

ಪಾಸ್‌ರ್ಟ್‌ಗಾಗಿ ಅಂಕಿಗಳನ್ನು ನೀಡುವ ಬದಲು, ಲೆಟರ್‌ಗಳಿಂದ ಲಾಂಗರ್‌ ಪಾಸ್‌ವರ್ಡ್‌ ನೀಡಬಹುದಾಗಿದೆ. Settings > General > Passcode Lock and turn off "Simple Passcode."

10

10

ನೀವು ಇರುವ ಪ್ರದೇಶದ ಮೇಲೆ ಯಾವ ಏರೋಪ್ಲೇನ್‌ ಹೋಗುತ್ತಿದೆ ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೇ 'ಸಿರಿ' ನಿಮಗೆ ಫ್ಲೈಟ್‌ ನಂಬರ್, ಎತ್ತರ, ವಿಮಾನದ ಹೆಸರನ್ನು ತಿಳಿಸುತ್ತದೆ. ಈ ಮಾಹಿತಿಗಾಗಿ ನೀವು ಸಿರಿಯಲ್ಲಿ ""what flights are overhead" ಎಂದು ಕೇಳಬೇಕಷ್ಟೆ.

11

11

ಕಣ್ಣುಗಳು ಆಯಾಸವಾಗಿರುವ ಫೀಲ್‌ ಆಗುತ್ತಿದೆಯೇ? ಐಫೋನ್‌ನಲ್ಲಿರುವ ಮೆಸೇಜ್‌ಗಳನ್ನು, ಅಥವಾ ಇತರೆ ಯಾವುದೇ ಟೆಕ್ಸ್ಟ್‌ಗಳನ್ನು ಓದಲು ಆಗುತ್ತಿಲ್ಲವೇ? ಹಾಗಾದ್ರೆ ಐಫೋನ್‌ನಲ್ಲಿ ಟೆಕ್ಸ್ಟ್‌ ಅನ್ನು ರೀಡ್‌ ಮಾಡುವ ಫೀಚರ್ ಅನ್ನು ಹೊಂದಬಹುದು. ಜಸ್ಟ್‌ ಹಾಗೆ 'Speak' ಬಟನ್‌ ಒತ್ತಿದರೆ ಸಾಕು ಮೆಸೇಜ್‌ ರೀಡ್ ನಿಮಗೆ ಆಡಿಯೋದಲ್ಲಿ ಕೇಳುತ್ತದೆ. ಈ ಫೀಚರ್‌ಗಾಗಿ Settings>>General>Tap Accessibility>>Turn on Speak Selection Feature. ನಂತರದಲ್ಲಿ ಟೆಕ್ಸ್ಟ್‌ ಸೆಲೆಕ್ಟ್‌ ಮಾಡಿದಾಗಲೆಲ್ಲ 'Speak' ಫೀಚರ್‌ ಪ್ರದರ್ಶನವಾಗುತ್ತದೆ.

12

12

ಐಫೋನ್‌ ಬಳಸುವಲ್ಲಿ ಉತ್ತಮ ಅನುಭವಕ್ಕಾಗಿ ವಿವಿಧ ಕಾಂಟ್ಯಾಕ್ಟ್‌ಗಳಿಗಾಗಿ ವಿವಿಧ ರೀತಿಯ ವೈಬ್ರೇಶನ್‌ ಪ್ಯಾಟರ್ನ್ ವ್ಯವಸ್ಥೆಗೊಳಿಸಬಹುದಾಗಿದೆ. ಇತರರು ಮೆಸೇಜ್‌ ಮಾಡಿದಲ್ಲಿ ಅವರು ಯಾರು ಎಂದು ಫೋನ್‌ ನೋಡದೆ ತಿಳಿಯಬಹುದಾಗಿದ್ದು, ಈ ಫೀಚರ್‌ಗಾಗಿ Settings > Sounds > Ringtone > Vibration > Create New Vibration

13

13

ಪ್ರತಿ ಬಾರಿಯೂ ಇಂಟರ್ನೆಟ್ ಬಳಸಿದಾಗ ವೆಬ್‌ ಅಡ್ರೆಸ್‌ ಟೈಪ್‌ ಮಾಡುವಲ್ಲಿ ಕೀಬೋರ್ಡ್‌ನಲ್ಲಿ "." ಕ್ಲಿಕ್ ಮಾಡಿದಲ್ಲಿ ಹಲವು ಸಫ್ಫಿಕ್ಸೆಸ್‌ ಓಪನ್ ಆಗುತ್ತವೆ.

14

14

ಐಫೋಣ್‌ ಸ್ಕ್ರೀನ್‌ನಲ್ಲಿ ಇರುವ ಮಾಹಿತಿಯನ್ನು ಇತರರಿಗೆ ಕಳುಹಿಸಬೇಕೇ?ಹಾಗಾದ್ರೆ ಸ್ಕ್ರೀನ್‌ಶಾಟ್‌ ತೆಗೆಯಲು 'ಹೋಮ್ ಬಟನ್‌' ಮತ್ತು 'ಆನ್‌/ಆಫ್‌' ಬಟನ್‌ ಅನ್ನು ಒಮ್ಮೆಯೇ ಪ್ರೆಸ್‌ ಮಾಡಿ.

15

15

ಐಫೋನ್‌ನಲ್ಲಿ ಇಮೇಲ್‌ ಬಳಸುವ ಉತ್ತಮ ಅನುಭವಕ್ಕಾಗಿ, ನಿಮ್ಮ ಇಮೇಲ್‌ನ ಎಲ್ಲಾ ಡ್ರಾಫ್ಟ್‌ಗಳನ್ನು ಒಮ್ಮೆಯೇ ತೆಗೆಯಲು "Compose" ಐಕಾನ್‌ ಅನ್ನು ದೀರ್ಘಕಾಲ ಪ್ರೆಸ್‌ ಮಾಡಿ.

16

16

ಹೆಚ್ಚು ಬಾರಿ ಬಳಸುವ ಒಂದೇ ರೀತಿಯ ಟೆಕ್ಸ್ಟ್‌ಗಳನ್ನು ಶಾರ್ಟ್‌ಕಟ್‌ ಕ್ರಿಯೇಟ್‌ ಮಾಡಿ. ಇದರಿಂದ ಪ್ರತಿ ಬಾರಿ ಟೈಪಿಸುವ ಅಗತ್ಯ ತಪ್ಪಿಸಬಹುದು. Settings > General > Keyboard > Shortcuts > Add New Shortcut.

Best Mobiles in India

English summary
16 Incredible iPhone Tricks That Apple Has Been Keeping A Secret. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X