ಡಿಸ್ಕೌಂಟ್ ಬೆಲೆಯೊಂದಿಗೆ 'ಒನ್‌ಮೋರ್' ಬ್ಲೂಟೂತ್ ಸ್ಪೀಕರ್ ಎಂಟ್ರಿ!
ಭಾರತೀಯ ಮಾರುಕಟ್ಟೆಯಲ್ಲಿ ಆಡಿಯೊ ಡಿವೈಸ್‌ಗಳಿಗೆ ಅತ್ಯುತ್ತಮ ಬೇಡಿಕೆ ಇದ್ದು, ಅವುಗಳಲ್ಲಿ ಇತ್ತೀಚಿನ ವಾಯರ್‌ಲೆಸ್ ಮಾದರಿಯ ಸ್ಪೀಕರ್ಸ್‌ಗಳು ಗ್ರಾಹಕರನ್ನು ಹೆಚ್ಚು ಸೆಳೆದಿವೆ. ಹೀಗಾಗಿಯೇ ಪ್ರಮುಖ ಆಡಿಯೊ ಕಂಪನಿಗಳು ತರಹೇವಾರಿ ಡಿಸೈನ್‌ಗಳಲ್ಲಿ ಸ್ಪೀಕರ್ಸ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಆ ಪೈಕಿ ಹಲವು ಆಕರ್ಷಕ ಆಡಿಯೊ ಡಿವೈಸ್‌ಗಳಿಂದ ಮ್ಯೂಸಿಕ್ ಪ್ರಿಯರ ಮನಗೆದ್ದಿರುವ (1MORE)'ಒನ್‌ಮೋರ್' ಸಂಸ್ಥೆಯು ಇದೀಗ ಮತ್ತೊಂದು ಸ್ಪೀಕರ್ಸ್ ಬಿಡುಗಡೆ ಮಾಡಿದೆ.

ಹೌದು, ಒನ್‌ಮೋರ್ ಸಂಸ್ಥೆಯು ದೇಶಿಯ ಮಾರುಕಟ್ಟೆಗೆ ಹೊಸದಾಗಿ ಪೋರ್ಟೆಬಲ್ ಮಾದರಿಯ ಬ್ಲೂಟೂತ್ ಆಧಾರಿತ ಸ್ಪೀಕರ್ ಒಂದನ್ನು ಲಾಂಚ್ ಮಾಡಿದೆ. ಈ ಸ್ಪೀಕರ್ ಬ್ಲ್ಯಾಕ್ ಬಣ್ಣದ ಆಯ್ಕೆಯನ್ನು ಹೊಂದಿದ್ದು, 10,999ರೂ.ಗಳ ಪ್ರೈಸ್‌ಟ್ಯಾಗ್ ಅನ್ನು ಹೊಂದಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮುಂಗಡ ಆರ್ಡರ್(pre-order) ಮಾಡುವ ಗ್ರಾಹಕರಿಗೆ 6,499ರೂ.ಗಳ ಡಿಸ್ಕೌಂಟ್ ಬೆಲೆಯಲ್ಲಿ ಸಿಗಲಿದೆ.

