Home
ಸುದ್ದಿಜಾಲ

SMSಗಳನ್ನು ಇತರರಿಗೆ ಕಾಣದಂತೆ ಹೈಡ್‌ ಮಾಡಬೇಕೆ?..ಇಲ್ಲಿವೆ ನೋಡಿ ಬೆಸ್ಟ್ ಆಪ್ಸ್!

ಪ್ರಸ್ತುತ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಅತೀ ಅಗತ್ಯದ ಡಿವೈಸ್‌ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂದಿನ ಪ್ರತಿ ಕೆಲಸಗಳು ಫೋನ್ ಮೂಲಕವೇ ನಡೆಯುತ್ತವೆ. ಹೀಗಾಗಿ ಸ್ಮಾರ್ಟ್‌ಫೋನ್‌ನಲ್ಲಿ ಖಾಸಗಿ ಮಾಹಿತಿ ಕಾಪಾಡುವುದು ಬಹು ಮುಖ್ಯವಾದ ಸಂಗತಿ ಆಗಿದೆ. ಬಹುತೇಕ ಬಳಕೆದಾರರು ತಮ್ಮ ವಾಟ್ಸಪ್‌, ಗ್ಯಾಲರಿ, ಫೇಸ್‌ಬುಕ್‌ ಮತ್ತು ಯುಪಿಐ ಆಪ್‌ಗಳಿಗೆ ಆಪ್‌ ಲಾಕ್ ಮೂಲಕ ಭದ್ರತೆ ಹೊಂದಿರುತ್ತಾರೆ. ಆದರೆ ನಾರ್ಮಲ್ ಎಸ್‌ಎಮ್‌ಎಸ್‌ ಸುರಕ್ಷತೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

ನಾರ್ಮಲ್

ಹೌದು, ನಾರ್ಮಲ್ ಎಸ್‌ಎಮ್‌ಎಸ್‌ಗಳಿಗೂ ಸುರಕ್ಷತೆ ಒದಗಿಸುವ ಅಗತ್ಯ ಅನಿಸುತ್ತದೆ. ಏಕೆಂದರೇ ಬ್ಯಾಂಕ್‌ ವ್ಯವಹಾರಗಳ ಮಾಹಿತಿ, ಗಳು, ವಿಧಧ ಓಟಿಪಿ-OTPಗಳು ಮಾಹಿತಿ, ಶಾಪಿಂಗ್ ಮಾಹಿತಿ, ಪಿಎಫ್‌ ಮಾಹಿತಿ, ಇನ್ಸೂರೆನ್ಸ್‌ಮಾಹಿತಿ, ಬಿಲ್ ಪೇಮೆಂಟ್ ಮಾಹಿತಿ ಸೇರಿದಂತೆ ಇನ್ನೂ ಅನೇಕ ಅಗತ್ಯ ವ್ಯವಹಾರಗಳ ಮಾಹಿತಿಗಳು ನಾರ್ಮಲ್ ಎಸ್‌ಎಮ್‌ಎಸ್‌ಗಳಲ್ಲಿಯೇ ಇನ್‌ಬಾಕ್ಸ್‌ ಸೇರುತ್ತವೆ. ಹೀಗಾಗಿ ನಾರ್ಮಲ್ ಎಸ್‌ಎಮ್‌ಎಸ್‌ಗಳಿಗೂ ಸುರಕ್ಷತೆಯ ಅವಶ್ಯವಿದೆ ಮತ್ತು ಭದ್ರತೆ ಒದಗಿಸಲು ಅನೇಕ ಆಪ್ಸ್‌ಗಳಿವೆ. ಅಂತಹ ಐದು ಮುಖ್ಯ ಆಪ್ಸ್‌ಗಳ ಬಗ್ಗೆ ಈ ಸ್ಟೋರಿಯಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಮೆಸೆಜ್ ಲಾಕರ್

ಮೆಸೆಜ್ ಲಾಕರ್

ಮೆಸೆಜ್ ಲಾಕರ್ ಆಪ್‌ ಸಹ ಎಸ್‌ಎಮ್‌ಎಸ್‌ಗಳನ್ನು ಭದ್ರವಾಗಿಟ್ಟುಕೊಳ್ಳುವುದಕ್ಕೆ ನೆರವು ನೀಡುತ್ತದೆ. ಕೇವಲ ಎಸ್ಎಂಎಸ್ ಗಳನ್ನು ಪಾತ್ರವೇ ಅಲ್ಲ ಬದಲಾಗಿ ಪಾಸ್ ವರ್ಡ್ ಗಳನ್ನು ಕೂಡ ಇವು ಪ್ರೊಟೆಕ್ಟ್ ಮಾಡುತ್ತವೆ. ವಾಟ್ಸ್ ಆಪ್, ಜಿಮೇಲ್, ಟೆಲಿಗ್ರಾಂ, ಫೇಸ್ ಬುಕ್ ಮೆಸೇಂಜರ್, ಸ್ಕೈಪ್ ಇತ್ಯಾದಿಗಳ ಮೆಸೇಜ್ ಗಳನ್ನು ನೀವಿಲ್ಲಿ ಸೇವ್ ಮಾಡಿ ಇಡಬಹುದು.ಇದಿಷ್ಟೇ ಅಲ್ಲದೆ ಇದೊಂದು ಸಿಂಪಲ್ ಇಂಟರ್ ಫೇಸ್ ಆಗಿದೆ. ಅದೇ ಕಾರಣಕ್ಕೆ ಇಂದಿನ ದಿನಗಳಲ್ಲಿ ಮೆಸೇಜ್ ಲಾಕರ್ ಹೆಚ್ಚು ಪ್ರಸಿದ್ಧಿಯಾಗುತ್ತಿದೆ.

ಎಸ್ಎಂಎಸ್ ಲಾಕ್

ಎಸ್ಎಂಎಸ್ ಲಾಕ್

ಆಂಡ್ರಾಯ್ ಸ್ಮಾರ್ಟ್ ಫೋನ್ ಗಳಲ್ಲಿ ಎಸ್ಎಂಎಸ್ ಗಳನ್ನು ಸಿಂಪಲ್ ಆಗಿ ಲಾಕ್ ಮಾಡಿ ಇಟ್ಟುಕೊಳ್ಳುವುದಕ್ಕಾಗಿ ಆಂಡ್ರಾಯ್ಡ್ ಆಪ್ ನ್ನು ಹುಡುಕಾಡುತ್ತಿದ್ದರೆ ಎಸ್ಎಂಎಸ್ ಲಾಕ್ ಬೆಸ್ಟ್ ಆಪ್ ಆಗಿದೆ. ಎಸ್ಎಂಎಸ್ ಲಾಕ್ ಹೆಚ್ಚಿನ ಎಲ್ಲಾ ಮೆಸೇಜಿಂಗ್ ಆಪ್ ಗಳಾಗಿರುವ ಮೆಸೆಂಜರ್, ಹ್ಯಾಂಗ್ಸ್ ಔಟ್, ವಿಚಾಟ್ , ಟೆಲಿಗ್ರಾಂ ಇತ್ಯಾದಿಗಳ ಪಾಸ್ ವರ್ಡ್ ಗಳನ್ನು ಸೇವ್ ಮಾಡುತ್ತದೆ. ಮತ್ತು ಸುಲಭದಲ್ಲಿ ಬಳಕೆ ಮಾಡಬಹುದಾದ ಇಂಟರ್ಫೇಸ್ ಇದಾಗಿದೆ.

GO SMS Pro ಆಪ್

GO SMS Pro ಆಪ್

ಗೋ ಎಸ್ಎಂಎಸ್ ಪ್ರೊ ಆಪ್‌ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಅತೀ ಹೆಚ್ಚು ರೇಟಿಂಗ್ ಪಡೆದಿರುವ ಆಂಡ್ರಾಯ್ಡ್ ಆಪ್ ಇದಾಗಿದೆ. ಈ ಆಪ್‌ನಲ್ಲಿ ನಿಮಗೆ ಪ್ರೈವೇಟ್ ಮೆಸೇಜಿಂಗ್ ವಾಲ್ಟ್ ಆಯ್ಕೆ ಇರುತ್ತದೆ. ಅಲ್ಲಿ ನೀವು ನಿಮ್ಮ ಕಾಂಟ್ಯಾಕ್ಟ್ ಗಳನ್ನು ಸೇರಿಸಿಕೊಳ್ಳಬಹುದು. ನಂತರ ನೀವು ಅದಕ್ಕೆ ಪಾಸ್ ವರ್ಡ್ ಪ್ರೊಟೆಕ್ಷನ್ ಕೂಡ ನೀಡಬಹುದು. ಹಾಗಾಗಿ ಈ ಆಪ್‌ ಮೆಸೇಜ್ ಗಳನ್ನು ಹೈಡ್ ಮಾಡುವುದಕ್ಕೆ ಉತ್ತಮ ಆಪ್ ಆಗಿದೆ.

Vault ಆಪ್‌

Vault ಆಪ್‌

ವಾಲ್ಟ್ ಹಲವು ಕಾರಣಗಳಿಗೆ ಉಪಯೋಗವಾಗುವ ಆಂಡ್ರಾಯ್ಡ್ ಆಪ್ ಆಗಿದ್ದು ಇದರಲ್ಲಿ ಫೋಟೋಗಳು, ವೀಡಿಯೋಗಳು, ಕಾಲ್ ಲಾಗ್ ಗಳು ಮತ್ತು ಎಸ್ಎಂಎಸ್ ಗಳನ್ನು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಹೈಡ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನ ಕಾಲ್ ಮತ್ತು ಎಸ್ಎಂಎಸ್ ಗಳನ್ನು ಸಪರೇಟ್ ಪೆನಲ್ ನಲ್ಲಿ ಹೈಡ್ ಮಾಡುವುದಕ್ಕೆ ಇದರಲ್ಲಿ ಅವಕಾಶವಿರುತ್ತದೆ. ಯಾರ ಎಸ್ಎಂಎಸ್ ಹೈಡ್ ಮಾಡಬೇಕು ಎಂಬ ಬಗ್ಗೆ ಬಳಕೆದಾರರು ತಮ್ಮ ಕಾಂಟ್ಯಾಕ್ಟ್ ನ್ನು ಇಂಪೋರ್ಟ್ ಮಾಡಿದರೆ ಸಾಕು. ಪ್ರೈವೇಟ್ ಕಾಂಟ್ಯಾಕ್ಟ್ ಗಳ ನೋಟಿಫಿಕೇಷನ್ ನ್ನು ಕೂಡ ಇದು ಹೈಡ್ ಮಾಡುತ್ತದೆ.

ಪ್ರೈವೇಟ್ ಮೆಸೆಜ್ ಬಾಕ್ಸ್

ಪ್ರೈವೇಟ್ ಮೆಸೆಜ್ ಬಾಕ್ಸ್

ಪ್ರೈವೇಟ್ ಮೆಸೇಜ್ ಆಪ್ ಮತ್ತೊಂದು ಆಂಡ್ರಾಯ್ಡ್ ಟೆಕ್ಸ್ಟ್ ಮೆಸೇಜ್ ಲಾಕರ್ ಆಗಿದ್ದು ಎಸ್ಎಂಎಸ್ ಇನ್ ಬಾಕ್ಸ್ ಜೊತೆಗೆ ಪಿನ್ ಅಥವಾ ಪಾಸ್ ವರ್ಡ್ ಗಳನ್ನು ಕೂಡ ಇದು ಹೈಡ್ ಮಾಡಿ ಇಡುತ್ತದೆ. ಇದರಲ್ಲಿ ಬಳಕೆದಾರರು ಕಾಂಟ್ಯಾಕ್ಟ್ ಆಡ್ ಮಾಡಿದ ಕೂಡಲೇ ಆ ಕಾಂಟ್ಯಾಕ್ಟ್ ನ ಎಲ್ಲಾ ಮೆಸೇಜ್ ಗಳು ಅಂದರೆ ಇನ್ ಕಮ್ಮಿಂಗ್, ಔಟ್ ಗೋಯಿಂಗ್ ಮೆಸೇಜ್ ಗಳು ಹೈ ಸ್ವಯಂಚಾಲಿತವಾಗಿ ಹೈಡ್ ಆಗುತ್ತದೆ. ಹಿಡನ್ ಎಸ್ಎಂಎಸ್ ಗಳನ್ನು ಆಕ್ಸಿಸ್ ಮಾಡುವುದಕ್ಕಾಗಿ ನೀವು ಪಿನ್ ಅಥವಾ ಪಾಸ್ ವರ್ಡ್ ನ್ನು ಬಳಕೆ ಮಾಡಬೇಕಾಗುತ್ತದೆ. ಅದೇ ಕಾರಣಕ್ಕೆ ಪ್ರೈವೇಟ್ ಮೆಸೇಜ್ ಬಾಕ್ಸ್ ಬೆಸ್ಟ್ ಆಪ್ ಅನ್ನಿಸಿಕೊಂಡಿದೆ.

Best Mobiles in India

English summary
These are five best Android apps to hide messages.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+