Subscribe to Gizbot

ಸ್ಮಾರ್ಟ್‌ಫೋನ್ ಭದ್ರತೆಗೆ ಇರಲಿ ಈ ಟಾಪ್ ಟಿಪ್ಸ್

Written By:

ಇಂದಿನ ಆಧುನಿಕ ಯುಗದಲ್ಲಿ ದುಬಾರಿ ಫೋನ್‌ಗಳ ಬಳಕೆಯನ್ನು ಮಾಡುವುದಕ್ಕಿಂತಲೂ ಅದನ್ನು ಜೋಪಾನವಾಗಿರಿಸಿಕೊಳ್ಳುವುದರಲ್ಲಿ ನಾವು ನಿಷ್ಣಾತರಾಗಿರಬೇಕು. ಈಗೀಗ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಲ್ಲಿ ದುಬಾರಿ ಫೀಚರ್ ಉಳ್ಳ ಫೋನ್‌ಗಳು ಬರುತ್ತಿರುವುದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಫೋನ್‌ಗಳನ್ನು ಖರೀದಿಸುತ್ತಿದ್ದಾರೆ ಅಂತೆಯೇ ಕಂತುಗಳ ರೂಪದಲ್ಲಿ ಕೂಡ ಮೊಬೈಲ್‌ನ ನಿಖರ ಬೆಲೆಯನ್ನು ಬಳಕೆದಾರರು ಕಟ್ಟಬಹುದಾಗಿದೆ.

ಓದಿರಿ: ಪೆಟ್ರೋಲ್ ಬಂಕಿನಲ್ಲಿ ಸ್ಮಾರ್ಟ್ ಫೋನನ್ನು ಯಾಕೆ ಉಪಯೋಗಿಸಬಾರದು ಗೊತ್ತೇ?

ಅದಾಗ್ಯೂ ನಿಮ್ಮ ಫೋನ್‌ನ ಸಂರಕ್ಷಣೆಯನ್ನು ನೀವು ಮಾಡಬೇಕಾಗಿದ್ದು ಇದರಲ್ಲಿ ಯಾವುದೇ ಲೋಪದೋಷಗಳನ್ನು ನೀವು ಮಾಡುವಂತಿಲ್ಲ. ಏಕೆಂದರೆ ನೀವು ಖರೀದಿಸಿರುವ ಗ್ಯಾಜೆಟ್‌ನ ರಕ್ಷಣೆಯನ್ನು ಮಾಡುವುದಕ್ಕಾಗಿ ಇಂದಿನ ಲೇಖನದಲ್ಲಿ ಕೆಲವೊಂದು ಸಲಹೆಗಳನ್ನು ನಾವು ನೀಡುತ್ತಿದ್ದು ಇದರಿಂದ ನಿಮ್ಮ ಫೋನ್‌ನ ಕಾಳಜಿಯನ್ನು ನೀವು ಮಾಡಬಹುದಾಗಿದೆ. ಬನ್ನಿ ಅದೇನು ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ಫೋನ್ ಪ್ಯಾಟ್ರನ್ ಲಾಕ್

ಸ್ಮಾರ್ಟ್‌ಫೋನ್ ಪ್ಯಾಟ್ರನ್ ಲಾಕ್

ಸ್ಮಾರ್ಟ್‌ಫೋನ್ ಪ್ಯಾಟ್ರನ್ ಲಾಕ್ ನಿಮ್ಮ ಫೋನ್‌ನ ಸುರಕ್ಷತೆಗಾಗಿ ಪಿನ್, ಪ್ಯಾಟ್ರನ್ ಅಥವಾ ಸಂಖ್ಯೆಯುಳ್ಳ ಗೌಪ್ಯ ರಕ್ಷಣಾ ವೇದಿಕೆಯನ್ನು ನಿರ್ಮಿಸಿ. ಇದರಿಂದ ಅಪರಿಚಿತರು ಇನ್ನಿತರರು ನಿಮ್ಮ ಫೋನ್‌ನಲ್ಲಿರುವ ವೈಯಕ್ತಿಕ ಮಾಹಿತಿಗಳನ್ನು ನೋಡುವುದು ತಪ್ಪುತ್ತದೆ. ನಿಮ್ಮ ವಾಟ್ಸಾಪ್, ಫೇಸ್‌ಬುಕ್, ಫೋಟೋ ಗ್ಯಾಲರಿ ಹೀಗೆ ಪ್ರತಿಯೊಂದಕ್ಕೂ ಸುರಕ್ಷಾ ಪ್ಯಾಟ್ರನ್ ಅನ್ನು ಅಳವಡಿಸಿಕೊಳ್ಳಬಹುದಾಗಿದೆ.

ಉಚಿತವಾಗಿರುವ ವೈಫೈ ಸಂಪರ್ಕ

ಉಚಿತವಾಗಿರುವ ವೈಫೈ ಸಂಪರ್ಕ

ಯಾವಾಗಲೂ ಉಚಿತವಾಗಿರುವ ವೈಫೈ ಸಂಪರ್ಕವನ್ನು ಬಳಸುವ ಮುನ್ನ ಸೂಕ್ತ ಜಾಗರೂಕ ಕ್ರಮಗಳನ್ನು ಅಳವಡಿಸಿಕೊಳ್ಳಿ. ಸಾರ್ವಜನಿಕ ವೈಫೈ ಕಡಿಮೆ ಭದ್ರತಾ ವಲಯಗಳನ್ನು ಪಡೆದುಕೊಂಡಿರುವುದರಿಂದ ಸುಲಭವಾಗಿ ನಿಮ್ಮ ಫೋನ್ ಅಪಾಯಕ್ಕೆ ಒಳಗಾಗಬಹುದು. ಇನ್ನು ವಿಪಿಎನ್ ಮೂಲಕ ಸಂಪರ್ಕ ಪಡೆದುಕೊಂಡು ಸಾರ್ವಜನಿಕ ವೈಫೈ ಬಳಕೆಯನ್ನು ನಿಮಗೆ ಮಾಡಿಕೊಳ್ಳಬಹುದಾಗಿದೆ.

ಫೋನ್‌ನ ಭದ್ರತೆ

ಫೋನ್‌ನ ಭದ್ರತೆ

ನಿಮ್ಮ ಫೋನ್‌ನ ಭದ್ರತೆಯೊಂದಿಗೆ ಫೋನ್‌ನ ಸ್ವಚ್ಛತೆಯನ್ನು ನೀವು ಆಗಾಗ್ಗೆ ಮಾಡಬೇಕಾಗುತ್ತದೆ. ಆಂಟಿ ಬ್ಯಾಕ್ಟೀರಿಯಲ್ ದ್ರಾವಣವನ್ನು ಬಳಸಿಕೊಂಡು ಫೋನ್‌ನ ಸ್ವಚ್ಛತೆಯನ್ನು ಮಾಡಿ.

ಸೂಕ್ತ ಕಾಳಜಿ

ಸೂಕ್ತ ಕಾಳಜಿ

ನಿಮ್ಮ ಫೋನ್ ಹೊಸತಾಗಿರಲಿ ಅಥವಾ ಹಳತೇ ಆಗಿರಲಿ ಅದರ ಸೂಕ್ತ ಕಾಳಜಿಯನ್ನು ನೀವು ಮಾಡಲೇಬೇಕು. ಫೋನ್ ಚಾರ್ಜಿಂಗ್ ವಿಷಯದಲ್ಲಿ ಅಜಾಗರೂಕರಾಗಿರಬೇಡಿ. ಒಮ್ಮೆ ಸ್ಮಾರ್ಟ್‌ಫೋನ್ ನಷ್ಟವಾಯಿತು ಎಂದಾದಲ್ಲಿ ಇದು ನಿಮಗೆ ಭರಿಸಲಾರದ ಸೋಲಾಗಿರುತ್ತದೆ. ಆಗಾಗ್ಗೆ ಫೋನ್ ಚಾರ್ಜ್ ಮಾಡುವುದು, ಕೇವಲ 40%, 60% ಚಾರ್ಜ್ ಮಾಡುವುದು ಮೊದಲಾದ ಅಭ್ಯಾಸಗಳನ್ನು ಇರಿಸಬೇಡಿ.

ಆಂಟಿವೈರಸ್ ಭದ್ರತೆ

ಆಂಟಿವೈರಸ್ ಭದ್ರತೆ

ನಿಮ್ಮ ಫೋನ್‌ಗೆ ಸೂಕ್ತವಾದ ಆಂಟಿವೈರಸ್ ಭದ್ರತೆಯನ್ನು ಮಾಡಿ. ಆಂಟಿವೈರಸ್‌ಗಳು ನಿಮ್ಮ ಫೋನ್ ಅನ್ನು ಮಾಲ್‌ವೇರ್ ಅಥವಾ ವೈರಸ್‌ನಿಂದ ಸಂರಕ್ಷಿಸುತ್ತದೆ.

ವೈಯಕ್ತಿಕ ಮಾಹಿತಿ

ವೈಯಕ್ತಿಕ ಮಾಹಿತಿ

ಕೆಟ್ಟ ವ್ಯಕ್ತಿಗಳ ಕೈಗೆ ನಿಮ್ಮ ವೈಯಕ್ತಿಕ ಮಾಹಿತಿ ದೊರಕುವ ಮುನ್ನವೇ ಅದನ್ನು ಅಳಿಸಿ ಹಾಕುವ ಕೆಲಸವನ್ನು ಆಂಟಿಥೆಪ್ಟ್ ಮಾಡುತ್ತದೆ. ನಿಮ್ಮ ಫೋನ್ ಎಲ್ಲಿದೆ ಎಂಬುದನ್ನು ಇದರ ಮೂಲಕ ಪತ್ತೆಹಚ್ಚಬಹುದಾಗಿದೆ.

ಸುರಕ್ಷತಾ ವಲಯ

ಸುರಕ್ಷತಾ ವಲಯ

ನಿಮ್ಮ ಫೋನ್‌ನ ಬ್ಯಾಟರಿ, ಇಂಟರ್ಫೇಸ್, ಸುರಕ್ಷತಾ ವಲಯಗಳನ್ನು ಅಪ್‌ಡೇಟ್‌ಗಳು ನವೀಕರಿಸುತ್ತಿರುತ್ತವೆ. ಇವುಗಳ ಬಳಕೆಯನ್ನು ನೀವು ಮಾಡಿಕೊಂಡಷ್ಟೂ ಉತ್ತಮ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can found top tips on how to protect your smartphone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot