Home
ಸುದ್ದಿಜಾಲ

ಬೆಸ್ಟ್‌ ಕ್ಯಾಮೆರಾ ಫೋನ್‌ ಖರೀದಿಸುವ ಪ್ಲ್ಯಾನ್‌ ಇದೆಯೇ?.ಹಾಗಿದ್ರೇ ಈ ಲಿಸ್ಟ್‌ ನೋಡಿ!

ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯುತ್ತಮ ಕ್ಯಾಮೆರಾ ಫೀಚರ್‌ ನೀಡಲಾಗುತ್ತಿದೆ. ಹಾಗಂತ ಡಿಎಸ್‌ಎಲ್‌ಆರ್‌ ಕ್ಯಾಮೆರಾಗಳೊಂದಿಗೆ ಹೋಲಿಕೆ ಮಾಡಲಾಗುವುದಿಲ್ಲ. ಆದರೆ ಇತ್ತೀಚಿನ ಬಹುತೇಕ ಫೋನ್‌ಗಳು 48ಎಂಪಿ ಕ್ಯಾಮೆರಾ, 64ಎಂಪಿ ಕ್ಯಾಮೆರಾ ಸೆನ್ಸಾರ್‌ ಹೊಂದಿದ್ದು, ಇನ್ನು ಕೆಲವು ಫೋನ್‌ಗಳು 108ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿ ಕಾಣಿಸಿಕೊಂಡಿವೆ. ಇವುಗಳು ಡಿಎಸ್‌ಎಲ್‌ಆರ್‌ ಕ್ಯಾಮೆರಾದ ಫೋಟೊಗಳಿಗೆ ಪೈಪೋಟಿ ನೀಡುವಂತಿವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಅಲ್ಟ್ರಾ

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಅಲ್ಟ್ರಾ

ಗ್ಯಾಲಕ್ಸಿ S21 ಅಲ್ಟ್ರಾ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ OIS ಸಪೋರ್ಟ್‌ ಜೊತೆಗೆ 108ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳು 12ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಇನ್ನು ನಾಲ್ಕನೇ ಕ್ಯಾಮೆರಾವು ಕ್ರಮವಾಗಿ 10ಎಂಪಿ ಸೆನ್ಸಾರ್ ಬಲವನ್ನು ಪಡೆದಿವೆ. ಇದರೊಂದಿಗೆ ಸೆಲ್ಫಿಗಾಗಿ 40ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ.

ಐಫೋನ್ 12 ಪ್ರೊ

ಐಫೋನ್ 12 ಪ್ರೊ

ಐಫೋನ್ 12 ಪ್ರೊ 6.1-ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದರೊಂದಿಗೆ ಮುಖ್ಯವಾಗಿ ಐಫೋನ್ 12 ಪ್ರೊ ಕ್ಯಾಮೆರಾ ವಿಭಾಗದಲ್ಲಿ ಸಾಕಷ್ಟು ಅಪ್‌ಗ್ರೇಡ್‌ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಅವುಗಳು ಮೂರು 12ಎಂಪಿ ಸೆನ್ಸಾರ್‌ನಲ್ಲಿವೆ. ಎರಡು ವೈಡ್-ಆಂಗಲ್ ಸೆನ್ಸರ್‌ಗಳು ಮತ್ತು ಟೆಲಿಫೋಟೋ ಸಂವೇದಕವನ್ನು ಒಳಗೊಂಡಿದೆ. ಐಫೋನ್ 12 ಪ್ರೊ 128GB ವೇರಿಯಂಟ್ ಆಯ್ಕೆ ಸಹ ಹೊಂದಿದೆ.

ಐಫೋನ್ 12 ಪ್ರೊ ಮ್ಯಾಕ್ಸ್‌

ಐಫೋನ್ 12 ಪ್ರೊ ಮ್ಯಾಕ್ಸ್‌

ಐಫೋನ್ 12 ಪ್ರೊ ಮ್ಯಾಕ್ಸ್‌ 6.7 ಇಂಚಿನ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಐಫೋನ್ 12 ಪ್ರೊ ಮ್ಯಾಕ್ಸ್ ಟೆಲಿಫೋಟೋ ಕ್ಯಾಮೆರಾದೊಂದಿಗೆ ಉತ್ತಮವಾದ ಕ್ಯಾಮೆರಾ ಸೆಟ್ ಹೊಂದಿದೆ. ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳ ರಚನೆಯಿದ್ದು, ಅವುಗಳು 12ಎಂಪಿ ಸೆನ್ಸಾರ್‌ ಬಲದಲ್ಲಿವೆ. ಹಾಗೆಯೇ 65 ಎಂಎಂ ಫೋಕಲ್ ಉದ್ದವನ್ನು ಹೊಂದಿದ್ದು ಅದು ನಿಮಗೆ 2.5x ಆಪ್ಟಿಕಲ್ ಜೂಮ್ ಮತ್ತು 5x ಜೂಮ್ ಶ್ರೇಣಿಯನ್ನು ಅನುಮತಿಸುತ್ತದೆ. ಸುಧಾರಿತ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಕೂಡ ಹೊಂದಿದೆ. ಡಾಲ್ಬಿ ಸಪೋರ್ಟ್‌ ಸಹ ಪಡೆದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S20 FE

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S20 FE

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S20 FE ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ, ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್‌ವೈಡ್-ಆಂಗಲ್ ಲೆನ್ಸ್ ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಒಐಎಸ್) ಮತ್ತು ಡ್ಯುಯಲ್ ಫೇಸ್ ಡಿಟೆಕ್ಷನ್ ಆಟೋಫೋಕಸ್ ಅನ್ನು ಬೆಂಬಲಿಸುತ್ತದೆ. ಎರಡನೇ ಕ್ಯಾಮೆರಾ 123 ಡಿಗ್ರಿ ಫೀಲ್ಡ್ ವ್ಯೂ ಜೊತೆಗೆ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಶೂಟರ್ ಅನ್ನು ಹೊಂದಿದೆ. ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸಾರ್‌ ಅನ್ನು ಹೊಂದಿದೆ.ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ

ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಒಟ್ಟು ಮೂರು ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಮುಖ್ಯ ಕ್ಯಾಮೆರಾವು 108ಎಂಪಿ ಸೆನ್ಸಾರ್‌ ಹೊಂದಿದೆ. ಇನ್ನು ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳೆರಡು ಸಹ ಕ್ರಮವಾಗಿ 12ಎಂಪಿಯ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿವೆ. ಸೆಲ್ಫಿ ಕ್ಯಾಮೆರಾವು 10ಎಂಪಿ ಸೆನ್ಸಾರ್‌ ಪಡೆದಿದೆ.

Best Mobiles in India

English summary
5 Best Camera Mobile Phones In India; January 2021.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+