Home
ಸುದ್ದಿಜಾಲ

Flipkart ನಲ್ಲಿ ಕೇವಲ 30 ಸೆಕೆಂಡ್‌ಗಳಲ್ಲಿ ಲಭ್ಯ 5 ಲಕ್ಷದ ವರೆಗಿನ ಸಾಲ! ಪಡೆಯೋದೇಗೆ?

ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌(Flipkart) ಗ್ರಾಹಕರಿಗೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ ಹಾಗೂ ಸ್ಮಾರ್ಟ್‌ಟಿವಿಗಳಿಗೆ ಭರ್ಜರಿ ಆಫರ್‌ ನೀಡಲಾಗುತ್ತಿದ್ದು, ಈ ನಡುವೆ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಲು ಮುಂದಾಗಿದೆ.

ಹೌದು, ಇತ್ತೀಚಿನ ದಿನಗಳಲ್ಲಿ ಹಣ ತುಂಬಾನೇ ಮುಖ್ಯ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಲೋನ್‌ ಆಪ್‌ಗಳು ಜನರಿಗೆ ಹಣವನ್ನೇನೋ ಕೊಡುತ್ತವೆ. ಆದರೆ, ಹಣ ಕೊಟ್ಟಮೇಲೆ ಅವರನ್ನು ಇನ್ನಿಲ್ಲದಂತೆ ಕಾಡುವುದು ಸರ್ವೇ ಸಾಮಾನ್ಯ. ಇದನ್ನು ಹೊರತು ಪಡಿಸಿ ಬ್ಯಾಂಕ್‌ ಹಾಗೂ ಫೈನಾನ್ಸ್‌ ಕಂಪೆನಿಯಲ್ಲಿ ಸಾಲ ಪಡೆಯಬೇಕು ಎಂದರೆ ಬಹಳ ಕಷ್ಟ ಪಡಬೇಕು.ಆದರೆ, ಫ್ಲಿಪ್‌ಕಾರ್ಟ್‌ ಕೇವಲ 30 ಸೆಕೆಂಡ್‌ನಲ್ಲಿ ಐದು ಲಕ್ಷದವರೆಗೆ ಸಾಲ ನೀಡಲಿದೆ.

Flipkart ನಲ್ಲಿ ಕೇವಲ 30 ಸೆಕೆಂಡ್‌ಗಳಲ್ಲಿ ಲಭ್ಯ 5 ಲಕ್ಷದ ವರೆಗಿನ ಸಾಲ!

ಫ್ಲಿಪ್‌ಕಾರ್ಟ್ ಮೂಲಕ ಸಾಲ ಪಡೆಯಿರಿ: ಫ್ಲಿಪ್‌ಕಾರ್ಟ್‌ ಇನ್ಮುಂದೆ ಸಾಲ ನೀಡುವ ಕೆಲಸವನ್ನೂ ಮಾಡಲಿದ್ದು, ಇದಕ್ಕಾಗಿ ಆಕ್ಸಿಸ್ ಬ್ಯಾಂಕ್‌ನೊಂದಿಗೆ (Axis Bank) ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಮೂಲಕ ಫ್ಲಿಪ್‌ಕಾರ್ಟ್‌ ಗ್ರಾಹಕರು ಫ್ಲಿಪ್‌ಕಾರ್ಟ್‌ ಆಪ್‌ ಆಕ್ಸಿಸ್‌ ಬ್ಯಾಂಕ್ ವ್ಯವಹಾರವನ್ನು ಸುಲಭವಾಗಿ ಮಾಡಬಹುದು. ಅದರಲ್ಲೂ ಈ ಲೋನ್‌ ಪ್ರಕ್ರಿಯೆ ಕೇವಲ ಮೂವತ್ತು ಸೆಕೆಂಡ್‌ನಲ್ಲಿ ಜರುಗಲಿದೆ.

ಸಾಲ ಪಡೆಯಲು ಏನೆಲ್ಲಾ ದಾಖಲೆ ಬೇಕು?: ಈ ಆಯ್ಕೆಯಲ್ಲಿ ಗ್ರಾಹಕರು ಗರಿಷ್ಠ ರೂ.5 ಲಕ್ಷ ಸಾಲ ಪಡೆಯಬಹುದಾಗಿದ್ದು, 6 ತಿಂಗಳಿಂದ 36 ತಿಂಗಳವರೆಗೆ ಮರುಪಾವತಿ ಆಯ್ಕೆಗಳನ್ನು ನೀಡಲಾಗುತ್ತದೆ. ಇದರಿಂದಾಗಿ ಗ್ರಾಹಕರು ಸುಲಭವಾಗಿ ವೈಯಕ್ತಿಕ ಸಾಲವನ್ನು ಪಡೆಯಲು ಯಾವುದೇ ಸಮಸ್ಯೆ ಇರುವುದಿಲ್ಲ. ಈ ಸಾಲ ಪಡೆದುಕೊಳ್ಳಲು ಗ್ರಾಹಕರ ಪ್ಯಾನ್ ಸಂಖ್ಯೆ, ಹುಟ್ಟಿದ ದಿನಾಂಕ, ಕೆಲಸದ ವಿವರಗಳು ಕಡ್ಡಾಯವಾಗಿವೆ.

