ನೀವು ಊಹಿಸಿರದ 5 ಹೊಸ ಫೀಚರ್ಸ್‌ಗಳು ವಾಟ್ಸಪ್ ಸೇರಲಿವೆ!
ಫೇಸ್‌ಬುಕ್ ಮಾಲೀಕತ್ವದ ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೆಜಿಂಗ್ ಆಪ್ ವಾಟ್ಸಪ್ ಇತ್ತೀಚಿಗೆ ಹಲವು ಹೊಸ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ. ಬಳಕೆದಾರರ ಖಾಸಗಿತನದ ಸುರಕ್ಷತೆಗೆ ಮಹತ್ವ ನೀಡುತ್ತಾ ಬಂದಿರುವ ಸಂಸ್ಥೆಯು ಇದೀಗ ಮತ್ತಷ್ಟು ಹೊಸ ಫೀಚರ್ಸ್‌ಗಳನ್ನು ವಾಟ್ಸಪ್‌ಗೆ ಸೇರಿಸಲು ಸಜ್ಜಾಗಿದೆ. ಈ ಫೀಚರ್ಸ್‌ಗಳನ್ನು ನೀವು ಊಹಿಸಿರಲು ಸಾಧ್ಯವೇ ಇಲ್ಲ.

ಹೌದು, ವಾಟ್ಸಪ್ ಸಂಸ್ಥೆಯು ಈಗಾಗಲೇ ತನ್ನ ಅಪ್‌ಡೇಟ್ ವರ್ಷನ್‌ಗಳಲ್ಲಿ ಸಾಕಷ್ಟು ಹೊಸತನದ ಫೀಚರ್ಸ್‌ಗಳನ್ನು ಸೇರಿಸಿಕೊಂಡಿದ್ದು, ಈ ಭಾರಿ ಮತ್ತೆ ಬಳಕೆದಾರರಿಗೆ ಉಪಯುಕ್ತ ಫೀಚರ್ಸ್‌ಗಳನ್ನು ಅಳವಡಿಸಲು ತಯಾರಾಗಿದೆ. ಅವುಗಳಲ್ಲಿ ಆಟೋಮ್ಯಾಟಿಕ್ ರಿಪ್ಲೇ, ಸ್ಕ್ರೀನ್‌ಶಾಟ್ ಬ್ಲಾಕಿಂಗ್, ಬರ್ತಡೇ ನೋಟಿಫಿಕೇಶನ್ ಮತ್ತು ಮೆಸೆಜ್ ಆಟೋ ಡಿಲೀಟ್ ಆಯ್ಕೆಗಳು ವಾಟ್ಸಪ್ ಪುಟ ಸೇರಿಕೊಳ್ಳಲಿವೆ.

ಟೆಲಿಗ್ರಾಂ ಮೆಸೆಜಿಂಗ್ ಆಪ್ ಸದ್ಯ ವಾಟ್ಸಪ್‌ಗೆ ಪ್ರಬಲ ಎದುರಾಳಿ ಎನಿಸಿದ್ದು, ಹೊಸ ಫೀಚರ್ಸ್‌ಗಳಿಂದ ವಾಟ್ಸಪ್ ಬಳಕೆದಾರರಿಗೆ ಮತ್ತಷ್ಟು ಆಪ್ತ ಆಗಲು ಸಿದ್ಧತೆ ನಡೆಸಿದೆ. ಅದಕ್ಕಾಗಿ ನೂತನ ಫೀಚರ್ಸ್‌ಗಳನ್ನು ಅಳವಡಿಸಿಕೊಳ್ಳಲಿದೆ. ಅವುಗಳಲ್ಲಿ 'ಬರ್ತ್‌ಡೇ ನೋಟಿಫಿಕೇಶನ್' ಈಗಾಗಲೇ ಫೇಸ್‌ಬುಕ್‌ನಲ್ಲಿ ಚಾಲ್ತಿಯಲ್ಲಿದೆ. ಹಾಗಾದರೇ ವಾಟ್ಸಪ್ ಸೇರಲಿರುವ 5 ವಿಶೇಷ ಫೀಚರ್ಸ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಆಂಡ್ರಾಯ್ಡ್ ಮೋಡ್
ವಾಟ್ಸಪ್‌ನಲ್ಲಿ ಲಾಸ್ಟ್ ಸೀನ್ ಮಾಹಿತಿಯನ್ನು ಮರೆಮಾಡುವ ಆಯ್ಕೆಯನ್ನು ಮತ್ತು ಮೆಸೆಜ್‌ಗಳನ್ನು ನೋಡಿದ ನಂತರ ಎರಡು ಪಾಸ್ ಮಾರ್ಕ್‌ಗಳು ಬ್ಲೂ ಬಣ್ಣಕ್ಕೆ ತಿರುಗಿಕೊಳ್ಳುವ ಆಯ್ಕೆಗಳನ್ನು ಈಗಾಗಲೇ ನೀಡಿದೆ. ಆದರೆ ಈಗ ವಾಟ್ಸಪ್‌ನಲ್ಲಿ ಆನ್‌ಲೈನ್ ಇರುವುದು ಇತರರಿಗೆ ಕಾಣಿಸುವುದಿಲ್ಲ ಮತ್ತು ಮೆಸೆಜ್‌ಗಳನ್ನು ಓದಿರರೂ ಅವರಿಗೆ ಆನ್‌ಲೈನ್‌ನಲ್ಲಿ ಇರುವ ಮಾಹಿತಿ ಹೋಗುವುದಿಲ್ಲ.

ಆಟೋಮ್ಯಾಟಿಕ್ ರಿಪ್ಲೇ
ವಾಟ್ಸಪ್‌ನಲ್ಲಿ ಸೇರಿಕೊಳ್ಳಲಿರುವ ಮತ್ತೊಂದು ಮಹತ್ತರ ಫೀಚರ್ ಇದಾಗಿದ್ದು, ಇದರಲ್ಲಿ ಆಟೋಮ್ಯಾಟಿಕ್ ಆಗಿ ರಿಪ್ಲೇ ಕಳುಹಿಸುವ ಸೌಲಭ್ಯವು ಸೇರಲಿದೆ. ರಿಪ್ಲೇ ಮಾಡಲಾಗದೇ ಇದ್ದಾಗ ಈ ಆಯ್ಕೆಯನ್ನು ಬಳಸಬಹುದಾಗಿದೆ. ಅದಕ್ಕಾಗಿ ಆನ್ ಮೋಡ್ ಮಾಡಿಡಬೇಕು ಆಗ ಬರುವ ಮಸೆಜ್‌ಗಳಿಗೆ ಆಟೋಮ್ಯಾಟಿಕ್ ಆಗಿ ರೆಪ್ಲೇ ಹೋಗುತ್ತದೆ. ಈ ಆಯ್ಕೆ ಆನ್ ಇದ್ದರೇ ಮಾತ್ರ ಬಳಕೆದಾರರು ಈ ಫೀಚರ್ ಸೌಲಭ್ಯ ಪಡೆಯಬಹುದು.

ಬ್ಲಾಕಿಂಗ್ ಸ್ಕ್ರೀನ್‌ಶಾಟ್
ವಾಟ್ಸಪ್‌ನಲ್ಲಿ, ಮಸೆಜ್ ಮಾಡುವಾಗ ಇತರರ ಜೊತೆ ಚಾಟ್ ಮಾಡಿದ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಬರದಂತೆ ತಡೆಯುವ ಫೀಚರ್ಸ್‌ಒಂದು ಸೇರಲಿದೆ. ಈ ಆಯ್ಕೆಯಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವ ಅವಕಾಶಕ್ಕೆ ಕೋಕ್ ಬೀಳಲಿದೆ. ಇತರರ ಚಾಟ್‌ಗಳನ್ನು ಸ್ಕ್ರೀನ್‌ಶಾಟ್ ತೆಗೆದು, ಅದನ್ನು ದುರುಪಯೋಗ ಬಯಸುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಸ್ಕ್ರೀನ್‌ಶಾಟ್ ಆಯ್ಕೆ ಬ್ಲಾಕ್ ಆಗಲಿದೆ.

ಆಟೋ ಡಿಲೀಟ್
ವಾಟ್ಸಪ್‌ನಲ್ಲಿ ಮೆಸೆಜ್‌ಗಳು ಹಳೆಯದಾದಂತೆ ತನ್ನಿಂದ ತಾನೆ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುವ ಸೌಲಭ್ಯದ ಫೀಚರ್ ಅನ್ನು ವಾಟ್ಸಪ್ ಅಳವಡಿಸಿಕೊಳ್ಳಲಿದೆ. ಈ ಫೀಚರ್‌ನ ಪ್ರಯೋಜನವೆಂದರೇ ಚಾಟ್ ಮಾಡಿದ ಮೆಸೆಜ್‌ಗಳು ಒಂದು ನಿಗದಿತ ಅವಧಿಯವರೆಗೂ ಇರುತ್ತವೆ ಆಮೇಲೆ ಮೆಸೆಜ್‌ಗಳು ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುತ್ತವೆ.

ಬರ್ತ್‌ಡೇ ನೋಟಿಫಿಕೇಶನ್
ಫೇಸ್‌ಬುಕ್‌ನಲ್ಲಿ ಪ್ರತಿದಿನ ಬರ್ತ್‌ಡೇ ನೋಟಿಫಿಕೇಶನ್‌ಗಳು ಬರುತ್ತವೆ. ಇದೇ ರೀತಿ ವಾಟ್ಸಪ್‌ನಲ್ಲಿಯೂ ಬರ್ತ್‌ಡೇ ನೋಟಿಫಿಕೇಶನ್ ಫೀಚರ್ ಸೇರಲಿದೆ. ವಾಟ್ಸಪ್ ಲಿಸ್ಟ್‌ನಲ್ಲಿರುವ ಯಾರಾದರೂ ಸ್ನೇಹಿತರ ಬರ್ತ್‌ಡೇ ಇದ್ದರೇ ಆ ಕುರಿತು ನೋಟಿಫೀಕೇಶನ್ ಲಭ್ಯವಾಗಲಿದೆ. ಆದರೆ ವಾಟ್ಸಪ್ ಬಳಕೆದಾರರ ಸುರಕ್ಷತೆಯ ದೃಷ್ಠಿಯಿಂದ ಈ ಫೀಚರ್‌ಗೆ ಹಿನ್ನಡೆ ಎನಿಸಲಿದೆ ಎನ್ನಲಾಗಿದೆ.


Click it and Unblock the Notifications








