Home
ಸುದ್ದಿಜಾಲ

ಆಪಲ್ ಕಂಪೆನಿಯ ಮೇಲೆ ಮೊಕದ್ದಮೆ! ಇಬ್ಬರು ಭಾರತೀಯರ ಗೆಲುವು

By Shwetha

ಆಪಲ್‌ನಂತಹ ಪ್ರಖ್ಯಾತ ಕಂಪೆನಿಯ ಮೇಲೆ ಕೇಸು ದಾಖಲಿಸಿದ ಇಬ್ಬರು ಭಾರತೀಯ ಇಂಜಿನಿಯರ್‌ಗಳು ಇಂದಿನ ನಮ್ಮ ಲೇಖನದ ಆಸಕ್ತಿಕರ ಅಂಶವಾಗಿದೆ. ಆಪಲ್ ಕಂಪೆನಿ ಇವರಿಗೆ ಸಂಬಂಧಿಸಿದ ಪೇಟೆಂಟ್ ತಂತ್ರಜ್ಞಾನವನ್ನು ಅನುಮತಿಯಿಲ್ಲದೆ ಬಳಸಿದೆ ಎಂಬುದು ಕೇಸು ದಾಖಲೆಗೆ ಪ್ರಮುಖ ಕಾರಣ ಎಂದೆನಿಸಿದೆ.

ಓದಿರಿ: ಆಂಡ್ರಾಯ್ಡ್‌ಗಿಂತ ಆಪಲ್ ಫೋನ್ ಅತ್ಯುತ್ತಮ ಹೇಗೆ?

ಭಾರತದಲ್ಲೇ ಜನಿಸಿದ ಇಂಜಿನಿಯರ್‌ಗಳಾದ ಪ್ರೊಫೆಸರ್ ಗುರುಂದರ್ ಸೋಹಿ ಮತ್ತು ಟೆರಾನಿ ವಿಜಯ್‌ಕುಮಾರ್ ತಮ್ಮ ಗ್ರಾಜ್ಯುಯೇಶನ್ ನಂತರ ಯುಎಸ್‌ಗೆ ತೆರಳಿದರು. ಬಿರ್ಲಾ ಇನ್ಸಿಟಿಟ್ಯೂಶನ್ ಆಫ್ ಟೆಕ್ನಾಲಜಿಯಿಂದ ಪದವಿಯನ್ನು ಪಡೆದುಕೊಂಡರು.

ಮೊಕ್ಕದ್ದಮೆ ದಾಖಲೆ

ಮೊಕ್ಕದ್ದಮೆ ದಾಖಲೆ

ವಿಸ್‌ಕೋನ್ಸಿನ್ ಆಲ್ಯುಮ್ನಿ ರೀಸರ್ಚ್ ಫೌಂಡೇಶನ್ (ಡಬ್ಲ್ಯೂಎಆರ್‌ಎಫ್) ಜನವರಿ 2014 ರಂದು ಮೊಕದ್ದಮೆಯನ್ನು ದಾಖಲಿಸಿದ್ದು ತನ್ನ ಉತ್ಪನ್ನಗಳಲ್ಲಿ ಕಾರ್ಯಕ್ಷಮತೆಯನ್ನು ಸುಧಾರಿಸಲು ಆಪಲ್ ಇಂಕ್ ಅವರುಗಳ ಪೇಟೆಂಟ್ ಅನ್ನು ಬಳಸಿಕೊಳ್ಳುತ್ತಿದೆ ಎಂಬುದಾಗಿ ದೂರಿತ್ತು.

ಡಬ್ಲ್ಯೂಎಆರ್‌ಎಫ್ ಮೊಕದ್ದಮೆ

ಡಬ್ಲ್ಯೂಎಆರ್‌ಎಫ್ ಮೊಕದ್ದಮೆ

ಶ್ರೀಯುತ ಸೋಹಿಯವರು 1998 ರಲ್ಲೇ ಕಂಪ್ಯೂಟರ್ ಪ್ರೊಸೆಸರ್‌ಗಳಲ್ಲಿ ಕಾರ್ಯಕ್ಷಮತೆಯನ್ನು ಸುಧಾರಿಸುವ ಪೇಟೆಂಟ್ ಅನ್ನು ಪಡೆದುಕೊಂಡಿದ್ದರು ಎಂಬುದಾಗಿ ಡಬ್ಲ್ಯೂಎಆರ್‌ಎಫ್ ಮೊಕದ್ದಮೆಯಲ್ಲಿ ದಾಖಲಿಸಿದೆ.

ಪೇಟೆಂಟ್

ಪೇಟೆಂಟ್

ಆಪಲ್ ತನ್ನ ಉತ್ಪನ್ನಗಳಲ್ಲಿ ಕಾರ್ಯಕ್ಷಮತೆಯನ್ನು ಸುಧಾರಿಸಲು ಈ ಪೇಟೆಂಟ್ ಅನ್ನು ಬಳಸಿಕೊಂಡಿದೆ ಎಂಬುದು ದಾಖಲೆಯಾಗಿದೆ.

ಐಫೋನ್ಸ್ ಮತ್ತು ಐಪ್ಯಾಡ್

ಐಫೋನ್ಸ್ ಮತ್ತು ಐಪ್ಯಾಡ್

ತನ್ನ ಐಫೋನ್ಸ್ ಮತ್ತು ಐಪ್ಯಾಡ್‌ಗಳಲ್ಲಿ ಕಾರ್ಯಕ್ಷಮತೆನ್ನು ಸುಧಾರಿಸಲು ತನ್ನ ಪ್ರೊಸೆಸರ್‌ಗಳಲ್ಲಿ ಆಪಲ್ ಅಕ್ರಮವಾಗಿ ಪೇಟೆಂಟ್ ಅನ್ನು ಬಳಸಿಕೊಂಡಿದೆ ಎಂಬುದಾಗಿ ತೀರ್ಪುಗಾರರು ಪತ್ತೆಮಾಡಿದ್ದಾರೆ.

ತೀರ್ಪುಗಾರರ ಕ್ರಮ

ತೀರ್ಪುಗಾರರ ಕ್ರಮ

ವಿಶ್ವವಿದ್ಯಾಲಯವು ಈ ನಷ್ಟಕ್ಕೆ $862.4 ಮಿಲಿಯನ್ ಅನ್ನು ನಿಗದಿಪಡಿಸಿದ್ದು, ಈ ಮೊತ್ತವನ್ನು ಒದಗಿಸಲು ತೀರ್ಪುಗಾರರು ಇನ್ನೂ ಕ್ರಮ ಕೈಗೊಳ್ಳಬೇಕಾಗಿದೆ.

 ಆಪಲ್ ಇಂಕ್

ಆಪಲ್ ಇಂಕ್

ಆಪಲ್ ಇಂಕ್ ಕೂಡ ಪೇಟೆಂಟ್ ಅಮಾನ್ಯವಾಗಿದ್ದು ಯಾವುದೇ ಉಲ್ಲಂಘನೆ ನಡೆದಿಲ್ಲ ಎಂಬುದಾಗಿ ಹೇಳಿಕೆ ನೀಡಿದೆ.

ಆಪಲ್ ತಂತ್ರಜ್ಞಾನ

ಆಪಲ್ ತಂತ್ರಜ್ಞಾನ

ಪ್ರಾಸಂಗಿವಾಗಿ ಆಪಲ್ ಕೂಡ ತನ್ನ ತಂತ್ರಜ್ಞಾನ ಪೇಟೆಂಟ್ ಅನ್ನು ಉಲ್ಲಂಘಿಸಿದ್ದಕ್ಕಾಗಿ ಇದೇ ಗುಂಪಿನ ಮೇಲೆ ಮೊಕದ್ದಮೆ ದಾಖಲಿಸಿದ್ದು ಅದರ ಪ್ರೊಸೆಸರ್‌ಗಳಲ್ಲಿ ಆಪಲ್ ತಂತ್ರಜ್ಞಾನವನ್ನು ಬಳಸಿಕೊಂಡಿದೆ ಎಂಬುದಾಗಿ ದೂರಿತ್ತಿತ್ತು. ಈ ಪ್ರಕರಣ ಇನ್ನೂ ಬಾಕಿಯಾಗಿದೆ.

Best Mobiles in India

English summary
A team of four inventors, including two Indian engineers, won a case against tech giant Apple Inc. for using their patent technology in its products without permission.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+