ಲೋನ್ ಪಡೆಯುವುದು ಹೇಗೆ?: ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫ್ಲಿಪ್‌ಕಾರ್ಟ್ ಆಪ್ ಓಪನ್ ಮಾಡಿ. ನಂತರ ಪ್ರೊಫೈಲ್ ವಿಭಾಗಕ್ಕೆ ಹೋಗಿ ಮತ್ತು ಕ್ರೆಡಿಟ್ ಆಯ್ಕೆಗಳ ಅಡಿಯಲ್ಲಿ ನೀವು ವೈಯಕ್ತಿಕ ಸಾಲದ ಲಿಂಕ್ ಅನ್ನು ಕಾಣಬಹುದು. ಅದನ್ನು ಕ್ಲಿಕ್‌ ಮಾಡಿ. ನಂತರ ನೀವು ಮೊದಲ ಹಂತದಲ್ಲಿ ನಿಮ್ಮ ಮೂಲ ವಿವರಗಳನ್ನು ಅಲ್ಲಿ ನಮೂದಿಸಬೇಕು. ಇದರಲ್ಲಿ ಪ್ರಮುಖವಾದುದು ಪ್ಯಾನ್ ಕಾರ್ಡ್ ಮಾಹಿತಿ.

-ಈ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಎಷ್ಟು ಸಾಲ ಬೇಕು ಎಂಬುದನ್ನು ಅಲ್ಲಿ ಎಂಟ್ರಿ ಮಾಡಿ. ಆ ವಿಭಾಗದಲ್ಲಿ ನಿಮಗೆ ಬಡ್ಡಿ ದರದ ವಿವರಗಳು ಸಹ ಕಾಣಿಸಿಕೊಳ್ಳುತ್ತವೆ. ಇದಾದ ಬಳಿಕ ಎಷ್ಟು ತಿಂಗಳವರೆಗೆ ಎಎಂಐ ಆಯ್ಕೆಗಳನ್ನು ಬಯಸುತ್ತೀರೋ ಅದನ್ನು ಸೆಲೆಕ್ಟ್‌ ಮಾಡಿ ಅಂದರೆ 27, 30, 33 ಮತ್ತು 36 ತಿಂಗಳ ಇಎಂಐ ಆಯ್ಕೆ ನೀಡಲಾಗುತ್ತದೆ.

-ಇದಾದ ಬಳಿಕ ಪ್ರೊಸೆಸಿಂಗ್ ಶುಲ್ಕ, ಸ್ಟ್ಯಾಂಪ್ ಡ್ಯೂಟಿ, ಬಡ್ಡಿ ದರ, ಎಎಂಐ, ಸಾಲದ ಅವಧಿ, ಮೊದಲ ಎಎಂಐ ದಿನಾಂಕ, ಕೊನೆಯ ಎಎಂಐ ದಿನಾಂಕದಂತಹ ಎಲ್ಲಾ ವಿವರಗಳು ನಿಮಗೆ ಕಾಣಿಸಿಕೊಳ್ಳುತ್ತವೆ. ನಂತರದಲ್ಲಿ ಆ ಮಾಹಿತಿ ಸರಿ ಎನಿಸಿದಾಗ ಅದನ್ನು ದೃಢೀಕರಿಸಲು ಮುಂದಾಗಿ. ಅಂದರೆ ನಿಮ್ಮ ಫೋನ್‌ಗೆ ಒಂದು ಓಟಿಪಿ ಬರುತ್ತದೆ. ನಂತರ ನೀವು ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಅಲ್ಲಿ ಎಂಟ್ರಿ ಮಾಡಿದರೆ ಹಣ ನೇರವಾಗಿ ನಿಮ್ಮ ಬ್ಯಾಂಕ್‌ ಖಾತೆಗೆ ಜಮಾ ಆಗುತ್ತದೆ.

Flipkart ನಲ್ಲಿ ಕೇವಲ 30 ಸೆಕೆಂಡ್‌ಗಳಲ್ಲಿ ಲಭ್ಯ 5 ಲಕ್ಷದ ವರೆಗಿನ ಸಾಲ!

ಸಾಲ ಪಡೆಯುವಾಗ ಇರಲಿ ಎಚ್ಚರ: ಈಗಂತೂ ಸಾಲ ಪಡೆಯುವುದೇನೋ ಸುಲಭವಾದ ವಿಷಯ. ಆದರೆ ಅದನ್ನು ಮರುಪಾವತಿಸಲು ಹೆಣಗಾಡುವ ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಇದರಿಂದಾಗಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಾಲ ಮಾಡುವುದು ಉತ್ತಮವಾಗಿದೆ, ಅದರಲ್ಲೂ ಇದಕ್ಕಿಂತ ಕಡಿಮೆ ಬಡ್ಡಿದರದಲ್ಲಿ ಇತರೆ ಬ್ಯಾಂಕ್‌ಗಳು ಸಾಲ ನೀಡಿದರೆ ಅಲ್ಲೇ ಸಾಲ ಮಾಡಬಹುದು. ಜೊತೆಗೆ ಫ್ಲಿಪ್‌ಕಾರ್ಟ್ ಪೇ ಲೆಟರ್ ಮತ್ತು ಕ್ರೆಡಿಟ್ ಕಾರ್ಡ್‌ನಂತಹ ಸೇವೆಗಳನ್ನು ಸಹ ನೀಡುತ್ತಿದೆ.

Best Mobiles in India

English summary
Flipkart will now provide loans of up to five lakhs in just 30 seconds. For this, having Flipkart app on your phone is enough.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+