ಆಪಲ್ ಕಿರೀಟಕ್ಕೆ ಇನ್ನೊಂದು ಗರಿ ಭವಿಷ್ಯ ಸೂಚಕ ಆಪಲ್‌ ವಾಚ್

  By Shwetha
  |

  ಆಪಲ್‌ನ ಅತ್ಯಾಧುನಿಕ ಅತ್ಯುನ್ನತ ಉತ್ಪನ್ನವಾಗಿರುವ ಆಪಲ್ ವಾಚ್ ಇತಿಹಾಸವನ್ನು ಮರುಕಳಿಸುವಂತಹ ಸುಂದರ ನೋಟದೊಂದಿಗೆ ಹೊರಬಂದಿದೆ. ನಿಮಗೆ ಬೇಕೆನಿಸಿದ್ದನ್ನು ನಿಮ್ಮ ಮಣಿಗಂಟನ್ನು ಅಲಂಕರಿಸುವ ಪುಟ್ಟ ಕೈಗಡಿಯಾರ ಮಾಡಿ ತೋರಿಸುತ್ತದೆ ಎಂದರೆ ಯಾರು ಕೂಡ ಮೂಗಿನ ಮೇಲೆ ಬೆರಳಿಡಲೇಬೇಕು.

  [ಓದಿರಿ: ಟಿಮ್ ಕುಕ್: ಪೇಪರ್ ಮಾರುವ ಹುಡುಗ ಪ್ರಪಂಚವನ್ನು ಗೆದ್ದ ಕಥೆ]

  ಹಾಗಿದ್ದರೆ ಈ ಪುಟ್ಟ ಯಂತ್ರ ಮಾಡುವ ಕಾರುಬಾರನ್ನು ಕೆಳಗಿನ ಸ್ಲೈಡರ್‌ಗಳ ಮೂಲಕ ನಾವು ನಿಮಗೆ ಉಣಬಡಿಸುತ್ತಿದ್ದೇವೆ. ಹಾಗಿದ್ದರೆ ತಡ ಮಾಡದೇ ಕೆಳಗಿನ ಸ್ಲೈಡರ್ ಪರಿಶೀಲಿಸಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸ್ಟೀವ್ ಜಾಬ್ ಆಸಕ್ತಿ

  ಈಗಾಗಲೇ ದಿವಂಗತರಾಗಿರುವ ಆಪಲ್ ಪಿತಾಮಹ ಸ್ಟೀವ್ ಜಾಬ್ ಕನಸಾಗಿತ್ತು ಆಪಲ್ ವಾಚ್. ಅದ್ಭುತ ಭವಿಷ್ಯ ನೋಟವನ್ನು ಒಳಗೊಂಡು ಬಂದಿರುವ ಈ ವಾಚ್ ಆಪಲ್‌ನ ಕಿರೀಟಕ್ಕೆ ಇನ್ನೊಂದು ಗರಿ.

  ವಾಚ್‌ನ ಧನಾತ್ಮಕ

  ಆಪಲ್ ವಾಚ್‌ನ ಹಿಂಭಾಗದಲ್ಲಿರುವ ಈ ವಿನ್ಯಾಸ ಇತರ ವಾಚ್ ವಿನ್ಯಾಸಗಳಿಗಿಂತ ಇದನ್ನು ಪ್ರತ್ಯೇಕಗೊಳಿಸುತ್ತದೆ. ನಿಜಕ್ಕೂ ಸುಂದರ ನೋಟವನ್ನು ಈ ವಾಚ್ ಹೊಂದಿದೆ.

  ಗ್ಲಾಸ್‌ನ ಸುಂದರ ನೋಟ

  ಸಫಾಯರ್ ಕ್ರಿಸ್ಟಲ್ ವಾಚ್‌ನ ಮುಂಭಾಗ ಮತ್ತು ಹೊರಭಾಗವನ್ನು ಹೊಂದಿದೆ. ಇದು ಸ್ಕ್ರಾಚ್ ಅನ್ನು ತಾಳಿಕೊಳ್ಳುವಷ್ಟು ಸುದೃಢವಾಗಿದ್ದು ಇದಕ್ಕೆ ಗೋರಿಲ್ಲಾ ಗ್ಲಾಸ್ ಅನ್ನು ಬಳಸಿದೆಯೇ ಎಂಬುದನ್ನು ಆಪಲ್ ಕಂಪೆನಿ ಸ್ಪಷ್ಟಪಡಿಸಿಲ್ಲ.

  ಆಪಲ್ ವಾಚ್ ವಿನ್ಯಾಸ

  ವಾಚ್‌ನ ಸುಂದರ ವಿನ್ಯಾಸ ಅಭಿವೃದ್ಧಿಗಾಗಿ ಕಂಪೆನಿ ಹಗಲಿರುಳು ದುಡಿದಿದೆ. ಅಂತೂ ಭರವಸೆಯ ದೃಷ್ಟಿಕೋನವನ್ನು ಈ ವಾಚ್‌ಗಳಲ್ಲಿ ನಮಗೆ ಕಾಣಬಹುದಾಗಿದೆ.

