ನೀವು ಏರ್‌ಟೆಲ್ ಗ್ರಾಹಕರೇ? ಹಾಗಿದ್ರೆ, ಈ ಅತ್ಯುತ್ತಮ ಪ್ಲ್ಯಾನ್‌ಗಳು ನಿಮಗೆ ಸೂಕ್ತ!
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ, ಏರ್‌ಟೆಲ್ ಟೆಲಿಕಾಂ ನಡುವೆ ಸ್ಪರ್ಧೆ ಜೋರಾಗಿದೆ. ಜಿಯೋಗೆ ನೇರ ಪೈಪೋಟಿ ನೀಡುವ ನಿಟ್ಟಿನಲ್ಲಿ ಏರ್‌ಟೆಲ್ ಸಂಸ್ಥೆಯು ಹೆಜ್ಜೆ ಹಾಕುತ್ತಿದ್ದು, ಬಜೆಟ್ ದರದಲ್ಲಿ ಕೆಲವು ಆಕರ್ಷಕ ಪ್ಲ್ಯಾನ್‌ಗಳನ್ನು ಸಹ ನೀಡಿದೆ. ಆ ಪೈಕಿ ಸುಮಾರು 1000ರೂ. ಒಳಗೆ ಲಭ್ಯ ಇರುವ ಕೆಲವು ಯೋಜನೆಗಳು ಬೊಂಬಾಟ್ ಸೌಲಭ್ಯ ಪಡೆದಿವೆ.
ಹೌದು, ಏರ್‌ಟೆಲ್ ಟೆಲಿಕಾಂ ಸಂಸ್ಥೆಯ ಹಲವು ಪ್ಲ್ಯಾನ್‌ಗಳ ಪೈಕಿ 1000ರೂ. ಒಳಗೆ ಲಭ್ಯ ಇರುವ ಕೆಲವು ಯೋಜನೆಗಳು ಡೇಟಾ, ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್ ಸೌಲಭ್ಯಗಳೊಂದಿಗೆ ಗ್ರಾಹಕರ ಗಮನ ಸೆಳೆದಿವೆ. ಅಂತಹ ಐದು ಬೆಸ್ಟ್ ರೀಚಾರ್ಜ್ ಯೋಜನೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಏರ್‌ಟೆಲ್‌ನ 999ರೂ. ರೀಚಾರ್ಜ್ ಪ್ಲಾನ್
ಏರ್‌ಟೆಲ್ ಟೆಲಿಕಾಂನ 999ರೂ. ರೀಚಾರ್ಜ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಡೆದುಕೊಂಡಿದೆ. ಈ ವೇಳೆ ಪ್ರತಿದಿನ 2.5 GB ಡೇಟಾ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಏರ್‌ಟೆಲ್ ಈ ಯೋಜನೆಯು ಅನಿಯಮಿತ ಉಚಿತ ವಾಯಿಸ್ ಕರೆಗಳ ಪ್ರಯೋಜನ ಕೂಡಾ ಲಭ್ಯ ಆಗಲಿದೆ. ಹೆಚ್ಚುವರಿಯಾಗಿ ಏರ್‌ಟೆಲ್ ಆಪ್‌ಗಳ ಸೌಲಭ್ಯ ಸಿಗುತ್ತವೆ.

ಏರ್‌ಟೆಲ್‌ನ 869ರೂ. ರೀಚಾರ್ಜ್ ಪ್ಲಾನ್
ಏರ್‌ಟೆಲ್ ಸಂಸ್ಥೆಯ 869ರೂ. ರೀಚಾರ್ಜ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಒಳಗೊಂಡಿದೆ. ಇದು ಪ್ಲ್ಯಾನಿನಲ್ಲಿ ದಿನವೂ 2 GB ಡೇಟಾ ಸೌಲಭ್ಯ ಗ್ರಾಹಕರಿಗೆ ದೊರೆಯುತ್ತದೆ. ಹಾಗೆಯೇ ಡೈಲಿ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇದರ ಜೊತೆಗೆ ಏರ್‌ಟೆಲ್ ಟೆಲಿಕಾಂ ಈ ಪ್ಲ್ಯಾನ್ ಅನಿಯಮಿತ ಉಚಿತ ವಾಯಿಸ್ ಕರೆಗಳ ಪ್ರಯೋಜನ ಕೂಡಾ ಲಭ್ಯ ಮಾಡುತ್ತದೆ. ಅಲ್ಲದೇ ಡಿಸ್ನಿ+ ಹಾಟ್‌ಸ್ಟಾರ್ ಸೌಲಭ್ಯ ಸಹ ಪಡೆದಿದೆ.
ಏರ್‌ಟೆಲ್‌ನ 839ರೂ. ರೀಚಾರ್ಜ್ ಪ್ಲಾನ್
ಏರ್‌ಟೆಲ್ ಟೆಲಿಕಾಂನ 839ರೂ. ರೀಚಾರ್ಜ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಒಳಗೊಂಡಿದೆ. ಇದು ಪ್ಲ್ಯಾನಿನಲ್ಲಿ ದಿನವೂ 2 GB ಡೇಟಾ ಸೌಲಭ್ಯ ಗ್ರಾಹಕರಿಗೆ ದೊರೆಯುತ್ತದೆ. ಹಾಗೆಯೇ ಡೈಲಿ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇದರ ಜೊತೆಗೆ ಏರ್‌ಟೆಲ್ ಈ ಯೋಜನೆಯು ಅನಿಯಮಿತ ಉಚಿತ ವಾಯಿಸ್ ಕರೆಗಳ ಪ್ರಯೋಜನ ಕೂಡಾ ಲಭ್ಯ ಮಾಡುತ್ತದೆ. ಅಲ್ಲದೇ ಏರ್‌ಟೆಲ್ ಆಪ್‌ಗಳ ಸೌಲಭ್ಯ ಲಭ್ಯ.
ಏರ್‌ಟೆಲ್‌ನ 779ರೂ. ರೀಚಾರ್ಜ್ ಪ್ಲಾನ್
ಏರ್‌ಟೆಲ್ ಸಂಸ್ಥೆಯ 779ರೂ. ರೀಚಾರ್ಜ್ ಪ್ಲ್ಯಾನ್ ಒಟ್ಟು 90 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಇದು ಪ್ರತಿದಿನ 1.5 GB ಡೇಟಾ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿದೆ. ಹಾಗೆಯೇ ನಿತ್ಯ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇದರ ಜೊತೆಗೆ ಏರ್‌ಟೆಲ್ ಈ ಪ್ಲ್ಯಾನಿನಲ್ಲಿ ಅನಿಯಮಿತ ಉಚಿತ ಧ್ವನಿ ಕರೆಗಳ ಪ್ರಯೋಜನ ಕೂಡಾ ಲಭ್ಯ ಆಗುತ್ತದೆ. ಅಲ್ಲದೇ ಏರ್‌ಟೆಲ್ ಆಪ್‌ಗಳ ಸೌಲಭ್ಯ ಲಭ್ಯ.
ಏರ್‌ಟೆಲ್‌ನ 519ರೂ. ರೀಚಾರ್ಜ್ ಪ್ಲಾನ್ ಪ್ರಯೋಜನಗಳು
ಏರ್‌ಟೆಲ್ ಟೆಲಿಕಾಂನ 519ರೂ. ರೀಚಾರ್ಜ್ ಪ್ಲ್ಯಾನ್ ಒಟ್ಟು 60 ದಿನಗಳ ವ್ಯಾಲಿಡಿಟಿ ಅವಧಿಯನ್ನು ಅಂದರೇ ಪೂರ್ಣ ಎರಡು ತಿಂಗಳ ವ್ಯಾಲಿಡಿಟಿ ಪಡೆದುಕೊಂಡಿದೆ. ಈ ವೇಳೆ ಪ್ರತಿದಿನ 1.5 GB ಡೇಟಾ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ.


Click it and Unblock the Notifications








