ಸದ್ಯ ಮಾರುಕಟ್ಟೆಯ ಗಮನ ಸೆಳೆದ ಸ್ಮಾರ್ಟ್‌ಫೋನ್‌ಗಳ ಲಿಸ್ಟ್ ಇಲ್ಲಿದೆ!
ಮೊಬೈಲ್ ಮಾರುಕಟ್ಟೆಯಲ್ಲಿ ನೂತನ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಕೊಡುತ್ತಲೇ ಇರುತ್ತವೆ. ಕೆಲವು ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆ ಮೂಡಿಸಿರುತ್ತವೆ. ಮತ್ತೆ ಕೆಲವು ಬಿಡುಗಡೆ ಆದ ಮೇಲೆ ಸಖತ್ ಸೌಂಡ್ ಮಾಡುತ್ತವೆ. ಕೊನೆಯದಾಗಿ ಕೆಲವೇ ಕೆಲವು ಮೊಬೈಲ್ ಫೋನ್‌ಗಳು ಇಡೀ ಮಾರುಕಟ್ಟೆಯ ಗಮನ ಸೆಳೆದು ಬಿಡುತ್ತವೆ.
ಹೌದು, ಬಿಡುಗಡೆ ಆಗುವ ಫೋನ್‌ಗಳಲ್ಲಿ ಕೆಲವೇ ಕೆಲವು ಮೊಬೈಲ್ ಪ್ರಿಯರನ್ನು ಆಕರ್ಷಿಸುತ್ತವೆ. ಅದು ಫೀಚರ್ಸ್‌ಗಳಿಂದ ಇರಬಹುದು ಇಲ್ಲವೇ ಬೆಲೆಯಿಂದ ಆಗಿರಬಹುದು. ಮತ್ತೆ ಕೆಲವೊಮ್ಮೆ ಬ್ರ್ಯಾಂಡ್‌ನಿಂದಾ ಕೂಡಾ ಆಗಿರಬಹುದು. ಹಾಗಾದರೆ ಸದ್ಯ ಈ ನವೆಂಬರ್ ತಿಂಗಳಿನ ಆರಂಭದಲ್ಲಿ ಮೊಬೈಲ್ ಮಾರುಕಟ್ಟೆಯ ಗಮನ ಸೆಳೆದಿರುವ ಫೋನ್‌ಗಳ ಲಿಸ್ಟ್ ಇಲ್ಲಿದೆ ಮುಂದೆ ಓದಿರಿ.

ಐಫೋನ್ 15 ಪ್ರೊ ಮ್ಯಾಕ್ಸ್
ಆಪಲ್ ಸಂಸ್ಥೆಯ ಐಫೋನ್ 15 ಪ್ರೊ ಮ್ಯಾಕ್ಸ್ ಮೊಬೈಲ್ 6.7 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಈ ಮೊಬೈಲ್ A17 ಪ್ರೊ ಬಯೋನಿಕ್ ಚಿಪ್‌ಸೆಟ್ ಪ್ರೊಸೆಸರ್ ಪವರ್ ಅನ್ನು ಪಡೆದುಕೊಂಡಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾಪಿಕ್ಸೆಲ್ ಸೆನ್ಸರ್ ಆಗಿದೆ. ಮುಖ್ಯವಾಗಿ ಇದು ಆಕ್ಷನ್ ಬಟನ್ ಆಯ್ಕೆ ಹೊಸದಾಗಿ ಸೇರ್ಪೊಡೆ ಆಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ
ಸ್ಯಾಮ್‌ಸಂಗ್‌ನ ಕಂಪನಿಯ ಈ ದೈತ್ಯ ಫೋನ್ QHD+ ಡೈಮಂಡ್ ಅಮೋಲೆಡ್ ಜೊತೆಗೆ 6.8 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದೆ. ಅಲ್ಲದೇ ಇದು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಪವರ್ ಪಡೆದಿದೆ. ಜೊತೆಗೆ ಈ ಮೊಬೈಲ್ ಕ್ವಾಡ್ ಕ್ಯಾಮೆರಾ ರಚನೆ ಪಡೆದಿದ್ದು, ಮೊದಲ ಕ್ಯಾಮೆರಾ 200 ಮೆಗಾ ಪಿಕ್ಸಲ್ ಸೆನ್ಸಾರ್ ಆಗಿದೆ. ಇದರೊಂದಿಗೆ ಈ ಇದು 5,000mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿದೆ.

ರೆಡ್ಮಿ ನೋಟ್ 13 ಫೋನ್
ರೆಡ್ಮಿ ಯ ಈ ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, ಇದು ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080SoC ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರ ಮುಖ್ಯ ಕ್ಯಾಮೆರಾ 100 ಮೆಗಾ ಪಿಕ್ಸೆಲ್ ಸೆನ್ಸಾರ್ ಪಡೆದುಕೊಂಡಿದ್ದು, 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ. ಅಲ್ಲದೇ ಇದಕ್ಕೆ ಪೂರಕವಾಗಿ 33W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಪಡೆದಿದೆ.
ಐಫೋನ್ 15 ಫೋನ್
ನೂತನ ಐಫೋನ್ 15 ಫೋನ್ 6.1 ಇಂಚಿನ ಡಿಸ್‌ಪ್ಲೇ ಸೌಲಭ್ಯವನ್ನು ಒಳಗೊಂಡಿದ್ದು, 1600 nits ಬ್ರೈಟ್ನಸ್ ಸಪೋರ್ಟ್ ಸಹ ಲಭ್ಯ. ಈ ಮೊಬೈಲ್ A16 ಬಯೋನಿಕ್ ಚಿಪ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದರೊಟ್ಟಿಗೆ ಪ್ರಾಥಿಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಕಾಣಬಹುದು. ಇದರ ಜೊತೆಗೆ ಇದು ಡೈನಾಮಿಕ್ ಐಲ್ಯಾಂಡ್ ಆಯ್ಕೆ ಸಹ ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಫೋನ್
ಈ ಮೊಬೈಲ್ 6.6 ಇಂಚಿನ ಹೆಚ್‌ಡಿ ಪ್ಲಸ್ ಸೂಪರ್ ಅಮೊಲೆಡ್ ಡಿಸ್‌ಪ್ಲೇ ಇದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 1080 6nm ಪ್ರೊಸೆಸರ್ ಬಲ ಪಡೆದಿದೆ. ಜೊತೆಗೆ ಇದು 8GB + 128GB ಹಾಗೂ 8GB + 256GB ಸ್ಟೋರೇಜ್ ಸೌಲಭ್ಯ ಸಹ ಒಳಗೊಂಡಿದೆ. ತ್ರಿವಳಿ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿದೆ.


Click it and Unblock the Notifications








