ಈ ತಿಂಗಳು ಮಂಗಳ ಗ್ರಹದ ಅಂಗಳ ಸೇರಲಿವೆ ಈ ಮೂರು ದೇಶಗಳ ನೌಕೆಗಳು!

|

ನಾಸಾ, ಚೀನಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌(UAE) ದೇಶಗಳ ಬಾಹ್ಯಾಕಾಶ ನೌಕೆಗಳು ಈ ತಿಂಗಳು ಮಂಗಳ ಗ್ರಹವನ್ನು ತಲುಪಲು ಸಜ್ಜಾಗಿವೆ. ಮಂಗಳ ಗ್ರಹದ ಸುತ್ತ ಕಕ್ಷೆಗೆ ಪ್ರವೇಶ ಪಡೆಯಬಹುದು ಅಥವಾ ಅದರ ಧೂಳಿನ ಕೆಂಪು ಮೇಲ್ಮೈಗೆ ಇಳಿಯಬಹುದು. ಮಂಗಳನ ಅಂಗಳ ಪ್ರವೇಶಿಸಿದ ನಂತರ ಅಲ್ಲಿ ಅನ್ಯಜೀವಿಗಳ ಕುರುಹುಗಳನ್ನು ಪತ್ತೆ ಮಾಡುವುದು ಹಾಗೂ ನೀರಿನ ಅಂಶಗಳ ಪತ್ತೆ ಮಾಡುವುದು ಈ ಮರು ದೇಶಗಳ ಬಾಹ್ಯಾಕಾಶ ನೌಕೆಗಳ ಮುಖ್ಯ ಉದ್ದೇಶವಾಗಿದೆ.

ಬಾಹ್ಯಾಕಾಶ

ನಾಸಾ, ಚೀನಾ ಮತ್ತು ಯುಎಇ ದೇಶಗಳ ಬಾಹ್ಯಾಕಾಶ ಏಜೆನ್ಸಿಗಳ ಕಳೆದ ಜುಲೈ 2020 ರಲ್ಲಿ ವಿಭಿನ್ನ ಬಾಹ್ಯಾಕಾಶ ನೌಕೆಗಳನ್ನು ಮಂಗಳ ಗ್ರಹಕ್ಕೆ ಉಡಾವಣೆ ಮಾಡಿದ್ದವು. ಈ ಮೂರು ದೇಶಗಳ ನೌಕೆಗಳು ಫೆಬ್ರವರಿ 2021ರಲ್ಲಿ ಮಂಗಳನ ಕಕ್ಷೆಗೆ ಸೇರಲಿವೆ ಎಂದು ನಿರೀಕ್ಷಿಸಲಾಗಿತ್ತು. ಅದರಂತೆ ಈಗ ಈ ಮೂರು ಬಾಹ್ಯಾಕಾಶ ನೌಕೆಗಳು ಮಂಗಳನ ಕಕ್ಷೆಗೆ ಪ್ರವೇಶ ಪಡೆಯಲಿವೆ. ವಿಜ್ಞಾನಿಗಳು ಈ ನೌಕೆಗಳ ಚಟುವಟಿಕೆಗಳ ಮೇಲೆ ತಮ್ಮ ಗಮನ ಕೆಂದ್ರೀಕರಿಸಿದ್ದು, ವಿಜ್ಞಾನ ವಲಯದಲ್ಲಿ ಕುತೂಹಲ ಮೂಡಿಸಿದೆ.

