ಇತ್ತೀಚಿಗೆ ಭಾರೀ ಬೆಲೆ ಇಳಿಕೆ ಕಂಡ ಸ್ಮಾರ್ಟ್‌ಫೋನ್‌ಗಳ ಲಿಸ್ಟ್ ಇಲ್ಲಿದೆ!
ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಫೋನ್‌ಗಳು ಲಗ್ಗೆ ಇಟ್ಟು ಸದ್ದು ಮಾಡುತ್ತವೆ. ಹಾಗೆಯೇ ಕೆಲವೊಮ್ಮೆ ಈಗಾಗಲೇ ಲಾಂಚ್ ಆಗಿರುವ ಫೋನ್‌ಗಳ ಬೆಲೆಯಲ್ಲಿ ಇಳಿಕೆ ಆದಾಗ ಅವು ಗ್ರಾಹಕರನ್ನು ಸೆಳೆಯುತ್ತವೆ. ಹೀಗೆ ಇತ್ತೀಚಿಗೆ ಮೊಟೊರೊಲಾ ಸಂಸ್ಥೆಯು ಕೆಲವು ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದೆ.
ಹೌದು, ಜನಪ್ರಿಯ ಮೊಟೊ ಸಂಸ್ಥೆಯು ಕೆಲವು G ಸರಣಿಯ ಹಾಗೂ ಎಡ್ಜ್ ಸರಣಿಯ ಫೋನ್‌ಗಳು ದಿಢೀರ್ ಬೆಲೆ ಇಳಿಕೆ ಕಂಡಿದ್ದು, ಮೊಬೈಲ್ ಪ್ರಿಯರು ಹುಬ್ಬೇರಿಸುವಂತೆ ಮಾಡಿದೆ. ಬೆಲೆ ಕಡಿತ ಕಂಡ ಫೋನ್‌ಗಳಲ್ಲಿ ಮೀಡ್‌ರೇಂಜ್ ಹಾಗೂ ಬಜೆಟ್ ಬೆಲೆಯ ಫೋನ್‌ಗಳು ಸೇರಿವೆ. ಹಾಗಾದರೆ ಬೆಲೆ ಇಳಿಕೆ ಕಂಡ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮೊಟೊ G72 ಬೆಲೆಯಲ್ಲಿ ಇಳಿಕೆ
ಮೊಟೊ G72 ಸ್ಮಾರ್ಟ್‌ಫೋನ್ 6GB + 128GB ಸ್ಟೋರೇಜ್ ವೇರಿಯಂಟ್ ಬೆಲೆಯಲ್ಲಿ 3,000ರೂ. ಇಳಿಕೆ ಆಗಿದೆ. ಅಂದಹಾಗೆ ಸ್ಮಾರ್ಟ್‌ಫೋನ್ 1080 x 2400 ಪಿಕ್ಸಲ್ ರೆಸಲ್ಯೂಶನ್ ಸಫೋರ್ಟ್ ಪಡೆದಿದ್ದು, 6.78 ಇಂಚಿನ pOLED ಮಾದರಿಯ ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾ ಟೆಕ್ ಹಿಲಿಯೋ G99 ಪ್ರೊಸೆಸರ್ ವೇಗವನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಹಾಗೆಯೇ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದ್ದು, ಹಾಗೆಯೇ ಅದಕ್ಕೆ ಪೂರಕವಾಗಿ 33W ಸಾಮರ್ಥ್ಯದ ಟರ್ಬೋ ಪವರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ.
ಮೊಟೊ G82 5G ಬೆಲೆಯಲ್ಲಿ ಭಾರೀ ಇಳಿಕೆ
ಮೊಟೊ G82 5G ಫೋನ್ ಬೆಲೆಯಲ್ಲಿ 1500ರೂ. ಇಳಿಕೆ ಆಗಿದೆ. ಅಂದಹಾಗೆಯೇ ಈ ಫೋನ್ 6GB + 128GB ಮತ್ತು 8GB + 128GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದ್ದು, ಈ ಎರಡು ವೇರಿಯಂಟ್ ಬೆಲೆಯಲ್ಲಿಯೂ ದರ ಕಡಿತ ಆಗಿದೆ. ಈ ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ ಹೆಚ್‌ಡಿ+ ಪೋಲೆಡ್ ಡಿಸ್‌ಪ್ಲೇ ಹೊಂದಿದೆ. ಇದು 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ.ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್ ಹೊಂದಿದೆ.

ಹಾಗೆಯೇ ಈ ಫೋನ್ ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 30W ಚಾರ್ಜಿಂಗ್‌ಗೆ ಬೆಂಬಲಿಸಲಿದೆ.
ಮೊಟೊ ಎಡ್ಜ್ 30 ಬೆಲೆ ಕಡಿತ
ಮೊಟೊ ಎಡ್ಜ್ 30 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಈಗ ಬರೋಬ್ಬರಿ 3,000ರೂ. ಗಳ ಇಳಿಕೆ ಆಗಿ. ಸ್ಮಾರ್ಟ್‌ಫೋನ್ 6GB + 128GB ಮತ್ತು 8GB + 128GB ವೇರಿಯಂಟ್ ಆಯ್ಕೆಗಳನ್ನು ಪಡೆದಿದ್ದು, ಈ ಎರಡು ವೇರಿಯಂಟ್ ಬೆಲೆಯಲ್ಲಿ ಈಗ ಬೆಲೆ ಇಳಿಕೆ ಆಗಿದೆ.ಇನ್ನು ಈ ಫೋನ್ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್ ಬಲವನ್ನು ಹೊಂದಿದೆ.

ಇದು ಆಂಡ್ರಾಯ್ಡ್ 12 OS ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, 4,020 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ಟರ್ಬೋಪವರ್ ಚಾರ್ಜಿಂಗ್ ತಂತ್ರಜ್ಞಾನ ಬೆಂಬಲಿಸಲಿದೆ.


Click it and Unblock the Notifications








