ಗೂಗಲ್ ನೌ, ಸಿರಿ, ಕೋರ್ಟಾನಾದ 12 ಅಂಶಗಳು

Written By:

ಸ್ಮಾರ್ಟ್‌ಫೋನ್‌ಗಳಲ್ಲಿ ಧ್ವನಿ ಎಂಬುದು ಅತ್ಯಮೂಲ್ಯ ಫೀಚರ್ ಆಗಿ ಮಾರ್ಪಟ್ಟಿದೆ. ಹೆಚ್ಚುವರಿ ಕಾರ್ಯಗಳನ್ನು ನಿರ್ವಹಿಸಲು, ವಿವಿಧ ಉಚ್ಛಾರಣೆಗಳನ್ನು ಗುರುತಿಸಲು ಮತ್ತು ಇನ್ನಷ್ಟು ವೇಗವಾಗಿ ಇಂಟರ್ನೆಟ್‌ಗೆ ಸಂಬಂಧಿಸಿದ ಕೆಲಸವನ್ನು ನಿರ್ವಹಿಸಲು ಧ್ವನಿ ಇಂದು ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಪಾತ್ರ ವಹಿಸುತ್ತಿದೆ.

ಓದಿರಿ: ಗೂಗಲ್ ಪ್ಲೇ ಸ್ಟೋರ್ ಎರರ್ ಸಮಸ್ಯೆ ಪರಿಹರಿಸುವುದು ಹೇಗೆ

ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಲ್ಲಿರುವ ವಾಯ್ಸ್ ಬಳಸಿ ನೀವು ನಿಮ್ಮ ಕೆಲಸಗಳನ್ನು ಹೇಗೆ ನಿರ್ವಹಿಸಿಕೊಳ್ಳಬಹುದು ಎಂಬುದಕ್ಕೆ ಇಂದಿನ ಲೇಖನ ಉತ್ತಮ ಉದಾಹರಣೆಯಾಗಲಿದೆ. ಗೂಗಲ್ ನೌ, ಆಪಲ್ ಸಿರಿ, ಮೈಕ್ರೋಸಾಫ್ಟ್ ಕೋರ್ಟಾನಾ ಹೇಗೆ ಕೆಲಸ ಮಾಡುತ್ತದೆ ಎಂಬುದರ ಸಂಪೂರ್ಣ ವಿವರಣೆ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್ ಕಾಲಿಂಗ್

ಸ್ಮಾರ್ಟ್ ಕಾಲಿಂಗ್

ಗೂಗಲ್ ನೌ

ಕಾಲ್ ಡ್ಯಾಡ್ ಎಂದು ಹೇಳಿದರೆ ಸಾಕು ವಾಯ್ಸ್ ಅಸಿಸ್ಟೆಂಟ್ ಸ್ವಯಂಚಾಲಿತವಾಗಿ ಸಂಪರ್ಕವನ್ನು ಹುಡುಕಾಡುತ್ತದೆ ಮತ್ತು ಸಂಬಂಧಿತ ಸಂಪರ್ಕಕ್ಕೆ ಕರೆಯನ್ನು ಜೋಡಿಸುತ್ತದೆ. ನಿಕ್‌ನೇಮ್‌ಗಳಿರುವ ಸಂಪರ್ಕಗಳಿಗೂ ಇದೇ ಸಲಹೆ ಉತ್ತಮವಾಗಿ ಕೆಲಸ ಮಾಡುತ್ತದೆ.

ಭಾಷೆ ಅನುವಾದ

ಭಾಷೆ ಅನುವಾದ

ಗೂಗಲ್ ನೌ

ಭಾಷೆ ಒಂದೇ ಆಗಿದ್ದರೂ ಉಚ್ಛಾರಣೆ ವಿಭಿನ್ನವಾಗಿರುತ್ತದೆ. ನಿಮ್ಮ ಫೋನ್‌ನಲ್ಲಿ ವಾಯ್ಸ್ ಅಸಿಸ್ಟೆಂಟ್ ಲಾಂಚ್ ಮಾಡಿ ಮತ್ತು ಈ ಭಾಷೆಯಲ್ಲಿ ಹೇಗೆ ಹೇಳುವುದು ಎಂದು ಕೇಳಿದರೆ ಸಾಕು ನಿಮಗೆ ಗೂಗಲ್ ನೌ ಸಹಾಯ ಮಾಡುತ್ತದೆ.

ಸ್ಥಳ ಆಧಾರಿತ ರಿಮೈಂಡರ್‌ಗಳು

ಸ್ಥಳ ಆಧಾರಿತ ರಿಮೈಂಡರ್‌ಗಳು

ಗೂಗಲ್ ನೌ

ಲೊಕೇಶನ್ ಆಧಾರಿತ ರಿಮೈಂಡರ್‌ಗಳಲ್ಲೂ ಗೂಗಲ್ ನೌ ಕಾರ್ಯನಿರ್ವಹಿಸುತ್ತದೆ. ನಿಮ್ಮ ರಿಮೈಂಡರ್‌ನಲ್ಲಿ ಸ್ಥಾನ ಅಥವಾ ಸ್ಟೋರ್ ಹೆಸರನ್ನು ಸೇರಿಸಿದರೆ ಸಾಕು ಇದು ನಿಮಗೆ ಸಹಾಯ ಮಾಡುವುದು ಖಂಡಿತ.

