ಗೂಗಲ್ ಪ್ಲೇ ಸ್ಟೋರ್ ಎರರ್ ಸಮಸ್ಯೆ ಪರಿಹರಿಸುವುದು ಹೇಗೆ

Written By:

ಗೂಗಲ್‌ ಪ್ಲೇ ಸ್ಟೋರ್ ಬೃಹತ್‌ ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳನ್ನು ಹಾಗೂ ಗೇಮ್ ಆಪ್‌ಗಳನ್ನು ಹೊಂದಿರುವ ಅಪ್ಲಿಕೇಶನ್‌ ಸ್ಟೋರ್‌ ಆಗಿದೆ. ಆದರೆ ಕೆಲವೊಮ್ಮೆ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್‌ ಬಳಕೆದಾರರು ಆಪ್‌ಗಳನ್ನು ಡೌನ್‌ಲೋಡ್‌ ಮಾಡುವಾಗ ಮತ್ತು ಖರೀದಿಸುವಾಗ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಎರರ್‌ (ದೋಷ) ಸಮಸ್ಯೆಯನ್ನು ಕೆಲವೊಮ್ಮೆ ಎದುರಿಸುವುದು ಸಾಮಾನ್ಯ.

ಓದಿರಿ: ಕರೆನ್ಸಿ ಇಲ್ಲದಿದ್ದರೂ ಉಚಿತವಾಗಿ ಕರೆ ಮಾಡಲು ಈ ಆಪ್ಸ್‌ಗಳು

ಯಾವುದಾದರು ಒಂದು ಆಸಕ್ತಿಯ ಆಪ್‌ ಅನ್ನು ಡೌನ್‌ಲೋಡ್‌ ಮಾಡಲು ಪ್ರಯತ್ನಿಸುತ್ತೀರಿ. ಆಗ ಪ್ಲೇ ಸ್ಟೋರ್‌ ಕೆಲವೊಂದು ಗುಪ್ತ ಸಮಸ್ಯೆಯಿಂದ ಮೆಸೇಜ್‌ ಬಂದು ಡೌನ್‌ಲೋಡ್‌ ಆಗದೇ ಇರಬಹುದು. ಇಂತಹ ಸಮಸ್ಯೆಗಳನ್ನು ಗಿಜ್‌ಬಾಟ್ ಇಂದಿನ ಲೇಖನದಲ್ಲಿ ನೀಡುತ್ತಿದ್ದು, ಆ ಸಮಸ್ಯೆ ಪರಿಹರಿಸುವುದು ಹೇಗೆ ಎಂಬ ಟಿಪ್ಸ್‌ಗಳನ್ನು ನಿಮಗಾಗಿ ನೀಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
DF-BPA-09

ಗೂಗಲ್‌ ಪ್ಲೇ ಸ್ಟೋರ್ ಎರರ್‌ (ದೋಷ)

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಆಪ್‌ ಡೌನ್‌ಲೋಡ್ ಮಾಡುವಾಗ ಮೇಲಿನ ಕೋಡ್‌ನ ಎರರ್‌ ಮೆಸೇಜ್‌ ಬರಬಹುದು. ಆಗ ನೀವು ಕೇವಲ ಮತ್ತೊಮ್ಮೆ ಟ್ರೈ ಟ್ಯಾಪ್‌ ಮಾಡುವ ಮೂಲಕ ಆಪ್‌ ಡೌನ್‌ಲೋಡ್‌ ಆಗುವುದಿಲ್ಲ. ನೀವು ಸೆಟ್ಟಿಂಗ್ಸ್‌ ಗೆ ಹೋಗಬೇಕು. ಡಿವೈಸ್‌ನ ಸೆಟ್ಟಿಂಗ್ಸ್ ಗೆ ಹೋಗಿ >> ಅಪ್ಲಿಕೇಶನ್‌ ಮೆನೇಜರ್>> ಗೂಗಲ್‌ ಸರ್ವೀಸ್‌ ಫ್ರೇಂ ವರ್ಕ್‌>> ಅಲ್ಲಿ ಕ್ಲಿಯರ್ ಡಾಟಾ ಎಂಬಲ್ಲಿ ಕ್ಲಿಕ್‌ ಮಾಡಿ.

