ಸ್ಮಾರ್ಟ್ ಟಿವಿ ಕೊಳ್ಳುವ ಮುನ್ನ ಪರಿಶೀಲಿಸಬೇಕಾದ ಐದು ಸಂಗತಿಗಳು

|

ನೀವು ಸಾಮಾನ್ಯ ಗ್ರಾಹಕರಾಗಿರಬಹುದು ಅಥವಾ ಅನುಭವಿ ಮುಖ್ಯಸ್ಥರಾಗಿರಬಹುದು, ಟಿವಿ ಬ್ರ್ಯಾಂಡುಗಳು ಮತ್ತು ಅವುಗಳ ತಂತ್ರಜ್ಞಾನ ಎಷ್ಟು ಹೆಚ್ಚಾಗಿದೆಯೆಂದರೆ ಒಂದು ಪರಿಪೂರ್ಣ ಆಯ್ಕೆಯೆಂಬುದೇ ಅಸಾಧ್ಯವಾಗಿಬಿಟ್ಟಿದೆ.

ಸ್ಮಾರ್ಟ್ ಟಿವಿ ಕೊಳ್ಳುವ ಮುನ್ನ ಪರಿಶೀಲಿಸಬೇಕಾದ ಐದು ಸಂಗತಿಗಳು

ನೀವಂದುಕೊಂಡಿರುವ ಬಜೆಟ್ಟಿನೊಳಗೆ ಯಾವ್ಯಾವ ಅಂಶಗಳಿರುವ ಟಿವಿ ಖರೀದಿಸಬೇಕೆನ್ನುವುದು ಬಹುದೊಡ್ಡ ಸವಾಲಾಗಿ ಬಿಟ್ಟಿದೆ. ಮನಸ್ಸಲ್ಲಿ ಬಹಳಷ್ಟು ಪ್ರಶ್ನೆಗಳೇಳುತ್ತವೆ, ಒಂದು ಸ್ಮಾರ್ಟ್ ಟಿವಿ ಖರೀದಿಸಲು ಹೊರಟಾಗ; ಮನಸ್ಸು ಅತ್ತಿಂದಿತ್ತ ಇತ್ತಿಂದತ್ತ ಹೊರಳಾಡಿ ಕೊನೆಗೆ ಜನಪ್ರಿಯೆ ಬ್ರ್ಯಾಂಡಿನ ಟಿವಿಯನ್ನು ಖರೀದಿಸಿಬಿಡುತ್ತೀರಿ, ಆದರೆ ಆ ಟಿವಿ ತಾಂತ್ರಿಕವಾಗಿ ಕಡಿಮೆ ಗುಣಮಟ್ಟದ್ದಾಗಿರಬಹುದು.

ಓದಿರಿ: ಸ್ಮಾರ್ಟ್‌ಫೋನ್ ಭದ್ರತೆಗೆ ಇರಲಿ ಈ ಟಾಪ್ ಟಿಪ್ಸ್
ಹಣವನ್ನು ಪೋಲು ಮಾಡದೆ ಅಥವಾ ನಿಮ್ಮ ಅವಶ್ಯಕತೆಗಳೊಡನೆ ರಾಜಿ ಆಗದೆ ನಿಮ್ಮ ಮನೆಗೊಂದು ಪರಿಪೂರ್ಣ ಟಿವಿ ಕೊಂಡುಕೊಳ್ಳಬೇಕೆಂದ ನೀವು ಅಂದುಕೊಡಿದ್ದರೆ ನೀವು ಪರಿಗಣಿಸಲೇಬೇಕಾದ ಕೆಲವು ಸಂಗತಿಗಳು ಇಲ್ಲಿವೆ.

ಎಲ್.ಸಿ.ಡಿ, ಎಲ್.ಇ.ಡಿ ಅಥವಾ ಪ್ಲಾಸ್ಮಾ ಪರದೆ?

ಎಲ್.ಸಿ.ಡಿ, ಎಲ್.ಇ.ಡಿ ಅಥವಾ ಪ್ಲಾಸ್ಮಾ ಪರದೆ?