ನಾಸಾದ- ರೋವರ್ ನೌಕೆ

ನಾಸಾದ- ರೋವರ್ ನೌಕೆ

ನಾಸಾ ಸಂಸ್ಥೆಯು ರೋವರ್ ನೌಕೆಯನ್ನು ಉಡಾವಣೆ ಮಾಡಿದೆ. ಇದು ಅನ್ಯಗ್ರಹದ ಜೀವನದ ಕುರುಹುಗಳನ್ನು ಪತ್ತೆ ಮಾಡುವುದು, ಮಂಗಳ ಗ್ರಹದ ಮಣ್ಣನ್ನು ಸ್ಕ್ಯಾನ್ ಮಾಡಲು ಮತ್ತು ಕೊರೆಯಲು ನಾಸಾ ತನ್ನ ಮಾರ್ಸ್ ರೋವರ್ ಕೆಲಸ ಮಾಡಲಿದೆ. ಪರಮಾಣು-ಚಾಲಿತ ರೋಬೋಟ್ ಆ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಲಾಗುವುದು ಎನ್ನಲಾಗಿದೆ. ಹಾಗೆಯೇ ಬೇರೊಂದು ಮಿಷನ್ ಮೂಲಕ ಆ ಸಂಗ್ರಹಗಳನ್ನು ಭೂಮಿಗೆ ತರಬಹುದು.

ಬಾಹ್ಯಾಕಾಶ

ಎಲ್ಲವೂ ನಿರೀಕೆಯಂತೆ ಸಾಗಿದರೇ, ಫೆಬ್ರವರಿ 18 ರಂದು ನಾಸಾದ ಬಾಹ್ಯಾಕಾಶ ನೌಕೆ ಮಂಗಳದ ವಾತಾವರಣದ ಅಧ್ಯಯನ ಮಾಡುತ್ತದೆ. ನಂತರ ರೋವರ್ ಅನ್ನು ಮಂಗಳನ Jezero craterನಲ್ಲಿ ಹಿಂದಿನ ಸೂಕ್ಷ್ಮಜೀವಿಯ ಜೀವನದ ಸಂಕೇತಗಳ ಬಗ್ಗೆ ಅನ್ವೇಷಣೆ ನಡೆಸಲಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನ(UAE) - ಹೋಪ್ ಆರ್ಬಿಟರ್

ಯುನೈಟೆಡ್ ಅರಬ್ ಎಮಿರೇಟ್ಸ್‌ನ(UAE) - ಹೋಪ್ ಆರ್ಬಿಟರ್

ಯುಎಇ ದೇಶದ ಹೋಪ್ ಆರ್ಬಿಟರ್ ಎಲ್ಲಕ್ಕಿಂತ ಮೊದಲು ಮಂಗಳನ ಕಕ್ಷೆ ಸೇರಲಿದೆ ಎಂದು ನಿರೀಕ್ಷೆ ವ್ಯಕ್ತಪಡಿಸಲಾಗುತ್ತಿದೆ. ಕಳೆದ ವರ್ಷ ಜುಲೈ 20 ರಂದು ತನೆಗಾಶಿಮಾ ಬಾಹ್ಯಾಕಾಶ ಕೇಂದ್ರದಿಂದ H2-A ಹೆಸರಿನ ರಾಕೆಟ್ ಸಹಾಯದಿಂದ ಈ ನೌಕೆಯನ್ನು ಬಾಹ್ಯಾಕಾಶಕ್ಕೆ ಹಾರಿಬಿಡಲಾಗಿದೆ. ಇದು ಫೆಬ್ರುವರಿಯಲ್ಲಿ ಮಂಗಳನ ಕಕ್ಷೆಗೆ ಪ್ರವೇಶಿಸುವ ಸಾಧ್ಯತೆ ಎನ್ನಲಾಗಿದೆ.

ಎಮಿರೇಟ್ಸ್

ಅಲ್ಲದೇ ಫೆಬ್ರುವರಿ 9 ರಂದು ಸಂಯುಕ್ತ ಅರಬ್ ಎಮಿರೇಟ್ಸ್ ಸ್ಥಾಪನೆಗೊಂಡು 50 ವರ್ಷ ಪೂರ್ಣಗೊಳ್ಳಲಿರುವ ಕಾರಣ ಈ ತಿಂಗಳು ಮಹತ್ವ ಅನಿಸುತ್ತದೆ. ಮಂಗಳನ ಮೇಲ್ಮೈ ಮೇಲೆ ತಲುಪಿದ ಬಳಿಕ ಹೋಪ್ ಆರ್ಬಿಟರ್ ಮಂಗಳನ ಅಂಗಳದಲ್ಲಿನ ವಾತಾವರಣ ಹಾಗೂ ಜಲವಾಯು ಅಧ್ಯಯನ ನಡೆಸಲಿದೆ. ಮಂಗಳ ಗ್ರಹದಲ್ಲಿನ ಕೆಳಮಟ್ಟದ ವಾತಾವರಣವನ್ನು ಅಳೆಯಲು ಇದರಲ್ಲಿ ಸ್ಪೆಕ್ಟ್ರೋಮೀಟರ್ ಅಳವಡಿಸಲಾಗಿದೆ.

ಚೀನಾ ದೇಶದ - ಟಿಯಾನ್ವೆನ್-1 ನೌಕೆ

ಚೀನಾ ದೇಶದ - ಟಿಯಾನ್ವೆನ್-1 ನೌಕೆ

ಇದು ಚೀನಾದ ಮೊದಲ ಅಂತರಗ್ರಹ ಕಾರ್ಯಾಚರಣೆಯಾಗಿದೆ. UAE ಬಳಿಕ ಚೀನಾ ದೇಶದ ಟಿಯಾನ್ವೆನ್ -1 ಮಂಗಳನ ಕಕ್ಷೆಗೆ ಪ್ರವೇಶಿಸಲಿದೆ ಎನ್ನಲಾಗಿದೆ. ಟಿಯಾನ್ವೆನ್-1 ನೌಕೆಯು ಲಾಂಗ್ ಮಾರ್ಚ್ ಫೈವ್ ರಾಕೆಟ್ ಆಗಿದ್ದು, ಇದನ್ನು ಕಳೆದ ವರ್ಷ ಹೈನಾನ್ ದ್ವೀಪದಿಂದ ಉಡಾವಣೆ ಮಾಡಲಾಗಿತ್ತು. ಚೈನೀಸ್ ಭಾಷೆಯಲ್ಲಿ ಟಿಯಾನ್ವೆನ್ ಎಂದರೆ 'ಸ್ವರ್ಗದ ಸವಾಲುಗಳು' ಎಂದರ್ಥ ಆಗಿದೆ.

ಲ್ಯಾಂಡರ್

ಆರ್ಬಿಟರ್ ಲ್ಯಾಂಡಿಂಗ್ ಸೈಟ್ ಅನ್ನು ಸಮೀಕ್ಷೆ ಮಾಡಲು ಒಂದೆರಡು ತಿಂಗಳುಗಳನ್ನು ಕಳೆದ ನಂತರ, ಅದು ಲ್ಯಾಂಡರ್ ಮತ್ತು ರೋವರ್ ಅನ್ನು ಜ್ವಾಲಾಮುಖಿ ಬಂಡೆಯ ವಿಶಾಲ ಕ್ಷೇತ್ರವಾದ ಯುಟೋಪಿಯಾ ಪ್ಲಾನಿಟಿಯಾಗೆ ಬಿಡಬೇಕು. ನಂತರ ಲ್ಯಾಂಡರ್ ರೋವರ್ ತನ್ನ ಪ್ಲಾಟ್‌ಫಾರ್ಮ್‌ನಿಂದ ಉರುಳಲು ಮತ್ತು ಮಂಗಳದ ಮೈದಾನಕ್ಕೆ ಒಂದು ರಾಂಪ್ ಅನ್ನು ನಿಯೋಜಿಸಲು ಹೊಂದಿಸಲಾಗಿದೆ. ಮೇ ತಿಂಗಳಲ್ಲಿ ಲ್ಯಾಂಡಿಂಗ್ ನಡೆಯಲಿದೆ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ (CNSA) ಹೇಳಿದೆ.

Best Mobiles in India

English summary
3 Spacecraft Are Set To Reach Mars This Month, From NASA, China And UAE.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X