  ಆಪಲ್ ವಾಚ್‌ನ ಹೊಸ ವಿಧ

  ವಾಚ್ ಸ್ಕ್ರೀನ್ ಸಣ್ಣದಾಗಿದ್ದರೂ ಮಾಹಿತಿಗಳು ನಿಖರವಾಗಿ ಸ್ಫುಟವಾಗಿ ತೋರುವಂತೆ ಕಂಪೆನಿ ವಾಚ್‌ಗೆ ಹೊಸ ವಿಧವನ್ನು ರಚಿಸಿದೆ.

  ಟೈಮ್ ಕೀಪರ್ಸ್

  ಜನರು ಯಾವ ವಿಧದಲ್ಲಿ ಸಮಯಕ್ಕೆ ಪ್ರಾಶಸ್ತ್ಯ ಕೊಡುತ್ತಾರೆ ಎಂಬುದನ್ನು ಅರಿತುಕೊಂಡೇ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ವಾಚ್‌ಗೆ ಹೊಸ ಮುನ್ನುಡಿಯನ್ನು ಬರೆದಿದೆ.

  ಹೊಸ ಟೈಮ್

  ಸೋಲಾರ್ ತಂತ್ರಜ್ಞಾನವನ್ನು ಬಳಸಿ ರೂಪಿಸಿರುವ ಆಪಲ್ ಹೊಸ ವಾಚ್ ದಿನದ ಸಮಯವನ್ನು ನಿಖರವಾಗಿ ಪ್ರದರ್ಶಿಸುತ್ತದೆ.

  ಪ್ರಕೃತಿ ನಿಯಂತ್ರಣ

  ನಿಮ್ಮ ಮಣಿಗಂಟನ್ನು ಎತ್ತಿದ ಪ್ರತೀ ಕ್ಷಣ ಕೂಡ ಅರಳುತ್ತಿರುವ ಹೂವನ್ನು ವಾಚ್‌ನ ಮುಖದಲ್ಲಿ ನಿಮಗೆ ಗುರುತಿಸಬಹುದು. ಇದರಿಂದ ತಿಳಿಯುತ್ತದೆ ಕಂಪೆನಿ ಪ್ರಕೃತಿಗೆ ನೀಡಿರುವ ಮಹತ್ವ

  ನಿಮ್ಮ ನೋಟ

  ಆಪಲ್ ವಾಚ್‌ನ ಡೀಫಾಲ್ಟ್ ನೋಟಗಳ ಸೆಟ್ಟಿಂಗ್ ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಬಯಕೆಗೆ ಅನುಗುಣವಾಗಿ ಆಪಲ್ ವಾಚ್‌ನಲ್ಲಿ ಸೆಟ್ಟಿಂಗ್‌ಗಳನ್ನು ನಿಮಗೆ ಕಾಣಬಹುದು.

  ನಿಮ್ಮ ಅಪ್ಲಿಕೇಶನ್‌ಗಳು

  ವಾಚ್‌ನ ಮುಂಭಾಗವನ್ನು ನೀವು ಸ್ಪರ್ಶಿಸಿದಂತೆ ಅದರಲ್ಲಿರುವ ಅಪ್ಲಿಕೇಶನ್‌ಗಳಲ್ಲಿ ಸಣ್ಣ ಗುಳ್ಳೆಗಳನ್ನು ನಿಮಗೆ ಗಮನಿಸಬಹುದು. ಅಪ್ಲಿಕೇಶನ್ ಐಕಾನ್ ಮೇಲೆ ಹೋಲ್ಡ್ ಮಾಡಿ ಕೆಳಕ್ಕೆ ಎಳೆದಾಗ ಅದು ನಿಮ್ಮ ಬಯಕೆಯ ಸ್ಥಾನದಲ್ಲಿ ಬಂದು ನಿಲ್ಲುತ್ತದೆ.

  ಹೊಸ ತಂತ್ರಜ್ಞಾನ

  ನಿಮ್ಮ ಕೈಯನ್ನು ಎತ್ತಿದಾಗ, ನಿಮ್ಮ ಸಂಪರ್ಕಗಳೊಂದರಲ್ಲಿ ಪಠ್ಯ ಸಂದೇಶ ಬಂದಿರುವುದನ್ನು ಇದು ನಿಮಗೆ ತೋರಿಸುತ್ತದೆ. ಇನ್ನೂ ಸ್ವಲ್ಪ ಹೊತ್ತು ನಿಮ್ಮ ಮಣಿಗಂಟನ್ನು ಎತ್ತಿ ಹಿಡಿದಾಗ ಮೆಸೇಜ್‌ನ ವಿಷಯಗಳು ಗೋಚರಿಸುತ್ತವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  The Apple Watch is Apple’s first new product category in half a decade. As such, even a 3,500 word review can’t possibly tell you everything you need to know. Even the stuff that you don’t need to know, is, to my mind, probably worth knowing.Here are some useful and interesting fact about Apple’s first watch.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more