ಫಾಲೋ ಅಪ್ ಪ್ರಶ್ನೆಗಳು

ಫಾಲೋ ಅಪ್ ಪ್ರಶ್ನೆಗಳು

ಗೂಗಲ್ ನೌ

ನೀವು ನೋಡಬೇಕೆಂದಿರುವ ಚಲನ ಚಿತ್ರದ ಪ್ರಮುಖ ನಾಯಕರು ಯಾರು? ಇಲ್ಲವೇ ಒಂದು ಪ್ರದೇಶದ ಹವಾಮಾನ ವರದಿ ಹೀಗೆ ಪ್ರತಿಯೊಂದು ಕ್ಷೇತ್ರಕ್ಕೆ ಸಂಬಂಧಿಸಿದ ವಿವರಗಳನ್ನು ಗೂಗಲ್ ನೌ ನೀಡುತ್ತದೆ.

ಇತರ ಅಪ್ಲಿಕೇಶನ್‌ಗಳೊಂದಿಗೆ ಸಂದೇಶ ರವಾನೆ

ಇತರ ಅಪ್ಲಿಕೇಶನ್‌ಗಳೊಂದಿಗೆ ಸಂದೇಶ ರವಾನೆ

ಗೂಗಲ್ ನೌ

ನೀವು ತ್ವರಿತ ಸಂದೇಶಿಸುವಿಕೆ ಬಳಕೆದಾರರು ಎಂದಾದಲ್ಲಿ, ಗೂಗಲ್ ನೌ ಅನ್ನು ಬಳಸಿಕೊಳ್ಳಬಹುದಾಗಿದೆ. ವೈಬರ್, ವಾಟ್ಸಾಪ್, ವಿಚಾಟ್ ಮತ್ತು ಟೆಲಿಗ್ರಾಮ್ ಮೊದಲಾದ ಅಪ್ಲಿಕೇಶನ್‌ಗಳೊಂದಿಗೆ ಗೂಗಲ್ ನೌ ಕಾರ್ಯನಿರ್ವಹಿಸುತ್ತದೆ.

ಜಾಗೃತಿ ಮೂಡಿಸುತ್ತದೆ

ಜಾಗೃತಿ ಮೂಡಿಸುತ್ತದೆ

ಆಪಲ್ ಸಿರಿ

ಒಂದು ರೆಸ್ಟಾರೆಂಟ್‌ಗಾಗಿ ನೀವು ಅನ್ವೇಷಿಸುತ್ತಿದ್ದೀರಿ ಎಂದಾದಲ್ಲಿ ಸಿರಿ ನಿಮಗೆ ಈ ಬಗೆಯಾಗಿ ಸಹಾಯ ಮಾಡುತ್ತದೆ. ಇಲ್ಲವೇ ರಿಮೈಂಡರ್ ಅನ್ನು ಕೂಡ ಇದರಲ್ಲಿ ಹೊಂದಿಸಬಹುದಾಗಿದೆ.

ಫೋಟೋ ಹುಡುಕಾಡುವಿಕೆ

ಫೋಟೋ ಹುಡುಕಾಡುವಿಕೆ

ಆಪಲ್ ಸಿರಿ

ನಿರ್ದಿಷ್ಟ ಫೋಟೋಗಾಗಿ ನೀವು ಹುಡುಕಾಡುತ್ತಿದ್ದೀರಾ ಎಂದಾದಲ್ಲಿ ಸಿರಿ ನಿಮಗೆ ಸಹಾಯ ಮಾಡಲಿದೆ. ನವೆಂಬರ್‌ನಲ್ಲಿ ತೆಗೆದ ಫೋಟೋಗಳು ಅಥವಾ ಆಗ್ರಾದಲ್ಲಿ ಪ್ರವಾಸಕ್ಕೆ ಹೋದ ಫೋಟೋಗಳು ಹೀಗೆ ಬೇರೆ ಬೇರೆ ಮಾದರಿಯಲ್ಲಿ ಸಿರಿಯನ್ನು ನಿಮಗೆ ಬಳಸಿಕೊಳ್ಳಬಹುದಾಗಿದೆ.

ಹೆಸರಿನ ಉಚ್ಛಾರಣೆ

ಹೆಸರಿನ ಉಚ್ಛಾರಣೆ

ಆಪಲ್ ಸಿರಿ

ಭಾರತೀಯ ಪದದ ಉಚ್ಛಾರಣೆ ಒಮ್ಮೊಮ್ಮೆ ಸಿರಿಗೆ ಕಷ್ಟಾಸಾಧ್ಯವಾಗಬಹುದು. ಆಗ ಬಹಳಷ್ಟು ಸಲ ನೀವು ಪ್ರಯತ್ನಿಸಬೇಕಾಗುತ್ತದೆ. ನೀವು ಹಲವಾರು ಬಾರಿ ಪ್ರಯತ್ನಿಸಿದ ನಂತರ ನಿಮಗೆ ಬೇಕಾದ ಉಚ್ಛಾರಣೆಗೆ ಇದು ಸನಿಹವಾಗಿರುತ್ತದೆ.

