ಪಾಲಕರೇ ಎಚ್ಚರ!..ಅತೀಯಾದ ಫೋನ್ ಬಳಕೆಯಿಂದ ಮಕ್ಕಳ ಕಣ್ಣಿಗೆ ಆಪತ್ತು!

|

ಪ್ರಸ್ತುತ ತಂತ್ರಜ್ಞಾನ ಅಭಿವೃದ್ಧಿಯು ಸಾಕಷ್ಟು ಹೊಸ ಆವಿಸ್ಕಾರಗಳಿಗೆ ಸಾಕ್ಷಿ ಆಗಿದೆ. ಈ ಮಹತ್ತರ ಬದಲಾವಣೆ ಹಾದಿಯಲ್ಲಿ ಸ್ಮಾರ್ಟ್‌ಫೋನ್ ಡಿವೈಸ್ ಮೊದಲು ಕಾಣಿಸಿಕೊಳ್ಳುತ್ತದೆ. ಸದ್ಯ ಜನರ ಬಹುತೇಕ ಅಗತ್ಯ ಕೆಲಸಗಳನ್ನು ನೂತನ ಗ್ಯಾಡ್ಜೆಟ್ಸ್‌ಗಳು ಸುಲಭವಾಗಿಸಿದ್ದು, ಬಹುತೇಕರು ಅವುಗಳಿಗೆ ಅಡಿಕ್ಟ್ ಆಗಿಬಿಟ್ಟಿದ್ದಾರೆ. ಬಹಳ ಅಗತ್ಯ ಮತ್ತು ಅನುಕೂಲವಾಗಿರೊ ಡಿವೈಸ್‌ಗಳು/ಗ್ಯಾಡ್ಜೆಟ್ಸ್‌ಗಳು ಅಷ್ಟೇ ಮಾರಕ ಎಂಬುದು ನಿಮಗೆ ತಿಳಿದಿರಲಿ.

ಜೀವನಶೈಲಿಯಲ್ಲಿ

ಇಂದಿನ ಜೀವನಶೈಲಿಯಲ್ಲಿ ಗ್ಯಾಡ್ಜೆಟ್ಸ್‌ಗಳು ಮುಖ್ಯ ಅಂಗವಾಗಿದ್ದು, ಅದರಲ್ಲಿಯೂ ಸ್ಮಾರ್ಟ್‌ಫೋನ್ ಆಪ್ತವಾಗಿದೆ. ಯಾವುದೇ ವಯಸ್ಸಿನ ಅಂತರವಿಲ್ಲದೇ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಸ್ಮಾರ್ಟ್‌ಫೋನ್ ತನ್ನ ಪ್ರಭಾವ ಬೀರಿದೆ. ಇನ್ನು ಕೆಲವು ಪಾಲಕರು ಆಟವಾಡಲು ಮಕ್ಕಳು ಕೈಗೆ ಫೋನ್‌ಗಳಲ್ಲಿ ನೀಡುತ್ತಾರೆ. ಆದರೆ ಅತೀಯಾದ ಸ್ಮಾರ್ಟ್‌ಫೋನ್ ಬಳಕೆ ಕಣ್ಣಿಗೆ ಎಂತಹ ಆಪತ್ತು ತರುತ್ತದೆ ಎಂದರೇ, ಕಣ್ಣುಗಳನ್ನು ಸರ್ಜರಿ ಮಾಡುವ ಹಂತಕ್ಕೆ ತಂದು ನಿಲ್ಲಿಸಿ ಬಿಡುತ್ತದೆ.

4ವರ್ಷದ ಬಾಲಕಿ

ಹೀಗೆ ಅತೀಯಾಗಿ ಸ್ಮಾರ್ಟ್‌ಫೋನ್ ಬಳಕೆ ಮಾಡಿದ್ದರ ಪರಿಣಾಮ ಕಳೆದ ಕೆಲ ತಿಂಗಳ ಹಿಂದೆ 4ವರ್ಷದ ಬಾಲಕಿ ಕಣ್ಣಿನ ಸರ್ಜರಿಗೆ ಒಳಗಾಗಿದ್ದಳು. ಈ ಬಾಲಕಿ 2 ವರ್ಷವಿದ್ದಾಗಲೇ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಿದ್ದಳು, ಆಕೆ 4 ವರ್ಷ ವಯಸ್ಸು ಆಗುವ ಹೊತ್ತಿಗೆ ಸ್ಮಾರ್ಟ್‌ಫೋನ್‌ಗೆ ಪೂರ್ಣ ಅಡಿಕ್ಟ್‌ ಆಗಿದ್ದಳು. ಆಕೆ ಸೇಫ್ಟಿ ಗ್ಲಾಸ್‌ ಬಳಕೆ ಮಾಡಿದ್ದರು, ಆದರೆ ಅದಾಗಲೆ ಆಕೆಗೆ ಲೇಜಿ ಐ(lazy eye) ಕಣ್ಣಿನ ಸಮಸ್ಯೆ ಕಾಣಿಸಿಕೊಂಡಿತ್ತು, ನಂತರ ಕಣ್ಣಿನ ಸರ್ಜರಿಗೆ ಒಳಗಾಗಿದ್ದಳು.

ಏನಿದು lazy eye?

ಏನಿದು lazy eye?

ಲೇಜಿ ಐ(lazy eye) ಅಂದರೇ ಆಲಸಿ ಕಣ್ಣು ಅಥವಾ ಆಂಬ್ಲಿಯೋಪಿಯಾ ಎಂದೂ ಕರೆಯಲ್ಪಡುತ್ತದೆ, ಇದು ಚಿಕ್ಕ ಮಕ್ಕಳ ಬಾಲ್ಯಾವಸ್ಥೆಯಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ರೋಗ ಇರುವ ಮಗುವಿನ ಕಣ್ಣುಗಳು ಆಶ್ವರ್ಯಕ್ಕೆ ಒಳಗಾದಂತೆ ಕಂಡುಬರುತ್ತವೆ. ಹಾಗೂ ಮೆದುಳು ಒಂದು ಕಣ್ಣಿನ ಮೇಲೆ ಅಧಿಕವಾಗಿ ಕೇಂದ್ರಿಕೃತವಾಗಿರುತ್ತದೆ. ಗುಣಪಡಿಸಲು ಚಿಕಿತ್ಸಾ ಕ್ರಮಗಳಿವೆ.

ಚಿಕ್ಕ ಮಕ್ಕಳು ಎಷ್ಟು ಹೊತ್ತು ಗ್ಯಾಡ್ಜೆಟ್ ವೀಕ್ಷಿಸಬಹುದು?

ಚಿಕ್ಕ ಮಕ್ಕಳು ಎಷ್ಟು ಹೊತ್ತು ಗ್ಯಾಡ್ಜೆಟ್ ವೀಕ್ಷಿಸಬಹುದು?

ಅತೀಯಾಗಿ ಗ್ಯಾಡ್ಜೆಟ್ಸ್‌ಗಳ/ಫೋನ್ ಡಿಸ್‌ಪ್ಲೇ ಬೆಳಕು ಚಿಕ್ಕ ಮಕ್ಕಳ ಕಣ್ಣಿಗೆ ಬಹುಬೇಗನೆ ಹಾನಿ ಉಂಟು ಮಾಡುವ ಸಾಧ್ಯತೆಗಳಿರುತ್ತವೆ. ಈ ನಿಟ್ಟಿನಲ್ಲಿ ಪಾಲಕರು ಚಿಕ್ಕ ಮಕ್ಕಳು ಬಗ್ಗೆ ನಿಗಾ ವಹಿಸುವುದು ಉತ್ತಮ. ತಜ್ಞರ ಪ್ರಕಾರ 5 ವರ್ಷದೊಳಗಿನ ಮಕ್ಕಳ ಗ್ಯಾಡ್ಜೆಟ್ಸ್‌ಗಳ ಡಿಸ್‌ಪ್ಲೇ ಬೆಳಕಿನ ವೀಕ್ಷಣೆಯ ಅವಧಿ ಒಂದು ಗಂಟೆ ಮೀರಬಾರದು ಎನ್ನುತ್ತಾರೆ.

Most Read Articles
Best Mobiles in India

English summary
Wireless devices have become an integral part of our lives that it often becomes an inconvenience to live without them. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X