ಬಿಲ್‌ ಗೇಟ್ಸ್‌ ಹೇಳಿದ ಪ್ರಪಂಚಕ್ಕೇ ಸಹಾಯವಾಗುವ ಟೆಕ್ನಾಲಜಿಗಳು

By Suneel
|

ಪ್ರಪಂಚದಲ್ಲಿ ಇಂದು ಮಾನವರು ಎದುರಿಸುತ್ತಿರುವ ಸಮಸ್ಯೆಗಳು ಒಂದಲ್ಲಾ, ಎರಡಲ್ಲಾ ಹಲವಾರು ಸಮಸ್ಯೆಗಳಿವೆ. ಅವುಗಳು ಇಂಧನ ಸಮಸ್ಯೆ, ವಿದ್ಯುತ್‌ ಸಮಸ್ಯೆ ಉದಾಹರಣೆಗೆ ಇರಬಹುದು. ಆದರೆ ಮುಂದಿನ ದಿನಗಳಲ್ಲಿ ಇವುಗಳ ಕೊರತೆ ಜಾಸ್ತಿಯಾದರೆ ಅಂತಹ ಸಮಯದಲ್ಲಿ ಕೊರತೆ ಹೇಗೆ ನೀಗಿಸುವುದು ಎಂಬ ಭಯಾನಕ ಪ್ರಶ್ನೆ ಎಷ್ಟು ಜನರನ್ನ ಕಾಡುತ್ತೋ ಇಲ್ಲವೋ ಗೊತ್ತಿಲ್ಲಾ. ಆದ್ರೆ ಟೆಕ್‌ ಕ್ಷೇತ್ರದ ಕಂಪ್ಯೂಟರ್‌ ಪ್ರೋಗ್ರಾಮರ್‌, ಬ್ಯುಸಿನೆಸ್‌ ಮ್ಯಾನ್‌, ಲೋಕೋಪಕಾರಿ ಹಾಗೂ ಬಂಡವಾಳ ಹೂಡಿಕೆದಾರರು ಆದ ಬಿಲ್‌ ಗೇಟ್ಸ್‌ ಚಿಂತಿಸಿದ್ದಾರೆ.

ಓದಿರಿ: ಜೈಲುಪಾಲಾದ ಬಿಲ್ ಗೇಟ್ಸ್ ಕಥೆ ನಿಮಗೆ ಗೊತ್ತೇ?

ಅಂದಹಾಗೆ ಬಿಲ್‌ ಗೇಟ್ಸ್‌ ರವರು ಪ್ರಪಂಚವನ್ನೇ ಉಳಿಸಲು ಸಹಾಯವಾಗುವ ಅತ್ಯುನ್ನತ ಉತ್ತಮವಾದ 3 ಟೆಕ್ನಾಲಜಿಗಳ ಬಗ್ಗೆ ಚಿಂತಿಸಿ ಅವುಗಳು ಯಾವುವು ಎಂದು ಬಹಿರಂಗ ಪಡಿಸಿದ್ದಾರೆ. ಬದಲಾದ ಪರಿಸರ ವಾತಾವರಣದಿಂದ ಇಂಧನ ಮೂಲಗಳಲ್ಲಿ ಟೆಕ್‌ ಹೊಸತನವನ್ನು ರೂಪಿಸುವ ಇಂಧನ ಉತ್ಪಾದನೆಯ ತಂತ್ರಜ್ಞಾನಗಳನ್ನು ಅಭಿವೃದ್ದಿಪಡಿಸಬೇಕು ಎಂದು ಉದ್ದೇಶಿಸಿದ್ದಾರೆ. ಬಿಲ್‌ ಗೇಟ್ಸ್‌ ಹೇಳಿರುವ "ಪ್ರಪಂಚವನ್ನೇ ಇಂಧನ ಮೂಲಗಳಿಂದ ಕಾಪಾಡಲು ಸಹಾಯ ಮಾಡುವ" ಟೆಕ್‌ಗಳೂ ಯಾವುವು ಎಂದು ತಿಳಿಯಲು ಲೇಖನದ ಸ್ಲೈಡರ್‌ಗಳನ್ನು ಓದಿರಿ.

 ಸೋಲಾರ್‌ ಕೆಮಿಕಲ್‌

ಸೋಲಾರ್‌ ಕೆಮಿಕಲ್‌

ಸೂರ್ಯನ ಬೆಳಕನ್ನು ಇಂಧನವಾಗಿ ಪರಿವರ್ತಿಸುವುದು
ಎಲ್ಲರೂ ಸಹ ಒಪ್ಪಬಹುದಾದ ಟೆಕ್ನಾಲಜಿ ಇದು. ಆದ್ರೆ ಕಷ್ಟಸಾಧ್ಯ ಎಂದೇಳಬಹುದು. ಸೋಲಾರ್ ಪ್ಯಾನೆಲ್‌ಗಳ ಮೂಲಕ ಸೂರ್ಯನ ಬೆಳಕನ್ನು ಕೆಮಿಕಲ್‌ ಆಗಿ ಪರಿವರ್ತಿಸಿ ಇಂಧನವಾಗಿ ಬದಲಿಸುವುದು ಈ ಟೆಕ್ನಾಲಜಿ ಆಗಿದೆ.