ಕೋಡ್‌ 194

ಗೂಗಲ್‌ ಪ್ಲೇ ಸ್ಟೋರ್ ಎರರ್‌ (ದೋಷ)

ಈ ಎರರ್‌ ನೀವು ಯಾವಾಗ ಒಂದು ಅಪ್ಲಿಕೇಶನ್‌ ಅನ್ನು ಅಥವಾ ಗೇಮ್‌ ಅನ್ನು ಡೌನ್‌ಲೋಡ್‌ ಮಾಡಲು ಪ್ರಯತ್ನಿಸುತ್ತಿರೋ ಆಗ ಪ್ರದರ್ಶನವಾಗುತ್ತದೆ. ಈ ಸಮಸ್ಯೆಗೆ ನೀವು ಗೂಗಲ್‌ ಪ್ಲೇ ಸರ್ವೀಸ್ ಮತ್ತು ಪ್ಲೇ ಸ್ಟೋರ್‌ ಆಪ್ಸ್‌ನಲ್ಲಿ ಕ್ಯಾಶೆ (cache) ಡಾಟಾ ಕ್ಲಿಯರ್‌ ಮಾಡಬೇಕು.

ಡಿವೈಸ್ ಸೆಟ್ಟಿಂಗ್ಸ್>>ಅಪ್ಲಿಕೇಶನ್ ಮೆನೇಜರ್>>ಗೂಗಲ್‌ ಪ್ಲೇ ಸ್ಟೋರ್ ಆಪ್‌>> ಕ್ಲಿಯರ್ ಕ್ಯಾಶೆ ಡಾಟಾ.

 ಕೋಡ್ 495

ಗೂಗಲ್‌ ಪ್ಲೇ ಸ್ಟೋರ್ ಎರರ್‌ (ದೋಷ)

ಈ ಎರರ್ ಅಪ್ಲಿಕೇಶನ್‌ಗಳನ್ನು ಅಪ್‌ಡೇಟ್‌ ಮಾಡುವಾಗ ಅಥವಾ ಗೇಮ್‌ ಆಪ್‌ಗಳನ್ನು ಡೌನ್‌ಲೋಡ್ ಮಾಡುವಾಗ ಎದುರಾಗುತ್ತದೆ. ಈ ಸಮಸ್ಯೆ ಪರಿಹಾರಕ್ಕೆ ಗೂಗಲ್‌ ಪ್ಲೇ ಸ್ಟೋರ್ ಡಾಟಾವನ್ನು ಡಿಲೀಟ್‌ ಮಾಡಿ.

ಕೋಡ್ 941

ಗೂಗಲ್‌ ಪ್ಲೇ ಸ್ಟೋರ್ ಎರರ್‌ (ದೋಷ)

ಆಪ್‌ಗಳ ಅಪ್‌ಡೇಟ್‌ ಸಂದರ್ಭದಲ್ಲಿ ಈ ರೀತಿಯ ಎರರ್‌ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ಪರಿಹಾರಕ್ಕೆ ಪ್ಲೇ ಸ್ಟೋರ್ ಆಪ್‌ನಲ್ಲಿನ ಡಾಟಾ ಕ್ಲಿಯರ್ ಮಾಡಬೇಕಾಗಿದೆ.

ಕೋಡ್‌ 498

ಗೂಗಲ್‌ ಪ್ಲೇ ಸ್ಟೋರ್ ಎರರ್‌ (ದೋಷ)

ಈ ಕೋಡ್ ಒಳಗೊಂಡ ಸಮಸ್ಯೆ ಗೂಗಲ್‌ ಪ್ಲೇ ಸ್ಟೊರ್‌ನಲ್ಲಿ ಕಂಡುಬರುತ್ತದೆ. ಈ ಸಮಸ್ಯೆ ಪರಿಹಾರಕ್ಕೆ ಅನುಪಯುಕ್ತ ಆಪ್‌ಗಳನ್ನು ಮತ್ತು ಫೈಲ್‌ಗಳನ್ನು ಡಿಲೀಟ್‌ ಮಾಡಿ. ಹಾಗೂ ಡಿವೈಸ್‌ RAM ನಲ್ಲಿ ಶೇಖರಣಾ ಸಾಮರ್ಥ್ಯ ಹೆಚ್ಚು ಇರುವಂತೆ ನೋಡಿಕೊಳ್ಳಿ. ಸಮಸ್ಯೆ ಎದುರಾದಾಗ ಡಿವೈಸ್ ಅನ್ನು ರಿಸ್ಟಾರ್ಟ್‌ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Google Play Store is the largest app store for Android apps and games, which acts as a giant hotspot for all the Android users. Well, Google Play Store can be frustrating when it comes to errors. Every, Android smartphone users may have issues while downloading or purchasing from the Google Play Store.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot