ದಿನನಿತ್ಯ 1GB ಅಥವಾ 1.5GB ಡೇಟಾ ಬೇಕೆಂದರೆ ಈ ರೀಚಾರ್ಜ್ ಪ್ಲ್ಯಾನ್ ಸೂಕ್ತ!
ಏರ್‌ಟೆಲ್ ಬಹುಸಂಖ್ಯಾತ ಗ್ರಾಹಕರನ್ನು ಗಳಿಸಿಕೊಂಡಿರುವ ಟೆಲಿಕಾಂ ಸಂಸ್ಥೆಯಾಗಿದ್ದು, ಇದರೊಂದಿಗೆ ಇತರೆ ಟೆಲಿಕಾಂ ಸಂಸ್ಥೆಗಳಾದ ಜಿಯೋ ಹಾಗೂ ವಿ, ಬಿಎಸ್‌ಎನ್‌ಎಲ್ ಸಹ ಬಳಕೆದಾರರಿಗೆ ಅಗತ್ಯ ಇರುವ ರೀಚಾರ್ಜ್ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ಅದಾಗ್ಯೂ ಏರ್‌ಟೆಲ್‌ನ ಈ ರೀಚಾರ್ಜ್ ಪ್ಲ್ಯಾನ್‌ನಲ್ಲಿ ಸಾಕಷ್ಟು ಡೇಟಾ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ಹೌದು, ಟೆಲಿಕಾಂ ವಲಯದಲ್ಲಿ ವಿವಿಧ ಸಂಸ್ಥೆಗಳು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಕರೆ ಹಾಗೂ ಮೆಸೆಜ್ ಉದ್ದೇಶಕ್ಕಷ್ಟೇ ಅಲ್ಲದೆ ವಿವಿಧ ಮನರಂಜನೆ ನೀಡುವ ಸೌಲಭ್ಯಗಳನ್ನು ಈ ಪ್ಲ್ಯಾನ್‌ಗಳಲ್ಲಿ ಕಲ್ಪಿಸಿಕೊಡುತ್ತವೆ. ಅದರಂತೆ ನೀವು ಏರ್‌ಟೆಲ್ ಗ್ರಾಹಕರಾಗಿದ್ದರೆ ನಿತ್ಯವೂ ಈ ವಿಶೇಷ ರೀಚಾರ್ಜ್ ಪ್ಲ್ಯಾನ್‌ಗಳ ಮೂಲಕ 1GB ಮತ್ತು 1.5GB ಡೇಟಾ ಪಡೆದುಕೊಳ್ಳಬಹುದು. ಹಾಗಿದ್ರೆ, ಯಾವೆಲ್ಲಾ ರೀಚಾರ್ಜ್ ಪ್ಲ್ಯಾನ್‌ನಲ್ಲಿ ಈ ಸೌಲಭ್ಯ ಲಭ್ಯ ಎಂದು ತಿಳಿದುಕೊಳ್ಳಿ.

ಏರ್‌ಟೆಲ್‌ನ 1GB ಡೇಟಾ ಪ್ಲ್ಯಾನ್‌ಗಳು: ಏರ್‌ಟೆಲ್ ತನ್ನ ಬಳಕೆದಾರರಿಗೆ ದಿನಕ್ಕೆ 1GB ಡೇಟಾವನ್ನು ನೀಡುವ ಮೂರು ವಿಭಿನ್ನ ಯೋಜನೆಗಳನ್ನು ನೀಡುತ್ತಿದೆ. ಅದರಲ್ಲಿ 209ರೂ.ಗಳ ಪ್ಲ್ಯಾನ್. ಇದು 21ದಿನಗಳ ಮಾನ್ಯತೆಯನ್ನು ಹೊಂದಿದೆ. ಹಾಗೆಯೇ 239ರೂ.ಗಳ ಪ್ಲ್ಯಾನ್ 24 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದರೊಂದಿಗೆ 265ರೂ.ಗಳ ಮೂರನೇ ಪ್ಲ್ಯಾನ್‌ನಲ್ಲಿಯೂ ನೀವು ನಿತ್ಯ 1GBಡೇಟಾ ಪಡೆದುಕೊಳ್ಳಬಹುದು.ಈ ಪ್ಲ್ಯಾನ್ 28ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಎಲ್ಲಾ ಮೂರು ಪ್ಲ್ಯಾನ್‌ಗಳಲ್ಲಿದಿನವೂ 100 ಎಸ್‌ಎಮ್‌ಎಸ್ ಸೌಲಭ್ಯ ಕಲ್ಪಿಸಿಕೊಡಲಾಗಿದೆ.
ಏರ್‌ಟೆಲ್‌ನ 1.5GB ದೈನಂದಿನ ಡೇಟಾ ಪ್ಲ್ಯಾನ್ ನೀವೇನಾದರೂ ಇನ್ನೂ ಹೆಚ್ಚಿನ ಡೇಟಾ ಪ್ಲ್ಯಾನ್‌ಗಾಗಿ ಹುಡುಕುತ್ತಿದ್ದರೆ ಅಂದರೆ 1.5GB ಡೇಟಾ ಪಡೆದುಕೊಳ್ಳಬೇಕು ಎಂದರೆ ಐದು ವಿಭಿನ್ನ ರೀಚಾರ್ಜ್ ಪ್ಲ್ಯಾನ್‌ಗಳನ್ನು ಗಮನಿಸಬಹುದು. ಈ ಪ್ಲ್ಯಾನ್‌ಗಳಲ್ಲಿ ಅನಿಯಮಿತ ಕರೆ ಹಾಗೂ ದಿನವೂ 100 ಎಸ್‌ಎಮ್‌ಎಸ್ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.
ಇನ್ನು ಮೊದಲ ಯೋಜನೆಯಾಗಿ 299 ರೂ.ಗಳ ಪ್ಲ್ಯಾನ್ ಅನ್ನು ಗಮನಿಸಬಹುದು. ಈ ಪ್ಲ್ಯಾನ್ 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಹಾಗೆಯೇ ಎರಡನೇ ಪ್ಲ್ಯಾನ್ 479ರೂ. ಗಳದ್ದಾಗಿದ್ದು, ಇದು 56 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಈ ಎರಡೂ ಪ್ಲ್ಯಾನ್‌ನಲ್ಲಿಯೂ ನೀವು ನಿತ್ಯ 1.5GB ಡೇಟಾ ವನ್ನು ಪಡೆದುಕೊಂಡು ನಿಮ್ಮಿಷ್ಟದ ವಿಡಿಯೋಗಳನ್ನು ಸ್ಟ್ರೀಮಿಂಗ್ ಮಾಡಬಹುದು.
ಇದರೊಂದಿಗೆ ಮೂರನೇ ಪ್ಲ್ಯಾನ್ ಆಗಿರುವ 666 ರೂ. ನಲ್ಲಿಯೂ ಉತ್ತಮ ಡೇಟಾ ಪ್ಲ್ಯಾನ್ ಪಡೆದುಕೊಳ್ಳಬಹುದಾಗಿದ್ದು, ಇದು 77 ದಿನಗಳ ಮಾನ್ಯತೆಯನ್ನು ಹೊಂದಿದೆ. ಜೊತೆಗೆ 719 ರೂ. ಗಳ ಪ್ಲ್ಯಾನ್‌ನಲ್ಲಿಯೂ ನೀವು ಇದೇ ಡೇಟಾ ಪ್ಲ್ಯಾನ್ ಪಡೆದುಕೊಳ್ಳಬಹುದಾಗಿದ್ದು, 84 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಹಾಗೆಯೇ ಕೊನೆಯ ಪ್ಲ್ಯಾನ್ ಆಗಿರುವ 779 ರೂ. ಗಳಲ್ಲಿಯೂ ನೀವು ಉತ್ತಮ ಡೇಟಾ ಪಡೆದುಕೊಳ್ಳುವುದರೊಂದಿಗೆ ಇತರೆ ಅಗತ್ಯ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಇದು 90 ದಿನಗಳ ಮಾನ್ಯತೆಯನ್ನು ಹೊಂದಿದೆ.

ಈ ಪ್ಲ್ಯಾನ್‌ಗಳು ಯಾರಿಗೆ ಸೂಕ್ತ?: ಈ ಮೇಲೆ ತಿಳಿಸಿದ ಎಲ್ಲಾ ಪ್ರಮುಖ ಪ್ಲ್ಯಾನ್‌ಗಳು ಹೆಚ್ಚು ವಿಡಿಯೋ ವೀಕ್ಷಣೆ ಮಾಡುವವರಿಗೆ ಅದರಲ್ಲೂ ಐಪಿಎಲ್ ವೀಕ್ಷಕರಿಗೆ ಹಾಗೂ ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳಿಗೆ, ಗೇಮರ್‌ಗಳಿಗೆ ಉತ್ತಮ ಆಯ್ಕೆಯಾಗಿವೆ. ಈ ಮೂಲಕ ಅವರು ತಮ್ಮ ಸ್ಮಾರ್ಟ್‌ಫೋನ್ ಅಥವಾ ಸ್ಮಾರ್ಟ್ ಡಿವೈಸ್ ಮೂಲಕ ಅತ್ಯುತ್ತಮ ಮನರಂಜನೆ ಅನುಭವ ಪಡೆದುಕೊಳ್ಳಬಹುದು.
5G ಡೇಟಾ ಕೊಡುಗೆ: ಇದರಲ್ಲಿ ಪ್ರಮುಖವಾಗಿ ಗಮನಿಸಬೇಕಾದ ವಿಷಯ ಏನೆಂದರೆ ನೀವು ಈ ರೀಚಾರ್ಜ್ ಪ್ಲ್ಯಾನ್‌ನಲ್ಲಿ 5G ಸೇವೆ ಪಡೆದುಕೊಳ್ಳಬಹುದಾಗಿದೆ. ಆದರೆ 209 ರೂ. ಗಳ ಪ್ಲ್ಯಾನ್ ನಲ್ಲಿ ಮಾತ್ರ 5G ಇರುವುದಿಲ್ಲ. ನಿಮ್ಮ ಏರಿಯಾದಲ್ಲಿ 5G ಸೇವೆ ಸಕ್ರಿಯವಾಗಿದ್ದರೆ ಇದೇ ಪ್ಲ್ಯಾನ್‌ಗಳಲ್ಲಿ ನೀವು ಅತ್ಯುತ್ತಮ ಇಂಟರ್ನೆಟ್ ಸೇವೆ ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








