Home
ಸುದ್ದಿಜಾಲ

4 ಮೊಬೈಲ್ ಬಳಕೆದಾರರಲ್ಲಿ 3 ಮಂದಿಯಲ್ಲಿ ನೋಮೋಫೋಬಿಯಾ: ಶಾಕಿಂಗ್‌ ವರದಿ!

ಸ್ಮಾರ್ಟ್‌ಫೋನ್‌ ಅನ್ನು ಬಹುಪಾಲು ಮಂದಿ ಅರೆ ಕ್ಷಣ ಸಹ ಬಿಟ್ಟಿರುವುದಿಲ್ಲ. ಅಷ್ಟರ ಮಟ್ಟಿಗೆ ಸ್ಮಾರ್ಟ್‌ಫೋನ್‌ಗೆ ಒಗ್ಗಿಕೊಂಡಿದ್ದಾರೆ. ಈ ಮೂಲಕ ತಮಗೆ ಅಗತ್ಯವಾದ ಸೌಲಭ್ಯಗಳನ್ನು ಈ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ಭಾರತದ ಸ್ಮಾರ್ಟ್‌ಫೋನ್ ಬಳಕೆದಾರರ ಸಂಬಂಧ ಅಚ್ಚರಿ ಮಾಹಿತಿ ಹೊರಬಿದ್ದಿದೆ. ಈ ಮೂಲಕ ಬಹುಪಾಲು ಮಂದಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಹೌದು, ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಇಂದು ಪ್ರಮುಖ ಕಂಪೆನಿಗಳು ವಿವಿಧ ಫೀಚರ್ಸ್‌ ಇರುವ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಿಕೊಂಡು ಬರುತ್ತಲೇ ಇವೆ. ಅದರಂತೆ ಜನರೂ ಸಹ ಹೊಸ ಫೋನ್‌ಗಳಿಗೆ ಅಪ್‌ಡೇಟ್ ಆಗುತ್ತಿದ್ದು, ನೂತನ ತಂತ್ರಜ್ಞಾನದ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ಭಾರತದಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಶಾಕಿಂಗ್‌ ವರದಿ ಹೊರಬಿದ್ದಿದೆ. ಹಾಗಿದ್ರೆ, ಬನ್ನಿ ಈ ವರದಿ ಬಗ್ಗೆ ವಿವರವನ್ನು ಗಮನಿಸೋಣ.

4 ಮೊಬೈಲ್ ಬಳಕೆದಾರರಲ್ಲಿ 3 ಮಂದಿಯಲ್ಲಿ ನೋಮೋಫೋಬಿಯಾ: ಶಾಕಿಂಗ್‌ ವರದಿ!

4 ಮೊಬೈಲ್ ಬಳಕೆದಾರರಲ್ಲಿ 3 ಮಂದಿಯಲ್ಲಿ ನೋಮೋಫೋಬಿಯಾ: ಭಾರತದಲ್ಲಿ ಸಮೀಕ್ಷೆ ನಡೆಸಿದ ಪ್ರತಿ ನಾಲ್ವರಲ್ಲಿ ಮೂವರಲ್ಲಿ ನೋಮೋಫೋಬಿಯಾ(NoMoPhobia)ಇದೆ ಎಂದು ತಿಳಿದುಬಂದಿದೆ. ನೋಮೋಫೋಬಿಯಾ ಎಂದರೆ ಕಡಿಮೆ ಬ್ಯಾಟರಿ ಅಥವಾ ಇತರ ಕಾರಣಗಳಿಂದ ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ಬೇರ್ಪಡುವ ಭಯವನ್ನು ಹೊಂದಿರುವುದು. ಇದರಿಂದ ಬಳಕೆದಾರರು ವಿಚಿತ್ರವಾಗಿ ವರ್ತಿಸಲು ಮುಂದಾಗುತ್ತಾರೆ.

