ಸ್ವಂತ ಮನೆ ಕನಸು ಕಂಡಿದ್ದ ತಾಯಿಗೆ ಬಂಗಲೆಯನ್ನೇ ಕಟ್ಟಿಸಿದ ಈತನ ಸಾಧನೆ ಅಮೋಘ!!

|

ಒಂದು ಚಿಕ್ಕ ಕಚೇರಿ, ಮೂವರು ಸಿಬ್ಬಂದಿಗಳ ಜೊತೆ ಒಂದು ಲಕ್ಷ ರೂಪಾಯಿ ಬಂಡವಾಳದೊಂದಿಗೆ ಆರಂಭವಾದ ಒಂದು ಉದ್ಯಮದ ಇಂದಿನ ವಾರ್ಷಿಕ ಆದಾಯ 1.2 ಮಿಲಿಯನ್ ಅಮೆರಿಕನ್ ಡಾಲರ್ (8.37 ಕೋಟಿ) ಎಂದರೆ ಯಾವುದೋ ಪಾಶ್ಚಾತ್ಯ ದೇಶದ ಕಂಪೆನಿ ಎಂದು ನೀವಂದುಕೊಳ್ಳಬಹುದು. ಆದರೆ, ಚೆನ್ನೈನ ಸ್ಲಂ ಒಂದರಲ್ಲಿ ಬಡ ಕುಟುಂಬದಿಂದ ಬಂದ ಯುವಕನೋರ್ವ ಹಣಬಲ, ಜನಬಲ ಇಲ್ಲದೆ ತನ್ನ ಸ್ವಂತ ಶ್ರಮದಿಂದಲೇ 15 ಸಾವಿರ ಜನರಿಗೆ ನೌಕರಿ ನೀಡುವಂತಹ ಕಂಪೆನಿ ಕಟ್ಟಿದ ಕಥೆ ನಿಮಗೆ ತಿಳಿಯದೇ ಇರಬಹುದು.!

ಹೌದು, ನಿಮಗೆ ಫುಡ್ ಕಿಂಗ್ ಕೆಟರಿಂಗ್ ಸರ್ವಿಸ್ ಪ್ರೈ. ಲಿಮಿಟೆಡ್ ಎಂಬ ಕಂಪೆನಿ ಹೆಸರು ತಿಳಿದಿರಬಹುದು. ಚೆನ್ನೈ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಬೀಡುಬಿಟ್ಟಿರುವ ಈ ಫುಡ್ ಕಿಂಗ್ ಕೆಟರಿಂಗ್ ಸರ್ವಿಸ್ ಪ್ರೈ. ಲಿಮಿಟೆಡ್ ಕಂಪೆನಿಯ ಇಂದಿನ ಮಾರುಕಟ್ಟೆ ಮೌಲ್ಯ ನೂರಾರೂ ಕೋಟಿಗೂ ಹೆಚ್ಚು. ಆದರೆ, ಈ ಕಂಪೆನಿ ಶುರು ಮಾಡಿದ ಯುವಕನು ತನ್ನ ಜೀವನದ ಮೊದಲ ಘಟ್ಟದಲ್ಲಿ ಶಾಲೆಗೆ ಹೋಗುವ ಮುನ್ನ ಇಡ್ಲಿ ಮಾರಾಟ ಮಾಡಿ ಹೋಗುತ್ತಿದ್ದ. ಕಾಲೇಜಿನ ಮಟ್ಟಲು ಹತ್ತಿದ ನಂತರ ಫೀಸ್ ಗಾಗಿ ಬುಕ್ ಬೈಂಡಿಂಗ್ ಹಾಕಿ ಹಣ ಸಂಪಾದಿಸುತ್ತಿದ್ದ.!

ಸ್ವಂತ ಮನೆ ಕನಸು ಕಂಡಿದ್ದ ತಾಯಿಗೆ ಬಂಗಲೆಯನ್ನೇ ಕಟ್ಟಿಸಿದ ಈತನ ಸಾಧನೆ ಅಮೋಘ!!

ಇಷ್ಟು ವಿಷಯಗಳನ್ನು ಕೇಳಿದ ನಂತರ ನಿಮಗೆ ಆತನ ಮೇಲೆ ಕುತೋಹಲ ಹೆಚ್ಚಿರಬಹುದು. ಆತ ಈಗ ಏನು ಮಾಡುತ್ತಿದ್ದಾನೆ?, ಆತ ಬೆಳೆದುಬಂದದ್ದು ಹೇಗೆ?, ಆತ ತನ್ನದೇ ಬ್ಯುಸಿನೆಸ್ ಶುರುಮಾಡಿದ್ದು ಹೇಗೆ ಎಂಬ ಎಲ್ಲಾ ಪ್ರಶ್ನೆಗಳು ನಿಮ್ಮ ತಲೆಗೆ ಹೊಕ್ಕಿರಬಹುದು. ಆ ಎಲ್ಲಾ ಪ್ರಶ್ನೆಗೆ ಉತ್ತರವೇ ಚೆನ್ನೈನ ಈ 'ಶರತ್ ಬಾಬು' ಎಂಬ ಯುವಕ. ಹೌದು, ಈಗ 39ರ ಹರೆಯದ ಶರತ್ ಇಂದು ಯಶಸ್ವಿಯಾಗಿ ಬೆಳೆದು ನಿಂತಿದ್ದಾರೆ. ಆದರೆ, ಆತನ ಜೀವನದ ಕಥೆ ಮಾತ್ರ ಈಗಲೂ ಹಸಿಹಸಿಯಾಗಿ ಕೋಟ್ಯಾಂತರ ಜನರ ಮನಸ್ಸಿಗೆ ನಾಟುವಂತಿದೆ.

ಬಡತನದಲ್ಲೇ ಹುಟ್ಟಿತ್ತು ಆ ಪ್ರತಿಭೆ!

ಬಡತನದಲ್ಲೇ ಹುಟ್ಟಿತ್ತು ಆ ಪ್ರತಿಭೆ!

ಇಂದು ಕೋಟಿ ಕೋಟಿ ಸಂಪಾದಿಸಿರುವ ಈ ಶರತ್ ಬಾಬು ಹುಟ್ಟಿದ್ದು ಚೆನ್ನೈನ ಮಡಿಪಾಕ್ಕಂ ಕೊಳಗೇರಿಯಲ್ಲಿ . ಇಬ್ಬರು ಅಕ್ಕಂದಿರು ಮತ್ತು ಇಬ್ಬರು ಸಹೋದರರು ಇದ್ದ ಆತನ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದು ಶರತ್ ಬಾಬು ತಾಯಿ ಮಾತ್ರ. ದಿನಗೂಲಿಯಲ್ಲಿ ಐದು ಮಕ್ಕಳನ್ನು ಆ ತಾಯಿ ಸಾಕುತ್ತಿದ್ದರು ಎಂದರೆ ನೀವು ನಂಬಲೇಬೇಕು. ಇದಾದ ನಂತರ ಶಾಲೆಯಲ್ಲಿ 30 ರೂಪಾಯಿ ಸಂಬಳದ ಬಿಸಿಯೂಟ ಅಡುಗೆ ಕೆಲಸದ ಜೊತೆಗೆ ಇಡ್ಲಿ ಮಾರಾಟ ಮಾಡಿ ಮಗನನ್ನು ಐಐಎಂ ಪದವೀಧರನನ್ನಾಗಿ ಮಾಡಿದಳು ಆ ಮಹಾತಾಯಿ.!

ಹೆಣ್ಣೊಂದು ಕಲಿತರೆ ಏನಾಗಬಹದು?

ಹೆಣ್ಣೊಂದು ಕಲಿತರೆ ಏನಾಗಬಹದು?

ಅಡುಗೆ ಕೆಲಸದ ಜೊತೆಗೆ ಇಡ್ಲೀ ಮಾರಾಟ ಮಾಡಿ ಮಗನನ್ನು ಐಐಎಂ ಪದವೀಧರನನ್ನಾಗಿ ಮಾಡಿದಳು ಆ ಮಹಾತಾಯಿ ಎಂದಾಗ ನೀವು ನಂಬದೇ ಇರಬಹುದು. ಪ್ರತಿಭೆಯಿಂದ ಆತ ಇಷ್ಟು ಎತ್ತರಕ್ಕೆ ಬೆಳೆದಿರಬಹುದು ಎಂದು ಅನಿಸಬಹುದು. ಆದರೆ, ನಿಮಗೆ ಗೊತ್ತಾ?,ಇಡ್ಲಿ ಮಾರಾಟ ಮಾಡಿ, ಬಳಿಕ ಮಕ್ಕಳಿಗೆ ಬಿಸಿಯೂಟ ತಯಾರಿಸಿದ ನಂತರ ಸಂಜೆ ವಯಸ್ಕರ ಶಿಕ್ಷಣದ ತರಗತಿಗೆ ಆತನ ತಾಯಿ ಹಾಜರಾಗುತ್ತಿದ್ದರಂತೆ. ಇದರಿಂದ ಮಕ್ಕಳು ಕೂಡ ಶಾಲೆಗೆ ಹೋಗುವಂತಾಯಿತಂತೆ. ಹೆಣ್ಣೊಂದು ಕಲಿತರೆ ಏನಾಗಬಹದು ಎಂಬುದಕ್ಕೆ ಇದು ಉದಾಹರಣೆ.

ಇಡ್ಲಿ ಮಾರಾಟ ಮಾಡಿ ಶಾಲೆಗೆ ಹೋಗುತ್ತಿದ್ದ!

ಇಡ್ಲಿ ಮಾರಾಟ ಮಾಡಿ ಶಾಲೆಗೆ ಹೋಗುತ್ತಿದ್ದ!

