ಸತತ ಆರು ಗಂಟೆಗಳ ಕಾಲ 'ಪಬ್‌ಜಿ' ಗೇಮ್ ಆಡಿದ ಬಾಲಕ ಸಾವು!
ಸತತ ಆರು ಗಂಟೆಗಳ ಕಾಲ ಪಬ್‌ಜಿ ಗೇಮ್ ಆಡಿ 16 ವರ್ಷದ ಬಾಲಕಯೋರ್ವ ಹೃದಯಾಘಾತದಿಂದ ನಿಧನರಾಗಿರುವ ಆಘಾತಕಾರಿ ಸುದ್ದಿ ಮಧ್ಯಪ್ರದೇಶದ ನೀಮುಚ್ ನಗರದಲ್ಲಿ ವರದಿಯಾಗಿದೆ. ಸತತವಾಗಿ 6 ಗಂಟೆಗಳ ಕಾಲ ಪಬ್‌ಜಿ ಆಟವಾಡಿದ್ದ ಕಾರಣ ಹೃದಯಾಘಾತಕ್ಕೊಳಗಾಗಿ 'ಫುರ್ಕಾನ್ ಖುರೇಷಿ' ಎಂಬ ಹದಿಹರೆಯದ ಯುವಕನೋರ್ವ ಸಾವನಪ್ಪಿದ್ದಾನೆ.
ಹೌದು, ಮೇ 28ರಂದು ಈ ಘಟನೆ ನಡೆದಿದ್ದು, ಫುರ್ಕಾನ್ ಹಾಗೂ ಅವನ ಕುಟುಂಬವು ಸಂಬಂಧಿಕರ ಮದುವೆಗೆ ಹೋಗಿದ್ದರು. ಆದರೆ, ಪಬ್‌ಜಿ ವ್ಯಸನಿಯಾಗಿದ್ದ ಫುರ್ಕಾನ್ ಊಟವಾದ ತಕ್ಷಣ ಆಟವಾಡುವುದರಲ್ಲಿ ತಲ್ಲೀನನಾಗಿದ್ದ. ಈ ವೇಳೆಯಲ್ಲಿ ಇದ್ದಕ್ಕಿದ್ದಂತೆ ಜೋರಾಗಿ ಕೂಗಲು ಆರಂಭಿಸಿದ ನಂತರ ಕುಸಿದು ಬಿದ್ದ ಎಂದು ಬಾಲಕನ ತಂದೆ ಮಾಧ್ಯಮಗಳಿಗೆ ಹೇಳಿದ್ದಾರೆ.

ಆತ ಕುಸಿದುಬಿದ್ದ ನಂತರ ಕುಟುಂಬದವರು ಅವನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆ ವೇಳೆಗೆ ಆತ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿರುವ ವೈದ್ಯರು, ವೀಡಿಯೋ ಗೇಮ್‌ನ ಉತ್ಸಾಹದಿಂದ ಅಡ್ರಿನಲಿನ್ ಜಾಸ್ತಿ ಆಗಿ ಹೃದಯದ ಬಡಿತ ಹೆಚ್ಚಾಗಿ ಕಾರ್ಡಿಯಾಕ್ ಅರೆಸ್ಟ್ ಉಂಟಾಗಿರಬಹುದು ಎಂದು ಹೇಳಿದ್ದಾರೆ.
ಇನ್ನು ಮೃತಪಟ್ಟ ಫುರ್ಕಾನ್ ಒಂದು ದಿನದಲ್ಲಿ 18 ಗಂಟೆಯವರೆಗೂ ಪಬ್‌ಜಿ ಆಟವಾಡಿದ್ದ. ಆತ ಸಾಕಷ್ಟು ಗೇಮ್ ವ್ಯಸನಿಯಾಗಿದ್ದ ಎಂದು ಫುರ್ಕಾನ್ ಸೋದರ ಮೊಹಮ್ಮದ್ ಹಷೀಮ್ ತಿಳಿಸಿದ್ದಾನೆ. ಆತ ಸಾವನ್ನಪ್ಪುವ ಮುನ್ನ ಪಬ್‌ಜಿ ಆಟದಲ್ಲಿ ಸೋತಿದ್ದಕ್ಕೆ ತೀವ್ರ ಬೇಸರಗೊಂಡು ಕಿರುಚಿಕೊಂಡಿದ್ದಾನೆ ಎಂದು ಸಹ ಆತನ ಸಹೋದರಿ ಹೇಳಿರುವುದು ಸಹ ವರದಿಯಾಗಿದೆ.

ಆತ ಬ್ಲಾಸ್ಟ್ ಮಾಡು, ಬ್ಲಾಸ್ಟ್ ಮಾಡು ಎಂದು ಇದ್ದಕ್ಕಿದ್ದಂತೆ ಕೂಗುತ್ತಿದ್ದ. ಬಳಿಕ, ಇಯರ್ ಫೋನ್ ತೆಗೆದು ಮೊಬೈಲ್ ಫೋನ್ ಬಿಸಾಕಿ ಅಳಲು ಆರಂಭಿಸಿದ. ಜತೆಗೆ, ಅಯಾನ್, ನಾನು ನಿನ್ನ ಜತೆಗೆ ಆಟವಾಡುವುದಿಲ್ಲ. ನೀನು ನನ್ನನ್ನು ಸೋಲಿಸಿದೆ ಎಂದು ಹೇಳುತ್ತಿದ್ದ. ಇದರಿಂದ ಮನನೊಂದು ಆತನ ಹೃದಯದ ಬಡಿತ ನಿಂತಿರಬಹುದು ಎಂದು ಫುರ್ಕಾನ್ ಸಹೋದರಿ ಹೇಳಿದ್ದಾರೆ.
ಒದಿರಿ: ಸ್ವಂತ ಮನೆ ಕನಸು ಕಂಡಿದ್ದ ತಾಯಿಗೆ ಬಂಗಲೆಯನ್ನೇ ಕಟ್ಟಿಸಿದ ಈತನ ಸಾಧನೆ ಅಮೋಘ!!


Click it and Unblock the Notifications