ಸಮೀಕ್ಷೆ ಮಾಡಿದವರು ಯಾರು?: ಮೊಬೈಲ್ ಫೋನ್ ತಯಾರಕ ಒಪ್ಪೋ ಮತ್ತು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೌಂಟರ್‌ಪಾಯಿಂಟ್ ಜಂಟಿ ಅಧ್ಯಯನ ಮಾಡಲಾಗಿದ್ದು, ಇದು ತನ್ನ ವರದಿಯಲ್ಲಿ ಈ ಮಾಹಿತಿ ಉಲ್ಲೆಖಿಸಿದೆ. ಅದರಂತೆ ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಶೇಕಡಾ 65 % ಜನರು ಭಾವನಾತ್ಮಕ ಅಸ್ವಸ್ಥತೆ ಅಥವಾ ಆತಂಕ, ಸಂಪರ್ಕ ಕಡಿತ, ಅಸಹಾಯಕ, ಕಳೆದುಹೋಗುವ ಭಯವನ್ನು ಅನುಭವಿಸುತ್ತಾರೆ ಎಂದು ಕಂಡುಕೊಳ್ಳಲಾಗಿದೆ. ಸಮೀಕ್ಷೆಯು ಶ್ರೇಣಿ 1 ಮತ್ತು ಕೆಲವು ಶ್ರೇಣಿ 2 ನಗರಗಳಲ್ಲಿ 1,500 ಪ್ರತಿಸ್ಪಂದಕರನ್ನು ಒಳಗೊಂಡಿತ್ತು.

4 ಮೊಬೈಲ್ ಬಳಕೆದಾರರಲ್ಲಿ 3 ಮಂದಿಯಲ್ಲಿ ನೋಮೋಫೋಬಿಯಾ: ಶಾಕಿಂಗ್‌ ವರದಿ!

ಇದು ಅಡಿಪಾಯದ ಅಧ್ಯಯನವಾಗಿದ್ದು, ನಾವು ನಮ್ಮ ಉತ್ಪನ್ನಗಳನ್ನು ತಯಾರಿಸುವ ರೀತಿಯಲ್ಲಿ ಇದು ಸಹಕಾರಿಯಾಗಿದೆ. ಬ್ಯಾಟರಿ ಕಾರ್ಯನಿರ್ವಹಿಸದ ಕಾರಣ 60 ಪ್ರತಿಶತ ಜನರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಬದಲಾಯಿಸಲು ಹೋಗುತ್ತಿದ್ದಾರೆ. ಈ ಮೂಲಕ ನಾವು ನಮ್ಮ ಉತ್ಪನ್ನಗಳಿಗೆ ನಮ್ಮದೇ ಆದ ಬ್ಯಾಟರಿ ತಯಾರಿಸಲು ಸೂಚಿಸುತ್ತೇವೆ ಎಂದು ಒಪ್ಪೋ ಇಂಡಿಯಾದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ದಮಯಂತ್ ಸಿಂಗ್ ಖನೋರಿಯಾ ಮಾಹಿತಿ ನೀಡಿದ್ದಾರೆ.

ಅಧ್ಯಯನದಿಂದ ಕಂಡುಬಂದ ಫಲಿತಾಂಶ ಏನು?:ಈ ಸಮೀಕ್ಷೆಯಲ್ಲಿ 74 % ಮಹಿಳಾ ಬಳಕೆದಾರರಿಗೆ ಹೋಲಿಸಿದರೆ 82 % ಪುರುಷ ಬಳಕೆದಾರರು ಹೆಚ್ಚು ಆತಂಕವನ್ನು ಅನುಭವಿಸುತ್ತಾರೆ ಎಂದು ಅಧ್ಯಯನದಿಂದ ಕಂಡುಕೊಳ್ಳಲಾಗಿದೆ. ಇದರಲ್ಲಿ 92.5 %ರಷ್ಟು ಬಳಕೆದಾರರು ತಮ್ಮ ಫೋನ್‌ನಲ್ಲಿ ಪವರ್ ಸೇವಿಂಗ್ ಮೋಡ್ ಅನ್ನು ಬಳಕೆ ಮಾಡುತ್ತಾರೆ. ಜೊತೆಗೆ 87 % ಜನರು ತಮ್ಮ ಫೋನ್ ಚಾರ್ಜ್ ಆಗುತ್ತಿರುವಾಗ ಬಳಕೆ ಮಾಡುತ್ತಾರೆ.

ಹಾಗೆಯೇ 42 % ಜನರು ಮನರಂಜನೆಗಾಗಿ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಾರೆ ಮತ್ತು 65 % ಬಳಕೆದಾರರು ಬ್ಯಾಟರಿಯನ್ನು ಉಳಿಸಲು ಫೋನ್ ಬಳಕೆಯನ್ನೇ ನಿಲ್ಲಿಸುತ್ತಾರೆ. ಇದರೊಂದಿಗೆ 82 % ಜನರು ತಮ್ಮ ಸಾಮಾಜಿಕ ಮಾಧ್ಯಮ ಬಳಕೆಯನ್ನು ಮಿತಿಗೊಳಿಸುತ್ತಾರೆ. ಈ ಅಧ್ಯಯನದಿಂದ ತಿಳಿದುಬಂದ ಪ್ರಮುಖ ವಿಚಾರ ಎಂದರೆ ಭಾರತೀಯರು ತಮ್ಮ ಮೊಬೈಲ್ ಅನ್ನು ಅದಾ ಕಾಲ ಸಕ್ರಿಯವಾಗಿ ಇಟ್ಟುಕೊಳ್ಳಲು ಹೆಚ್ಚು ಬ್ಯಾಟರಿ ಕಡೆ ತಮ್ಮ ಗಮನ ಕೇಂದ್ರೀಕರಿಸುತ್ತಾರೆ ಎನ್ನುವುದು.

4 ಮೊಬೈಲ್ ಬಳಕೆದಾರರಲ್ಲಿ 3 ಮಂದಿಯಲ್ಲಿ ನೋಮೋಫೋಬಿಯಾ: ಶಾಕಿಂಗ್‌ ವರದಿ!

ಈ ಅಧ್ಯಯನಕ್ಕೆ ಸಂಬಂಧಿಸಿದಂತೆ ಕೌಂಟರ್‌ಪಾಯಿಂಟ್ ಸಂಶೋಧನಾ ನಿರ್ದೇಶಕ ತರುಣ್ ಪಾಠಕ್ ಮಾಹಿತಿ ನೀಡಿ, ನಮ್ಮ ಸ್ಮಾರ್ಟ್‌ಫೋನ್‌ಗಳು ನಮ್ಮ ವೈಯಕ್ತಿಕ ವಿಶ್ವಗಳಾಗಿ ಮಾರ್ಪಟ್ಟಿವೆ, ಅದು ನಮಗೆ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಮತ್ತು ಮನರಂಜನೆಗಾಗಿ ಸಂಪರ್ಕದಲ್ಲಿರಲು ಅನುವು ಮಾಡಿಕೊಡುತ್ತದೆ. ಈ ಕಾರಣಕ್ಕೆ ಅನೇಕರು ಫೋನ್ ಇಲ್ಲದೆ ಇರುವುದಿಲ್ಲ.

ಇದರಲ್ಲಿ ಜನರು ಬ್ಯಾಟರಿ ಖಾಲಿಯಾಗುವ ಮತ್ತು ತಮ್ಮ ಫೋನ್‌ಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂಬ ಆಲೋಚನೆಯಿಂದ ಆಗಾಗ್ಗೆ ಆತಂಕಕ್ಕೊಳಗಾಗುತ್ತಾರೆ. 31 ರಿಂದ 40 ವರ್ಷ ವಯಸ್ಸಿನ ಕೆಲಸ ಮಾಡುವವರಲ್ಲಿ ಕಡಿಮೆ ಬ್ಯಾಟರಿ ಆತಂಕದ ಭಾವನೆ ಹೆಚ್ಚಾಗಿರುತ್ತದೆ. ಇದರ ನಂತರ 25 ರಿಂದ 30 ವರ್ಷ ವಯಸ್ಸಿನವರೂ ಈ ಬಗ್ಗೆ ಹೆಚ್ಚಿನ ಆತಂಕ ಹೊಂದಿರುತ್ತಾರೆ ಎಂದು ತಿಳಿಸಿದ್ದಾರೆ.

Best Mobiles in India

English summary
Three out of every four people surveyed in India are known to have nomophobia. Nomophobia is the fear of being separated from one's smartphones due to low battery or other reasons. The survey was conducted by Oppo and Counterpoint.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+