Home
ಸುದ್ದಿಜಾಲ

ಸದ್ಯ ವಿಶ್ವ ಮಾರುಕಟ್ಟೆಯಲ್ಲಿ ಅಬ್ಬರಿಸಿರುವ ಟಾಪ್‌ 5 ಫೋನ್‌ಗಳ ಲಿಸ್ಟ್‌ ಇಲ್ಲಿದೆ!

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಸಾಕಷ್ಟು ವಿಶಾಲವಾಗಿ ಬೆಳೆದಿದೆ. ಎಲ್ಲಾ ವಯೋಮಾನದವರು ಕೂಡ ಸ್ಮಾರ್ಟ್‌ಫೋನ್‌ ಅಗತ್ಯ ಹಾಗೂ ಅವಶ್ಯ ಸಾಧನ ಆಗಿದೆ. ಈ ನಿಟ್ಟಿನಲ್ಲಿ ಮಾರುಕಟ್ಟೆಗೆ ಹೊಸ ಹೊಸ ಮೊಬೈಲ್‌ಗಳು ಲಗ್ಗೆ ಇಡುತ್ತಲೇ ಸಾಗಿವೆ. ಅವುಗಳ ಪೈಕಿ ಕೆಲವು ಮೊಬೈಲ್‌ಗಳು ಆಕರ್ಷಕ ಫೀಚರ್ಸ್‌ ಪಡೆದಿದ್ದು ವಿಶ್ವಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದು, ಎಲ್ಲೆಡೆ ಅತ್ಯುತ್ತಮ ಮಾರಾಟ ಕಂಡಿವೆ.

ಹೌದು, ವಿಶ್ವ ಮೊಬೈಲ್‌ ಮಾರುಕಟ್ಟೆಯಲ್ಲಿ ಆಪಲ್‌ ಐಫೋನ್‌ಗಳು ಮಾರಾಟ ಲೀಡಿಂಗ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಸದ್ಯ ವರ್ಷದ ಮೂರನೇ ತ್ರೈಮಾಸಿಕದಲ್ಲಿ Q3 2024 ರಲ್ಲಿ ಹೆಚ್ಚು ಮಾರಾಟ ಕಂಡ ಫೋನ್‌ಗಳ ಲಿಸ್ಟ್‌ನಲ್ಲಿ ಐಫೋನ್‌ಗಳು, ಸ್ಯಾಮ್‌ಸಂಗ್‌ನ ಗ್ಯಾಲಾಕ್ಸಿ ಮೊಬೈಲ್‌ಗಳು ತಮ್ಮ ಸ್ಥಾನ ಉಳಿಸಿಕೊಂಡಿವೆ ಎಂದು Counterpoint ವರದಿ ಮಾಡಿದೆ. ಹಾಗಾದರೇ ಕೌಂಟರ್‌ಪಾಯಿಂಟ್‌ ವರದಿಯಂತೆ ಮೂರನೇ ತ್ರೈಮಾಸಿಕದಲ್ಲಿ 2024 ರಲ್ಲಿ ಹೆಚ್ಚು ಮಾರಾಟ ಆಗಿರುವ 5 ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸದ್ಯ ವಿಶ್ವ ಮಾರುಕಟ್ಟೆಯಲ್ಲಿ ಅಬ್ಬರಿಸಿರುವ ಟಾಪ್‌ 5 ಫೋನ್‌ಗಳ ಲಿಸ್ಟ್‌ ಇಲ್ಲಿದೆ!

ಐಫೋನ್‌ 15

ಐಫೋನ್‌ 15 (iPhone 15) ಮೊಬೈಲ್‌ 6.1 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದ್ದು, 1600 nits ಬ್ರೈಟ್ನಸ್‌ ಸಪೋರ್ಟ್‌ ಸಹ ಒಳಗೊಂಡಿದೆ. ಹಾಗೆಯೇ ಇದು A16 ಬಯೋನಿಕ್ ಚಿಪ್ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಈ ಐಫೋನ್‌ ios 16 ಓಎಸ್‌ ಸಪೋರ್ಟ್ ಕೂಡಾ ಪಡೆದುಕೊಂಡಿದೆ.

ಇನ್ನು ಈ ಐಫೋನಿನ ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇನ್ನು 12 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ. ಹಾಗೆಯೇ ಇದು ಡೈನಾಮಿಕ್ ಐಲ್ಯಾಂಡ್‌ ( Dynamic Island ) ಆಯ್ಕೆಯನ್ನು ಪಡೆದಿದೆ. ಅಲ್ಲದೇ ಇದು 128 GB, 256 GB, 512 GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

ಐಫೋನ್‌ 15 ಪ್ರೊ ಮ್ಯಾಕ್ಸ್‌

ಐಫೋನ್‌ 15 ಪ್ರೊ ಮ್ಯಾಕ್ಸ್‌ (iPhone 15 Pro Max) 6.7 ಇಂಚಿನ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಫೋನಿನ ಸ್ಕ್ರೀನ್‌ 120Hz ರಿಫ್ರೆಶ್ ರೇಟ್‌ ಸೌಲಭ್ಯ ಪಡೆದಿದೆ. ಇದು ಡಾಲ್ಬಿ ವಿಷನ್ ಸಪೋರ್ಟ್‌ ಕೂಡಾ ಇದೆ. ಅಲ್ಲದೇ ಈ ಐಫೋನ್ A16 ಬಯೋನಿಕ್ ಚಿಪ್ ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ಮಾಡಲಿದೆ. ಇದಕ್ಕೆ ಬೆಂಬಲವಾಗಿ ios 17 ಓಎಸ್‌ ಸಪೋರ್ಟ್ ಕೂಡಾ ಪಡೆದಿದೆ. ಇನ್ನು ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋ ಸೆರೆಹಿಡಿಯಲು ಪೂರಕವಾಗಿ ತಂತ್ರಜ್ಞಾನ ಪಡೆದುಕೊಂಡಿದೆ.

ಐಫೋನ್‌ 15 ಪ್ರೊ

ಐಫೋನ್‌ 15 ಪ್ರೊ (iPhone 15 Pro) 6.7 ಇಂಚಿನ ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದು ಕೂಡಾ ಪಿಲ್ ಶೇಪ್‌ ಮಾದರಿಯ ಪಂಚ್‌ ಹೋಲ್ ರಚನೆ ಪಡೆದಿದೆ. ಇದು ಡಾಲ್ಬಿ ವಿಷನ್ ಸಪೋರ್ಟ್‌ ಕೂಡಾ ಇದೆ. ಅಲ್ಲದೇ ಈ ಐಫೋನ್ A16 ಬಯೋನಿಕ್ ಚಿಪ್ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ. ಇದಕ್ಕೆ ಬೆಂಬಲವಾಗಿ ios 17 ಓಎಸ್‌ ಸಪೋರ್ಟ್ ಕೂಡಾ ಪಡೆದಿದೆ. ಇನ್ನು ಈ ಫೋನಿನ ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿ ಇದೆ. ಇದು ಮಂದ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೋ ಸೆರೆಹಿಡಿಯಲು ಪೂರಕವಾಗಿ ತಂತ್ರಜ್ಞಾನ ಒಳಗೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A15 4G

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A15 4G ಮೊಬೈಲ್‌ 6.5 ಇಂಚಿನ S AMOLED ಇನ್ಫಿನಿಟಿ U ನಾಚ್ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 1080 x 2340 ಪಿಕ್ಸೆಲ್‌ ಸ್ಕ್ರಿನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಮೀಡಿಯಾ ಟೆಕ್‌ ಹಿಲಿಯೊ G99 SoC ಪ್ರೊಸೆಸರ್‌ ಸೌಲಭ್ಯ ಪಡೆದಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಆಗಿದ್ದು, 5000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A15 5G

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A15 5G ಮೊಬೈಲ್‌ 6.5 ಇಂಚಿನ S AMOLED ಇನ್ಫಿನಿಟಿ U ನಾಚ್ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 1080 x 2340 ಪಿಕ್ಸೆಲ್‌ ಸ್ಕ್ರಿನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಪ್ರೊಸೆಸರ್‌ ಸೌಲಭ್ಯ ಪಡೆದಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಆಗಿದ್ದು, 5000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ.

Best Mobiles in India

English summary
5 Best Selling Mobiles in the World in Q3 2024. counterpoint Report details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+