ಇನ್‌ಫೋಸಿಸ್ ಸಂಸ್ಥೆಯಲ್ಲಿ ಕೈತುಂಬಾ ಸಂಬಳ ಪಡೆಯುವವರು
ಪ್ರತೀ ವರ್ಷದಂತೆ ಈ ಬಾರಿಯೂ ಇನ್‌ಫೋಸಿಸ್ ತನ್ನ ಹೆಚ್ಚು ಪಾವತಿ ಮಾಡುವ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದ ಎರಡನೇ ಅತಿದೊಡ್ಡ ಸಾಫ್ಟ್‌ವೇರ್ ಸಂಸ್ಥೆಯಾಗಿರುವ ಇನ್‌ಫೋಸಿಸ್ ಸಂಬಳದ ವಿಚಾರದಲ್ಲಿ ಮುಕ್ತವಾಗಿದೆ.
ಓದಿರಿ: ಖರೀದಿಸಿ ರೂ 15,000 ಕ್ಕೆ ಬೆಸ್ಟ್ ಕ್ಯಾಮೆರಾ ಫೋನ್ಸ್
ಇಂದಿನ ಲೇಖನದಲ್ಲಿ ಹೆಚ್ಚು ವರಮಾನವನ್ನು ಪಡೆದುಕೊಳ್ಳುತ್ತಿರುವ 5 ವ್ಯಕ್ತಿಗಳ ಪರಿಚಯವನ್ನು ನಾವಿಲ್ಲಿ ಮಾಡುತ್ತಿದ್ದು ಇವರ ವರಮಾನ ಮತ್ತು ಮಾಹಿತಿ ಕೆಳಗಿನ ಸ್ಲೈಡರ್‌ಗಳಲ್ಲಿದೆ.

ವಿಶಾಲ್ ಸಿಕ್ಕಾ
ಇನ್‌ಫೋಸಿಸ್ ಸಿಇಒ ವಿಶಾಲ್ ಸಿಕ್ಕ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿರುವ ವ್ಯಕ್ತಿ ಎಂದೆನಿಸಿದ್ದಾರೆ. ಇನ್ನು ಕಳೆದ ವರ್ಷದ ವರದಿಯ ಪ್ರಕಾರ ಇವರ ವರಮಾನ $5.08 ಮಿಲಿಯನ್ ಎಂದಾಗಿದೆ.

ಯುಬಿ ಪ್ರವೀಣ್ ರಾವ್
ಹೆಚ್ಚು ಸಂಭಾವನೆ ಪಡೆಯುವ ವ್ಯಕ್ತಿ ಇನ್‌ಫೋಸಿಸ್‌ನ ಯುಬಿ ಪ್ರವೀಣ್ ರಾವ್. ಇವರ ಸಂಬಳ ಪ್ಯಾಕೇಜ್ $1 ಮಿಲಿಯನ್ ಆಗಿದೆ. ಇನ್‌ಫೋಸಿಸ್ ಬಿಪಿಒದ ಅಧ್ಯಕ್ಷರಾಗಿದ್ದಾರೆ.

ರಾಜೀವ್ ಬನ್ಸಾಲ್
ಮಾರ್ಚ್ 2015 ರ ಆರ್ಥಿಕ ವರ್ಷದ ಅಂತ್ಯದಲ್ಲಿ ಇವರ ಪ್ಯಾಕೇಜ್ $770,858 ಎಂದಾಗಿದೆ. ಪ್ರವೀಣ್ ಹಣಕಾಸು ವಿಭಾಗದ ಉಪಾಧ್ಯಕ್ಷರು ಮತ್ತು ಮುಖ್ಯಸ್ಥರಾಗಿದ್ದಾರೆ.

ಶ್ರೀಕಾಂತ್ ಮೂರ್ತಿ
ಇವರ ಮಾಸಿಕ ಸಂಬಳ $85,285 ಮತ್ತು ಬೋನಸ್ ಇಂಟೆನ್ಸೀವ್ $440,574 ಆಗಿದೆ. ಇವರು ಇನ್‌ಫೋಸಿಸ್ ಮಾನವ ಸಂಪನ್ಮೂಲ ಮುಖ್ಯಸ್ಥರಾಗಿದ್ದಾರೆ.

ಡೇವಿಡ್ ಡಿ ಕೆನಡಿ
ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿರುವ ಡೇವಿಡ್ ಡಿ ಕೆನಡಿ ಎಲ್ಲಾ ರೀತಿಯ ಕಾನೂನು ಮತ್ತು ಅನುಸರಣೆ ವಿಷಯಗಳಲ್ಲಿ ಜವಬ್ದಾರರಾಗಿದ್ದಾರೆ.


Click it and Unblock the Notifications





