Subscribe to Gizbot

ಜೈಲುಪಾಲಾದ ಬಿಲ್ ಗೇಟ್ಸ್ ಕಥೆ ನಿಮಗೆ ಗೊತ್ತೇ?

Written By:

ಏಪ್ರಿಲ್ 4 ರಂದು ಬಿಲ್ ಗೇಟ್ಸ್ ಮತ್ತು ಪಾಲ್ ಅಲೇನ್ ಮೈಕ್ರೋಸಾಫ್ಟ್ ಎಂಬ ಸಣ್ಣ ಕಂಪೆನಿಯೊಂದನ್ನು ಆರಂಭಿಸಿದರು. ಇಂದು ಇದೇ ಕಂಪೆನಿ ತನ್ನ 40 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಸಣ್ಣ ನೆಲೆಯಲ್ಲಿದ್ದು ಈ ಕಂಪೆನಿ ಜಗತ್ತಿನ ಪ್ರತಿಷ್ಟಿತ ಕಂಪೆನಿಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ವಿಶ್ವದ ದ್ವಿತೀಯ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಕುರಿತ ನಿಗೂಢ ಸತ್ಯಗಳು

ಇದರ ಸ್ಥಾಪಕರಲ್ಲೊಬ್ಬರಾದ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್‌ನ ಪ್ರಗತಿಗಾಗಿ ಹೇಗೆ ದುಡಿದಿದ್ದಾರೆ ಮತ್ತು ಅವರು ಅನುಭವಿಸಿದ ಸೋಲೇನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೋಡಲಿರುವೆವು. ಯಶಸ್ಸಿನ ಶಿಖರವನ್ನೇರಲು ಸೋಲನ್ನೇ ಮೆಟ್ಟಿಲನ್ನಾಗಿಸಿಕೊಂಡ ಬಿಲ್ ಗೇಟ್ಸ್ ಎಂಬ ವಿಶ್ವದ ಅತಿ ದೊಡ್ಡ ಶ್ರೀಮಂತನ ಕುರಿತಾದ ವಿಸ್ಮಯ ಸಂಗತಿಗಳು ಇದೋ ನಿಮಗಾಗಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
17 ರ ಹರೆಯದಲ್ಲೇ ಪ್ರಥಮ ಕಂಪ್ಯೂಟರ್ ಪ್ರೊಗ್ರಾಮ್ ಮಾರಾಟ ಮಾಡಿದರು

17 ರ ಹರೆಯದಲ್ಲೇ ಪ್ರಥಮ ಕಂಪ್ಯೂಟರ್ ಪ್ರೊಗ್ರಾಮ್ ಮಾರಾಟ ಮಾಡಿದರು

ಅಕ್ಟೋಬರ್ 28, 1955 ರಂದು ಜನಿಸಿದ ಈ ಟೆಕ್ ದೈತ್ಯ ಬಿಲ್ ಗೇಟ್ಸ್, ತಮ್ಮ 17 ರ ಹರೆಯದಲ್ಲೇ ಪ್ರಥಮ ಕಂಪ್ಯೂಟರ್ ಪ್ರೊಗ್ರಾಮ್ ಅನ್ನು ಮಾರಾಟ ಮಾಡಿದವರು. ಸಾಫ್ಟ್‌ವೇರ್‌ನಲ್ಲಿ ಹೆಚ್ಚು ಆಸಕ್ತರಾಗಿದ್ದ ಇವರು ತಮ್ಮದೇ ಆದ ಕಂಪ್ಯೂಟರ್ ಪ್ರೊಗ್ರಾಮ್‌ಗಳನ್ನು ಬರೆಯಲು ಆರಂಭಿಸಿದರು.

ಕಂಪ್ಯೂಟರ್ ಸೆಂಟರ್ ಕಾರ್ಪೊರೇಶನ್‌ನಿಂದ ನಿಷೇಧ

ಕಂಪ್ಯೂಟರ್ ಸೆಂಟರ್ ಕಾರ್ಪೊರೇಶನ್‌ನಿಂದ ನಿಷೇಧ

ಆಸಕ್ತಿಕರವಾಗಿ ಗೇಟ್ಸ್ ಮತ್ತು ಅವರ ಇತರ ಶಾಲಾ ಸಹಪಾಠಿಗಳು ಕಂಪ್ಯೂಟರ್ ಸೆಂಟರ್ ಕಾರ್ಪೊರೇಶನ್‌ನಿಂದ (ಸಿಸಿಸಿ) ನಿಷೇಧಕ್ಕೊಳಪಟ್ಟಿದ್ದರು.

ಸಾಟ್ ಸ್ಕ್ರೋರ್

ಸಾಟ್ ಸ್ಕ್ರೋರ್

ವರದಿಗಳ ಪ್ರಕಾರ, ಬಿಲ್ ಗೇಟ್ಸ್ ತಮ್ಮ ಸಾಟ್ (ಸ್ಕಾಲಸ್ಟಿಕ್ ಅಪ್ಟಿಟ್ಯೂಡ್ ಟೆಸ್ಟ್) ಪರೀಕ್ಷೆಯಲ್ಲಿ 1590 ಅನ್ನು ಸ್ಕೋರ್ ಮಾಡಿದ್ದಾರೆ. ಪರೀಕ್ಷೆಯ ಸ್ಕೋರ್ ಆಗಿತ್ತು 1600.

ಕಾಲೇಜಿಗೆ ಹೋಗಲಿಲ್ಲ

ಕಾಲೇಜಿಗೆ ಹೋಗಲಿಲ್ಲ

ಗೇಟ್ ಹಾರ್ವರ್ಡ್ ಯೂನಿವರ್ಸಿಟಿಯ ಡ್ರಾಪ್ ಔಟ್ ವಿದ್ಯಾರ್ಥಿಯಾಗಿದ್ದಾರೆ. ಸಾಟ್ ಪರೀಕ್ಷೆಯಲ್ಲಿ 1600 ಅಂಕದಲ್ಲಿ 1590 ಗಳಿಸಿ ಹಾರ್ವರ್ಡ್ ಯೂನಿವರ್ಸಿಟಿಗೆ ಪ್ರವೇಶವನ್ನು ಪಡೆದುಕೊಂಡಿದ್ದರು.

ಮೈಕ್ರೊ - ಸಾಫ್ಟ್ ಗೇಟ್ಸ್ ಅನ್ವೇಷಣೆ

ಮೈಕ್ರೊ - ಸಾಫ್ಟ್ ಗೇಟ್ಸ್ ಅನ್ವೇಷಣೆ

1975 ರಲ್ಲಿ, ಗೇಟ್ಸ್ ತಮ್ಮ ಗೆಳೆಯ ಪಾಲ್ ಅಲೇನ್ ಜೊತೆಗೂಡಿ ಮೈಕ್ರೋಸಾಫ್ಟ್ ಅನ್ನು ಆರಂಭಿಸಿದರು. 1977 ರಲ್ಲಿ ಗೇಟ್ಸ್ ಹಾಗೂ ಅಲೇನ್ ಅಧಿಕೃತವಾಗಿ ಪಾಲುದಾರಿಕೆಯನ್ನು ನೋಂದಾಯಿಸಿದರು ಮತ್ತು ಮೈಕ್ರೊ - ಸಾಫ್ಟ್ ನಂತರ ಮೈಕ್ರೋಸಾಫ್ಟ್ ಆಯಿತು.

31 ರ ಹರೆಯಲ್ಲೇ ಬಿಲಿಯಾಧಿಪತಿ

31 ರ ಹರೆಯಲ್ಲೇ ಬಿಲಿಯಾಧಿಪತಿ

ತನ್ನ 30 ರ ಹರೆಯದಲ್ಲೇ ಬಿಲಿಯಾಧಿಪತಿಯಾಗುತ್ತೇನೆಂದು ತನ್ನ ವಿಶ್ವವಿದ್ಯಾಲಯದ ಶಿಕ್ಷಕರಲ್ಲಿ ಗೇಟ್ಸ್ ಹೇಳಿದ್ದರಂತೆ. ಹೀಗೆ ಹೇಳಿದಂತೆಯೇ ತಮ್ಮ 31 ರ ಹರೆಯದಲ್ಲೇ ಇವರು ಬಿಲಿಯಾಧಿಪತಿಯಾಗಿಬಿಟ್ಟರು.

ಬಂಧನಕ್ಕೆ ಒಳಗಾದರು

ಬಂಧನಕ್ಕೆ ಒಳಗಾದರು

ಜಗತ್ತಿನ ಅತಿ ದೊಡ್ಡ ಸಾಫ್ಟ್‌ವೇರ್ ಕಂಪೆನಿಯ ಸ್ಥಾಪಕರಾದ ಬಿಲ್ ಗೇಟ್ಸ್ ಪೋಲೀಸರ ಅತಿಥಿ ಕೂಡ ಆಗಿದ್ದರು. ನ್ಯೂ ಮೆಕ್ಸಿಕೋದಲ್ಲಿ ಕಾನೂನು ಬಾಹಿರವಾಗಿ ರೆಡ್ ಲೈಟ್ (ಕೆಂಪು ದೀಪ) ಹಾಗೂ ಪರವನಗಿಯಿಲ್ಲದೆ ಗಾಡಿ ಚಲಾಯಿಸಿದ್ದಕ್ಕೆ ಪೋಲೀಸರು ಇವರನ್ನು ಬಂಧಿಸಿದ್ದರು.

ಹೊಸ ವರ್ಷದಂದೇ ವಿವಾಹ

ಹೊಸ ವರ್ಷದಂದೇ ವಿವಾಹ

ತಮ್ಮ ದೀರ್ಘ ಸಮಯದ ಗೆಳತಿಯಾದ ಮೆಲಿಂಡಾ ಫ್ರೆಂಚ್ ಅನ್ನು ಬಿಲ್ ಗೇಟ್ಸ್ ಜನವರಿ 1 1994 ರಂದು ವಿವಾಹವಾದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.

ಇಂಗ್ಲೆಂಡಿನ ರಾಣಿಯಿಂದ ನೈಟ್‌ಹುಡ್

ಇಂಗ್ಲೆಂಡಿನ ರಾಣಿಯಿಂದ ನೈಟ್‌ಹುಡ್

ಮಾರ್ಚ್ 2005 ರಂದು ಗೇಟ್ಸ್ ಗೌರವಾನ್ವಿತ ನೈಟ್ ಹುಟ್ ಪ್ರಶಸ್ತಿಯನ್ನು ಇಂಗ್ಲೆಂಡಿನ ರಾಣಿಯಿಂದ ಪಡೆದುಕೊಂಡರು. ಜಗತ್ತಿನ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಬಡತನ ಮತ್ತು ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಅವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು.

ತಪ್ಪು ಮುನ್ನೋಟಗಳು

ತಪ್ಪು ಮುನ್ನೋಟಗಳು

ಬಿಲ್ ಗೇಟ್ಸ್ ಹೇಳುವುದೆಲ್ಲೂ ನಿಜವಾಗುತ್ತದೆ ಎಂದು ನೀವು ಅಂದುಕೊಂಡಿರುತ್ತೀರಾ? ಆದರೆ ಇವರು ಹೇಳುವ ಕೆಲವೊಂದು ಮುನ್ನೋಟಗಳು ಕೂಡ ತಪ್ಪಾಗಿರುತ್ತವೆ ಎಂಬುದು ನಿಮಗೆ ಗೊತ್ತೇ? ಎರಡು ವರ್ಷಗಳಲ್ಲಿ ಸ್ಲ್ಯಾಮ್ ಇಮೇಲ್ ಸಂದೇಶಗಳ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಬಿಲ್ ಗೇಟ್ಸ್ 2004 ರಲ್ಲಿ ಹೇಳಿದ್ದರು. ಆದರೆ ಇದು ಎಷ್ಟು ನಿಜವಾಗಿದೆ ಎಂಬುದು ಎಲ್ಲರೂ ಅರಿತಿರುವ ವಿಷಯ.

ಬಂಗಲೆ ನಿವಾಸಿ

ಬಂಗಲೆ ನಿವಾಸಿ

ವಾಶಿಂಗ್ಟನ್ ನದಿ ತೀರದಲ್ಲಿ 66,000 ಸ್ಕ್ವೇರ್ ಫೀಟ್ ಮನೆಯಲ್ಲಿ ಬಿಲ್ ಗೇಟ್ಸ್ ವಾಸಿಸುತ್ತಿದ್ದಾರೆ. ಈ ಮನೆ ತನ್ನ ವಿನ್ಯಾಸ ಹಾಗೂ ತಂತ್ರಜ್ಞಾನಕ್ಕೆ ಹೆಚ್ಚು ಪ್ರಸಿದ್ಧವಾಗಿದೆ.

ಮೈಕ್ರೋಸಾಫ್ಟ್‌ಗೆ ವಿದಾಯ

ಮೈಕ್ರೋಸಾಫ್ಟ್‌ಗೆ ವಿದಾಯ

ಬಿಲ್ ಮತ್ತು ಮೆಲಿಂದಾ ಗೇಟ್ಸ್ ಫೌಂಡೇಶನ್‌ನ ಪೂರ್ಣ ಪ್ರಮಾಣದ ಅಧ್ಯಕ್ಷರಾಗಿ ಜನೋಪಕಾರಿ ಕಾರ್ಯಗಳನ್ನು ನಡೆಸುವುದಕ್ಕಾಗಿ ಮೈಕ್ರೋಸಾಫ್ಟ್ ಸಂಸ್ಥೆಯನ್ನು ಜೂನ್ 27, 2008 ರಂದು ಹರಾಜು ಮಾಡಿದರು. ಕೆಲವೊಂದು ಪ್ರಮುಖ ಪ್ರಾಜೆಕ್ಟ್‌ಗಳಿಗಾಗಿ ಬಿಲ್ ಮೈಕ್ರೋಸಾಫ್ಟ್‌ನ ಅಧ್ಯಕ್ಷರಾಗಿ ಹಾಗೂ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
To most people Bill Gates is the richest man in the world and the founder of the world's largest software company Microsoft. However, there's more to the man who is said to have led the third wave of computing than this.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot