ಫೋನ್‌ನಲ್ಲಿ ಈ ಆಪ್‌ಗಳಿದ್ದರೆ ಈಗಲೇ ಅನ್‌ಇನ್‌ಸ್ಟಾಲ್ ಮಾಡಿ; ಇದು ಗಂಭೀರ ವಿಷಯ!
ಸಾಮಾನ್ಯವಾಗಿ ಸ್ಮಾರ್ಟ್‌ಫೋನ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗುವ ಹಲವಾರು ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡಿರುತ್ತಾರೆ. ಅದರಲ್ಲೂ ಗೇಮಿಂಗ್ ವಲಯದಲ್ಲಿ ಹೆಚ್ಚಿನ ಆಪ್‌ಗಳು ಲಭ್ಯವಾಗುತ್ತಿದ್ದು, ಸಮಯ ಕಳೆಯುವ ಉದ್ದೇಶದಿಂದ ಬಳಕೆದಾರರು ಇಂತಹ ಆಪ್‌ಗಳನ್ನು ಹೆಚ್ಚು ಹೆಚ್ಚಾಗಿ ಇನ್‌ಸ್ಟಾಲ್ ಮಾಡುತ್ತಾರೆ. ಆದರೆ, ಕೆಲವು ಆಪ್‌ಗಳು ಬಳಕೆದಾರರ ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ಕುತಂತ್ರ ಬುದ್ದಿ ತೋರಿಸಲಿವೆ ಎಂಬುದು ನಿಮಗೇನಾದರೂ ಗೊತ್ತಾ!?.

ಹೌದು, ಗೂಗಲ್ ಪ್ಲೇ ಸ್ಟೋರ್ ಎಲ್ಲಾ ಆಪ್‌ಗಳನ್ನು ನಿರಂತರವಾಗಿ ಪರಿಶೀಲಿಸುತ್ತಾ ಬರುತ್ತಿದ್ದು, ಇದರ ಭಾಗವಾಗಿಯೇ ಕಾಲಕಾಲಕ್ಕೆ ಯಾವೆಲ್ಲಾ ಆಪ್‌ಗಳು ಬಳಕೆದಾರರಿಗೆ ತೊಂದರೆ ಎನಿಸಲಿವೆಯೋ ಅವುಗಳನ್ನು ತನ್ನ ಸ್ಟೋರ್‌ನಿಂದ ತೆಗೆದುಹಾಕುತ್ತಿದೆ. ಅದರಂತೆ ಈಗ ಬರೋಬ್ಬರಿ 203 ಆಪ್‌ಗಳನ್ನು ತೆಗೆದುಹಾಕಿದೆ. ಹಾಗಿದ್ರೆ, ಯಾವೆಲ್ಲಾ ಪ್ರಮುಖ ಆಪ್‌ಗಳು ದುರುದ್ದೇಶಪೂರ್ವಕವಾಗಿದ್ದವು, ಇವುಗಳಿಂದ ಆಗುತ್ತಿದ್ದ ಅನಾಹುತ ಏನು ಎಂಬುದನ್ನು ವಿವರಿಸಿದ್ದೇವೆ ಓದಿರಿ.
ಈ ಆಪ್‌ಗಳಿಂದ ಆಗುತ್ತಿದ್ದ ಸಮಸ್ಯೆ ಏನು?
ಯಾವುದೇ ಆಪ್‌ಗಳಾದರೂ ಸಹ ಯಾವ ಉದ್ದೇಶಕ್ಕೆ ರಚನೆ ಆಗಿವೆಯೋ ಆ ಕೆಲಸ ಮಾಡಿದರೆ ಯಾರಿಗೂ ಸಮಸ್ಯೆ ಇರುವುದಿಲ್ಲ. ಆದರೆ, ಒಂದು ಉದ್ದೇಶದಿಂದ ಗೂಗಲ್ ಪ್ಲೇ ಸ್ಟೋರ್‌ಗೆ ಬಂದು ಸೇರುವ ಆಪ್‌ಗಳು ತದನಂತರದಲ್ಲಿ ಬಳಕೆದಾರರ ಡೇಟಾ ಕದಿಯಲು ಹಾಗೂ ಅವರ ಹಣಕಾಸಿನ ವಿಚಾರಕ್ಕೆ ಕೈ ಹಾಕಲು ಮುಂದಾಗುತ್ತದೆ. ಅದೇ ಕೆಲಸವನ್ನು ಈ 203 ಆಪ್‌ಗಳು ಮಾಡಿದ್ದು, ಇದರಿಂದಾಗಿ ಪ್ಲೇ ಸ್ಟೋರ್‌ನಿಂದ ಹೊರಬಿದ್ದಿವೆ.