ಬೆಳಗ್ಗೆ ಇಡ್ಲಿ ಮಾರಾಟ ಮಾಡೋದು. ಬಳಿಕ ಶಾಲೆಗೆ ಹೋಗಿ ಮಕ್ಕಳಿಗೆ ಬಿಸಿಯೂಟ ತಯಾರಿಸುವುದು ತಾಯಿಕೆ ಕೆಲಸವಾದರೆ, ಆಕೆಯ ಜೊತೆಗೆ ಈ ಶರತ್ ಬಾಬು ಸೇರಿದಂತೆ ಆತನ ಎಲ್ಲಾ ಸಹೋದರರು ಇಡ್ಲಿ ಮಾರಾಟ ಮಾಡಿ ಶಾಲೆಗೆ ಹೋಗುತ್ತಿದ್ದ. ಸ್ಲಂನಲ್ಲಿ ವಾಸಿಸುವ ಜನ ಮನೆಯಿಂದ ಹೊರಗೆ ಬರುತ್ತಿರಲಿಲ್ಲವಾದ್ದರಿಂದ ಅಲ್ಲಿನ ಮನೆ, ಮನೆಗೆ ಇಡ್ಲಿ ಮಾರಾಟ ಮಾಡಿ ಜೀವನ ಸಾಗಿಸುವುದು ಅವರ ನಿತ್ಯದ ಕಾಯಕವಾಗಿತ್ತು. ಹೀಗೇ ಕಷ್ಟದಲ್ಲೇ ಬೆಳೆದರೂ ಸಹ ತಾಯಿಯ ಮಾತುಗಳಿಂದ ಪ್ರಭಾವಿತನಾಗಿ ಶರತ್ ಬಾಬು ಓದಿನತ್ತ ಗಮನಹರಿಸಿದ.

ಶಾಲೆಯಲ್ಲಿ ಪ್ರತಿಭಾವಂತ ಶರತ್ ಬಾಬು!

ಶಾಲೆಯಲ್ಲಿ ಪ್ರತಿಭಾವಂತ ಶರತ್ ಬಾಬು!

ತಾಯಿಯ ಮಾತುಗಳಿಂದ ಪ್ರಭಾವಿತನಾಗಿದ್ದ ಶರತ್ ಬಾಬು ಕಷ್ಟಪಟ್ಟು ಓದುತ್ತಿದ್ದ. ಈತನಿಗೆ ಮನೆಯ ಸದಸ್ಯರು ಕೂಡ ಸಹಾಯ ಮಾಡಿದರು. ಅದಕ್ಕೆ ಪ್ರತಿಫಲ ಎಂಬಂತೆ ಪ್ರಾಥಮಿಕ ವಿದ್ಯಾಭ್ಯಾಸದಲ್ಲಿಯೇ ಶರತ್ ಟಾಪರ್ ಬಾಬು ಪ್ರತಿಭಾವಂತನಾಗಿ ಎಲ್ಲದರಲ್ಲಿಯೂ ಫಸ್ಟ್ ಬರುತ್ತಿದ್ದ. ಎಸ್ಸೆಸ್ಸೆಲ್ಸಿಯಲ್ಲಿ ಶರತ್ ಟಾಪರ್ ಆಗಿದ್ದ ಶರತ್ ದ್ವಿತೀಯ ಪಿಯುಸಿ ಶಿಕ್ಷಣ ಪಡೆಯುವಾಗ ಆರ್ಥಿಕವಾಗಿ ಬಹಳ ಕಷ್ಟಟ್ಟಿದ್ದ. ಕಾಲೇಜಿನ ಫೀಸ್ ಗಾಗಿ ಶರತ್ ಬುಕ್ ಬೈಂಡಿಂಗ್ ಹಾಕಿ ಹಣ ಸಂಪಾದಿಸಿದ ಆತ ಅಲ್ಲಿಯೂ ಟಾಪರ್ ಆಗಿ ಹೊರಹೊಮ್ಮಿದ.

ಪ್ರೇರಣೆಯಿಂದ BITSಗೆ ಹೊರಟ ಶರತ್ ಬಾಬು!

ಪ್ರೇರಣೆಯಿಂದ BITSಗೆ ಹೊರಟ ಶರತ್ ಬಾಬು!

ಹೀಗೆ ದ್ವಿತೀಯ ಪಿಯುಸಿಯಲ್ಲಿ ಶರತ್ ಟಾಪರ್ ಆದ ನಂತರ ಆತನ ಗೆಳೆಯರೆಲ್ಲ ರಾಜಸ್ಥಾನದ ಪಿಳಾನಿಯಲ್ಲಿರುವ ಬಿರ್ಲಾ ಇನ್ಸ್‌ಟ್ಯೂಟ್ (BITS) ಸೇರುವಂತೆ ಒತ್ತಾಯಿಸಿದ್ದರು. ಅವರ ಮಾತು ಕೇಳಿ ಅರ್ಜಿ ಸಲ್ಲಿಸಿದ ಶರತ್‌ಗೆ ಸುಲಭವಾಗಿ ಬಿರ್ಲಾ ಇನ್ಸ್ ಟ್ಯೂಟ್ ಆಫ್ ಟೆಕ್ನಾಜಲಿ ಅಂಡ್ ಸೈನ್ಸ್‌ನಲ್ಲಿ ಪ್ರವೇಶ ಸಿಕ್ಕಿತ್ತು. ಆದರೆ, ಇಲ್ಲಿ ಹುಟ್ಟಿದ್ದು ಮತ್ತದೇ ಹಣದ ಸಮಸ್ಯೆ.! BITS ಸೇರಲು ಬೇಕಾಗಿದ್ದ ಫೀಸ್ 28ಸಾವಿರ. ಈ ಸಂದರ್ಭದಲ್ಲಿ ಯಾರೊಬ್ಬರೂ ಸಹಾಯ ನೀಡದ ಆತನಿಗೆ ಸಹಾಯವಾಗಿದ್ದು ಆತನ ಕುಟುಂಬವೇ.

21ನೇ ವಯಸ್ಸಿಗೆ ಕೋಟ್ಯಾಧೀಶ್ವರ; ಸ್ವಂತ ಮನೆ, ಬಿಎಂಡಬ್ಲೂ ಒಡೆಯನಾದ ಬಡ ಯುವಕನ ಯಶೋಗಾಥೆ!!21ನೇ ವಯಸ್ಸಿಗೆ ಕೋಟ್ಯಾಧೀಶ್ವರ; ಸ್ವಂತ ಮನೆ, ಬಿಎಂಡಬ್ಲೂ ಒಡೆಯನಾದ ಬಡ ಯುವಕನ ಯಶೋಗಾಥೆ!!

ತನ್ನ ಒಡವೆ ಅಡವಿಟ್ಟು ಹಣ ಕೊಟ್ಟ ಅಕ್ಕ!

ತನ್ನ ಒಡವೆ ಅಡವಿಟ್ಟು ಹಣ ಕೊಟ್ಟ ಅಕ್ಕ!

BITS ಸೇರಲು ಬೇಕಾಗಿದ್ದ ಹಣ ಹೊಂದಿಸಲು ಶರತ್ ಬಾಬು ತಾಯಿ ಮತ್ತು ಅಕ್ಕಂದಿರು ಸೇರಿ ಬಹಳ ಪ್ರಯತ್ನಿಸಿದರು. ಒಬ್ಬಳು ಅಕ್ಕ ತನ್ನ ಚಿನ್ನದ ಒಡವೆ ಅಡವಿಟ್ಟು 42 ಸಾವಿರ ರೂಪಾಯಿ ಕೊಟ್ಟಿದ್ದರಂತೆ. ಈ ಸಮಯದಲ್ಲಿ ಸ್ಕಾಲರ್ ಶಿಪ್ ಸಿಕ್ಕಿದ್ದು ಶರತ್ ಬಾಬುಗೆ ಸಹಾಯವಾಗಿದೆ. ಸ್ಕಾಲರ್ಶಿಪ್ನಿಂದ ಟ್ಯೂಷನ್ ಫೀ ಕಟ್ಟಿಕೊಂಡು ಓದಿದ ಶರತ್ ಬಾಬು ಹಾಸ್ಟೆಲ್ ಮತ್ತು ಊಟಕ್ಕೆ ಚಿಂತೆಪಡುತ್ತಿದ್ದರಂತೆ. ಹೀಗೆ ಕುಟುಂಬದ ಸಾಲ್ಪಸ್ವಲ್ಪ ಸಹಾಯ ಮತ್ತು ಆತನ ಗೆಳೆಯರ ಬಳಿ ಮತ್ತೆ ಹೇಗೋ ಸಾಲ ಮಾಡಿ ಶಿಕ್ಷಣ ಪೂರೈಸಿದರಂತೆ.

ಆನ್‌ಲೈನ್‌ ಹಣ ವಹಿವಾಟು ನಡೆಸುವವರಿಗೆ ಭರ್ಜರಿ ಸಿಹಿಸುದ್ದಿ!ಆನ್‌ಲೈನ್‌ ಹಣ ವಹಿವಾಟು ನಡೆಸುವವರಿಗೆ ಭರ್ಜರಿ ಸಿಹಿಸುದ್ದಿ!

ಪೋಲಾರಿಸ್ ಇಂಡಸ್ಟ್ರಿಯಲ್ಲಿ ಶರತ್ಗೆ ಕೆಲಸ

ಪೋಲಾರಿಸ್ ಇಂಡಸ್ಟ್ರಿಯಲ್ಲಿ ಶರತ್ಗೆ ಕೆಲಸ

ಇಂಜಿನಿಯರ್ ಆಗುವ ಕನಸು ಕಾಣಲು ಹೋಗದ ಶರತ್ ಗೆ ತಾನು ಕಷ್ಟಪಟ್ಟು ಓದಿ ಒಳ್ಳೆ ಕೆಲಸಕ್ಕೆ ಸೇರಬೇಕೆಂಬುದು ಮಾತ್ರ ಗುರಿಯಾಗಿತ್ತು. ಅದಕ್ಕೆ ಕಾರಣ ತಾಯಿ ತಮಗಾಗಿ ಕಷ್ಟಪಟ್ಟಿದ್ದಾಳೆ. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಹಂಬಲ ಶರತ್ ಬಾಬುದ್ದಾಗಿತ್ತು. ಇದೇ ಸಮಯದಲ್ಲಿ ಪೋಲಾರಿಸ್ ಇಂಡಸ್ಟ್ರಿಯಲ್ಲಿ ಶರತ್ಗೆ ಕೆಲಸ ಸಿಗುತ್ತದೆ. ಎರಡು ವರ್ಷ ದುಡಿದು ಈ ಕೆಲಸದ ಸಹಾಯದಿಂದ ಮನೆಯ ಸಾಲವನ್ನು ತೀರಿಸಿದ ಶರತ್‌ಬಾಬು, ಮೂರನೇ ಬಾರಿ ಸಿಎಟಿ ಪಾಸ್ ಮಾಡಿ ಅಹ್ಮದಾಬಾದ್ ನಲ್ಲಿ ಐಐಎಂಗೆ ಪ್ರವೇಶ ಪಡೆದುಬಿಟ್ಟ.!

ವಿಶ್ವದ ದೈತ್ಯ ಕಂಪನಿಗಳಿಗೆ ಸೆಡ್ಡುಹೊಡೆದ ಬೈರೇಗೌಡ ತಯಾರಿಸಿದ್ದು ಅಂತಿಂಥ ವಾಹನವಲ್ಲ!!ವಿಶ್ವದ ದೈತ್ಯ ಕಂಪನಿಗಳಿಗೆ ಸೆಡ್ಡುಹೊಡೆದ ಬೈರೇಗೌಡ ತಯಾರಿಸಿದ್ದು ಅಂತಿಂಥ ವಾಹನವಲ್ಲ!!

ಮತ್ತೊಮ್ಮೆ ಬದಲಾಯಿತು ಶರತ್ ಜಿವನ!

ಮತ್ತೊಮ್ಮೆ ಬದಲಾಯಿತು ಶರತ್ ಜಿವನ!

ಶರತ್ ಬಾಬು ಅಹ್ಮದಾಬಾದ್ ನಲ್ಲಿ ಐಐಎಂಗೆ ಪ್ರವೇಶ ಪಡೆದ ನಂತರ ಆದನ ಬದುಕಿನಲ್ಲಿ ಮತ್ತೊಂದು ತಿರುವು ಸಿಗುತ್ತದೆ. ಐಐಎಂನಲ್ಲೇ ಓದುತ್ತಿರುವಾಗಲೇ ಕೈತುಂಬಾ ಸಂಬಳದ ಹಲವಾರು ಉದ್ಯೋಗದ ಆಫರ್ ಗಳು ಬರಲು ಶುರುವಾದವಂತೆ. ಆ ಸಮಯದಲ್ಲೇ ವರ್ಷಕ್ಕೆ 8 ಲಕ್ಷ ರೂಪಾಯಿ ಸಂಬಳದ ಆಫರ್ ಬಂದಾಗ ಆ ಕೆಲಸ ಮಾಡಬೇಕೆ ಎಂಬ ಗೊಂದಲ ಉಂಟಾಗಿತ್ತಂತೆ ಶರತ್‌ಗೆ.! ಏಕೆಂದರೆ ಅಲ್ಲಿ ಓದುವಾಗಲೇ ಆತನ ಮನಸ್ಸು ತನ್ನದೇ ಸ್ವಂತ ಕಂಪೆನಿ ಶುರುಮಾಡುವತ್ತ ಹೆಜ್ಜೆ ಹಾಕುತ್ತದೆ.

ಲಕ್ಷ ರೂ. ಬಂಡವಾಳದಲ್ಲಿ ಕಂಪೆನಿ ಆರಂಭ!

ಲಕ್ಷ ರೂ. ಬಂಡವಾಳದಲ್ಲಿ ಕಂಪೆನಿ ಆರಂಭ!

ತನ್ನ 27 ವಯಸ್ಸಿಗೆ ಐಐಎಂ ಪದವೀಧರನಾದ ಶರತ್ ಬಾಬು, ಮೊದಲೇ ಹೇಳಿದಂತೆ ಒಂದು ಚಿಕ್ಕ ಕಚೇರಿ, ಮೂವರು ಸಿಬ್ಬಂದಿಗಳ ಜೊತೆ ಒಂದು ಲಕ್ಷ ರೂಪಾಯಿ ಬಂಡವಾಳದೊಂದಿಗೆ ಫುಡ್ ಕಿಂಗ್ ಕೆಟರಿಂಗ್ ಸರ್ವಿಸ್ ಪ್ರೈ. ಲಿಮಿಟೆಡ ಎಂಬ ತನ್ನ ಮೊದಲ ಕಂಪೆನಿಯನ್ನು ಆರಂಬಿಸುತ್ತಾರೆ. ಅಹ್ಮದಾಬಾದ್‌ನ ಸಾಫ್ಟ್ ವೇರ್ ಕಂಪನಿಯೊಂದರಿಂದ ಮೊದಲ ಬಾರಿ ಆರ್ಡರ್ ಪಡೆಯುತ್ತಾರೆ. ನಂತರ ಅಹ್ಮದಾಬಾದ್ ಐಐಎಂ ಕೂಡ ಆರ್ಡರ್ ನೀಡಿದಾಗ ಸಾಲ ಪಡೆದುಕೊಂಡು ದೊಡ್ಡ ಆಫಿಸ್ ತೆರೆಯುತ್ತಾರೆ. ಈಗ ಆ ಆಫಿಸ್ ಎಷ್ಟು ಬೆಳೆದು ನಿಂತಿದೆ ಎಂದರೆ 39ರ ಹರೆಯದ ಶರತ್ ಜೊತೆ 15 ಸಾವಿರ ಮಂದಿ ದುಡಿಯುತ್ತಿದ್ದಾರೆ. ಅವರ ವಾರ್ಷಿಕ ಆದಾಯ 1.2 ಮಿಲಿಯನ್ ಅಮೆರಿಕನ್ ಡಾಲರ್ ಆಗಿವೆ.

ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಬಗ್ಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಸತ್ಯ ಸಂಗತಿಗಳಿವು!!ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಬಗ್ಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಸತ್ಯ ಸಂಗತಿಗಳಿವು!!

ಬಡತನವೇ ಕಿಚ್ಚುಹಚ್ಚಿತು ಆತನ ಬದುಕಿದೆ.

ಬಡತನವೇ ಕಿಚ್ಚುಹಚ್ಚಿತು ಆತನ ಬದುಕಿದೆ.

ಶರತ್ ಬಾಬು ಬಡ ಕುಟುಂಬದಿಂದ ಬಂದ ಯುವಕ, ಹಣಬಲ, ಜನಬಲ ಇಲ್ಲದೆ ತನ್ನ ಸ್ವಂತ ಶ್ರಮದಿಂದಲೇ ಓದಿ, ಕೊನೆಗೂ ತನ್ನ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಟೀ, ಕಾಫಿ, ಸ್ನ್ಯಾಕ್ಸ್ ಅನ್ನು ಸರಬರಾಜು ಮಾಡುವುದರಿಂದ ಶುರುಮಾಡಿದ ಅವರು ಇಂದು ತನ್ನವರಿಗೆ ಎಲ್ಲವನ್ನೂ ಮಾಡಿಕೊಟ್ಟಿದ್ದಾರೆ. ಮಗ ಇಂಜಿನಿಯರ್ ಆಗುವ ಕನಸು ನನಸಾಗುವುದನ್ನೇ ಕಾಯುತ್ತಿದ್ದ ತಾಯಿಗೆ ಉದ್ಯಮಿಯಾಗಿ ಬೆಳೆದುತೋರಿಸಿದ್ದಾರೆ. ತನ್ನದೇ ಒಂದು ಒಳ್ಳೆ ಮನೆ ಕಟ್ಟಿಸಬೇಕೆಂಬ ಕನಸು ಹೊತ್ತಿದ್ದ ಆತನ ತಾಯಿ ಇಂದು ಐಶಾರಾಮಿ ಬಂಗಲೆಯಲ್ಲಿ ಬದುಕುತ್ತಿದ್ದಾರೆ.

ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಬಗ್ಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಸತ್ಯ ಸಂಗತಿಗಳಿವು!!

ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಬಗ್ಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಸತ್ಯ ಸಂಗತಿಗಳಿವು!!

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಬಗ್ಗೆ ಯಾರಿಗೆ ಗೊತ್ತಿಲ್ಲಾ ಹೇಳಿ.? ಅದರಲ್ಲಿಯೂ ಟೆಲಿಕಾಂ ಕಂಪೆನಿ ಜಿಯೋ ವನ್ನು ಶುರುಮಾಡಿದ ನಂತರವಂತೂ, ಪ್ರತಿಯೋರ್ವ ಭಾರತೀಯನಿಗೂ ಅಂಬಾನಿ ಈಗ ದೇವರಾಗಿದ್ದಾರೆ. ಟೆಲಿಕಾಂ ಲೋಕದ ಆಧುನಿಕ ಡೇಟಾ ದೇವರು ಎಂದೆ ಹೆಸರಾಗಿರುವ ಅಂಬಾನಿಗೆ ಈಗ 61 ವರ್ಷ ತುಂಬಿದೆ.!

1957 ರ ಎಪ್ರಿಲ್ 19 ರಂದು ಜನಿಸಿದ ಮುಖೇಶ್ ಅಂಬಾನಿ, ಪ್ರಸ್ತುತ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಸಂಸ್ಥೆ ಸಿಇಒ ಮತ್ತು ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಹಾಗಾಗಿ, ವಿಶ್ವದಲ್ಲಿಯೇ ಹೆಸರುಗಳಿಸುವಂತೆ ಸಂಸ್ಥೆಯನ್ನು ಮುನ್ನಡೆಸಿದ ಮುಖೇಶ್ ಅಂಬಾನಿ ಅವರ ವಯಕ್ತಿಕ ಜೀವನದ ಬಗ್ಗೆ ಇರುವ 10 ಆಸಕ್ತಿದಾಯಕ ಸಂಗತಿಗಳು ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಹೌದು, ಮಾರ್ಚ್ 2018 ರಲ್ಲಿ ಬಿಡುಗಡೆಯಾದ ಫೋರ್ಬ್ಸ್ ಮಾಹಿತಿಯ ಪ್ರಕಾರ, ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ವ್ಯಾಪಾರಿಗಳಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ ಇಂದು ವಿಶ್ವದ ಬೃಹತ್ ಉದ್ಯಮಿಗಳಲ್ಲಿ ಓರ್ವರಾಗಿ ಬೆಳೆದುನಿಂತಿದ್ದಾರೆ. ತಮ್ಮ 61 ವರ್ಷ ವಯಸ್ಸಿನಲ್ಲಿ ಅಭೂತಪೂರ್ವ ಸಾಧನೆ ಮಾಡಿ ವಿಶ್ವದ ಗಮನಸೆಳೆದಿದ್ದಾರೆ

ಜಿಯೊ ಚಂಡಮಾರುತ!!

ಜಿಯೊ ಚಂಡಮಾರುತ!!

ಮುಖೇಶ್ ಅಂಬಾನಿ ಜಿಯೊವನ್ನು ಪ್ರಾರಂಭಿಸಿದಾಗ, ಭಾರತದ ಟೆಲಿಕಾಂ ವಲಯವು ಚಂಡಮಾರುತಕ್ಕೆ ಸಿಲುಕಿದಂತಾಯಿತು. ಜಿಯೋ ಶುರುವಾದ ಒಂದು ತಿಂಗಳೊಳಗೆ 16 ದಶಲಕ್ಷ ಚಂದಾದಾರರನ್ನು ಗಳಿಸಿ ದಾಖಲೆ ಸೃಷ್ಟಿಸಿತು. ಸ್ಪರ್ಧಾತ್ಮಕ ಟೆಲಿಕಾಂ ಬೆಲೆ ಯುದ್ಧವನ್ನು ಹೆಚ್ಚಿಸಿತು. ಅಂತಿಮವಾಗಿ ಗ್ರಾಹಕರಿಗೆ ಲಾಭದಾಯಕವಾಗಿರುವ ಜಿಯೋ ಈಗಲೂ ಗ್ರಾಹಕರ ಅತ್ಯುತ್ತಮ ಟೆಲಿಕಾಂ ಕಂಪೆನಿಯಾಗಿದೆ.

ಅಂಬಾನಿ ಫೇವರೇಟ್ ಗೇಮ್ ಕ್ರಿಕೆಟ್ ಅಲ್ಲ.!!

ಅಂಬಾನಿ ಫೇವರೇಟ್ ಗೇಮ್ ಕ್ರಿಕೆಟ್ ಅಲ್ಲ.!!

ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸ್ ಮಾಲಿಕತ್ವ ಹೊಂದಿರುವ ಅಂಬಾನಿ ಮುಂಬಯಿ ಇಂಡಿಯನ್ಸ್ ಕ್ರಿಕೆಟ್ ತಂಡವನ್ನು ಹೊಂದಿರುವುದು ನಿಮಗೆಲ್ಲಾ ತಿಳಿದಿದೆ. ಆದರೆ, ಮುಖೇಶ್ ಅಂಬಾನಿ ಅವರ ಶಾಲಾ ದಿನಗಳಲ್ಲಿ ಹೆಚ್ಚಾಗಿ ಹಾಕಿಯನ್ನು ಆಡುತ್ತಿದ್ದರು ಮತ್ತು ಹಾಕಿ ಆಟದ ಕಾರಣದಿಂದಾಗಿ ಅವರು ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಂಡಿದ್ದರು.!!

ವಿಶ್ವದ ಅತಿ ದೊಡ್ಡ ಸಂಸ್ಕರಣಾಗಾರ!!

ವಿಶ್ವದ ಅತಿ ದೊಡ್ಡ ಸಂಸ್ಕರಣಾಗಾರ!!

ಐಟಿ ಉದ್ಯಮೇತರನಾಗಿ ಮುಖೇಶ್ ಅಂಬಾನಿ ಯಾವಾಗಲೂ ಒಳ್ಳೆಯ ಉದ್ಯಮಿ ಎನ್ನುತ್ತವೆ ವರದಿಗಳು. ಇದಕ್ಕೆ ಪೂರಕವೆಂಬಂತೆ ಮುಖೇಶ್ ಅಂಬಾನಿ ಅವರು ವಿಶ್ವದಲ್ಲಿಯೇ ಅತಿ ದೊಡ್ಡ ಸಂಸ್ಕರಣಾಗಾರವನ್ನು ಹೊಂದಿದ್ದಾರೆ. ಪ್ರಪಂಚದ ಅತಿದೊಡ್ಡ ಸಂಸ್ಕರಣಾಗಾರವಾದ ದಿನಕ್ಕೆ 6,68,000 ಬ್ಯಾರೆಲ್ ರಿಫೈನರಿ ನಡೆಯುತ್ತದಂತೆ.

ವಿಶ್ವದ ಅತ್ಯಂತ ದುಬಾರಿ ಮನೆ!!

ವಿಶ್ವದ ಅತ್ಯಂತ ದುಬಾರಿ ಮನೆ!!

ಮುಖೇಶ್ ಅಂಬಾನಿ ಅವರು ವಿಶ್ವದ ಅತ್ಯಂತ ದುಬಾರಿ ಮನೆಯ ಮಾಲಿಕತಾಗಿದ್ದಾರೆ. ದಕ್ಷಿಣ ಮುಂಬಯಿಯಲ್ಲಿ ಇರುವ ಅಂಟಿಲಿಯಾ ಮನೆಯ ಅಂದಾಜು ಮೌಲ್ಯ ಸುಮಾರು 1 ಬಿಲಿಯನ್ ಡಾಲರ್ ಎಂದು ವರದಿಯಾಗಿದೆ. ಈ ಮನೆ 27 ಅಂತಸ್ತುಗಳನ್ನು ಹೊಂದಿದ್ದು, 600 ಕ್ಕೂ ಹೆಚ್ಚಿನ ಸಿಬ್ಬಂದಿಗಳನ್ನು ಹೊಂದಿದೆ ಎನ್ನಲಾಗಿದೆ.

ಅಂಬಾನಿ ಸ್ನೇಹಿತರು ಯಾರು ಗೊತ್ತಾ?

ಅಂಬಾನಿ ಸ್ನೇಹಿತರು ಯಾರು ಗೊತ್ತಾ?

ಮುಖೇಶ್ ಅಂಬಾನಿ ಅವರ ಶಾಲಾ ದಿನಗಳಲ್ಲಿ ಹೊಂದಿದ್ದ ಬಾಲ್ಯ ಸ್ನೇಹಿತರನ್ನೇ ಮುಂದೆಯೂ ಸ್ನೇಹಿತರನ್ನಾಗಿಯೇ ಕಾಪಾಡಿಕೊಂಡುಬಂದಿದ್ದಾರೆ. ಉದ್ಯಮಿಗಳಾದ ಆದಿ ಗೋದ್ರೆಜ್ ಮತ್ತು ಆನಂದ್ ಮಹೀಂದ್ರಾ ಅವರು ಅಂಬಾನಿ ಅವರ ಶಾಲೆಯ ಸಹವರ್ತಿಗಳು ಮತ್ತು ಅವರು ಈಗಲೂ ಅತ್ಯುತ್ತಮ ಸ್ನೇಹಿತರು.

ಮದ್ಯಪಾನ ಮಾಡಲೇ ಇಲ್ಲ!!

ಮದ್ಯಪಾನ ಮಾಡಲೇ ಇಲ್ಲ!!

ಇಂದಿನ ಶ್ರೀಮಂತ ಮಕ್ಕಳಂತೆ ಮುಖೇಶ್ ಅಂಬಾನಿ ಎಂದಿಗೂ ಮದ್ಯಪಾನ ಮಾಡಲೇ ಇಲ್ಲವಂತೆ. ಕಾಲೇಜು ದಿನಗಳಿಂದಲೂ ಮದ್ಯಪಾನದಿಂದ ದೂರವೇ ಉಳಿದಿದ್ದ ಮುಖೇಶ್ ಅಂಬಾನಿ ಅವರು ಮಾಂಸವನ್ನು ತಿನ್ನುವುದಿಲ್ಲವಂತೆ. ಮೊಟ್ಟೆಯನ್ನು ತನ್ನದಂತಹ ಶುದ್ಧ ಸಸ್ಯಾಹಾರಿ ಅವರಂತೆ.!!

168 ಕ್ಕಿಂತಲೂ ಹೆಚ್ಚು ಕಾರಿವೆ.!!

168 ಕ್ಕಿಂತಲೂ ಹೆಚ್ಚು ಕಾರಿವೆ.!!

ಮುಖೇಶ್ ಅಂಬಾನಿ ಕಾರುಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅಂಬಾನಿ ಬಳಿಯಲ್ಲಿ 168 ಕ್ಕಿಂತಲೂ ಹೆಚ್ಚು ಕಾರುಗಳಿವೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸುತ್ತಿರುವ ಹಾಗೂ ಬಾಂಬ್ ಸ್ಫೋಟವನ್ನು ತಡೆಯುವಷ್ಟು ರಕ್ಷಾಕವಚ ಹೊಂದಿರುವ BMW 760LI ಕಾರು ಬಳಕೆಯಲ್ಲಿದೆ. ಮರ್ಸಿಡಿಸ್-ಮೇಬ್ಯಾಚ್ ಬೆಂಜ್ S660 ಗಾರ್ಡ್, ಆಯ್ಸ್ಟನ್ ಮಾರ್ಟಿನ್ ರ್ಯಾಪಿಡ್, ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರುಗಳೂ ಕೂಡ ಅಂಬಾನಿ ಬತ್ತಳಿಕೆಯಲ್ಲಿವೆ.

Best Mobiles in India

English summary
Sharath’s mother, a 'mid-day meal' worker in a government school cooked idlis, which he and his two younger brothers used to sell. He believed that there lay a business idea under all the experience he had gathered in selling idlis which would help him make a successful foray in the catering business.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X