ಯೂಟ್ಯೂಬ್ ಬಳಕೆದಾರರೇ ಗಮನಿಸಿ... 3 ತಿಂಗಳವರೆಗೆ ಈ ಉಚಿತ ಸೇವೆ ಪಡೆಯಿರಿ!
ಯೂಟ್ಯೂಬ್ (YouTube) ಹಿಂದೆಂದಿಗಿಂತಲೂ ಈಗ ಬಳಕೆದಾರರಿಗೆ ಸಾಕಷ್ಟು ಸೌಲಭ್ಯ ಕಲ್ಪಿಸಿಕೊಡುತ್ತಿದೆ. ಈ ಪ್ಲಾಟ್‌ಫಾರ್ಮ್‌ನಲ್ಲಿ ಮಾಹಿತಿ ಹಾಗೂ ಮನರಂಜನೆ ಪಡೆಯುವುದರ ಜೊತೆಗೆ ಕ್ರಿಯೇಟರ್ಸ್‌ಗಳು ಉತ್ತಮ ಸಂಪಾದನೆ ಸಹ ಮಾಡುತ್ತಿದ್ದಾರೆ. ಈ ನಡುವೆ ಯೂಟ್ಯೂಬ್ ಹೊಸ ಸೌಲಭ್ಯ ಕಲ್ಪಿಸಿದೆ.
ಹೌದು, ಯೂಟ್ಯೂಬ್‌ನಲ್ಲಿ ಸಾಕಷ್ಟು ವಿಡಿಯೋಗಳು (Videos) ಬಳಕೆದಾರರನ್ನು ಮಾಹಿತಿ ಹಾಗೂ ಮನರಂಜನೆಯ ಲೋಕದಲ್ಲಿ ತೇಲುವಂತೆ ಮಾಡುತ್ತವೆ. ಅದಾಗ್ಯೂ ಇದರಲ್ಲಿ ಬರುವ ಜಾಹೀರಾತುಗಳು ಬಳಕೆದಾರರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತದೆ. ಆದರೆ ಈಗ ಮೂರು ತಿಂಗಳವರೆಗೆ ನೀವು ಉಚಿತ ಪ್ರೀಮಿಯಂ ಚಂದಾದಾರಿಕೆ ಪಡೆದುಕೊಳ್ಳಬಹುದಾಗಿದ್ದು, ಯಾವುದೇ ಅಡೆತಡೆ ಇಲ್ಲದೆ ಯೂಟ್ಯೂಬ್ ವಿಡಿಯೋ ವೀಕ್ಷಣೆ ಮಾಡಬಹುದಾಗಿದೆ. ಹಾಗಿದ್ರೆ, ಈ ಆಫರ್ ಕ್ಲೈಮ್ ಮಾಡುವುದು ಹೇಗೆಂದು ತಿಳಿಯೋಣ ಬನ್ನಿ.

ಫ್ರೀ ಚಂದಾದಾರಿಕೆ..: ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯು (YouTube Premium Subscription) ಪ್ರಸ್ತುತ ದೀರ್ಘಾವಧಿಯವರೆಗೆ ಉಚಿತವಾಗಿ ಲಭ್ಯ ಇದೆ. ಈ ಸದಸ್ಯತ್ವವು ಜಾಹೀರಾತು ಮುಕ್ತ ಕಂಟೆಂಟ್, ಬ್ಯಾಗ್ರೌಂಡ್ ಪ್ಲೇಬ್ಯಾಕ್ ಸೇರಿದಂತೆ ಇನ್ನೂ ಅನೇಕ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ. ಈ ಮೊದಲು ಈ ಸೇವೆ ಪಡೆಯಲು ಪ್ರತಿ ತಿಂಗಳು ಬಳಕೆದಾರರು ಹಣ ಪಾವತಿ ಮಾಡಬೇಕಿತ್ತು.