ಪ್ರಿ-ಆರ್ಡರ್ ಸೌಲಭ್ಯವು ಇದೇ ನವೆಂಬರ್ 20ರ ವರೆಗೂ ಮಾತ್ರ ಇರಲಿದ್ದು, ಆನಂತರ ಡಿವೈಸ್ ಶಿಪ್ಪಿಂಗ್ ನಡೆಯಲಿದೆ. ಬ್ಲೂಟೂತ್ 4.2 ಸಾಮರ್ಥ್ಯದ ಬೆಂಬಲವನ್ನು ಒಳಗೊಂಡಿದ್ದು, ಹಾಗೆಯೇ 2,600mAh ಬ್ಯಾಟರಿ ಬಾಳಿಕೆಯನ್ನು ಪಡೆದುಕೊಂಡಿದೆ. ಹಾಗಾದರೇ 'ಒನ್‌ಮೋರ್' ಸಂಸ್ಥೆಯು ಬಿಡುಗಡೆ ಮಾಡಿರುವ ಹೊಸ ಬ್ಲೂಟೂತ್ ಸ್ಪೀಕರ್ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ರಚನೆ ಮತ್ತು ಡಿಸೈನ್
ಒನ್‌ಮೋರ್ ಬ್ಲೂಟೂತ್ ಆಧಾರಿತ ಈ ಸ್ಪೀಕರ್ ಆಕರ್ಷಕ ರಚನೆಯನ್ನು ಹೊಂದಿದ್ದು, ಕಪ್ಪು ಬಣ್ಣದ ಆಯ್ಕೆಯನ್ನು ಪಡೆದಿದೆ. ಹಾಗೆಯೇ ಬಾಹ್ಯವಾಗಿ ವಿಶೇಷ ನ್ಯಾನೋ ಕೋಟಿಂಗ್ ರಚನೆಯನ್ನು ಒದಗಿಸಲಾಗಿದೆ. IPX4 ರೇಟಿಂಗ್ ಸೌಲಭ್ಯವನ್ನು ಪಡೆದಿದ್ದು, ಇದು ಸ್ಪೀಕರ್‌ಗೆ ವಾಟರ್ ಪ್ರೂಫ್ ಮತ್ತು ಸ್ವೆಟ್ ಪ್ರೂಫ್ ರಕ್ಷಣೆಯನ್ನು ಸಹ ಒದಗಿಸಲಿದೆ.

ಸೌಂಡ್ ಮತ್ತು ಕನೆಕ್ಟಿವಿಟಿ
ಈ ಬ್ಲೂಟೂತ್ ಸ್ಪೀಕರ್ DSP(Digital Signal Processing) ಸೌಂಡ್ ತಂತ್ರಜ್ಞಾನವನ್ನು ಪಡೆದಿದ್ದು, ಬ್ಲೂಟೂತ್ ಹಲವು ಔಟ್‌ಪುಟ್ ಸೌಂಡ್ ನಿಯಂತ್ರಕ ಆಯ್ಕೆಗಳನ್ನು ಒಳಗೊಂಡಿದೆ. DSP ಚಿಪ್‌ಸೆಟ್ 0.75 ಇಂಚಿನ ಟ್ವೀಟರ್ (tweeter) ಮತ್ತು 3.3 ಇಂಚಿನ ವೂಫರ್ ಕನೆಕ್ಟಿವಿಟಿ ಹೊಂದಿದ್ದು, ಡೈನಾಮಿಕ್, ಮಿಡ್‌ರೇಂಜ್, ಸೌಂಡ್‌ನ ಏರಿಳಿತಗಳನ್ನು ಮಾಡಲು ಅನುಕೂಲ ನೀಡಲಿದೆ.

ಬ್ಯಾಟರಿ ಲೈಫ್ ಮತ್ತು ಇತರೆ ಸೌಲಭ್ಯ
ಒನ್‌ಮೋರ್ ಬ್ಲೂಟೂತ್ ಆಧಾರಿತ ಈ ಸ್ಪೀಕರ್ 2,600mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದಿದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ಸುಮಾರು 12 ಗಂಟೆ ಬ್ಯಾಕ್‌ಅಪ್ ಒದಗಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಈ ಸ್ಪೀಕರ್ ವಾಯಿಸ್ ಅಸಿಸ್ಟಂಟ್ ಸೌಲಭ್ಯವನ್ನು ಪಡೆದುಕೊಂಡಿದ್ದು, ಸ್ಮಾರ್ಟ್‌ಫೋನ್‌ನೊಂದಿಗೆ ಕನೆಕ್ಟ್ ಮಾಡಬಹುದಾಗಿದೆ.


Click it and Unblock the Notifications








