Subscribe to Gizbot

14444 ಕ್ಕೆ ಫ್ರೀ ಕಾಲ್ ಮಾಡಿ... ಡಿಜಿಟಲ್ ವ್ಯವಹಾರದ ಬಗ್ಗೆ ತಿಳಿಯಿರಿ!.

Written By:

ಡಿಜಿಟಲ್ ವ್ಯವಹಾರದ ಬಗ್ಗೆ ಮಾಹಿತಿ ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಟೋಲ್ ಫ್ರೀ ಸಹಾಯವಾಣಿ ನಂಬರ್‌ ತೆರೆದಿದೆ. ಇನ್ನು 14444 ನಂಬರ್‌ಗೆ ಕರೆಮಾಡುವ ಮೂಲಕ ಡಿಜಿಟಲ್ ವ್ಯವಹಾರದ ಎಲ್ಲಾ ಮಾಹಿತಿಗಳನ್ನು ಉಚಿತ ಕರೆಯಲ್ಲಿ ಪಡೆಯಬಹುದಾಗಿದೆ.

ಶುಕ್ರವಾರವಷ್ಟೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ "ಡಿಜಿಶಾಲ" ಎನ್ನುವ ಟಿವಿ ಚಾನಲ್ ಮತ್ತು ಕ್ಯಾಶ್‌ಲೆಸ್‌ ಇಂಡಿಯಾ (CashlessIndia) ಎನ್ನುವ ವೆಬ್‌ಸೈಟ್‌ ಒಂದನ್ನು ಬಿಡುಗಡೆ ಮಾಡಿದ್ದು, ಭಾರತದ ಪ್ರತಿಯೊಬ್ಬ ವ್ಯಕ್ತಿಗೂ ಡಿಜಿಟಲ್ ವ್ಯವಹಾರದ ಬಗ್ಗೆ ಜ್ಞಾನ ಮೂಡಿಸಬೇಕು ಎಂದು ಇದೀಗ ಟೋಲ್‌ ಫ್ರೀ ನಂಬರ್ ನೀಡಿದೆ.

14444 ಕ್ಕೆ ಫ್ರೀ ಕಾಲ್ ಮಾಡಿ... ಡಿಜಿಟಲ್ ವ್ಯವಹಾರದ ಬಗ್ಗೆ ತಿಳಿಯಿರಿ!.

ಜಿಯೋಗಿಂತಲೂ ಏರ್‌ಟೆಲ್ ಆಫರ್ ಬೆಸ್ಟ್!! ಯಾಕೆ ಗೊತ್ತಾ?

ಡಿಜಿಟಲ್ ವ್ಯವಹಾರದ ಬಗ್ಗೆ ಜಾಗೃತಿ ಮೂಡಿಸಲು ಟಿವಿ ಚಾನೆಲ್ ಮತ್ತು ವೆಬ್‌ಸೈಟ್‌ ತೆರೆದಿದ್ದು, ಇದೀಗ ಟೋಲ್‌ ಫ್ರೀ ನಂಬರ್ ಒದಗಿಸಿ ಕಾಲ್‌ ಸೆಂಟರ್ ಸಹಾಯವಾಣಿ ಮೂಲಕ ಪ್ರತಿಯೊರ್ವರೂ ಡಿಜಿಟಲ್ ವ್ಯವಹಾರದ ಸೇವೆ ಪಡೆಯುವಂತಾಗಬೇಕು ಎಂದು ಕೇಂದ್ರ ಸರ್ಕಾರದ ಅಧೀನ ಸಂಸ್ಥೆ ಸಾಫ್ಟವೇರ್ ಮತ್ತು ಸರ್ವಿಸ್ ಕಂಪಿನಿ ಅಸೋಷಿಯೇಷನ್ ಅಧ್ಯಕ್ಷ ಆರ್ ಚಂದ್ರಶೇಖರನ್ ಹೇಳಿದ್ದಾರೆ.

14444 ಕ್ಕೆ ಫ್ರೀ ಕಾಲ್ ಮಾಡಿ... ಡಿಜಿಟಲ್ ವ್ಯವಹಾರದ ಬಗ್ಗೆ ತಿಳಿಯಿರಿ!.

ನಗದು ಹಣ ಮುಕ್ತ ಅಭಿಯನದ ಫ್ರೀ ಟೋಲ್‌ ನಂಬರ್‌ ಲಾಂಚಿಂಗ್ ಮುಂದಿನ ವಾರದಲ್ಲಿ ಆಗುತ್ತದೆ ಎಂದು ಚಂದ್ರಶೇಖರನ್ ತಿಳಿಸಿದ್ದು, ಡಿಜಿಟಲ್ ಪೆಮೆಂಟ್ ಬಗ್ಗೆ ಜನರಿಗೆ ಅರಿವು ಮೂಡಿಸುವ ದಿನಗಳು ತುಂಬಾ ದೂರವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

14444 ಕ್ಕೆ ಫ್ರೀ ಕಾಲ್ ಮಾಡಿ... ಡಿಜಿಟಲ್ ವ್ಯವಹಾರದ ಬಗ್ಗೆ ತಿಳಿಯಿರಿ!.

ಇನ್ನು 1000 ಮತ್ತು 500 ರೂ ನೊಟುಗಳು ರದ್ದಾದ ನಂತರ ಭಾರತದಲ್ಲಿ ಡಿಜಿಟಲ್ ವ್ಯವಹಾರ ಶೇ 400 ರಿಂದ 1000 ಪಟ್ಟು ಹೆಚ್ಚಾಗಿದೆ ಎಂದು ಐಟಿ ಮತ್ತು ಲಾ ಸಚಿವರಾಗಿರುವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
A nation-wide 14444 helpline number will be operational soon for digital payments.to Know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot