Home
ಸುದ್ದಿಜಾಲ

ಲಾಕ್‌ಡೌನ್‌ ಎಫೆಕ್ಟ್‌: ಈ ತಿಂಗಳ ಅಂತ್ಯದ ವೇಳೆ 4 ಕೋಟಿ ಜನರ ಬಳಿ ಫೋನ್‌ ಇರಲ್ಲ!

ಚೀನಾದಲ್ಲಿ ಜನನ ಪಡೆದ ಕೊರೊನಾ ವೈರಸ್‌ ಇಡೀ ಜಗತ್ತಿಗೆ ಮಹಾಮಾರಿಯಾಗಿ ಕಾಡುತ್ತಿದೆ ಭಾರತಕ್ಕೂ ಹೆಮ್ಮಾರಿಯಾಗಿ ವಕ್ಕರಿಸಿದೆ. ಕೊರೊನಾ ವ್ಯಾಪಕವಾಗಿ ಹರಡುವುದನ್ನು ತಡೆಯಲಿ ಸರ್ಕಾರ ಲಾಕ್‌ಡೌನ್ ಮುಂದುವರಿಸಿದೆ. ಆದರೆ ಲಾಕ್‌ಡೌನ್‌ ಪರಿಣಾಮದಿಂದಾಗಿ ಅನೇಕ ವಲಯಗಳು ನೆಲಕಚ್ಚಿದ್ದು, ಮೊಬೈಲ್ ಮಾರುಕಟ್ಟೆಯು ಸಹ ಸ್ಥಬ್ಧಗೊಂಡಿದೆ. ಆರ್ಥಿಕ ವಲಯ ಅಸಮತೋಲದ ಸ್ಥಿತಿಯಲ್ಲಿದೆ. ಲಾಕ್‌ಡೌನ್‌ ಇನ್ನೂ ಮುಂದುವರೆದರೇ ಜನರು ಸ್ಮಾರ್ಟ್‌ಫೋನ್ ಬಿಡಬೇಕಾಗುತ್ತದೆ.!

ಲಾಕ್‌ಡೌನ್‌ ಎಫೆಕ್ಟ್

ಹೌದು, ಲಾಕ್‌ಡೌನ್‌ ಎಫೆಕ್ಟ್‌ನಿಂದಾಗಿ ಸ್ಮಾರ್ಟ್‌ಫೋನ್ ಮಾರಾಟ ಸ್ಥಗಿತವಾಗಿದ್ದು, ಆನ್‌ಲೈನ್ ಹಾಗೂ ಆಫ್‌ಲೈನ್‌ ಮಾರುಕಟ್ಟೆಗಳು ಬಂದ್ ಆಗಿವೆ. ಆದ್ರೆ ನಾನಾ ಕಾರಣಗಳಿಂದ ಸ್ಮಾರ್ಟ್‌ಫೋನ್‌ಗಳು ಹಾಳಾಗಿರುವ ಗ್ರಾಹಕರಿಗೆ ಹೊಸ ಸ್ಮಾರ್ಟ್‌ಫೋನ್ ಖರೀದಿಸುವುದಕ್ಕೆ ದಾರಿಯೇ ಇಲ್ಲದಂತಾಗಿದೆ. ಹೀಗಾಗಿ ಮೇ3, 2020ರ ಬಳಿಕವು ಲಾಕ್‌ಡೌನ್‌ ಜಾರಿ ಮುಂದುವರಿದಿದ್ದೆ ಆದಲ್ಲಿ ಸುಮಾರು 4 ಕೋಟಿ ಮಂದಿಯ ಕೈಲಿ ಸ್ಮಾರ್ಟ್‌ಫೋನೇ ಇರಲ್ಲ ಎಂದು ICEA-ಐಸಿಇಎ ಹೇಳಿದೆ.

ಸ್ಮಾರ್ಟ್‌ಫೋನ್‌

ಅನೇಕ ಬಳಕೆದಾರರ ಸ್ಮಾರ್ಟ್‌ಫೋನ್‌ಗಳು ಮುರಿದುಹೋಗಿರುವ, ಹಾಳಾಗಿರುವ ಕಾರಣದಿಂದಾಗಿ ಪ್ರಸ್ತುತ, 2.5 ಕೋಟಿಗೂ ಹೆಚ್ಚು ಸ್ಮಾರ್ಟ್‌ಫೋನ್‌ ಇಲ್ಲದಂತಾಗಿದೆ. ಲಾಕ್‌ಡೌನ್‌ ಕಾರಣದಿಂದಾಗಿ ಹೊಸ ಸ್ಮಾರ್ಟ್‌ಫೋನ್‌ಗಳ ಮಾರಾಟದ ಮೇಲಿನ ನಿರ್ಬಂಧ ಇರುವುದರಿಂದ ಫೋನ್ ಪೂರೈಕೆಯಲ್ಲಿ ಅನಾನುಕೂಲದ ವ್ಯವಸ್ಥೆ ಇದೆ ಎಂದು ಇಂಡಿಯಾ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ICEA) ಹೇಳಿದೆ.

ಸ್ಮಾರ್ಟ್‌ಫೋನ್ ಖರೀದಿ

ಲಾಕ್‌ಡೌನ್‌ ಇರುವುದರಿಂದ ಹೊಸ ಸ್ಮಾರ್ಟ್‌ಫೋನ್ ಖರೀದಿ ಮಾಡುವುದು ಸಾಧ್ಯವಾಗುತ್ತಿಲ್ಲ ಹಾಗೆಯೇ ಸ್ಮಾರ್ಟ್‌ಫೋನ್ ರಿಪೇರಿ ಮಾಡಲು ಸಹ ಅಗತ್ಯವಾದ ಬಿಡಿಭಾಗಗಳು ಸರಿಯಾಗಿ ಲಭ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಒಂದು ವೇಳೆ ಮೇ 3, 2020ರ ನಂತರವು ಲಾಕ್‌ಡೌನ್‌ ಮುಂದುವರೆದರೇ ಮೇ ತಿಂಗಳ ಅಂತ್ಯದ ವೇಳೆಗೆ ಸ್ಮಾರ್ಟ್‌ಫೋನ್‌ ಇಲ್ಲದವರ ಸಂಖ್ಯೆ ಸುಮಾರು 4 ಕೋಟಿಗೆ ತಲುಪುವ ಸಾಧ್ಯತೆಗಳಿವೆ ಎಂದು ICEA ಅಂದಾಜಿಸಿದೆ.

ಮಾರ್ಚ್‌ ಹಾಗೂ ಏಪ್ರಿಲ್

ಮಾರ್ಚ್‌ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಕೆಲವು ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಮಾಡಲು ಯೋಜನೆ ಮಾಡಿದ್ದವು. ಆದರೆ ಲಾಕ್‌ಡೌನ್‌ ಕಾರಣದಿಂದಾಗಿ ಶಿಯೋಮಿ ತನ್ನ ರೆಡ್ಮಿ ನೋಟ್ 9 ಸರಣಿಯನ್ನು ಆನ್‌ಲೈನ್‌ ಕಾರ್ಯಕ್ರಮದಲ್ಲಿಯೇ ಲಾಂಚ್ ಮಾಡಿದೆ. ಹಾಗೆಯೇ ಏಪ್ರಿಲ್ 14ರಂದು ಒನ್‌ಪ್ಲಸ್‌ ಸಹ ತನ್ನ ಬಹುನಿರೀಕ್ಷಿತ ಒನ್‌ಪ್ಲಸ್‌ 8 ಸರಣಿಯನ್ನು ಅನಾವರಣ ಮಾಡಿದೆ. ಆದರೆ ಇನ್ನು ಕೆಲವು ಸಂಸ್ಥೆಗಳು ಹೊಸ ಫೋನ್ ಬಿಡುಗಡೆ ಕಾರ್ಯಕ್ರಮಗಳನ್ನು ಮುಂದೂಡಿವೆ.

Best Mobiles in India

English summary
India is currently under an extended lockdown till May 3 in order to mitigate the transmission of the deadly coronavirus.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+