ಮಾಲ್‌ವೇರ್ ಅಪಾಯ
ಸಾಮಾನ್ಯವಾಗಿ ಕೆಲವು ಗೇಮಿಂಗ್ ಹಾಗೂ ಫೋಟೋ ಎಡಿಟಿಂಗ್ ಆಪ್‌ಗಳು ಮಾಲ್‌ವೇರ್ ಮೂಲಕ ಬಳಕೆದಾರರ ಮೊಬೈಲ್ ಮೇಲೆ ದಾಳಿ ಮಾಡಿ, ಅವರ ಖಾಸಗಿ ವಿವರ ಹಾಗೂ ಹಣಕಾಸಿಗೆ ಸಂಬಂಧಿತ ವಿವರವನ್ನು ಕದ್ದು ಆಪ್ ಮಾಲೀಕರಿಗೆ ಒದಗಿಸುತ್ತವೆ. ಇದು ಗಂಭೀರವಾದ ವಿಷಯವಾಗಿದ್ದು, ಅದರಂತೆ ಗೂಗಲ್ ಪ್ಲೇ ಸ್ಟೋರ್ ಈ ಆಪ್‌ಗಳ ವಿರುದ್ಧ ನಿರಂತರವಾಗಿ ಕ್ರಮ ಜರುಗಿಸುತ್ತಲೇ ಬರುತ್ತಿದೆ.

ಈ ಆಪ್‌ಗಳನ್ನು ಹೇಗೆ ಪತ್ತೆ ಮಾಡಲಾಯಿತು?
ಸಾಮಾನ್ಯವಾಗಿ ಕೆಲವು ಸೆಕ್ಯೂರಿಟಿ ಸಂಬಂಧಿತ ಆಪ್‌ಗಳು ಈ ರೀತಿಯ ದುರುದ್ದೇಶಪೂರಿತ ಆಪ್‌ಗಳನ್ನು ಪತ್ತೆ ಮಾಡುತ್ತವೆ. ಹಾಗೆಯೇ ಥಾಯ್ಲೆಂಡ್‌ನ ಡಿಜಿಟಲ್ ಎಕಾನಮಿ ಮತ್ತು ಸೊಸೈಟಿ ಸಚಿವಾಲಯ ಹಾಗೂ ರಾಷ್ಟ್ರೀಯ ಸೈಬರ್ ಭದ್ರತಾ ಸಂಸ್ಥೆ ಈ 203 ಆಪ್‌ಗಳನ್ನು ಪತ್ತೆ ಮಾಡಿದ್ದು, ಗೂಗಲ್‌ಗೆ ಮಾಹಿತಿ ನೀಡಿದೆ. ಹಾಗೂ ಈ ಆಪ್‌ಗಳು ಫೋನ್‌ಗಳನ್ನು ಗುರಿಯಾಗಿಸಿಕೊಂಡು ದುರುದ್ದೇಶದ ಕೆಲಸ ಮಾಡುತ್ತಿವೆ, ಹೀಗಾಗಿ ತಕ್ಷಣವೇ ಈ ಆಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಬೇಕು ಎಂದು ಒತ್ತಾಯ ಸಹ ಮಾಡಲಾಗಿದೆ.
ಯಾವೆಲ್ಲಾ ಪ್ರಮುಖ ಆಪ್‌ಗಳ ವಿರುದ್ಧ ಕ್ರಮ
ಇನ್ನು ಒಟ್ಟಾರೆ 203 ಆಪ್‌ಗಳ ವಿರುದ್ಧ ಕ್ರಮ ಜರುಗಿಸಲಾಗಿದ್ದು, ಇದರಲ್ಲಿ ಪ್ರಮುಖ ಆಪ್‌ಗಳ ಲಿಸ್ಟ್ ಮಾತ್ರ ನೀಡಲಾಗಿದೆ. ಅದರಲ್ಲಿ ಅಡ್ವಾನ್ಸಡ್ ಎಸ್‌ಎಮ್‌ಎಸ್, ಮ್ಯಾಜಿಕ್ ಫೋಟೋ ಎಡಿಟರ್, ಆಲ್ ಗುಡ್ ಪಿಡಿಎಫ್ ಸ್ಕ್ಯಾನರ್, ಆಲ್ ಗುಡ್ ಲಾಂಗ್ವೇಜ್ ಟ್ರಾನ್ಸ್ಲೇಟರ್, ಆರ್ಟ್ ಫಿಲ್ಟರ್, ಆಟೋ ಸ್ಟಿಕ್ಕರ್ ಮೇಕರ್ ಸ್ಟುಡಿಯೋ, ಬೇಸ್ ಬೂಸ್ಟರ್ ವಾಲ್ಯೂಮ್ ಪವರ್, ಬ್ಯಾಟರಿ ಚಾರ್ಜಿಂಗ್ ಆನಿಮೇಶನ್ ಬಬ್ಬಲ್, ಬೀಟ್ ಮೇಕರ್ ಪ್ರೊ, ಬ್ಯೂಟಿ ಫಿಲ್ಟರ್, ಬ್ಲಡ್ ಪ್ರೆಸರ್ ಡೈರಿ, ಕಾಲರ್ ಥೀಮ್, ಕ್ಯಾಮೆರಾ ಟ್ರಾನ್ಸ್‌ಲೇಟ್, ಕ್ಯಾಶ್ ಕ್ಲೀನರ್, ಚಾಟ್ ಟೆಕ್ಸ್ಟ್ ಮೆಸೆಜ್ ಸೇರಿವೆ.

ಹಾಗೆಯೇ, ಕಾಂಟ್ಯಾಕ್ಟ್ ಬ್ಯಾಗ್ರೌಂಡ್, ಡಝಲ್ ಇನ್‌ಸ್ಟಾ ಸ್ಟೋರಿಸ್ ಎಡಿಟರ್, ಡಿಸೈನ್ ಮೇಕರ್, ಈಸಿ ಪಿಡಿಎಫ್ ಸ್ಕ್ಯಾನರ್, ಎಡ್ಜಿಂಗ್ ಪ್ರೊ, ಫೇಸ್‌ಲ್ಯಾಬ್, ಫೇಸ್‌ಮಿ, ಫನ್ನಿ ಕಾಲರ್, ಫನ್ನಿ ಕ್ಯಾಮೆರಾ, ಗಿಟಾರ್ ಪ್ಲೇ, ಹೈಪರ್ ಕ್ಲೀನರ್ ಕ್ಲೀನ್ ಫೋನ್, ಐಮೆಸೆಜ್, ಕರೋಕೆ ಸಾಂಗ್,ನೌ ಕ್ಯೂ ಆರ್ ಕೋಡ್ ಸ್ಕ್ಯಾನ್, ಫೋಟೋ ಕೊಲೇಜ್, ಫೋಟೋ ಫಿಲ್ಟರ್ ಆಂಡ್ ಎಡಿಟ್, ಪ್ರೈವೇಟ್ ಮೆಸೆಜ್, ಡಿಂಗ್‌ಟೂನ್ ಹೆಚ್‌ಡಿ, ಸ್ಮಾರ್ಟ್‌ಟಿವಿ ರಿಮೋಟ್, ಸ್ಟಿಕ್ಕರ್ ಮೇಕರ್, ಸೂಪರ್ ಹೀರೋ ಎಫೆಕ್ಟ್ ಸೇರಿದಂತೆ ಇನ್ನೂ ಹಲವು ಆಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದ್ದು, ಈ ಆಪ್‌ಗಳು ನಿಮ್ಮ ಮೊಬೈಲ್‌ನಲ್ಲಿ ಏನಾದರೂ ಇದ್ದರೆ ತಕ್ಷಣವೇ ಅನ್‌ಇನ್‌ಸ್ಟಾಲ್ ಮಾಡಿ.


Click it and Unblock the Notifications








