Home
ಸುದ್ದಿಜಾಲ

ಏರ್‌ಟೆಲ್‌ನ ಈ ಪ್ಲ್ಯಾನ್‌ನಲ್ಲಿ ಒಟ್ಟು 35 ದಿನಗಳ ಮಾನ್ಯತೆ, 4GB ಡೇಟಾ!

ಏರ್‌ಟೆಲ್‌ (Airtel) ಹಲವಾರು ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಹೊಂದಿದ್ದು, ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕ ಪ್ಲ್ಯಾನ್‌ಗಳನ್ನು ಆಯ್ಕೆ ಮಾಡುವುದು ಸಾಮಾನ್ಯ. ಆದರೆ, ಹಲವಾರು ಜನರಿಗೆ ಈ 35 ದಿನಗಳ ಮಾನ್ಯತೆ ಇರುವ ಪ್ಲ್ಯಾನ್ ಬಗ್ಗೆ ಅರಿವೇ ಇಲ್ಲ. ಈ ಪ್ಲ್ಯಾನ್‌ನಲ್ಲಿ 4GB ಡೇಟಾ ಸಹ ಸಿಗಲಿದೆ.

ಹೌದು, ಏರ್‌ಟೆಲ್‌ ತನ್ನ ಗ್ರಾಹಕರಿಗೆ ಹಲವಾರು ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಈ ಲಿಸ್ಟ್‌ನಲ್ಲಿ 35 ದಿನಗಳ ಮಾನ್ಯತೆ ಇರುವ ಪ್ಲ್ಯಾನ್‌ ಸಹ ಪ್ರಮುಖವಾಗಿದ್ದು, ಇದು ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿ ಹಾಗೂ ಹಣವನ್ನೂ ಸಹ ಉಳಿಸುತ್ತದೆ. ಹಾಗಿದ್ರೆ, ಈ ಪ್ಲ್ಯಾನ್‌ನಲ್ಲಿ ಏನೆಲ್ಲಾ ಸೌಲಭ್ಯ ಲಭ್ಯ?, ಇದರ ಬೆಲೆ ಎಷ್ಟು? ಎಂಬಿತ್ಯಾದಿ ಪ್ರಮುಖ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಏರ್‌ಟೆಲ್‌ನ ಈ ಪ್ಲ್ಯಾನ್‌ನಲ್ಲಿ ಒಟ್ಟು 35 ದಿನಗಳ ಮಾನ್ಯತೆ, 4GB ಡೇಟಾ!

35 ದಿನಗಳ ವ್ಯಾಲಿಡಿಟಿ.. 4GB ಡೇಟಾ: ಏರ್‌ಟೆಲ್‌ ತನ್ನ ಗ್ರಾಹಕರಿಗೆ 35 ದಿನಗಳ ಯೋಜನೆಯನ್ನು ಪರಿಚಯಿಸಿದ್ದು, ಈ ಮೂಲಕ ಬಳಕೆದಾರರು ಅನಿಯಮಿತ ವಾಯ್ಸ್‌ ಕಾಲ್‌ ಪ್ರಯೋಜನದೊಂದಿಗೆ ಹೆಚ್ಚಿನ ಮಾನ್ಯತೆಯನ್ನು ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಈ ಪ್ಲ್ಯಾನ್‌ನಲ್ಲಿ ತುರ್ತು ಸಂದರ್ಭದಲ್ಲಿ ಬಳಕೆ ಮಾಡಬಹುದಾದ ಡೇಟಾ ಪ್ರಯೋಜನವನ್ನು ನೀಡುತ್ತಿರುವುದು ಗಮನಿಸಬೇಕಾದ ವಿಷಯ.

ಇನ್ನು ಈ ಪ್ಲ್ಯಾನ್‌ನಲ್ಲಿ ಲಭ್ಯವಿರುವ ಡೇಟಾ ಪ್ರಯೋಜನವು ಬಳಕೆದಾರರಿಗೆ ಸಾಕಾಗದೇ ಇದ್ದರೆ, ಹೆಚ್ಚಿನ ಡೇಟಾ ಅಗತ್ಯ ಎನಿಸಿದಾಗ ಏರ್‌ಟೆಲ್ ಡೇಟಾ ವೋಚರ್‌ಗಳೊಂದಿಗೆ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಮತ್ಯಾಕೆ ತಡ ಬನ್ನಿ 289ರೂ.ಗಳ ಬೆಲೆ ಹೊಂದಿರುವ ಈ ಪ್ಲ್ಯಾನ್‌ನಲ್ಲಿ ನೀಡಲಾಗುವ ಸೌಲಭ್ಯಗಳು ನೀವು ನೀಡುವ ಬೆಲೆಗೆ ಮೆಚ್ಚುವಂತಹುವೇ ಎಂಬುದನ್ನು ನೋಡೋಣ.

289 ರೂ.ಗಳ ಪ್ಲ್ಯಾನ್: ಈ ಪ್ಲ್ಯಾನ್‌ನಲ್ಲಿ ಬಳಕೆದಾರರು 4 GB ಡೇಟಾ ಪ್ರಯೋಜನವನ್ನು ಪಡೆಯಬಹುದಾಗಿದ್ದು, ಇದರೊಂದಿಗೆ ಎಸ್‌ಎಂಎಸ್ ಪ್ರಯೋಜನದೊಂದಿಗೆ ಅನಿಯಮಿತ ವಾಯ್ಸ್‌ ಕಾಲ್‌ ಸೌಲಭ್ಯ ಸಿಗಲಿದೆ. ಆದರೆ ಇದರಲ್ಲಿ ದೈನಂದಿನ ಡೇಟಾ ಲಭ್ಯ ಇರುವುದಿಲ್ಲ ಎಂಬುದು ನಿಮ್ಮ ಗಮನಕ್ಕೆ ಇರಲಿ. ಬದಲಾಗಿ ನೀಡಲಾಗಿರುವ 4GB ಡೇಟಾವನ್ನು ನೀವು ಬೇಕೆಂದಾಗ ಬಳಕೆ ಮಾಡಿಕೊಳ್ಳಬಹುದು.

ನೀವೇನಾದರೂ ದೈನಂದಿನ ಡೇಟಾವನ್ನು ನೀಡುವ ಪ್ಲ್ಯಾನ್ ಬಗ್ಗೆ ಆಲೋಚನೆ ಮಾಡುತ್ತಿದ್ದರೆ ಇದು ನಿಮಗೆ ಸೂಕ್ತ ಪ್ಲ್ಯಾನ್‌ ಆಗಿರುವುದಿಲ್ಲ. ಆದರೆ, ಸಿಮ್‌ ದೀರ್ಘವಾಗಿ ಆಕ್ಟಿವ್ ಆಗಿರಬೇಕು ಹಾಗೂ ನೀವು ವೈ ಫೈ ಬಳಕೆ ಮಾಡುತ್ತಿದ್ದರೆ, ಕರೆ ಮಾತ್ರ ಉಚಿತವಾಗಿದ್ದರೆ ಸಾಕು ಎಂದರೆ ಉತ್ತಮ ಪ್ಲ್ಯಾನ್‌ ಎನ್ನಬಹುದು. ಅದರಲ್ಲೂ ಈ ಪ್ಲ್ಯಾನ್‌ ಸಾಕಷ್ಟು ಫೀಚರ್ ಫೋನ್‌ಗಳನ್ನು ಹೊಂದಿರುವ ಬಳಕೆದಾರರಿಗೆ ಉತ್ತಮ ಆಯ್ಕೆ ಆಗಿದೆ.

ಇದರಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯ ಏನೆಂದರೆ ಏರ್‌ಟೆಲ್ ಅನಿಯಮಿತ 5G ಡೇಟಾವನ್ನು ನೀಡುವುದಿಲ್ಲ. ಉಳಿದಂತೆ ಈ ಪ್ಲ್ಯಾನ್‌ನಲ್ಲಿ ಕೆಲವು ಹೆಚ್ಚುವರಿ ಪ್ರಯೋಜನ ಸಹ ಸಿಗಲಿದೆ. ಅಂದರೆ ಅಪೊಲೊ 24|7 ಸರ್ಕಲ್, ಉಚಿತ ಹೆಲೊಟ್ಯೂನ್ಸ್ ಸೌಲಭ್ಯ ಹಾಗೂ ವಿಂಕ್ ಮ್ಯೂಸಿಕ್‌ ಸೇರಿದಂತೆ ಹೆಚ್ಚುವರಿ ಪ್ರಯೋಜನಗಳು ಇದರಿಂದ ಲಭ್ಯ ಆಗಲಿವೆ.

ಇನ್ನು ಈ ಪ್ಲ್ಯಾನ್‌ ನಿಮಗೆ ಇಷ್ಟ ಇಲ್ಲ ಎಂದಾದರೆ ಏರ್‌ಟೆಲ್‌ ನಿಮಗೆ ಹಲವಾರು ಆಯ್ಕೆಗಳನ್ನೂ ನೀಡಿದೆ. ಅಂದರೆ ನಿತ್ಯವೂ ಡೇಟಾ ಸೌಲಭ್ಯ ಇರಬೇಕು ಎಂದರೆ 296 ರೂ.ಗಳ ಪ್ಲ್ಯಾನ್‌ ಆಯ್ಕೆ ಮಾಡಿಕೊಳ್ಳಬಹುದು. ಈ ಪ್ಲ್ಯಾನ್‌ನಲ್ಲಿ 25GB ಲುಂಪ್ಸಮ್ ಡೇಟಾ ಸಿಗಲಿದ್ದು, ಇದು ಅನಿಯಮಿತ ವಾಯ್ಸ್‌ ಕಾಲ್‌ ಸೌಲಭ್ಯ ಹಾಗೂ ಎಸ್‌ಎಮ್‌ಎಸ್‌ ಪ್ರಯೋಜನದೊಂದಿಗೆ ಬರಲಿದ್ದು, ಈ ಪ್ಲ್ಯಾನ್‌ 30 ದಿನಗಳ ಮಾನ್ಯತೆಯೊಂದಿಗೆ ಲಭ್ಯ ಇದೆ.

ಏರ್‌ಟೆಲ್‌ನ ಈ ಪ್ಲ್ಯಾನ್‌ನಲ್ಲಿ ಒಟ್ಟು 35 ದಿನಗಳ ಮಾನ್ಯತೆ, 4GB ಡೇಟಾ!

ಏರ್‌ಟೆಲ್ ಬಳಕೆದಾರರಿಗೆ ಗುಡ್‌ನ್ಯೂಸ್: ಈ ನಡುವೆ ಏರ್‌ಟೆಲ್ ಭಾರತದ ಎಲ್ಲಾ 22 ಟೆಲಿಕಾಂ ಸರ್ಕಲ್‌ಗಳಲ್ಲಿ 26 GHz ಸ್ಪೆಕ್ಟ್ರಮ್‌ನಲ್ಲಿ 5G ಸೇವೆಗಳನ್ನು ಪರಿಚಯಿಸಿದ್ದು, ಈ ಮೂಲಕ ಏರ್‌ಟೆಲ್‌ನ 5G ಸೇವೆಗಳು ಸದ್ಯಕ್ಕೆ ದೇಶಾದ್ಯಂತ 5000 ನಗರಗಳು ಮತ್ತು ಪಟ್ಟಣಗಳಲ್ಲಿ ಲಭ್ಯ ಆಗಿದೆ.ಅದರಲ್ಲೂ ಏರ್‌ಟೆಲ್‌ 5G ನೆಟ್‌ವರ್ಕ್‌ ವಿಷಯದಲ್ಲಿ 10 ಮಿಲಿಯನ್ ಅನನ್ಯ ಗ್ರಾಹಕರನ್ನು ಪಡೆದಿದ್ದು, ಈ 5G ಸೇವೆಯನ್ನು ಸೆಪ್ಟೆಂಬರ್ 2023 ರ ವೇಳೆಗೆ ಎಲ್ಲಾ ಕಡೆ ವಿಸ್ತರಣೆ ಮಾಡಲಿದೆ.

Best Mobiles in India

English summary
Airtel has introduced several new prepaid recharge plans for its customers. Plans with 35 days validity are also prominent in this list. It benefits users in various ways and also saves money.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+