ತಜ್ಞರ ಪ್ರಕಾರ ಬಣ್ಣಗಳ ತೋರ್ಪಡುವಿಕೆಗೆ ಎಲ್.ಸಿ.ಡಿ ಮತ್ತು ಎಲ್.ಇ.ಡಿ ಟಿವಿಗಳಿಗಿಂತ ಪ್ಲಾಸ್ಮಾ ಟಿವಿ ಉತ್ತಮ. ಇದು ಹಳೆಯ ಜೆನರೇಷನ್ನಿನ ಟಿವಿಗಳ ಮಟ್ಟಿಗೆ ಸತ್ಯ. ಹೊಸ ಜೆನರೇಷನ್ನಿನ ಎಲ್.ಇ.ಡಿಗಳಲ್ಲಿರುವ ಪರದೆ ಅತ್ಯಾಧುನಿಕವಾಗಿದೆ ಮತ್ತು ಉತ್ತಮ ಗುಣಮಟ್ಟದ ಸ್ಪಷ್ಟ ಚಿತ್ರಗಳನ್ನು ಕೊಡುತ್ತದೆ. ಎಲ್.ಸಿ.ಡಿ ಟಿವಿಗೆ ಅಪ್ ಗ್ರೇಡ್ ಆಗುವುದು ಮೊದಲ ಹಂತವಷ್ಟೇ ಎನ್ನುವುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು, ಹೆಚ್ಚಿನ ಗುಣಮಟ್ಟವನ್ನು ಪಡೆಯಲು ಪ್ಲಾಸ್ಮಾ ಪರದೆಯೊಂದಿದ ಟಿವಿ ಖರೀದಿಸುವುದು ದೊಡ್ಡ ಜಿಗಿತ.

ಚಿತ್ರದ ಗುಣಮಟ್ಟವೇ ಪ್ರಮುಖವಾದುದು

ಚಿತ್ರದ ಗುಣಮಟ್ಟವೇ ಪ್ರಮುಖವಾದುದು

ಚಿತ್ರದ ಗುಣಮಟ್ಟಕ್ಕೆ ತುಂಬ ಪ್ರಾಮುಖ್ಯತೆ ಕೊಡಬೇಕು. ಮಾರುಕಟ್ಟೆಯಲ್ಲಿ ಅತ್ಯುತ್ತಮ ಟಿವಿ ಎನ್ನುವುದಿಲ್ಲ. ಪರದೆಯ ಪ್ರತಿಫಲನ, ಬಣ್ಣಗಳ ತೋರುವಿಕೆ, ಫ್ರೇಂ ರೇಟ್, ಕಪ್ಪು ಬಣ್ಣಗಳ ತೋರುವಿಕೆ ಮತ್ತ ಆಟಗಳನ್ನು ಆಡುವಾಗ ಇನ್ ಪುಟ್ ಲ್ಯಾಗನ್ನು ಗಮನದಲ್ಲಿರಿಸಿಕೊಂಡು ಟಿವಿಯನ್ನು ಖರೀದಿಸಿ.

ನಿಮಗ್ಯಾವುದು ಮೆಚ್ಚುಗೆ – ಹೆಚ್.ಡಿ ಅಥವಾ 3ಡಿ?

ನಿಮಗ್ಯಾವುದು ಮೆಚ್ಚುಗೆ – ಹೆಚ್.ಡಿ ಅಥವಾ 3ಡಿ?

ಟಿವಿಯಲ್ಲಿ 3ಡಿ ಇದೆಯಾ ಎನ್ನುವುದು ಮುಂದಿನ ಚಿಂತೆಯ ವಿಷಯವಾಗಬಹುದು. ಕೆಲವರ ಪ್ರಕಾರ 3ಡಿ ಎನ್ನುವುದು ದುಬಾರಿ ಗಿಮಿಕ್ ಅಷ್ಟೇ; ಇನ್ನು ಕೆಲವರ ಪ್ರಕಾರ 3ಡಿ ಎನ್ನುವುದು ಉತ್ತಮ ವೈಶಿಷ್ಟ್ಯತೆ. ವಾಸ್ತವದಲ್ಲಿ, 3ಡಿ ಟಿವಿಯು ನೋಡುವಿಕೆಯ ಅನುಭವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಭವಿಷ್ಯತ್ತಿನಲ್ಲಿ ಹತ್ತಿರದಲ್ಲಿ ಮತ್ತೆ ಉನ್ನತ ತಂತ್ರಜ್ಞಾನದ ಟಿವಿ ಬೇಡವೆಂದಾದಲ್ಲಿ 3ಡಿ ಟಿವಿಯನ್ನು ಖರೀದಿಸಿ.

‘ಸ್ಮಾರ್ಟ್’ ಹೆಸರು ನಿಮಗೆ ಆಮಿಷ ಒಡ್ಡಬಹುದು.

‘ಸ್ಮಾರ್ಟ್’ ಹೆಸರು ನಿಮಗೆ ಆಮಿಷ ಒಡ್ಡಬಹುದು.

‘ಸ್ಮಾರ್ಟ್' ಎಂಬ ಟ್ಯಾಗ್ ನಿಮಗೆ ಆಮಿಷ ಒಡ್ಡಬಹುದು, ಸೆಳೆಯಬಹುದು ಆದರೆ ನೆನಪಿಡಿ ಇದೆಲ್ಲವೂ ವೈಯಕ್ತಿಕ ಇಷ್ಟಾನಿಷ್ಟಗಳನ್ನು ಅವಲಂಬಿಸಿದೆ. ನೀವು ಸುಮ್ಮನೆ ಟಿವಿ ವೀಕ್ಷಿಸುವವರಾಗಿದ್ದಲ್ಲಿ ಒಂದು ಬೇಸಿಕ್ ಹೆಚ್.ಡಿ.ಟಿ.ವಿ ಸಾಕಾಗುತ್ತದೆ. ಸ್ಮಾರ್ಟ್ ಟಿವಿಯಲ್ಲಿ ವೈಫೈ, ವೈಡಿ, ಡಿ.ಎಲ್.ಎನ್.ಎ ಮತ್ತು ಸ್ಮಾರ್ಟ್ ಶೇರ್ ನಂತಹ ಆಯ್ಕೆಗಳಿರುತ್ತವ. ನಿಮ್ಮ ಬಳಿಯಿರುವ ಅನೇಕ ಚಿಕ್ಕ ಚಿಕ್ಕ ಗ್ಯಾಜೆಟ್ಟುಗಳನ್ನು ಸ್ಮಾರ್ಟ್ ಟಿವಿಯ ಪರದೆಯ ಮೂಲಕ ವೀಕ್ಷಿಸಿ ಕೆಲಸ ಮಾಡಬಹುದು. ಸ್ಮಾರ್ಟ್ ಟಿವಿಗಿಂತ ಕಡಿಮೆ ವೆಚ್ಚದ ಸ್ಮಾರ್ಟ್ ಟಿವಿ ಬಾಕ್ಸ್ ಅನ್ನು ಉಪಯೋಗಿಸುವುದು ಕೂಡ ಉತ್ತಮ ಆಯ್ಕೆ.

ಟಿವಿಯ ಬೆಲೆ ಮತ್ತು ಮಾರಾಟ ನಂತರದ ಸೇವೆಗಳನ್ನು ಮರೆಯದಿರಿ.

ಟಿವಿಯ ಬೆಲೆ ಮತ್ತು ಮಾರಾಟ ನಂತರದ ಸೇವೆಗಳನ್ನು ಮರೆಯದಿರಿ.

ಟಿವಿಗಳ ಬೆಲೆ ತುಂಬಾ ಮುಖ್ಯ. ಈಗಂತೂ, ಗ್ರಾಹಕರು ತಾವು ಖರೀದಿಸುವ ವಸ್ತುಗಳ ಬಗ್ಗೆ ಎಚ್ಚರಿಕೆಯಿಂದಿರುತ್ತಾರೆ. ಲಭ್ಯವಿರುವ ಆಯ್ಕೆಗಳನ್ನು ವಿಶ್ಲೇಷಿಸಲು ನೀವು ಸ್ವಲ್ಪ ಸಮಯ ಕಳೆಯಬೇಕು; ನಿಮ್ಮ ಆಸಕ್ತಿಯ ಬ್ರ್ಯಾಂಡಿನವರು ಮಾರಾಟದ ನಂತರ ನೀಡುವ ಸೇವೆಯ ಗುಣಮಟ್ಟ, ಗ್ರಾಹಕರ ದೂರುಗಳಿಗೆ ಅವರು ಸ್ಪಂದಿಸುವ ರೀತಿಯನ್ನು ವಿವಿಧ ಫೋರಂಗಳಲ್ಲಿ ತಿಳಿದುಕೊಳ್ಳಬೇಕು. ನಂತರವಷ್ಟೇ ಟಿವಿ ಖರೀದಿಸಿ.

Best Mobiles in India

English summary
If you are planning to buy a new TV, you might be wondering the factors that you need to consider before purchasing one. Take a look at the factors that you need to know from here. Read more...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X