2016ರಲ್ಲಿ ಐಟಿ ಉದ್ಯೋಗ ಪಡೆದವರೇ ಪುಣ್ಯವಂತರು

By Suneel
|

2016 ಕ್ಕೆ ಕಾಲಿಡುತ್ತಿದಂತೆ ಎಲ್ಲರಿಗೂ ಒಂದು ಸಂತೋಷದ ಸುದ್ದಿ ಹೇಳಲೇ ಬೇಕು. ದೇಶದಾದ್ಯಂತ ಈಗ ಐಟಿ ಕ್ಷೇತ್ರಗಳಾದ ಇ-ವಾಣಿಜ್ಯ, ಹಣಕಾಸು ಸೇವೆ, ಮೊಬೈಲ್‌ ಉತ್ಪನ್ನಗಳ ಅಭಿವೃದ್ದಿ ಕ್ಷೇತ್ರಗಳಲ್ಲಿ ನೇಮಕಾತಿ ಬೇಡಿಕೆ ಹೆಚ್ಚಿದೆಯಂತೆ. ಅಲ್ಲದೇ ಡಾಟಾ ಅನಾಲಿಸಿಸ್ ಉದ್ಯೋಗಕ್ಕೂ ಬೇಡಿಕೆ ಹೆಚ್ಚಾಗಿದೆ. ಇದೊಂದು ರೀತಿಯಲ್ಲಿ ದೇಶದ ಯುವಜನತೆಗೆ ಬಂಪರ್ ಲಾಟರಿ ಹೊಡೆದಂತ ಸಂತೋಷದ ವಿಷಯವಾಗಿದೆ. ಹಾಗಾದರೆ ಸಂಬಳ ಎಷ್ಟು ಕೊಡಬಹುದು, ಅಂತಹ ಟಾಪ್‌ ಉದ್ಯೋಗಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

ಓದಿರಿ:ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲು ಸಾಮಾಜಿಕ ನೆಟ್‌ವರ್ಕ್‌ 'ಟೆಕ್‌ಟುಡ್‌'

2016 ರ ಟಾಪ್‌ ಐಟಿ ಉದ್ಯೋಗಗಳು

 2016 ರ ಟಾಪ್‌ ಐಟಿ ಉದ್ಯೋಗಗಳು

2016 ರ ಟಾಪ್‌ ಐಟಿ ಉದ್ಯೋಗಗಳು

ಹಲವು ಕಂಪನಿಗಳು ಆನ್‌ಲೈನ್‌ ಬಗೆಗೆ ಹೆಚ್ಚು ತಿಳಿದುಕೊಂಡು, ಪ್ರಸ್ತುತದ ಬಗೆಗೆ ಡಿಜಿಟಲ್‌ ಮಾರುಕಟ್ಟೆಯನ್ನು ನಿರ್ವಹಿಸುವವರನ್ನು ನೇಮಕ ಮಾಡಲು ಹುಡುಕಾಡುತ್ತಿವೆ.
ಕ್ಷೇತ್ರ : ಗ್ರಾಹಕರ ನಿರ್ವಹಣೆ, ಇ-ವಾಣಿಜ್ಯ, ಚಿಲ್ಲರೆ ಸಂಸ್ಥೆಗಳು, FMCG ಮತ್ತು ಸಾಸ್ ಕಂಪನಿಗಳು ಪ್ರಮುಖ ಉದಾಹರಣೆಗಳಾಗಿವೆ. ಅನುಭವದ ಆಧಾರದ ಮೇಲೆ ವಾರ್ಷಿಕವಾಗಿ 30-60 ಲಕ್ಷದವರೆಗೆ ಸಂಬಳ ನೀಡಲು ಸಿದ್ದವಾಗಿವೆ.

2016 ರ ಟಾಪ್‌ ಐಟಿ ಉದ್ಯೋಗಗಳು

2016 ರ ಟಾಪ್‌ ಐಟಿ ಉದ್ಯೋಗಗಳು

ಮ್ಯಾನ್ಸರ್‌ ಕನ್ಸಲ್ಟಿಂಗ್ ಸಿಇಒ ಸತ್ಯಾ ಸಿನ್ಹಾರವರು ಹೊಸ ಯುವಜನತೆಗೆ ಹೊಸ ಹೊಸ ರೀತಿಯ ಮೊಬೈಲ್‌ ಮತ್ತು ಆಪ್ಸ್‌ಗಳನ್ನು ಅಭಿವೃದ್ದಿಪಡಿಸುವಂತಹ ಪ್ರಾಡಕ್ಟ್‌ಗಳನ್ನು ಅಭಿವೃದ್ದಿಪಡಿಸುವಂತಹ ಉದ್ಯೋಗಿಗಳು ಅವಶ್ಯವಾಗಿದ್ದಾರೆ ಎಂದು ಹೇಳಿದ್ದಾರೆ. ಆದ್ದರಿಂದ ಸಾಫ್ಟ್‌ವೇರ್‌ ಸೃಜನಶೀಲರು, ಹೊಸ ಟೆಕ್ನಾಲಜಿಗಳಿಗೆ ಹೊಂದು ಕೊಳ್ಳುವಂತಹ ಪ್ರಾಡಕ್ಟ್‌ ಅಭಿವೃದ್ದಿ ಮಾಡುವವರಿಗೆ ಬೇಡಿಕೆ ಹೆಚ್ಚಿದೆ.
ಕ್ಷೇತ್ರ : ಐಟಿ ಪ್ರಾಡಕ್ಟ್‌ ಕಂಪನಿ ಮತ್ತು ಉದ್ಯಮಗಳು
ಕಿರಿಯರಿಗೆ 15 ಲಕ್ಷ ವಾರ್ಷಿಕ ವೇತನ ನೀಡಲು ಸಿದ್ದವಾಗಿದ್ದು, ಹಿರಿಯ ಉದ್ಯೋಗಿಗಳಿಗೆ ವಾರ್ಷಿಕವಾಗಿ 50 ಲಕ್ಷ ವೇತನ ನೀಡಲು ಕಂಪನಿಗಳು ಸಿದ್ದವಿವೆ.

 2016 ರ ಟಾಪ್‌ ಐಟಿ ಉದ್ಯೋಗಗಳು

2016 ರ ಟಾಪ್‌ ಐಟಿ ಉದ್ಯೋಗಗಳು

ಇ-ಕಾಮರ್ಸ್‌ ಕ್ಷೇತ್ರಕ್ಕೆ ಯುವ ಪ್ರಮೋಟರ್‌ಗಳು ಮಾರುಕಟ್ಟೆಯನ್ನು ಅಧಿಕೃತವಾಗಿ ವಿಸ್ತರಿಸಲು ಬೇಕಾಗಿದ್ದಾರೆ.
ವಾರ್ಷಿಕವಾಗಿ CXO ಮಟ್ಟದ ನೌಕರರಿಗೆ ಸ್ಟಾಕ್‌ ಆಯ್ಕೆಗಳ ಆಧಾರಿತವಾಗಿ ವಾರ್ಷಿಕವಾಗಿ 1-10 ಕೋಟಿ ವೇತನವನ್ನು ಹಿರಿಯ ವ್ಯವಸ್ಥಾಪಕರಿಗೆ ನೀಡಲು ಇ-ಕಾಮರ್ಸ್‌ ಕ್ಷೇತ್ರ ಸಿದ್ದವಾಗಿದೆ.

2016 ರ ಟಾಪ್‌ ಐಟಿ ಉದ್ಯೋಗಗಳು

2016 ರ ಟಾಪ್‌ ಐಟಿ ಉದ್ಯೋಗಗಳು

2016 ಪ್ರಾರಂಭವಾಗುತ್ತಿದ್ದಂತೆಯೇ ಸಣ್ಣ ಉದ್ಯಮಗಳಿಂದ ಹಿಡಿದು ಇನ್ಫೋಸಿಸ್‌ನಂತರಹ ದೊಡ್ಡ ಉದ್ಯಮಗಳವರೆಗೂ ಸಹ ಡೇಟಾ ವಿಶ್ಲೇಷಣೆಯನ್ನು ವಿಸ್ತರಿಸಲು ಸಿದ್ದವಾಗಿವೆ. ಈ ಉದ್ಯೋಗಗಳಿಗೆ ಗಣಿತ ವಿಷಯದಲ್ಲಿ ಹಾಗೂ ವಿಶ್ಲೇಷಣೆಯಲ್ಲಿ ಪರಿಣತಿ ಹೊಂದಿರಬೇಕಾಗಿದೆ. ಇತರ ಸೃಜನಶೀಲತೆಯು ಸಹ ಈ ಉದ್ಯೋಗಗಳಿಗೆ ಅವಶ್ಯಕವಾಗಿದೆ.
ಈ ಕ್ಷೇತ್ರದಲ್ಲಿ ಪ್ರಾರಂಭದಲ್ಲಿ ಉದ್ಯೋಗಕ್ಕೆ ಸೇರುವವರಿಗೆ 2-10ಲಕ್ಷ ವಾರ್ಷಿಕ ವೇತನ ನೀಡಲು ಕಂಪನಿಗಳು ಸಿದ್ದವಾಗಿವೆ. ಹಿರಿಯ ಸ್ಥಾನಗಳಿಗೆ 70 ಲಕ್ಷದಿಂದ 1 ಕೋಟಿವರೆಗೂ ವಾರ್ಷಿಕ ವೇತನ ನೀಡಲಾಗುವುದು ಎನ್ನಲಾಗಿದೆ.

2016 ರ ಟಾಪ್‌ ಐಟಿ ಉದ್ಯೋಗಗಳು

2016 ರ ಟಾಪ್‌ ಐಟಿ ಉದ್ಯೋಗಗಳು

ಮುಂದಿನ ವರ್ಷಗಳಲ್ಲಿ ಮೊಬೈಲ್‌ ಪ್ರಾಡಕ್ಟ್‌ ಅಭಿವೃದ್ದಿ ಇಂಜಿನಿಯರ್‌ಗಳಿಗೆ ಬೇಡಿಕೆ ಅಧಿಕವಾಗಿ ಹೆಚ್ಚಲಿದ್ದು, ಸಾಫ್ಟ್‌ವೇರ್‌ ಪ್ರಾಡಕ್ಟ್‌ ಅಭಿವೃದ್ದಿಗಾರರು ಮತ್ತು ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ದಿಗಾರರಿಗೂ ಬೇಡಿಕೆ ಹೆಚ್ಚಾಗಲಿದೆ ಎಂದು ಜಿಎಸ್‌ಎಂಎ ವರದಿ ಹೇಳಿದೆ. ಬಳಕೆದಾರರ ಟ್ರೆಂಡ್‌ಗೆ ತಕ್ಕಂತೆ ಟೆಕ್ನಾಲಜಿಯನ್ನು ಅಭಿವೃದ್ದಿಗೊಳಿಸುವುದು ಉದ್ಯೋಗಿಗಳ ಕೆಲಸವಾಗಿದೆ.
ಕ್ಷೇತ್ರ: ಐಟಿ ಕನ್ಸಲ್ಟಿಂಗ್ ಉದ್ಯಮಗಳು, ಇ- ಕಾಮರ್ಸ್‌ ಕಂಪನಿಗಳು ಮೊಬೈಲ್‌ ಅಪ್ಲಿಕೇಶನ್‌. ಈ ಕ್ಷೇತ್ರಗಳಲ್ಲಿ ಉದ್ಯೋಗಿಗಳು 12-40 ಲಕ್ಷದವರೆಗೂ ವಾರ್ಷಿಕ ವೇತನವನ್ನು ಪಡೆಯಬಹುದಾಗಿದೆ.

Best Mobiles in India

English summary
As 2016 approaches, recruiters expect an increase in demand across sectors, be it e-commerce, financial services or mobile product development. read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X