ಸೋಲಾರ್‌ ಕೆಮಿಕಲ್‌

ಸೋಲಾರ್‌ ಕೆಮಿಕಲ್‌

ಸೋಲಾರ್‌ ಕೆಮಿಕಲ್‌ ಟೆಕ್ನಾಲಜಿಯಲ್ಲಿ ಫೋಟೋಸಿಂಥೆಸಿಸ್‌ ವಿಧಾನದಿಂದ ವಾಹನಗಳಿಗೆ ಇಂಧನವನ್ನು ಹಾಗೂ ಇಲೆಕ್ಟ್ರಿಸಿಟಿಯನ್ನು ಪಡೆಯಬಹುದಾಗಿದೆ. ಈ ಟೆಕ್ನಾಲಜಿಯ ಕುರಿತು ಬಿಲ್‌ ಗೇಟ್ಸ್‌ ಚಿಂತಿಸಿದ್ದಾರೆ.

 ಫ್ಲೊ ಬ್ಯಾಟರಿ

ಫ್ಲೊ ಬ್ಯಾಟರಿ

ಶಕ್ತಿಯನ್ನು ಹಿಡಿದಿಡುವುದು ಸುಲಭದ ಕೆಲಸವಲ್ಲ. ಮುಂದೊಂದು ದಿನ ಸೂರ್ಯನು ಬೆಳಕು ನೀಡುವುದನ್ನು ನಿಲ್ಲಿಸಬಹುದು ಯಾರಿಗೆ ಗೊತ್ತು. ವಿದ್ಯುತ್‌ ಅನ್ನು ಉತ್ಪಾದಿಸುವ ಇನ್ನೊಂದು ಸಂಶೋಧನೆ ಎಂದರೆ ಕಾರ್ಖಾನೆಗಳ ವಿದ್ಯುತ್‌ ಬ್ಯಾಟರಿ ಗಾತ್ರದ ಲಿಥಿಯಂ ಆಯಾನ್ ಬ್ಯಾಟರಿಯನ್ನು ಫಿಶ್ ಟ್ಯಾಂಕ್‌ ಮತ್ತು ಈಜುಕೊಳದ ನಡುವೆ ಇರಿಸಿ ಎನರ್ಜಿ ಉತ್ಪಾದಿಸುವುದು. ಇದನ್ನು ಪ್ಲೋ ಬ್ಯಾಟರಿ ಎಂದು ಕರೆಯುತ್ತಾರೆ.

ಫ್ಲೊ ಬ್ಯಾಟರಿ

ಫ್ಲೊ ಬ್ಯಾಟರಿ

ಹಾರ್ವರ್ಡ್ ಇಂಜಿನಿಯರಿಂಗ್ ಅಂಡ್ ಅಪ್ಲೈಡ್ ಸೈನ್ಸಸ್ ಸ್ಕೂಲ್ ನ ತಂಡವೊಂದು ಈಗ ಫ್ಲೋ ಬ್ಯಾಟರಿಗಳನ್ನು ಅಗ್ಗದ ಮತ್ತು ಪರಿಸರ ಸುರಕ್ಷಿತ ವಿಧಾನದಲ್ಲಿ ತಯಾರಿಸುತ್ತಿದೆ.

ಸೋಲಾರ್‌ ಪೇಂಟ್‌

ಸೋಲಾರ್‌ ಪೇಂಟ್‌

ಬಿಲ್ ಗೇಟ್ಸ್‌ ಅತ್ಯಂತ ಅಗ್ಗದ ಬೆಲೆಯಲ್ಲಿ ಸೋಲಾರ್‌ ಶಕ್ತಿಯನ್ನು ಬಳಸುವ ಇನ್ನೊಂದು ವಿಧಾನವನ್ನು ಸಹ ಬರೆದಿದ್ದಾರೆ. ಅದೇನೆಂದರೆ ಎಲ್ಲಾ ಛಾವಣಿಗಳು ಕಾರುಗಳು, ಸೆಲ್‌ಫೋನ್‌ಗಳು, ಗೋಡೆಗಳು ಸೋಲಾರ್‌ ಪ್ಯಾನೆಲ್‌ ಬಣ್ಣವನ್ನು ಪಡೆದು ಆ ಬಣ್ಣ ಸೂರ್ಯನ ಶಕ್ತಿ ಪಡೆಯುವಂತಿರಬೇಕು ಎಂದು.

 ಸೋಲಾರ್‌ ಪೇಂಟ್‌

ಸೋಲಾರ್‌ ಪೇಂಟ್‌

ಸೋಲಾರ್‌ ಪೇಂಟ್‌ ಟೆಕ್ನಾಲಜಿ ಆಧಾರದಲ್ಲಿ ಸರಳ ಸೆನ್ಸಿಟಿವ್‌ ಬಣ್ಣವನ್ನು ಎಲ್ಲಾ ಛಾವಣಿ ಗಳಿಗೆ ಬಳಿಯುವುದರಿಂದ ಸೋಲಾರ್‌ ಪವರ್‌ ಉತ್ಪಾದಿಸುವ ಟೆಕ್ನಾಲಜಿ ಇದಾಗಿದೆ. ಇದನ್ನು ಬ್ರಿಟನ್‌ನ ಶೆಫ್ಫೀಲ್ಡ್‌ ವಿಶ್ವವಿದ್ಯಾಲಯ, ಕ್ಯಾಲಿಫೊರ್ನಿಯ ಸ್ಯಾನ್ ಡಿಯಾಗೋ ಮತ್ತು ಟೆಕ್ಸಾಸ್‌ನ ಲುಸ್ಲೊ ಟೆಕ್ನಾಲಜಿಯಿಂದ ಅಭಿವೃದ್ದಿಗೊಳಿಸಲಾಗಿದೆ. ಅಲ್ಲದೇ ಮನೆಯ ಗೋಡೆಗಳಿಗೂ ಸಹ ಈ ಬಣ್ಣವನ್ನು ಸವರ ಬಹುದಾಗಿದೆ.

ಬಿಲ್‌ ಗೇಟ್ಸ್

ಬಿಲ್‌ ಗೇಟ್ಸ್

ಅಕ್ಟೋಬರ್ 28, 1955 ರಂದು ಜನಿಸಿದ ಈ ಟೆಕ್ ದೈತ್ಯ ಬಿಲ್ ಗೇಟ್ಸ್, ತಮ್ಮ 17 ರ ಹರೆಯದಲ್ಲೇ ಪ್ರಥಮ ಕಂಪ್ಯೂಟರ್ ಪ್ರೊಗ್ರಾಮ್ ಅನ್ನು ಮಾರಾಟ ಮಾಡಿದವರು. ಸಾಫ್ಟ್‌ವೇರ್‌ನಲ್ಲಿ ಹೆಚ್ಚು ಆಸಕ್ತರಾಗಿದ್ದ ಇವರು ತಮ್ಮದೇ ಆದ ಕಂಪ್ಯೂಟರ್ ಪ್ರೊಗ್ರಾಮ್‌ಗಳನ್ನು ಬರೆಯಲು ಆರಂಭಿಸಿದರು.

ಬಿಲ್‌ ಗೇಟ್ಸ್

ಬಿಲ್‌ ಗೇಟ್ಸ್

ಆಸಕ್ತಿಕರವಾಗಿ ಗೇಟ್ಸ್ ಮತ್ತು ಅವರ ಇತರ ಶಾಲಾ ಸಹಪಾಠಿಗಳು ಕಂಪ್ಯೂಟರ್ ಸೆಂಟರ್ ಕಾರ್ಪೊರೇಶನ್‌ನಿಂದ (ಸಿಸಿಸಿ) ನಿಷೇಧಕ್ಕೊಳಪಟ್ಟಿದ್ದರು.

ಬಿಲ್‌ ಗೇಟ್ಸ್

ಬಿಲ್‌ ಗೇಟ್ಸ್

ವರದಿಗಳ ಪ್ರಕಾರ, ಬಿಲ್ ಗೇಟ್ಸ್ ತಮ್ಮ ಸಾಟ್ (ಸ್ಕಾಲಸ್ಟಿಕ್ ಅಪ್ಟಿಟ್ಯೂಡ್ ಟೆಸ್ಟ್) ಪರೀಕ್ಷೆಯಲ್ಲಿ 1590 ಅನ್ನು ಸ್ಕೋರ್ ಮಾಡಿದ್ದಾರೆ. ಪರೀಕ್ಷೆಯ ಸ್ಕೋರ್ ಆಗಿತ್ತು 1600.

ಬಿಲ್‌ ಗೇಟ್ಸ್

ಬಿಲ್‌ ಗೇಟ್ಸ್

ಗೇಟ್ ಹಾರ್ವರ್ಡ್ ಯೂನಿವರ್ಸಿಟಿಯ ಡ್ರಾಪ್ ಔಟ್ ವಿದ್ಯಾರ್ಥಿಯಾಗಿದ್ದಾರೆ. ಸಾಟ್ ಪರೀಕ್ಷೆಯಲ್ಲಿ 1600 ಅಂಕದಲ್ಲಿ 1590 ಗಳಿಸಿ ಹಾರ್ವರ್ಡ್ ಯೂನಿವರ್ಸಿಟಿಗೆ ಪ್ರವೇಶವನ್ನು ಪಡೆದುಕೊಂಡಿದ್ದರು.

Best Mobiles in India

English summary
3 technologies that Bill Gates thinks could help save the world. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X