ಸೆಟ್ಟಿಂಗ್‌ಗಳ ಬದಲಾವಣೆ ಮತ್ತು ಇನ್ನಷ್ಟು

ಸೆಟ್ಟಿಂಗ್‌ಗಳ ಬದಲಾವಣೆ ಮತ್ತು ಇನ್ನಷ್ಟು

ಆಪಲ್ ಸಿರಿ

ಎಲ್ಲಾ ಅಲರಾಮ್‌ಗಳನ್ನು ರದ್ದುಗೊಳಿಸಿ ಮತ್ತು ತೊಂದರೆ ಮಾಡಬೇಡಿ ಮೊದಲಾದ ಆದೇಶಗಳನ್ನು ಸಿರಿಗೆ ನೀಡಬಹುದಾಗಿದೆ. ಅಪ್ಲಿಕೇಶನ್ ಐಕಾನ್ ನಿಮಗೆ ದೊರೆಯುತ್ತಿಲ್ಲ ಎಂದಾದಲ್ಲಿ ಕೂಡ ಓಪನ್ ಕ್ಯಾಲ್ಕುಲೇಟರ್ ಅಥವಾ ಲಾಂಚ್ ಕಿಂಡಲ್ ಮೊದಲಾದ ಆದೇಶಗಳನ್ನು ನೀಡಿ ಅಪ್ಲಿಕೇಶನ್‌ಗಳನ್ನು ತೆರೆಯಿಸಿಕೊಳ್ಳಬಹುದು.

ಸ್ಥಾನ ಆಧಾರಿತ ರಿಮೈಂಡರ್‌

ಸ್ಥಾನ ಆಧಾರಿತ ರಿಮೈಂಡರ್‌

ಮೈಕ್ರೋಸಾಫ್ಟ್ ಕೋರ್ಟಾನಾ

ಗೂಗಲ್‌ನಂತೆಯೇ ಕೋರ್ಟಾನಾ ಕೂಡ ಸ್ಥಾನ ಆಧಾರಿತ ರಿಮೈಂಡರ್‌ಗಳನ್ನು ವಿಂಡೋಸ್ 10 ಡಿವೈಸ್‌ಗಳಿಗಾಗಿ ಇದು ಅನುವು ಮಾಡಿಕೊಡುತ್ತದೆ.

ವ್ಯಕ್ತಿ ಆಧಾರಿತ ರಿಮೈಂಡರ್‌ಗಳು

ವ್ಯಕ್ತಿ ಆಧಾರಿತ ರಿಮೈಂಡರ್‌ಗಳು

ಮೈಕ್ರೋಸಾಫ್ಟ್ ಕೋರ್ಟಾನಾ

ಗೂಗಲ್ ಮತ್ತು ಆಪಲ್ ಹೊಂದಿರದ ವಾಯ್ಸ್ ವಿಶೇಷತೆಯನ್ನು ಕೋರ್ಟಾನಾ ತನ್ನಲ್ಲಿ ಪಡೆದುಕೊಂಡಿದೆ. ನಿರ್ದಿಷ್ಟ ಟಾಪಿಕ್ ಸಲುವಾಗಿ ಕೂಡ ನೀವು ಕೋರ್ಟಾನಾವನ್ನು ಹೊಂದಿಸಿಕೊಳ್ಳಬಹುದಾಗಿದೆ. ಟ್ಯಾಗ್ ಮಾಡಿದ ವ್ಯಕ್ತಿಗೆ ನೀವು ಕರೆ ಮಾಡಿದಾಗ ಸ್ಕ್ರೀನ್ ಮೇಲೆ ಪಾಪ್ ಅಪ್ ಅನ್ನು ರಿಮೈಂಡರ್ ತೋರಿಸುತ್ತದೆ.

ವ್ಯಕ್ತಿಯ ಗುರುತಿಸುವಿಕೆ

ವ್ಯಕ್ತಿಯ ಗುರುತಿಸುವಿಕೆ

ಮೈಕ್ರೋಸಾಫ್ಟ್ ಕೋರ್ಟಾನಾ

ಬಿಲ್ಟ್ ಇನ್ ವಾಯ್ಸ್ ಗುರುತಿಸುವಿಕೆಯೊಂದಿಗೆ ಕೋರ್ಟಾನಾ ಬಂದಿದೆ. ನಿರ್ದಿಷ್ಟ ಧ್ವನಿಯ ವೈಯಕ್ತಿಕ ಧ್ವನಿ ಗುರುತಿಸುವಿಕೆಯನ್ನು ರಚಿಸಲು ಇದು ಸಹಾಯ ಮಾಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
So, here's over to things you didn't know you can do with Google Now, Apple Siri and Microsoft Cortana (available on both iOS and Android).
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot