'ಒನ್‌ಮೋರ್‌' ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್ ಲಾಂಚ್!.ಆಫರ್ ಇದೆ!

|

ಸೋನಿ ಮತ್ತು ಬೋಟ್‌ ಸೇರಿದಂತೆ ಹಲವು ಪ್ರಮುಖ ಆಡಿಯೊ ಕಂಪನಿಗಳು ಅತ್ಯುತ್ತಮ ಸೌಂಡ್‌ ಕ್ವಾಲಿಟಿ ಮತ್ತು ನಾಯಿಸ್‌ಲೆಸ್‌ ಆಡಿಯೊ ಸೌಲಭ್ಯದ ಇಯರ್‌ಫೋನ್‌ಗಳನ್ನು ಪರಿಚಯಿಸಿದ್ದು, ಈ ಸಾಲಿಗಿಗ 'ಒನ್‌ ಮೋರ್‌' ಕಂಪನಿ ಸಹ ಸೇರಿಕೊಂಡಿದೆ. ಈ ಆಡಿಯೊ ಉತ್ಪನ್ನಗಳ ಕಂಪನಿಯು ಹೊಸ ಬ್ಲೂಟೂತ್‌ 'ನಾಯಿಸ್‌ ಕ್ಯಾನ್ಸಲೇಶನ್' ಇಯರ್‌ಫೋನ್‌ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

'ಒನ್‌ಮೋರ್‌' ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್ ಲಾಂಚ್!.ಆಫರ್ ಇದೆ!

ಹೌದು, ಆಡಿಯೊ ಉತ್ಪನ್ನಗಳ 'ಒನ್‌ ಮೋರ್‌' ಕಂಪನಿಯು ಇದೀಗ ದೇಶಿಯ ಮಾರುಕಟ್ಟೆಗೆ ಡ್ಯುಯಲ್ ಡ್ರೈವರ್‌ BT ANC ಇಯರ್‌ಫೋನ್‌ ಬಿಡುಗಡೆ ಮಾಡಿದ್ದು, ಈ ಇಯರ್‌ಫೋನ್‌ ನಾಯಿಸ್‌ ಕ್ಯಾನ್ಸಲೇಶನ್ ಸೌಲಭ್ಯವನ್ನು ಪಡೆದುಕೊಂಡಿದೆ. ವಾಯರ್‌ಲೆಸ್‌ ಸೌಲಭ್ಯವಿದ್ದು, ಬ್ಲೂಟೂತ್ 4.2 ಸಾಮರ್ಥ್ಯದ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದುಕೊಂಡಿರುವ ಈ ಡಿವೈಸ್‌, ಸುಮಾರು 30 ಫೂಟ್‌ ವ್ಯಾಪ್ತಿಯಲ್ಲಿ ಕನೆಕ್ಟ್‌ ಆಗಲಿದೆ.

'ಒನ್‌ಮೋರ್‌' ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್ ಲಾಂಚ್!.ಆಫರ್ ಇದೆ!

ಈ ಇಯರ್‌ಫೋನ್‌ 14,999ರೂ.ಗಳ ಪ್ರೈಸ್‌ಟ್ಯಾಗ್‌ ಹೊಂದಿದ್ದು, ಆದರೆ ಆರಂಭಿಕ ಕೊಡುಗೆಯಾಗಿ ಇದೇ ಜುಲೈ 15-16ರಂದು ನಡೆಯುವ ಅಮೆಜಾನ್ ಪ್ರೈಮ್‌ ಡೇ ಮೇಳದಲ್ಲಿ ಕೇವಲ 9999ರೂ.ಗಳಿಗೆ ಲಭ್ಯವಾಗಲಿದೆ. ಬ್ಯಾಟರಿ ಬಾಳಿಕೆ ಸಹ ಉತ್ತಮವಾಗಿದೆ. ಹಾಗಾದರೇ ಒನ್‌ ಮೋರ್‌ ನಾಯಿಸ್‌ ಕ್ಯಾನ್ಸಲೇಶನ್ ಇಯರ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬ್ನನಿರಿ.

ಓದಿರಿ : ಟೆಕ್ನೋ 'ಫ್ಯಾಂಟಮ್ 9' 6GB RAM ಸ್ಮಾರ್ಟ್‌ಫೋನ್‌ ಲಾಂಚ್!.ಬೆಲೆ 14,999ರೂ!ಓದಿರಿ : ಟೆಕ್ನೋ 'ಫ್ಯಾಂಟಮ್ 9' 6GB RAM ಸ್ಮಾರ್ಟ್‌ಫೋನ್‌ ಲಾಂಚ್!.ಬೆಲೆ 14,999ರೂ!

ನಾಯಿಸ್ ಕ್ಯಾನ್ಸಲೇಶನ್ (ANC)

ನಾಯಿಸ್ ಕ್ಯಾನ್ಸಲೇಶನ್ (ANC)

ಒನ್‌ ಮೋರ್‌ನ ಈ ಡ್ಯುಯಲ್‌ ಡ್ರೈವರ್‌ ಇಯರ್‌ಫೋನ್‌ 'ನಾಯಿಸ್‌ ಕ್ಯಾನ್ಸಲೇಶನ್' (ANC-Active Noise Cancellation) ಸೌಲಭ್ಯವನ್ನು ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ 'ನಾಯಿಸ್‌ ಕ್ಯಾನ್ಸಲೇಶನ್' ಇಯರ್‌ಫೋನ್‌ಗಳಿಗೆ ಬೇಡಿಕೆ ಇದ್ದು, ಈ ದೃಷ್ಠಿಯಿಂದ ಸಂಸ್ಥೆಯು ಹೊಸದಾಗಿ ಬ್ಲೂಟೂತ್ ಆಧಾರಿತ 'ನಾಯಿಸ್‌ ಕ್ಯಾನ್ಸಲೇಶನ್' ಇಯರ್‌ಫೋನ್‌ ಬಿಡುಗಡೆ ಮಾಡಿದೆ.