ಅಂದರೆ ಭಾರತದಲ್ಲಿ ತಿಂಗಳಿಗೆ 139 ರೂ.ಗಳು ಅಥವಾ ಮೂರು ತಿಂಗಳಿಗೆ 399ರೂ.ಗಳನ್ನು ಪಾವತಿ ಮಾಡುವ ಮೂಲಕ ಈ ಮೇಲೆ ತಿಳಿಸಿದ ಯೂಟ್ಯೂಬ್‌ನ ಸೇವೆ ಪಡೆದುಕೊಳ್ಳಬಹುದಾಗಿತ್ತು. ಆದರೆ, ಈಗ ಯಾವುದೇ ಹಣ ಪಾವತಿ ಮಾಡದೆ ಈ ಸೇವೆ ಪಡೆದುಕೊಳ್ಳಬಹುದಾಗಿದೆ. ಈ ಕೊಡುಗೆಯ ಅವಧಿಯು ಸದ್ಯಕ್ಕೆ ಅನಿರ್ದಿಷ್ಟವಾಗಿದ್ದು, ಜನರು ಈ ಉಚಿತ ಚಂದಾದಾರಿಕೆಯನ್ನು ಕೆಲವು ಸರಳ ಹಂತಗಳಲ್ಲಿ ಕ್ಲೈಮ್ ಮಾಡಿಕೊಳ್ಳಬಹುದು.
ಮೂರು ತಿಂಗಳ ಉಚಿತ ಚಂದಾದಾರಿಕೆ ಕ್ಲೈಮ್ ಮಾಡುವುದು ಹೇಗೆ?: ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯನ್ನು ಖರೀದಿಸದೇ ಇರುವವರಿಗೆ ಈ ಆಫರ್ ಕಾಣಿಸಿಕೊಳ್ಳುತ್ತದೆ. ಕೊಡುಗೆಯನ್ನು ಕ್ಲೈಮ್ (Claim) ಮಾಡುವ ಪ್ರಕ್ರಿಯೆಯು ತುಂಬಾ ಸರಳವಾಗಿದ್ದು, ಇದಕ್ಕಾಗಿ ನೀವು ಮೊದಲು ಯೂಟ್ಯೂಬ್ ಆಪ್ ಓಪನ್ ಮಾಡಿ. ನಂತರ ನಿಮ್ಮ ಪ್ರೊಫೈಲ್ ಐಕಾನ್ ಅನ್ನು ಟ್ಯಾಪ್ ಮಾಡಿ.
ಇದಾದ ನಂತರದಲ್ಲಿ ಅಲ್ಲಿ ಯೂಟ್ಯೂಬ್ ಪ್ರೀಮಿಯಂ (YouTube Premium) ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ. ಬಳಿಕ ಉಚಿತ 3 ತಿಂಗಳ ಕೊಡುಗೆಯನ್ನು ಆಯ್ಕೆಮಾಡಿ. ನಂತರ ಅದರ ಮೇಲೆ ಟ್ಯಾಪ್ ಮಾಡಿ. ಇದಾದ ಬಳಿಕ ನಿಮ್ಮ ಬ್ಯಾಂಕ್ ಕಾರ್ಡ್ ವಿವರಗಳನ್ನು ಎಂಟ್ರಿ ಮಾಡಿದರೆ ಯೂಟ್ಯೂಬ್ ಪ್ರೀಮಿಯಂ ಅನ್ನು ಮೂರು ತಿಂಗಳವರೆಗೆ ಉಚಿತವಾಗಿ ಬಳಕೆ ಮಾಡಬಹುದು.

ಇದಾದ ನಂತರದಲ್ಲಿ ನೀವು ತಿಂಗಳಿಗೆ 129 ರೂ.ಗಳನ್ನು ಪಾವತಿ ಮಾಡಬೇಕಾಗುತ್ತದೆ.ಈ ಶುಲ್ಕಗಳನ್ನು ತಪ್ಪಿಸಬೇಕು ಎಂದಾದರೆ ಈ ಆಫರ್ ಅವಧಿ ಮುಗಿಯುವ ಕೆಲವು ದಿನಗಳ ಮೊದಲು ನೀವು ಈ ಫ್ರೀ ಚಂದಾದಾರಿಕೆಯನ್ನು ರದ್ದು ಮಾಡಬಹುದಾಗಿದೆ. ಇದಕ್ಕಾಗಿ ಯೂಟ್ಯೂಬ್ ಅನುವು ಮಾಡಿಕೊಟ್ಟಿದೆ. ನಿಮಗೆ ಮತ್ತೊಂದು ಖುಷಿ ಸುದ್ದಿ ಎಂದರೆ ನೀವು ಎರಡು ಜಿಮೇಲ್ ಐಡಿ ಹೊಂದಿದ್ದರೆ ಒಂದಾದ ನಂತರ ಮತ್ತೊಂದು ಐಡಿ ಬಳಕೆ ಮಾಡಿಕೊಳ್ಳಬಹುದು.
ಪ್ರೀಮಿಯಂ ಚಂದಾದಾರಿಕೆ ಯಲ್ಲಿ ಏನೆಲ್ಲಾ ಲಭ್ಯ?: ಯೂಟ್ಯೂಬ್ ಪ್ರೀಮಿಯಂ ಅನ್ನು ಇತರೆ ಸ್ಟ್ರೀಮಿಂಗ್ (Streaming) ಆಪ್‌ಗಳಿಗೆ ಹೋಲಿಕೆ ಮಾಡಿದರೆ ಈ ಆಪ್ ಆಡಿಯೋ ಸ್ಟ್ರೀಮಿಂಗ್ ವಿಭಾಗದಲ್ಲಿ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಬಳಕೆದಾರರು ಯೂಟ್ಯೂಬ್ ಮ್ಯೂಸಿಕ್ ಆಪ್ ಅನ್ನು ಅನ್ನು ಉಚಿತವಾಗಿ ಬಳಸುವುದು ಮಾತ್ರವಲ್ಲದೆ ಮೊದಲೇ ತಿಳಿಸಿದಂತೆ ಜಾಹೀರಾತು-ಮುಕ್ತ ವಿಡಿಯೋ ವೀಕ್ಷಣೆ ಮಾಡಬಹುದು.
ಇದರೊಂದಿಗೆ ಯೂಟ್ಯೂಬ್ ಮ್ಯೂಸಿಕ್‌ನಲ್ಲಿ (YouTube Music) ನಿಮಗೆ ಹಾಡುಗಳನ್ನು ಡೌನ್‌ಲೋಡ್ ಮಾಡಲು, ಸಾಹಿತ್ಯವನ್ನು ವೀಕ್ಷಣೆ ಸೇರಿದಂತೆ ಇತರೆ ಫೀಚರ್ಸ್ ಸಹ ಇದರಲ್ಲಿ ಲಭ್ಯ. ಅಂದರೆ ಒಬ್ಬರು 80 ಮಿಲಿಯನ್‌ಗಿಂತಲೂ ಹೆಚ್ಚು ಅಧಿಕೃತ ಹಾಡುಗಳಿಗೆ ಮತ್ತು ಇತರ ಕಂಟೆಂಟ್‌ಗಳಿಗೆ ಅನಿಯಮಿತ, ಜಾಹೀರಾತು-ಮುಕ್ತ ಪ್ರವೇಶವನ್ನು ಪಡೆಯಲಿದ್ದಾರೆ. ಇದು ಪಿಕ್ಚರ್-ಇನ್-ಪಿಕ್ಚರ್ ಮೋಡ್ (ಪಿಐಪಿ) ಅನ್ನು ಸಹ ಬೆಂಬಲಿಸಲಿದ್ದು, ಆಪ್ ಅನ್ನು ಅನ್ನು ಕ್ಲೋಸ್ ಮಾಡಿದರೂ ಸಹ ಯೂಟ್ಯೂಬ್‌ನಲ್ಲಿ ಕಂಟೆಂಟ್ ವೀಕ್ಷಣೆ ಮಾಡಲು ಸಾಧ್ಯ.
ಭಾರತದಲ್ಲಿ ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆ ಬೆಲೆ: ಸದ್ಯಕ್ಕೆ ಭಾರತದಲ್ಲಿ ವಿವಿಧ ರೀತಿಯ ಚಂದಾದಾರಿಕೆ ಆಯ್ಕೆ ಇವೆ. ಅಂದರೆ ಈ ಪ್ಲ್ಯಾನ್‌ಗಳು ಕೇವಲ ಅವಧಿಯಗಳ ಆಧಾರದ ಮೇಲೆ ಲಭ್ಯ ಇವೆ. ಅದರಲ್ಲಿ ಪ್ರಮುಖವಾಗಿ ಮೂರು ತಿಂಗಳ ಯೋಜನೆಗೆ 399ರೂ., ಒಂದು ತಿಂಗಳ ಯೋಜನೆಗೆ 129ರೂ.ಗಳು ಹಾಗೂ ಒಂದು ವರ್ಷದ ಪ್ಲ್ಯಾನ್‌ಗೆ 1,290 ರೂ.ಗಳನ್ನು ಪಾವತಿ ಮಾಡಬೇಕಿದೆ.


Click it and Unblock the Notifications








