Home
ಸುದ್ದಿಜಾಲ

ನೋಕಿಯಾ G11 ಪ್ಲಸ್‌ಗೆ ಭರ್ಜರಿ ಡಿಸ್ಕೌಂಟ್: ಆಫರ್‌ ಬೆಲೆ ತಿಳಿದ್ರೆ ವಾವ್‌ ಅಂತೀರಾ!

ನೋಕಿಯಾದ ಸ್ಮಾರ್ಟ್‌ಫೋನ್‌ಗಳು ಇಂದು ಮಾರುಕಟ್ಟೆಯಲ್ಲಿ ಇತರೆ ಸ್ಮಾರ್ಟ್‌ಫೋನ್‌ಗಳಿಗೆ ಪೈಪೋಟಿ ನೀಡುತ್ತಿವೆ. ಯಾಕೆಂದರೆ ಈ ಫೋನ್‌ಗಳಲ್ಲಿನ ವಿಶೇಷ ಕ್ಯಾಮೆರಾ ಫೀಚರ್ಸ್‌ ಹಾಗೂ ಬ್ಯಾಟರಿ ಬ್ಯಾಕಪ್‌ ಬಳಕೆದಾರರನ್ನು ಹೆಚ್ಚಾಗಿ ಆಕರ್ಷಿಸುತ್ತಿದ್ದು, ಈ ನಡುವೆ ನೋಕಿಯಾ G11 ಪ್ಲಸ್ ಅನ್ನು 25% ರಿಯಾಯಿತಿಯೊಂದಿಗೆ ಖರೀದಿ ಮಾಡಬಹುದಾಗಿದೆ.

ಹೌದು, ನೋಕಿಯಾದ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ವಿಶೇಷವಾದ ಸ್ಥಾನಮಾನವಿದೆ. ಅದರಲ್ಲೂ ಇತ್ತೀಚೆಗೆ ನೋಕಿಯಾ G22, ನೋಕಿಯಾ C22 ಮತ್ತು ನೋಕಿಯಾ C32 ಸ್ಮಾರ್ಟ್‌ಫೋನ್‌ಗಳನ್ನು ಒಟ್ಟಿಗೆ ಲಾಂಚ್‌ ಮಾಡಿ ಭಾರೀ ಸದ್ದು ಮಾಡಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ ಮತ್ತೊಮ್ಮೆ ಕೈಗೆಟಕುವ ದರದಲ್ಲಿ ನೋಕಿಯಾ G11 ಪ್ಲಸ್ ಮಾರಾಟ ಮಾಡಲು ಮುಂದಾಗಿದ್ದು, ನೋಕಿಯಾ ಪ್ರಿಯರಿಗೆ ಸಂತಸ ಹೆಚ್ಚಾಗುವಂತೆ ಮಾಡಿದೆ.

ನೋಕಿಯಾ G11 ಪ್ಲಸ್‌ಗೆ ಭರ್ಜರಿ ಡಿಸ್ಕೌಂಟ್:ಆಫರ್‌ ಬೆಲೆ ತಿಳಿದ್ರೆ ವಾವ್‌ ಅಂತೀರಾ!

ನೋಕಿಯಾ G11 ಪ್ಲಸ್‌ಗೆ ಭರ್ಜರಿ ಡಿಸ್ಕೌಂಟ್‌

ಮಾರ್ಚ್ 2022 13,999 ರೂ. ಗಳ ಆರಂಭಿಕ ಬೆಲೆಯೊಂದಿಗೆ ಲಾಂಚ್‌ ಆದ ನೋಕಿಯಾ G11 ಪ್ಲಸ್‌ ಸ್ಮಾರ್ಟ್‌ಫೋನ್ ಅಮೆಜಾನ್‌ ನಲ್ಲಿ 25% ಬೆಲೆ ರಿಯಾಯಿತಿ ಪಡೆದುಕೊಂಡು 10,000ರೂ. ಗಳ ದರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಅದಾಗ್ಯೂ ನೀವು ಈ ಫೋನ್ ಅನ್ನು ಕೇವಲ 100ರೂ. ಗಳಿಗೆ ಖರೀದಿ ಮಾಡಬಹುದು ಎಂದರೆ ನಂಬಲೇ ಬೇಕು. ಯಾಕೆಂದರೆ ಈ ಫೋನ್‌ ಖರೀದಿಯ ಮೇಲೆ ವಿನಿಯಮ ಆಫರ್‌ ಹಾಗೂ ಬ್ಯಾಂಕ್‌ ಕಾರ್ಡ್‌ಗಳ ಮೇಲೆ ತ್ವರಿತ ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ.

ನೋಕಿಯಾ G11 ಪ್ಲಸ್‌ಗೆ ಬ್ಯಾಂಕ್‌ ಆಫರ್‌ ಏನು?

ಈ ನೋಕಿಯಾ G11 ಪ್ಲಸ್‌ ಫೋನ್‌ ಖರೀದಿಯಲ್ಲಿ ನೀವು ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಬಳಕೆ ಮಾಡಿದರೆ 1,500 ವರೆಗೆ ಅಂದರೆ 7.5% ತ್ವರಿತ ರಿಯಾಯಿತಿ ಲಭ್ಯವಾಗಲಿದೆ. ಹಾಗೆಯೇ ಸಿಟಿ ಯೂನಿಯನ್ ಬ್ಯಾಂಕ್ ಮಾಸ್ಟರ್‌ಕಾರ್ಡ್ ಡೆಬಿಟ್ ಕಾರ್ಡ್‌ ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ 2500 ರೂ. ಗಳ ವರೆಗೆ ಅಂದರೆ 10% ತ್ವರಿತ ರಿಯಾಯಿತಿ ಪಡೆಯಬಹುದಾಗಿದೆ. ಇದರೊಂದಿಗೆ ಹೆಚ್‌ಎಸ್‌ಬಿಸಿ ಕ್ರೆಡಿಟ್ ಕಾರ್ಡ್‌ನಲ್ಲಿ ಖರೀದಿಸಿದರೆ 5% ತ್ವರಿತ ರಿಯಾಯಿತಿ ಸಿಗಲಿದೆ.

ನೋಕಿಯಾ G11 ಪ್ಲಸ್‌ಗೆ ಭರ್ಜರಿ ಡಿಸ್ಕೌಂಟ್:ಆಫರ್‌ ಬೆಲೆ ತಿಳಿದ್ರೆ ವಾವ್‌ ಅಂತೀರಾ!

ನೋಕಿಯಾ G11 ಪ್ಲಸ್‌ ಅನ್ನು 100ರೂ. ಗೆ ಹೇಗೆ ಖರೀದಿಸುವುದು?

ಬ್ಯಾಂಕ್‌ ಆಫರ್‌ ಹೊರತುಪಡಿಸಿದ ಈ ಫೋನ್ ಮೇಲೆ ವಿನಿಮಯ ಆಫರ್‌ ಸಹ ಇದ್ದು, ಅಮೆಜಾನ್ ಮೂಲಕ ನಿಮ್ಮ ಹಳೆಯ ಫೋನ್‌ ಅನ್ನು ಮಾರಿದರೆ 9,900 ರೂ. ಗಳ ವರೆಗೂ ನೀವು ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇದರಿಂದ ನಿಮ್ಮ ಕೈಗೆ ಈ ಹೊಸ ಫೋನ್ ಕೇವಲ 100 ರೂ. ಗಳಲ್ಲಿ ಸೇರಲಿದೆ. ಆದರೆ, ನಿಮ್ಮ ಹಳೆಯ ಫೋನ್‌ ಸುಸ್ಥಿಯಲ್ಲಿದ್ದರೆ ಮಾತ್ರ ಇಷ್ಟು ಮೊತ್ತದ ಆಫರ್‌ ಲಭ್ಯ. ಇಲ್ಲವಾದರೆ ಮೊಬೈಲ್‌ ಕಾರ್ಯಕ್ಷಮತೆಗೆ ತಕ್ಕ ರಿಯಾಯಿತಿ ಸಿಗಲಿದೆ.

ನೋಕಿಯಾ G11 ಪ್ಲಸ್‌ಗೆ ಭರ್ಜರಿ ಡಿಸ್ಕೌಂಟ್:ಆಫರ್‌ ಬೆಲೆ ತಿಳಿದ್ರೆ ವಾವ್‌ ಅಂತೀರಾ!

ನೋಕಿಯಾ G11 ಪ್ಲಸ್‌ ಪ್ರಮುಖ ಫೀಚರ್ಸ್‌

ನೋಕಿಯಾ G11 ಪ್ಲಸ್‌ ಸ್ಮಾರ್ಟ್‌ಫೋನ್ 6.52 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 720 x 1600 ಪಿಕ್ಸೆಲ್ ರೆಸಲ್ಯೂಶನ್‌ ನೀಡಲಿದೆ. ಹಾಗೆಯೇ 90Hz ರಿಫ್ರೆಶ್ ರೇಟ್‌ ಬೆಂಬಲ ಇದರಲ್ಲಿದೆ. ಇನ್ನು ಯೂನಿಸೋಕ್ T606 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುವ ಈ ಫೋನ್ 3GB RAM + 32GB, 3GB RAM +64GB ಹಾಗೂ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ನಲ್ಲಿ ಲಭ್ಯ ಇದೆ.

ನೋಕಿಯಾ G11 ಪ್ಲಸ್‌ ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಹೊಂದಿದೆ. ಜೊತೆಗೆ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸರ್‌ ಪಡೆದುಕೊಂಡಿದೆ. ಇದರೊಂದಿಗೆ 10W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

Best Mobiles in India

English summary
Nokia G11 Plus is available at an affordable price, though you can get this phone for just Rs 100.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+