ಡ್ಯುಯಲ್ ಡ್ರೈವರ್ಸ್‌

ಡ್ಯುಯಲ್ ಡ್ರೈವರ್ಸ್‌

ಒನ್‌ ಮೋರ್‌ ಕಂಪನಿಯು 'ನಾಯಿಸ್‌ ಕ್ಯಾನ್ಸಲೇಶನ್' ಇಯರ್‌ಫೋನ್‌ ಬಿಡುಗಡೆ ಮಾಡಿದ್ದು, ಈ ಡಿವೈಸ್‌ನಲ್ಲಿ ಡ್ಯುಯಲ್‌ ಆಡಿಯೊ ಡ್ರೈವರ್‌ಗಳನ್ನು ಒದಗಿಸಲಾಗಿದೆ. ಇವುಗಳಲ್ಲಿ ಒಂದು ಡೈನಾಮಿಕ್ ಸೌಂಡ್‌ ಡ್ರೈವರ್‌ ಆಗಿದ್ದು, ಹಾಗೆಯೇ ಇನ್ನೊಂದು ಬ್ಯಾಲೆನ್ಸಡ್‌ ಆರ್ಮಚರ್‌ ಸೌಂಡ್‌ ಡ್ರೈವರ್‌ ಆಗಿದೆ. ಇವುಗಳು ಆಡಿಯೊ ಗುಣಮಟ್ಟವನ್ನು ಹೆಚ್ಚಿಸಲು ನೆರವಾಗಲಿವೆ.

ಓದಿರಿ : ಭಾರತದಲ್ಲಿ 'ನೋಕಿಯಾ 9 ಪ್ಯೂರ್‌ವ್ಯೂವ್' ಬಿಡುಗಡೆ!. ಬೆಲೆ ಎಷ್ಟು ಗೊತ್ತಾ? ಓದಿರಿ : ಭಾರತದಲ್ಲಿ 'ನೋಕಿಯಾ 9 ಪ್ಯೂರ್‌ವ್ಯೂವ್' ಬಿಡುಗಡೆ!. ಬೆಲೆ ಎಷ್ಟು ಗೊತ್ತಾ?

ಬ್ಯಾಟರಿ ಬಾಳಿಕೆ

ಬ್ಯಾಟರಿ ಬಾಳಿಕೆ

ಒನ್‌ ಮೋರ್‌ ಕಂಪನಿಯ ಹೊಸ ಡ್ಯುಯಲ್‌ ಡ್ರೈವರ್‌ 'ನಾಯಿಸ್‌ ಕ್ಯಾನ್ಸಲೇಶನ್' ಇಯರ್‌ಫೋನ್‌ ಅತ್ಯುತ್ತಮ ಬ್ಯಾಟರಿ ಬಾಳಿಕೆಯನ್ನು ಪಡೆದಿದ್ದು, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ಸುಮಾರು 7 ಗಂಟೆ ಬಾಳಿಕೆ ಬರಲಿದೆ. ಬ್ಯಾಟರಿ ಪೂರ್ಣವಾಗಲು ಒಂದು ತಾಸಿನ ಚಾರ್ಜ್‌ ಸಾಕಿದ್ದು, ಕೇವಲ 10 ನಿಮಿಷದ ಚಾರ್ಜಿಗೆ ಸುಮಾರು 3 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಸಹ ಒದಗಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಒನ್‌ ಮೋರ್‌ ಡ್ಯುಯಲ್‌ ಡ್ರೈವರ್‌ 'ನಾಯಿಸ್‌ ಕ್ಯಾನ್ಸಲೇಶನ್' ಇಯರ್‌ಫೋನ್‌ ಬೆಲೆಯು 14,999ರೂ.ಗಳಾಗಿದ್ದು, ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ಹಾಗೆಯೇ ಲಾಂಚಿಂಗ್ ಆಫರ್‌ ಆಗಿ ಇದೇ ಜುಲೈ 15-16ರಂದು ನಡೆಯುವ ಅಮೆಜಾನ್ ಪ್ರೈಮ್‌ ಡೇ ಮೇಳದಲ್ಲಿ ಕೇವಲ 9999ರೂ.ಗಳಿಗೆ ಈ ಡಿವೈಸ್‌ ಗ್ರಾಹಕರಿಗೆ ದೊರೆಯಲಿದೆ.

ಓದಿರಿ : ಇದೇ ಜುಲೈ 12ಕ್ಕೆ ಕ್ಲೋಸ್‌ ಆಗಲಿದೆ 'ರೆಡ್ಮಿ ನೋಟ್‌ 7 ಪ್ರೊ' ಓಪೆನ್ ಸೇಲ್!ಓದಿರಿ : ಇದೇ ಜುಲೈ 12ಕ್ಕೆ ಕ್ಲೋಸ್‌ ಆಗಲಿದೆ 'ರೆಡ್ಮಿ ನೋಟ್‌ 7 ಪ್ರೊ' ಓಪೆನ್ ಸೇಲ್!

Best Mobiles in India

English summary
The earphones will be available at an introductory price of Rs. 9,999 during the Prime Day sale. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X