Subscribe to Gizbot

ನೀವರಿಯಲೇಬೇಕಾದ ಭಾರತದ ಐದು ಟೆಕ್ ರತ್ನಗಳು

Written By:

ಭಾರತದಲ್ಲಿ ಸಂಶೋಧನೆಗಳಿಗೆ ಯಾವುದೇ ಕೊರತೆಯಿಲ್ಲ. ವೈದ್ಯಕೀಯ ಲೋಕದಲ್ಲಿ ಅದ್ಭುತ ಸಾಧನೆ ಮಾಡಿರುವ ದೇಶ ನಮ್ಮದಾಗಿದ್ದು ಈ ಸ್ಫೂರ್ತಿಯೇ ಇಂದಿನ ಆಧುನಿಕ ಸಣ್ಣ ಪುಟ್ಟ ಸಂಶೋಧನೆಗಳಿಗೆ ಜೀವಾಳವಾಗಿದೆ. ಇಂದಿನ ಲೇಖನದಲ್ಲಿ ಅಸಾಮಾನ್ಯ ಸಂಶೋಧನೆ ಎಂದೇ ಬಿಂಬಿತವಾಗಿರುವ ಕೆಲವೊಂದು ಸಂಶೋಧನೆಗಳ ಪಟ್ಟಿಯನ್ನು ನಾವು ನೀಡುತ್ತಿದ್ದು ನಿಜಕ್ಕೂ ಇದು ನಿಮ್ಮ ಜ್ಞಾನವನ್ನು ಹೆಚ್ಚಿಸಲಿದೆ.

ಓದಿರಿ: 1.1 ಲಕ್ಷ ಕಿಮೀ ಕ್ರಮಿಸಿದ ಕೋಲಾರದ ಸೋಲಾರ್‌ ಕಾರು

ಹಾಗಿದ್ದರೆ ನಮ್ಮ ದಿನಬಳಕೆಯಲ್ಲಿ ಉಪಯೋಗಕರವಾಗಿರುವ ಟಾಪ್ 5 ಭಾರತೀಯ ಸಂಶೋಧನೆಗಳು ಮತ್ತು ಸಂಶೋಧಕರ ವಿವರವನ್ನು ನಾವು ನೀಡುತ್ತಿದ್ದು ನಿಜಕ್ಕೂ ಈ ಮಾಹಿತಿ ನಿಮ್ಮನ್ನು ಹುಬ್ಬೇರಿಸುವಂತೆ ಮಾಡುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯುಎಸ್‌ಬಿ ಅನ್ವೇಷಣೆ

ಅಜಯ್ ಭಟ್

ಭಾರತೀಯ ಮೂಲದ ಅಮೇರಿಕ ವಾಸಿಯಾಗಿರುವ ಅಜಯ್ ಭಟ್ ಯುಎಸ್‌ಬಿ, ಎಜಿಪಿ, ಪಿಸಿಐ ಎಕ್ಸ್‌ಪ್ರೆಸ್ ಮೊದಲಾದ ವಸ್ತುಗಳಲ್ಲಿ ಹೆಚ್ಚಿನ ಸುಧಾರಣೆಗಳನ್ನು ಮಾಡಿದ್ದಾರೆ.

ಇಮೇಲ್ ಅನ್ವೇಷಣೆ

ಶಿವ ಅಯ್ಯಾಧುರೈ

ತಮ್ಮ ಏಳರ ಹರೆಯದಲ್ಲೇ ಕುಟುಂಬದಿಂದ ದೂರವಾಗಿ ಯುಎಸ್‌ನಲ್ಲಿ ನೆಲೆಸಿದ್ದ ಶಿವ ಅವರು ತಮ್ಮ ಶಾಲೆಯಲ್ಲಿ ಪಾಲ್ಗೊಂಡ ಬೇಸಿಗೆ ಕಾರ್ಯಕ್ರಮವು ಇಮೇಲ್ ಅನ್ವೇಷಣೆಗೆ ಅವರಿಗೆ ಪ್ರೇರಣೆಯನ್ನು ನೀಡಿತು.

ಇಂಟೆಲ್ ಪೆಂಟಿಯಮ್ ಚಿಪ್

ವಿನೋದ್ ಧಾಮ್

ಇಂಟೆಲ್ ಪೆಂಟಿಯಮ್ ಚಿಪ್ ಅನ್ನು ಅನ್ವೇಷಿಸಿದ ಸಂಶೋಧಕರು ಒಬ್ಬ ಭಾರತೀಯರು ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಪೆಂಟಿಯಮ್ ಚಿಪ್‌ನ ಪಿತನೆಂದೇ ವಿನೋದ್ ಧಾಮ್ ಅನ್ನು ಕರೆಯುತ್ತಾರೆ. ಒಬ್ಬ ಚಿಂತಕ ಮತ್ತು ಸಂಶೋಧಕ ಎಂದೆನಿಸಿರುವ ವಿನೋದ್ ಧಾಮ್ ಭಾರತದ ಆಸ್ತಿಯಾಗಿದ್ದಾರೆ.

ಐಸಿ ಎಂಜಿನ್

ಅನದೀಶ್ ಕುಮಾರ್ ಪಾಲ್

ಭಾರತೀಯ ಸಂಶೋಧಕರಾಗಿರುವ ಅನದೀಶ್ ಕುಮಾರ್ ಪಾಲ್ ವಿದ್ಯುತ್ಕಾಂತ ನಿಯಂತ್ರಿತ ಇಂಧನ ಸಮರ್ಥ ಐಸಿ ಎಂಜಿನ್ ಅನ್ನು ಕಂಡುಹಿಡಿದಿದ್ದಾರೆ.

ಟು ಸೀಟರ್ ಪೆಟ್ರೋಲ್ ಎಂಜಿನ್

ಜಿ.ಡಿ. ನಾಯ್ಡು

ಗೋಪಾಲಸ್ವಾಮಿ ದುರೈಸ್ವಾಮಿ ನಾಯ್ಡು ಭಾರತೀಯ ಸಂಶೋಧಕರು ಮತ್ತು ಭಾರತದ ಎಡಿಸನ್ ಎಂದೇ ಬಿರುದಾಂಕಿತರಾಗಿದ್ದಾರೆ. ಭಾರತದಲ್ಲಿ ಪ್ರಥಮ ಇಲೆಕ್ಟ್ರಿಕ್ ಮೋಟಾರ್ ತಯಾರಿಕೆಯ ರುವಾರಿ ಎಂದೆನಿಸಿದ್ದಾರೆ ಜೆ.ಡಿ ನಾಯ್ಡು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here is a small attempt to highlight some of the little known Indian inventors with amazing inventions.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot